Anveshane poem written by G S Shivarudrappa. Anveshane means search. Poet G S S is writing about looking for God, Happiness and adjustment.

Shri G S Sivarudrapa writes in anveshane that he failed to find god in the temple built in stones and soil. He continues to say people fail to recognize the love and friendship that exists within them in the form of God. Shri G S S has said that the bonds , such as friendship, hatred, happiness, and sorrow, of life are within us. If we do not disturb the knowledge of love within us, the taste of nectar will remain on our tongue. So Anveshane means search.

ಅನ್ವೇಷಣೆ

ಅ) ಕೆಳಗೆ ನೀಡಿರುವ ಪದ್ಯದ ಸಾಲುಗಳನ್ನು ಪೂರ್ಣಗೊಳಿಸಿರಿ. (Complete the poem lines)

೧. ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲುಮಣ್ಣುಗಳ  ಗುಡಿಯೊಳಗೆ.
೨. ಒಳಗಿನ ತಿಳಿಯನು ತಲಕದೆ ಇದ್ದರೆ ಅಮೃತದ ಸವಿಯಿದೆ ನಾಲಗೆಗೆ.
೩. ಹತ್ತಿರವಿದ್ದೂ ದೂರ ನಿಲ್ಲುವೆವು.
೪. ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನದ ಈ ಬದುಕಿನಲ್ಲಿ.

ಆ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)

೧. ಕವಿ ಜಿ ಎಸ್ ಶಿವರುದ್ರಪ್ಪನವರು ಮೊದಲು ದೇವರನ್ನು ಎಲ್ಲಿ ಹುಡುಕಿ ವಿಫಲರಾದರು?
ಉ: ಕವಿ ಜಿ ಎಸ್ ಶಿವರುದ್ರಪ್ಪನವರು ಮೊದಲು ದೇವರನ್ನು ಕಲ್ಲುಮಣ್ಣುಗಳ  ಗುಡಿಯೊಳಗೆ ಹುಡುಕಿ ವಿಫಲರಾದರು.
೨. ನಂದನ ಮತ್ತು ಬಂಧನ ಎಂದರೇನು?
ಉ: ನಂದನ ಎಂದರೆ ಸುಖ ಮತ್ತು ಬಂಧನ ಎಂದರೆ ಕಷ್ಟ.
೩. ಅಮೃತದ ಸವಿ ನಾಲಿಗೆಗೆ ಯಾವಾಗ ಸಿಗುತ್ತದೆ?
ಉ: ಅಮೃತದ ಸವಿ ನಾಲಿಗೆಗೆ ಒಳಗಿನ ತಿಳಿಯನು ಕಲಕದೆ ಇದ್ದಾಗ ಸಿಗುತ್ತದೆ.
೪. ಮಾನವನಲ್ಲಿ ಅಹಂ ತುಂಬಿದಾಗ ಹೇಗೆ ವರ್ತಿಸುತ್ತಾನೆ?
ಉ: ಮಾನವನಲ್ಲಿ ಅಹಂ ತುಂಬಿದಾಗ ಹತ್ತಿರವಿದ್ದೂ ದೂರ ನಿಲ್ಲುವನು.

ಇ) ಕೆಳಗಿನ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in 3-4 sentences)

೧. ಜಿ ಎಸ್ಎಸ್ ಅವರು ದೇವರನ್ನು ಅನ್ವೇಷಿಸಿದ ಬಗೆ ಹೇಗೆ?
ಉ: ಜಿ ಎಸ್ಎಸ್ ಅವರು ಮೊದಲು ದೇವರನ್ನು ಕಲ್ಲುಮಣ್ಣುಗಳ  ಗುಡಿಯೊಳಗೆ ಹುಡುಕಿ ವಿಫಲರಾದರು. ಕೊನೆಗೆ ತಮ್ಮೊಳಗಿನ ಪ್ರೀತಿ ಸ್ನೇಹದ ರೂಪದಲ್ಲಿ ದೇವರನ್ನು ಕಂಡರು.
೨. ಕವಿ ಹೇಳುವಂತೆ ಬದುಕಿನಲ್ಲಿ ಯಾವುದು ಕಷ್ಟ? ಅದನ್ನು ಪಡೆಯುವದು ಹೇಗೆ?
ಉ: ಕವಿ ಹೇಳುವಂತೆ ಬದುಕಿನಲ್ಲಿ ಹೊಂದಾಣಿಕೆ ಕಷ್ಟ. ಅಹಂಕಾರವನ್ನು ಬಿಟ್ಟರೆ ಅದನ್ನು ಪಡೆಯಬಹುದು.

