B V Satyanaraya Rao kannada poet. B V Satyanaraya Rao poet expert in kannada and sankrit.

ಸತ್ಯವಿಠಲ ಅಂಕಿತದಿಂದ ಪ್ರಸಿದ್ಧರಾಗಿರುವ ಬಿ. ವಿ. ಸತ್ಯನಾರಾಯಣರಾವ್ ಅವರು ( ೧೯೪೮ ) ತುಮಕೂರು ಜಿಲ್ಲೆ ಶಿರಾ ತಾಲೂಕಿನ ಬುಕ್ಕಾಪಟ್ಟಣದವರು. ಮೆಕಾನಿಕಲ್ ಇಂಜಿನಿಯರಿಂಗ್ ಪದವೀಧರರಾದ ಇವರು ಪ್ರಕೃತ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಉಪಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವರು. ಗೀತ , ಸ್ತೋತ್ರ , ಕಾವ್ಯ , ಲಾವಣಿ , ಗದ್ಯ ಹೀಗೆ ವಿವಿಧ ಪ್ರಕಾರಗಳಲ್ಲಿ ಅರವತ್ತು ಕೃತಿಗಳನ್ನು ರಚಿಸಿದ್ದಾರೆ. ಹನ್ನೊಂದು ಭಾಮಿನಿ ಕಾವ್ಯಗಳನ್ನೂ ಬಸವ ಭಾರತಿ ಸುದೀರ್ಘ ಲಾವಣಿ ಕಾವ್ಯವನ್ನೂ ಸಂಪೂರ್ಣ ದೇವೀ ಮಹಾತ್ಮ ಬಸವೇಶ್ವರ ಲೀಲಾ ವೈಭವಂ , ಲಂಕೇಶ್ವರ ಸೋಮನಾಥ ಚಾರಿತ್ರ ಮುಂತಾದ ಕಾವ್ಯಗಳನ್ನೂ ರಚಿಸಿದ್ದಾರೆ. ಕನ್ನಡ – ಸಂಸ್ಕೃತ ಭಾಷೆಗಳೆರಡರಲ್ಲೂ ಪಾಂಡಿತ್ಯವುಳ್ಳವರು. ಬಾಹುಬಲಿಚರಿತಂ, ಗಾಯತ್ರೀರಾಮಾಯಣ, ಸಿರಿಗನ್ನಡ ವೈಜಂತಿ, ಕನ್ನಡನಾಡ ಚರಿತ್ರೆ, ತತ್ವಭಾರತಿ, ಭಾವಗೀತೆಗಳು, ಶ್ರೀಶಿವಕುಮಾರಸ್ವಾಮಿಗುರುಚರಿತಂ, ಗುರುದತ್ತಚರಿತಂ ಇವರ ಪ್ರಮುಖ ಕೃತಿಗಳು ನೃತ್ಯರೂಪಕ ಹಾಗೂ ನಾಮಾವಳಿಗಳನ್ನು ರಚಿಸಿದ್ದಾರೆ.

B. V. Satyanarayanarao, popularly known by the pen name Satyavithala, was born in 1948 in Bukkapattana of Sira taluk, Tumakuru district. A graduate in Mechanical Engineering, he served as a Deputy General Manager in the Karnataka Power Transmission Corporation and retired from service.

He has authored around sixty works across various genres such as songs, hymns, poetry, ballads, and prose. His literary contributions include eleven Bhamini poems, the long ballad Basava Bharati, and major poetic works such as Devi Mahatme, Basaveshwara Leela Vaibhavam, and Lankeshwara Somanatha Charitre.

He is a scholar proficient in both Kannada and Sanskrit. His notable works include Bahubali Charitam, Gayatri Ramayana, Sirigannada Vaijanti, Kannadanada Charitre, Tattvabharati, Bhavageethegalu, Sri Shivakumara Swamiguru Charitam, and Gurudatta Charitam. He has also composed dance-dramas and collections of devotional names (Namavalis).