Autorikshaw rasaprangagalu kannada grade 8th lesson. Autorikshaw rasaprangagalu written by H. Narasimha. He narrates his humorous yet nerve-wracking autorickshaw rides in Bengaluru, offering a unique glimpse into the city’s lively transport culture. He shares his fear of autorickshaws, worrying about the drivers’ rash driving, which he humorously compares to breaking his “nuts and bolts.” In one instance, a driver reacted angrily when he asked him to slow down, accusing him of bringing bad luck before starting the journey.

The anecdotes continue with an Autorikshw driver mistaking him for the Vice-Chancellor of Bangalore University and another joking about his fearlessness of airplanes. The writer cleverly explains that airplanes don’t face obstacles like cows, buffaloes, or reckless overtaking. One thoughtful driver, learning that Narasimha lived in a hostel, suggested he enjoy some idlis at VV Puram and kindly offered to wait.

These engaging stories capture the charm, quirks, and humor of Bengaluru’s autrickshaw culture, making it a must-read for anyone interested in the city’s vibrant life.

ಆಟೋರಿಕ್ಷಾದ ರಸಪ್ರಸಂಗಗಳು

೧. ಬೆಂಗಳೂರಿನ ಸಂಚಾರದ ಬಗ್ಗೆ ಲೇಖಕರ ಅಭಿಪ್ರಾಯವೇನು?

ಉ: ಬೆಂಗಳೂರಿನಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಹೋಗುವುದೇ ಒಂದು ಪ್ರಯಾಸದ ಕೆಲಸ ಎಂದು ಬೆಂಗಳೂರಿನ ಸಂಚಾರದ ಬಗ್ಗೆ ಲೇಖಕರ ಅಭಿಪ್ರಾಯ.

೨. ದೇಹಕ್ಕೆಲ್ಲ ನಟ್ಟು ಬೋಲ್ಟ್ ಹಾಕಿಸಿಕೊಳ್ಳುವುದಕ್ಕಿಂತ ಯಾವುದು ಲೇಸು?

ಉ: ಕೈಕಾಲು ಮುರಿದುಕೊಂಡು ಮೂಳೆ ವೈದ್ಯರಿಂದ ದೇಹದಲ್ಲಿ ನಟ್ಟೂ, ಬೋಲ್ಟೂ ಹಾಕಿಸಿಕೊಂಡು ಬದುಕುವುದಕ್ಕಿಂತ,  ಭಗವಂತನ ಪಾದ ಸೇರುವುದೇ ಲೇಸು ಎಂಬುದು ಲೇಖಕರ ಅಭಿಪ್ರಾಯ.

೩. ಸಿಡುಕಿನಿಂದ ಆಟೋ ಸ್ಟಾರ್ಟ್ ಮಾಡಿದ ಆಟೋ ಚಾಲಕ ಏನೆಂದು ಹೇಳಿದ?

ಉ: “ರೀ ಸ್ವಾಮಿ, ಸುಮ್ಮನೆ ಕುಳಿತುಕೊಳ್ಳಿ. ನಿಮ್ಮಂತವರಿಂದಲೇ ಆಕ್ಸಿಡೆಂಟ್ ಆಗುವುದು. ಹತ್ತುವುದಕ್ಕಿಂತ ಮುಂಚೇನೆ ಅಪಶಕುನ” ಎಂದು ಸಿಡುಕಿ ಗಾಡಿ ಸ್ಟಾರ್ಟ್ ಮಾಡಿದ ಚಾಲಕ.

೪. ಲೇಖಕರಿಗೆ ವಿಮಾನ ಯಾನದ ಬಗ್ಗೆ ಭಯವಿಲ್ಲವೇಕೆ?

ಉ: ಏಕೆಂದರೆ ವಿಮಾನಕ್ಕೆ ಯಾವಾಗಲೂ ಎಮ್ಮೆ, ಹಸು, ಜನ ಅಡ್ಡ ಬರುವದಿಲ್ಲ. ಜೊತೆಗೆ ವಿಮಾನವನ್ನು ಓವರ್‌ಟೇಕ್ ಮಾಡಿದ ಪ್ರಸಂಗವೂ ಇಲ್ಲ. ಅದಕ್ಕಾಗಿ ಲೇಖಕರಿಗೆ ವಿಮಾನ ಯಾನದ ಬಗ್ಗೆ ಭಯವಿರಲಿಲ್ಲ.

೫. ಪ್ರಾರ್ಥನೆಯಿಂದ ಮಳೆಬರಿಸುವುದಾಗಿ ಹೇಳಿದ್ದವನಾರು?

