Bagirata kannada lesson grade 3 is about the king Bhagirth bring river ganga to the earth. Bagirata worksheet can be used for practice.
ಭಗೀರಥ
ಅ) ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಬರೆಯಿರಿ (Answer the following in one sentence)
೧. ಭಗೀರಥ ಯಾರಿಗೆ ಸ್ವರ್ಗ ಸಿಗಬೇಕೆಂದು ಚಿಂತಿಸುತ್ತಿದ್ದನು?
೨. ಭಗೀರಥನು ಏಕೆ ತಪಸ್ಸಿಗೆ ಕುಳಿತನು?
೩. ಋಷಿಗಳು ಭಗೀರಥನಿಗೆ ಏನೆಂದು ಹೇಳಿದರು?
೪. ಗಂಗೆ ಹರಿಯುವ ರಭಸವನ್ನು ತಡೆದವರು ಯಾರು?
೫. ಗಂಗೆ ಭಗೀರಥನಿಗೆ ಏನೆಂದು ಹೇಳಿದಳು?
ಆ) ‘ ಅ’ ಪಟ್ಟಿಯಲ್ಲಿನ ಹೆಸರುಗಳನ್ನು ‘ ಬ ‘ ಪಟ್ಟಿಯೊಂದಿಗೆ ಹೊಂದಿಸಿ ಬರೆ. (Match the following)
ಅ ಬ
ಗಂಗೆ ರಾಜ
ಜಹ್ನು ನದಿ
ಭಗೀರಥ ಮಹರ್ಷಿ
ಇ) ಈ ಕೆಳಗಿನ ಘಟನೆಗಳನ್ನು ಅನುಕ್ರಮವಾಗಿ ಬರೆ. (Arrange the scenario in order)
೧. ಜಹ್ನು ಮಹರ್ಷಿ ಗಂಗೆಯನ್ನು ಕಿವಿಯ ಮೂಲಕ ಹರಿಯಲು ಬಿಟ್ಟನು.
೨. ಶಿವನು ಗಂಗೆಯನ್ನು ಶಿರದಲ್ಲಿ ಧರಿಸಿದ.
೩. ಗಂಗೆಯನ್ನು ಭೂಮಿಗೆ ತರಲೇಬೇಕೆಂದು ಭಗೀರಥ ತಪಸ್ಸು ಮಾಡಿದ.
೪. ಗಂಗೆ ಭೂಮಿಗೆ ಧುಮ್ಮಿಕ್ಕಿ ಹರಿದು ಬಂದಳು.
ಈ) ಕೊಟ್ಟಿರುವ ಮಾತನ್ನು ಯಾರು , ಯಾರಿಗೆ ಹೇಳಿದರು?
೧. “ಗಂಗೆಯನ್ನು ನಾನು ಶಿರದಲ್ಲಿ ಧರಿಸುತ್ತೇನೆ .”
೨. “ ನಿನ್ನ ಇಚ್ಚೆಯಂತೆ ನಾನು ಭೂಮಿಗೆ ಧುಮುಕುತ್ತೇನೆ ” .
ಭಾಷಾ ಚಟುವಟಿಕೆ
ಅ) ಈ ಪದಗಳಿಗೆ ನಾನಾರ್ಥ ಬರೆಯಿರಿ. Write the different meanings of these words.
ಮುನಿ, ತರು
ಆ) ಈ ನುಡಿಗಟ್ಟುಗಳನ್ನು ವಾಕ್ಯಗಳಲ್ಲಿ ಬಳಸಿ ಬರೆಯಿರಿ. (Write sentences using these phrases)
೧. ಎಳ್ಳಷ್ಟು
೨. ಎದೆಗುಂದು
ಅ) ಈ ಕೆಳಗಿನ ಪದ್ಯ ಭಾಗಕ್ಕೆ ಸೂಕ್ತ ಲೇಖನ ಚಿಹ್ನೆಗಳನ್ನು ಹಾಕಿರಿ. Put the appropriate article symbols in the following verse.
೧. ಭಗೀರಥನ ಅನೇಕ ವರ್ಷಗಳ ಕಠಿಣ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷಳಾದ ಗಂಗೆ ನಿನ್ನ ಇಚ್ಛೆಯಂತೆ ನಾನು ಭೂಮಿಗೆ ಧುಮುಕುತೇನೆ ಆದರೆ ನನ್ನ ರಭಸವನ್ನು ತಡೆಯುವವರು ಯಾರು ಎಂದಳು
ಚಟುವಟಿಕೆ
ಆ) ನಮ್ಮ ರಾಜ್ಯದಲ್ಲಿ ಹರಿಯುವ ನದಿಗಳ ಹೆಸರನ್ನು ಪಟ್ಟಿ ಮಾಡು.