Amma poem Grade V is a about mother. Amma 5th grade kannada poem written by Jambanna Amarchinta. In Kannada, “Amma” means mother, and this poem beautifully celebrates a mother’s boundless love. It portrays her as a nurturing force, singing lullabies with pure affection. The mother is depicted as a fountain, constantly searching and caring for her child, ensuring they are safe and loved. Her words are sweet like honey, offering comfort and guidance to her child.

In Amma Kannada poem also described as a compass, steering her child in the right direction when they feel lost. The poem reflects on the idea that home, with a mother at its heart, is a child’s first school where life’s essential lessons are taught. Poet Jambanna Amarachinta sees the mother as a “walking goddess,” embodying divine qualities through her selfless care and love. Through this image, the poem highlights the mother’s role as a lifelong guardian and teacher, whose love is the foundation of a child’s world.

ಅಮ್ಮ (ಪದ್ಯ)

ಅ. ಪದಗಳ ಅರ್ಥ ಬರೆಯಿರಿ. (Write Kannada Meaning)

ಅನುರಾಗ = ಪ್ರೀತಿ, ಪ್ರೇಮ,        ಅರಸಿ = ಹುಡುಕಿ,
ಊಟೆ= ನೀರಿನ ಚಿಲುಮೆ, ನೀರಿನ ಬುಗ್ಗೆ   ಒಲುಮೆ = ಪ್ರೀತಿ, ಒಲವು
ಗುಟುಕು = ಒಂದು ಸಲ ನುಂಗುವಷ್ಟು,    ಜಗದೊಡೆಯ = ಪರಮಾತ್ಮ
ತಪ್ಪುನೆಪ್ಪು = ತಪ್ಪು-ಒಪ್ಪುಗಳು,   ದಿಕ್ಸೂಚಿ = ದಿಕ್ಕನ್ನು ತಿಳಿಸುವ ಯಂತ್ರ,
ನಭ = ಆಕಾಶ, ಆಗಸ              ನುಡಿ = ಮಾತು,
ನೆಗೆ = ಹಾರು, ಜಿಗಿ                 ಮಾತೆ = ತಾಯಿ,ಅಮ್ಮ
ಸಿರಿ = ಸಂಪತ್ತು,                   ಹರಸು = ಆಶೀರ್ವದಿಸು,
               

ಆ.  ಒಂದು ವಾಕ್ಯದಲ್ಲಿ ಉತ್ತರಿಸಿರಿ. ( Answer in one sentence)

೧. ತಾಯಿಯ ನುಡಿಯಲ್ಲಿ ಏನು ತುಂಬಿದೆ ಎಂದು ಕವಿ ಹೇಳುತ್ತಾರೆ?
ಉ: ತಾಯಿಯ ನುಡಿಯಲ್ಲಿ ಜೇನು ತುಂಬಿದೆ ಎಂದು ಕವಿ ಹೇಳುತ್ತಾರೆ.

೨. ತಾಯಿ ಜೋಗುಳವನ್ನು ಹೇಗೆ ಹಾಡುತ್ತಾಳೆ?
ಉ: ತಾಯಿ ಜೋಗುಳವನ್ನು ಅನುರಾಗದಿಂದ ಹಾಡುತ್ತಾಳೆ.

೩. ಮಗುವಿಗೆ ಮೊದಲ ಪಾಠಶಾಲೆ ಯಾವುದು?
ಉ: ಮಗುವಿಗೆ ಮೊದಲ ಪಾಠಶಾಲೆ ಮನೆ.

೪. ಅಮ್ಮ ಯಾವುದಕ್ಕೆ ದಿಕ್ಸೂಚಿಯಾಗುವಳು?
ಉ: ಅಮ್ಮ ಗುರಿ ಮರೆತ ಬಾಳಿಗೆ ದಿಕ್ಸೂಚಿಯಾಗುವಳು.

೫. ಕವಿ ಅಮ್ಮನನ್ನು ಏನೆಂದು ಕರೆದಿದ್ದಾರೆ?
ಉ: ಕವಿ ಅಮ್ಮನನ್ನು ನಡೆದಾಡುವ ದೇವತೆ ಎಂದು ಕರೆದಿದ್ದಾರೆ.