ಉ: ಪ್ರಾರ್ಥನೆಯಿಂದ ಮಳೆಬರಿಸುವುದಾಗಿ ಹೇಳಿದರು ಶಿವಬಾಲಯೋಗಿ.

೬. ಆಟೋ ಚಾಲಕರಲ್ಲಿಯೂ ಮಾನವೀಯತೆಯನ್ನರಿತ ಪ್ರಸಂಗದ ಬಗ್ಗೆ ತಿಳಿಸಿ.

ಉ: ಒಂದು ಸಂಜೆ ಜಯನಗರದಲ್ಲಿರುವ ನ್ಯಾಷನಲ್ ಕಾಲೇಜಿನಲ್ಲಿ ಒಂದು ಕಾರ್ಯಕ್ರಮವಿತ್ತು. ಅದು ಮುಗಿಯುವುದು ರಾತ್ರಿ ಹತ್ತು ಘಂಟೆಯಾಯಿತು. ಲೇಖಕರು ಆಟೋಗಾಗಿ ಕಾಲೇಜಿನ ಹತ್ತಿರ ಅಲ್ಲಿಯ ಕೆಲವು ಉಪಾಧ್ಯಾಯರೊಂದಿಗೆ ಕಾದು ನಿಂತಿದ್ದರು. “ಇಷ್ಟು  ಹೊತ್ತಿನಲ್ಲಿ ಹಾಸ್ಟೆಲ್‌ನಲ್ಲಿ ಊಟ ಇರುವುದಿಲ್ಲ,  ನಮ್ಮ ಮನೆಗೆ ಬಂದು ಊಟಮಾಡಿಕೊಂಡು ಹೋಗಿ” ಎಂದು ಉಪಾಧ್ಯಾಯರು ಹೇಳಿದರು. “ಪರವಾಗಿಲ್ಲ, ಒಂದು ಹೊತ್ತು ಊಟ ಇಲ್ಲದೇ ಇದ್ದರೆ ಚಿಂತೆ ಇಲ್ಲ. ತುಂಬಾ ಹೊತ್ತಾಗಿದೆ” ಎಂದು ಹೇಳಿ ಲೇಖಕರು ಅಲ್ಲಿಂದ ಹೊರಟರು. ಆಟೋ ಚಾಲಕರು ಸ್ವಲ್ಪ ವಯಸ್ಸಾದವರು. ಇದೆನ್ನೆಲ್ಲಾ ಸಾವಧಾನವಾಗಿ
ಕೇಳುತ್ತಿದ್ದರು. ‘ಯಾಕೆ ಸಾರ್, ನಿಮಗೆ ಮನೆ ಇಲ್ಲವೇ? ಊಟ ಇಲ್ಲದೇ ಇದ್ದರೂ ಪರವಾಗಿಲ್ಲ ಅಂತ ಹೇಳುತ್ತಿದ್ದೀರಿ” ಎಂದು ಕೇಳಿದರು. “ಇಲ್ಲಪ್ಪ, ನನಗೆ ಮನೆ-ಗಿನೆ ಇಲ್ಲ, ನ್ಯಾಷನಲ್ ಕಾಲೇಜ್ ಹಾಸ್ಟೆಲಿನಲ್ಲಿದ್ದೇನೆ” ಎಂದು ಲೇಖಕರು ಹೇಳಿದರು. “ಇಷ್ಟು ಹೊತ್ತಿನಲ್ಲಿ ಉಪವಾಸ ಮಲಗಿಕೊಳ್ಳಬಾರದು ಸಾರ್.‌ ವಿಶ್ವೇಶ್ವರಪುರದಲ್ಲಿರುವ ಸಜ್ಜನರಾವ್ ಸರ್ಕಲ್‌ಗೆ ಹೋಗೋಣ ಬನ್ನಿ. ಅಲ್ಲಿ ಇಡ್ಲಿ ಮಾರುತ್ತಾರೆ. ನೀವು ಇಡ್ಲಿ ತಿನ್ನುವ ತನಕ ಕಾಯುತ್ತೇನೆ” ಎಂದು ಚಾಲಕ ಹೇಳಿದನು. ಹೀಗೆ ಆಟೋಚಾಲಕರಲ್ಲಿ ಲೇಖಕರು ಮಾನವೀಯತೆಯನ್ನರಿತರು.

Click here to download Atorikshaw rasprangagalu

Leave a Reply

Your email address will not be published. Required fields are marked *