ಈ) ಸಂದರ್ಭದಲ್ಲಿ ವಿವರಿಸಿರಿ. (Explain the context)

೧. “ಪ್ರೀತಿ ಸ್ನೇಹಗಳ ಗುರುತಿಸದಾದೆವು ನಮ್ಮೊಳಗೆ”
ಉ: ಈ ಮಾತನ್ನು ಕವಿ ಜಿ ಎಸ್‌ ಶಿವರುದ್ರಪ್ಪನವರ “ಗೋಡೆ” ಎಂಬ ಕವನಸಂಕಲನದ “ಅನ್ವೇಷಣೆ” ಪದ್ಯದಿಂದ ಆರಿಸಲಾಗಿದೆ. ತಮ್ಮೊಳಗೆ ದೇವರ ರೂಪದಲ್ಲಿ ಇರುವ ಪ್ರೀತಿ ಸ್ನೇಹಗಳ ಗುರುತಿಸದೇ, ಕಲ್ಲು ಮಣ್ಣುಗಳ ಗುಡಿಯೊಳಗೆ ಕಾಣದ ದೇವರನ್ನು ಹುಡುಕಿ ವಿಫಲರಾದ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳುತ್ತಾರೆ.
೨. “ಅಮೃತದ ಸವಿಯಿದೆ ನಾಲಿಗೆಗೆ”
ಈ ಮಾತನ್ನು ಕವಿ ಜಿ ಎಸ್‌ ಶಿವರುದ್ರಪ್ಪನವರ “ಗೋಡೆ” ಎಂಬ ಕವನಸಂಕಲನದ “ಅನ್ವೇಷಣೆ” ಪದ್ಯದಿಂದ ಆರಿಸಲಾಗಿದೆ. ಜೀವನದ ಸ್ನೇಹ, ದ್ವೇಷ, ಸುಖ, ದುಃಖಗಳಾದ ನಂದನ ಬಂಧನಗಳು ನಮ್ಮೊಳಗೆ ಇವೆ. ನಮ್ಮೊಳಗಿರುವ ಪ್ರೀತಿ ಎಂಬ ತಿಳಿಯನ್ನು ಕಲಕದೆ ಇದ್ದರೆ ನಾಲಗೆಗೆ ಅಮೃತದ ಸವಿ ಇರುತ್ತದೆ ಎಂದು ಕವಿ ಹೇಳಿದ್ದಾರೆ.
೩. “ಹತ್ತಿರವಿದ್ದು ದೂರ ನಿಲ್ಲುವೆವು”
ಈ ಮಾತನ್ನು ಕವಿ ಜಿ ಎಸ್‌ ಶಿವರುದ್ರಪ್ಪನವರ “ಗೋಡೆ” ಎಂಬ ಕವನಸಂಕಲನದ “ಅನ್ವೇಷಣೆ” ಪದ್ಯದಿಂದ ಆರಿಸಲಾಗಿದೆ. ನಮ್ಮ ಅಹಂಕಾರದಿಂದ ನಾವು ಹತ್ತಿರವಿದ್ದರೂ ದೂರ ನಿಲ್ಲುತ್ತೇವೆ. ಇದರಿಂದ ಹೊಂದಾಣಿಕೆ ಕಷ್ಟವಾಗುತ್ತದೆ ಎಂಬ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ.

ಉ) ಬಿಟ್ಟ ಸ್ಥಳಗಳನ್ನು ನೀಡಿರುವ ನಾಲ್ಕು ಆಯ್ಕೆಯ ಉತ್ತರಗಳಿಂದ ಸರಿಯಾದದ್ದನ್ನು ಆಯ್ದು ಬರೆಯಿರಿ. (choose from the options given and fill in the blanks)