೬. ಜಂಬಣ್ಣ ಅಮರಚಿಂತ ಅವರ ಮೊದಲ ಕವನ ಸಂಕಲನ ಯಾವುದು?
ಉ: ಜಂಬಣ್ಣ ಅಮರಚಿಂತ ಅವರ ಮೊದಲ ಕವನ ಸಂಕಲನ “ಮುಂಜಾವಿನ ಕೊರಳು”.

ಇ. ಎರಡು ಮತ್ತು ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. ( Answer in two to three sentences)

೧. ತಾಯಿ ಪ್ರೀತಿಯಿಂದ ಲಾಲಿ ಹಾಡುವ ಬಗೆ ಹೇಗೆ?
ಉ: ತಾಯಿಯ ನುಡಿಯಲ್ಲಿ ಜೇನು ತುಂಬಿದೆ. ಆಕೆಯು ಒಲುಮೆಯನ್ನು ಮುದ್ದೆ ಮಾಡುತ್ತಾಳೆ. ಹಾಗೆಯೇ ಅನುರಾಗದಿಂದ ಜೋಗುಳದ ಲಾಲಿಯನ್ನು ಹಾಡುತ್ತಾಳೆ.

೨. ತಾಯಿ ತನ್ನ ಮಗುವನ್ನು ಹೇಗೆ ಅರಸಿ ಬರುತ್ತಾಳೆ?
ಉ: ತಾಯಿ ಮಗುವಿನ ತಪ್ಪುನೆಪ್ಪುಗಳನ್ನು ಮರೆಯುತ್ತಾಳೆ. ಕರುಣೆಯಿಂದ ಊಟೆಯಂತೆ ನೆಗೆದು ಅರಸಿ ಬರುತ್ತಾಳೆ.

೩. ತಾಯಿ ತನ್ನ ಮಗುವನ್ನು ಏನೆಂದು ಹರಸುತ್ತಾಳೆ?
ಉ: ತಾಯಿ ಮಗುವಿನ ಬಾಳಿನ ದಿಕ್ಸೂಚಿ. ತಾಯಿ ತನ್ನ ಮಗು ಮಹಾತ್ಮನಾಗಿದ್ದರೂ, ಮಂಕನಾಗಿದ್ದರೂ ಜಗದೊಡೆಯನಾಗಲಿ ಎಂದು ಹರಸುತ್ತಾಳೆ.

ಈ. ಹೊಂದಿಸಿ ಬರೆಯಿರಿ (Match the following)

      ಅ                            ಬ

೧) ನಭ                ಅ) ನೀರಿನ ಚಿಲುಮೆ          ಆಕಾಶ

೨) ಊಟೆ              ಆ) ಪ್ರೀತಿ                    ನೀರಿನ ಚಿಲುಮೆ

೩) ಅನುರಾಗ          ಇ) ಮಾತು                   ಪ್ರೀತಿ

೪) ನುಡಿ               ಈ) ಆಕಾಶ                   ಮಾತು

                        ಉ) ನೆಗೆ

ಉ. ಸ್ವಂತ ವಾಕ್ಯದಲ್ಲಿ ಬರೆಯಿರಿ ( Make your own sentence)

೧. ನಭ: ನಭದ ಬಣ್ಣ ನೀಲಿ.
೨. ಅನುರಾಗ: ತಾಯಿ ಅನುರಾಗದಿಂದ ಹಾಡುತ್ತಾಳೆ.
೩. ದಿಕ್ಸೂಚಿ: ತಾಯಿ ತನ್ನ ಮಕ್ಕಳಿಗೆ ದಿಕ್ಸೂಚಿ.
೪. ಮಹಾತ್ಮ: ತಾಯಿಯು ತನ್ನ ಮಗು ಮಹಾತ್ಮನಾಗಲಿ ಎಂದು ಹರಸುತ್ತಾಳೆ.
೫. ಗುಟುಕಿಡು: ಹಕ್ಕಿಯು ತನ್ನ ಮರಿಗೆ ಗುಟುಕಿಡುತ್ತದೆ.

ಊ. ವಿರುದ್ಧ ಪದಗಳನ್ನು ಬರೆಯಿರಿ ( Write Opposite words)
ರಾಗ X ವಿರಾಗ                    ಕರುಣೆ  X  ನಿಷ್ಕರುಣೆ       
ಒಡೆಯ X ಸೇವಕ                  ಮೊದಲ X ಕೊನೆಯ

Click here to download amma exercises