Avva kannada poem grade VI written by Lalita Kotrappa Hospyati. Avva means A Heartfelt Tribute to a Mother – The True Goddess of Love and Sacrifice

This beautiful Kannada poem is a touching tribute to a mother’s unconditional love, endless sacrifices, and divine role in a child’s life. It opens with the child offering a basket of flowers at the mother’s feet, seeking blessings rather than wealth or material gains.

From the moment life began in the womb, the mother nurtured and protected her child. Even before the child could speak or understand letters, the very first word was “Mother.” She bore pain with patience, fed her child with love, wiped away tears, and embraced with warmth and comfort.

When the child stumbled, she rushed to lift and soothe. When the child achieved success, her joy was boundless, carrying pride in every accomplishment. More than just a caregiver, the mother became a teacher and guide, imparting education, wisdom, and values while silently sacrificing her own comforts for the child’s future.

The poem emphasizes that a mother’s love is beyond measure, and her debt can never be repaid. Even a flower offered at her feet is only a small symbol of gratitude.

In the end, it declares that nothing in the world is greater than a mother’s vow. She is the divine protector, patiently guarding her child with selfless devotion. Her name itself carries holiness and grace.

This heartfelt poem reminds us that a mother’s blessings are the greatest fortune we can ever receive, making her the true goddess in every home.

ಬೊಗಸೆ ತುಂಬ ಹೂವ ತಂದು
ಪಾದಕಮಲಕೆರಗುವೆ
ನಿನ್ನ ಅಡಿಗೆ ಮಣಿದು ಮತ್ತೆ
ಭಾಗ್ಯವನ್ನೇ ಬೇಡುವೆ II ೧ II

ಗರ್ಭದಲ್ಲಿ ಮಾಂಸಮುದ್ದೆ
ಅ ಆ ಇ ಈ ತಿಳಿಯದು
ಜನಿಸಿ ಧರೆಗೆ ಬಿದ್ದ ಕ್ಷಣವೇ
ಅವ್ವ ಅಂತುಕೊರಳು II ೨ II

ನೋವ ನುಂಗಿ ನನ್ನ ನಂಬಿ
ಹಾಲ ನೀನು ಕುಡಿಸಿದೆ
ಕಣ್ಣ ನೀರ ಒರೆಸಿ ನೀನು
ಎದೆಗವಚಿ ರಮಿಸಿದೆ II ೩ II

ಬಿದ್ದರಂತೂ ಓಡಿ ಬಂದು
ಎತ್ತಿಕೊಂಡು ರಮಿಸಿದೆ
ಗೆದ್ದರಂತೂ ಖುಷಿಯು ನಿನಗೆ
ಹೊತ್ತುಕೊಂಡು ಸಾರಿದೆ II ೪ II

ವಿದ್ಯೆ ಕಲಿಸಿ ಬುದ್ಧಿನೀಡಿ
ಸಿದ್ಧಿ ಪಡೆಯೇ ಕಲಿಸಿದೆ
ಯಶದ ಹಿಂದೆ ಹರಕೆ ನೀಡಿ
ಜೀವ ತ್ಯಾಗ ಮಾಡಿದೆ II ೫ II

ರೊಕ್ಕಕ್ಕೆಲ್ಲ ಲೆಕ್ಕವಿಲ್ಲ
ನಿನ್ನ ಋಣ ಅಗಣಿತ
ಪಾದಕಮಲಕೊಂದೆ ಹೂವು
ನನ್ನ ಪ್ರೀತಿ ಸೀಮಿತ II ೬ II

ತಾಯಿ ಹರಕೆ ಮುಂದೆ ಜಗದಿ
ಯಾವುದಿಲ್ಲ ಮಿಗಿಲು ತಾನು
ಕಾಯೋ ಗುಣದ ದೇವರವ್ವ
ಅವ್ವ ನಿನ್ನ ಹೆಸರು II ೭ II

ಅವ್ವ

೧. ಕವಯಿತ್ರಿಯು ತಾಯಿಯ ಪಾದಕ್ಕೆ ಏನು ತರುತ್ತಾಳೆ? 

ಉ: ಕವಯಿತ್ರಿಯು ತಾಯಿಯ ಪಾದಕ್ಕೆ ಬೊಗಸೆ ತುಂಬಾ ಹೂವನ್ನು ತರುತ್ತಾಳೆ .

೨. ಜಗತ್ತಿನಲ್ಲಿ ಮಿಗಿಲಾದುದು ಯಾವುದು?

ಉ: ಜಗತ್ತಿನಲ್ಲಿ ಎಲ್ಲಕ್ಕೂ ಮಿಗಿಲಾದುದು ತಾಯಿಯ ಹರಕೆ.

೩. ತಾಯಿ ಮಗುವಿಗೆ ಏನನ್ನು ಕಲಿಸುತ್ತಾಳೆ? 

ಉ: ತಾಯಿ ಮಗುವಿಗೆ ವಿದ್ಯೆ ಕಲಿಸಿ , ಬುದ್ಧಿ ನೀಡಿ , ಸಿದ್ದಿಪಡೆಯುವಂತೆ ಮಾಡುತ್ತಾಳೆ . 

೪. ಮಗು ಬಿದ್ದಾಗ ತಾಯಿ ಹೇಗೆ ರಮಿಸುತ್ತಾಳೆ?

ಉ: ಮಗು ಬಿದ್ದಾಗ ತಾಯಿ ಓಡಿಬಂದು ಎತ್ತಿಕೊಂಡು ಸಂತೈಸಿ , ಮುದ್ದಾಡುತ್ತಾಳೆ . 

೫. ತಾಯಿ ಮಗುವಿಗೆ ಏನನ್ನು ಕುಡಿಸುತ್ತಾಳೆ?

ಉ: ತಾಯಿ ಮಗುವಿಗೆ ತನ್ನ ಎದೆಯ ಹಾಲನ್ನು ಕುಡಿಸುತ್ತಾಳೆ .

ಕೃತಿಕಾರರ ಪರಿಚಯ:  ಲಲಿತಾ ಕೊಟ್ರಪ್ಪ ಹೊಸಪ್ಯಾಟಿ ೧೯೬೪ ರಲ್ಲಿ ಜನಿಸಿದರು. ತಂದೆ ಕೊಟ್ರಪ್ಪ. ತಾಯಿ ನೀಲಮ್ಮ. ಸರ್ಕಾರಿ ಪ್ರೌಢಶಾಲೆ ಹಿರೇಬಾದವಾಡಗಿ ಹುನಗುಂದ ತಾ. ಬಾಗಲಕೋಟೆ ಜಿಲ್ಲೆಯಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಕಲ್ಪನಾಳಿಗೊಂದು ಎದೆಹಾಡು, ಹೂ ಮಾರುವ ಹುಡುಗಿ ಎಂಬ ಮಕ್ಕಳ ಕವನ ಸಂಕಲನ, ಪಟ್ಟಣಕ್ಕೆ ಬಂದ ಪುಟ್ಟ ಗುಬ್ಬಿ- ಮಕ್ಕಳ ನಾಟಕ, ಮಳೆಯಾದಳು ನೀರಾ, ಗೆಳೆಕಾರ ಹಕ್ಕಿಗಳು, ಚಂದ್ರಚುಕ್ಕಿಗಳು ಎಂಬ ಮಕ್ಕಳ ಕಥಾ ಸಂಕಲನಗಳನ್ನು ರಚಿಸಿದ್ದಾರೆ.

Click here to download avva kannada poem exercise