೧. ಕವಿ ಜಿಎಸ್ಎಸ್ ಅವರು ದೇವರನ್ನು ಪ್ರೀತಿ ಸ್ನೇಹ ರೂಪದಲ್ಲಿ ಕಂಡರು.
ಅ) ಗುಡಿ     ಆ) ಕಲ್ಲು ಮಣ್ಣು    ಇ) ಪ್ರೀತಿ ಸ್ನೇಹ   ಈ) ಕೋಟೆ
೨. ಬದುಕಿನಲ್ಲಿ ಹೊಂದಾಣಿಕೆ  ಎಂಬುದು ಕಷ್ಟ ಎಂದು ಕವಿ ಹೇಳುತ್ತಾರೆ.
ಅ) ಹೊಂದಾಣಿಕೆ    ಆ) ಅಹಂ     ಇ) ಹಿರಿಮೆ     ಈ) ಮೋಹ  
೩) ನಮ್ಮೊಳಗಿನ ಇಳಿಯನು ಕಲಕದೆ ಇದ್ದರೆ ನಾಲಗೆಗೆ ಅಮೃತ ಇದೆ.
ಅ) ಹುಳಿ       ಆ) ವಿಷ       ಇ)ಒಗರು     ಈ)ಅಮೃತ
೪) ಅಹಂ ಇರುವ ವ್ಯಕ್ತಿ ಜನರಿಗೆ ದೂರ ಆಗುತ್ತಾನೆ.
ಅ) ಉಪಕಾರಿ    ಆ) ಹತ್ತಿರ     ಇ)ದೂರ       ಈ)ಒಳ್ಳೆಯವನು

ಭಾಷಾಭ್ಯಾಸ

ಅ) ಕೆಳಗಿನ ಪದಗಳಿಗೆ ಸಮಾನಾರ್ಥಕಗಳನ್ನು ಬರೆಯಿರಿ. (Write the Synonyms)
ಗುಡಿ = ದೇವಾಲಯ, ದೇವಸ್ಥಾನ,
ಹತ್ತಿರ = ಬಳಿ, ಸಮೀಪ
ಬಂಧನ = ಸೆರೆ, ಜೈಲುವಾಸ
ಸ್ನೇಹ = ಗೆಳೆತನ,

ಆ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಬರೆಯಿರಿ. (Write the opposite words)
ಪ್ರೀತಿ X  ದ್ವೇಷ,  ಸಿಹಿ X  ಕಹಿ,
ದೂರ X ಹತ್ತಿರ,  ಕಷ್ಟ X  ಸುಖ,  
ಅಮೃತ X  ವಿಷ,  ಬಂಧನ X ನಂದನ

ಈ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ. (Make your own sentence)
ದೇವರು = ಶಿವ ನಮ್ಮ ಮನೆಯ ದೇವರು.
ಪ್ರೀತಿಸ್ನೇಹ = ನಾವು ಎಲ್ಲರ ಜೊತೆ ಪ್ರೀತಿಸ್ನೇಹದಿಂದ ಇರಬೇಕು.
ಬಂಧನ = ಆ ಗಿಳಿ ಬಂಧನದಲ್ಲಿ ಇದೆ.
ಅಮೃತ = ಗಾಂಧೀಜಿಯವರ ಮಾತು ಅಮೃತದ ಹಾಗೆ ಇತ್ತು.
ಹೊಂದಿಕೆ = ಎಲ್ಲರ ಜೊತೆ ಹೊಂದಿಕೆ ಇರಬೇಕು.
ಅಹಂ = ನಮ್ಮ ಬಗ್ಗೆ ನಮಗೆ ಅಹಂ ಇರಬಾರದು.

ಉ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ. ( Split the words)
ಹತ್ತಿರವಿದ್ದು = ಹತ್ತಿರ + ಇದ್ದು,
ಗುಡಿಯೊಳಗೆ = ಗುಡಿ + ಒಳಗೆ
ನಮ್ಮೊಳಗೆ = ನಮ್ಮ + ಒಳಗೆ
ಸವಿಯಿದೆ = ಸವಿ + ಇದೆ

ಊ) ಪದಗಳನ್ನು ಬಳಸಿ ಜೋಡಿ ಪದಗಳನ್ನು ಬರೆಯಿರಿ. (Refer the words in the bracket and pair the words)
ಹೊಲ  –  ಗದ್ದೆ                                        ಹೂವು – ಹಣ್ಣು
ಗಿಡ –      ಮರ                                        ಕಳ್ಳ –  ಸುಳ್ಳ
ಗುಡ್ಡ –     ಬೆಟ್ಟ                                        ಮಳೆ – ಬೆಳೆ
ಎಡ –      ಬಲ                                         ರೀತಿ – ನೀತಿ
(ಸುಳಿವು: ಮರ, ಹಣ್ಣು, ನೀತಿ, ಬೆಟ್ಟ, ಗದ್ದೆ, ಬೆಳೆ, ಸುಳ್ಳ, ಬಲ)

Click here to download anvesane answers