Bagyashilpigalu, the 10th-grade lesson, focuses on Shri Nalwadi Krishnaraja Wodeyar and Sir M. Visvesvaraya. Although everyone has the potential to achieve greatness, only a few do so. Achieving greatness comes with a significant social responsibility. It requires perseverance, forward-thinking, and adaptability. Overcoming obstacles on the path to success is essential. Society remembers such exceptional achievers for their contributions. Bagyashilpigalu, lesson aims to introduce the remarkable services these figures provide to develop Karnataka State in various social, educational, administrative, and scientific fields. Bhagyashilpigalu of Karnataka, Shri Nalwadi Krishnaraja Wodeyar and Sir M. Visvesvaraya, the distinguished architects of Model Mysuru, are celebrated as our fortunate visionaries. Bagyashilpigalu worksheet, worksheet is made to prepare X grade students.

ಭಾಗ್ಯಶಿಲ್ಪಿಗಳು

ಅಭ್ಯಾಸ

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ. (Answer the given questions in one sentence each.

೧. ಸರ್ಕಾರ ವಿಶ್ವೇಶ್ವರಯ್ಯ ಅವರಿಗೆ ಯಾವ ಪದವಿಯನ್ನು ನೀಡಿ ಗೌರವಿಸಿತು ?
೨. ನಾಲ್ವಡಿ ಕೃಷ್ಣರಾಜ ಒಡೆಯರು ಯಾವುದಕ್ಕಾಗಿ ಕಂಕಣ ಬದ್ಧರಾದರು?
೩. ವಿಶ್ವೇಶ್ವರಯ್ಯ ಅವರ ಹುಟ್ಟು ಹಬ್ಬದ ನೆನಪಿಗಾಗಿ ಯಾವ ದಿನಾಚರಣೆಯನ್ನು ಮಾಡಲಾಗುತ್ತಿದೆ?
೪. ನಾಲ್ವಡಿ ಕೃಷ್ಣರಾಜ ಒಡೆಯರು ಯಾವಾಗ ಪಟ್ಟಾಭಿಷಿಕ್ತರಾದರು?
೫. ವಿಶ್ವೇಶ್ವರಯ್ಯ ಅವರನ್ನು ದೇವಾನರಾಗಿ ನೇಮಿಸಿದವರು ಯಾರು?
೬. ಏಷ್ಯಾ ಖಂಡದಲ್ಲಿಯೇ ಮೊದಲು ಪ್ರಾರಂಭಿಸಿದ ಜಲವಿದ್ಯುತ್ ಯೋಜನೆ ಯಾವುದು?

ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ. (Answer the given questions in three to four sentences)

೧. ನೆಹರು ಅವರು ಸರ್ ಎಂ ವಿಶ್ವೇಶ್ವರಯ್ಯ ಅವರ ಬಗ್ಗೆ ಏನೆಂದು ಹೇಳಿದ್ದಾರೆ?
೨. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಯಾವ ನೀರಾವರಿ ಯೋಜನೆಗಳು ಕಾರ್ಯರೂಪಕ್ಕೆ ಬಂದವು?
೩. ಶಿಕ್ಷಣದ ಬಗ್ಗೆ ವಿಶ್ವೇಶ್ವರಯ್ಯ ಅವರು ಏನೆಂದು ಹೇಳಿದ್ದಾರೆ?
೪. ಹಣಕಾಸು ನೀತಿಯಲ್ಲಿ ವಿಶ್ವೇಶ್ವರಯ್ಯ ಅವರು ಮಾಡಿದ ಮಾರ್ಪಾಡುಗಳಾವುವು?
೫. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಯಾವ ಕ್ಷೇತ್ರಗಳು ಸ್ವಯಂ ಆಡಳಿತ ಕ್ಷೇತ್ರಗಳಾದವು?

ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ. (Answer the given questions in eight to ten sentences)

೧. ಶಿಕ್ಷಣ ಕ್ಷೇತ್ರಕ್ಕೆ ವಿಶ್ವೇಶ್ವರಯ್ಯ ಅವರು ಸಲ್ಲಿಸಿದ ಕೊಡುಗೆಯನ್ನು ತಿಳಿಸಿ.
೨. ವಿಶ್ವೇಶ್ವರಯ್ಯ ಅವರು ಮೈಸೂರು ದಿವಾನರಾಗಿ ಸಲ್ಲಿಸಿದ ಸೇವೆಯನ್ನು ಕುರಿತು ಬರೆಯಿರಿ.
೩. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ʼಮೈಸೂರು ಮಾದರಿʼ ಮೈಸೂರು ರಾಜ್ಯ ಹೇಗಾಯಿತು?

ಈ) ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿರಿ. (Explain taste with context)

೧. “ಮೈಸೂರು ಸಂಸ್ಥಾನಕ್ಕೆ ʼಮಾದರಿ ಮೈಸೂರುʼ ಎಂಬ ಕೀರ್ತಿ ಪ್ರಾಪ್ತವಾಯಿತು”
೨. “ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿತು”
೩. “ಸಾಮಾಜಿಕ ಕಾನೂನುಗಳ ಹರಿಕಾರ”
೪. “ತಾವು ಕಡಿಮೆ ಮಾತನಾಡಿದ್ದೀರಿ ಹೆಚ್ಚು ಕೆಲಸ ಮಾಡಿದ್ದೀರಿ”

ಉ) ಬಿಟ್ಟ ಸ್ಥಳವನ್ನು ಸರಿಯಾದ ಪದದಿಂದ ತುಂಬಿರಿ. (Fill in the blanks with the correct word)

೧. ೧೯೧೪ರಲ್ಲಿ ಶಾಲಾ ಪ್ರವೇಶಕ್ಕೆ ……………………… ನಿಷೇಧವಾಯಿತು.
೨. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ರೀಜೆಂಟರಾಗಿ ಕಾರ್ಯ ನಿರ್ವಹಿಸಿದವರು ………………………..
೩. ವಿಶ್ವೇಶ್ವರಯ್ಯ ಅವರು ಮುಂಬೈ ಪ್ರಾಂತ್ಯದಲ್ಲಿ …………………… ಆಗಿ ಸೇವೆ ಪ್ರಾರಂಭಿಸಿದರು.
೪. ಭಾರತ ಸರಕಾರವು ವಿಶ್ವೇಶ್ವರಯ್ಯನವರಿಗೆ ………………….. ಎಂಬ ಪ್ರಶಸ್ತಿ ನೀಡಿ ಗೌರವಿಸಿತು.
೫. ಮುಂಬೈ ಪ್ರಾಂತ್ಯದ ಗವರ್ನರ್ ಆಗಿದ್ದ ……………….. ಅವರು ವಿಶ್ವೇಶ್ವರಯ್ಯ ಅವರನ್ನು ಮುಕ್ತ ಕಂಠದಿಂದ ಹಾಡಿ ಹೊಗಳಿದರು.

ಭಾಷಾ ಚಟುವಟಿಕೆ

೧. ಕೊಟ್ಟಿರುವ ಪದಗಳ ತತ್ಸಮ ತದ್ಭವ ಬರೆಯಿರಿ. (Write the equivalent of the given words)

ವಂಶ, ಪಟ್ಟಣ, ಕಾರ್ಯ, ಸ್ಥಾನ, ಯಶ

೨. ನೀಡಿರುವ ಪದಗಳಲ್ಲಿ ಅನ್ಯದೇಶ ಪದಗಳನ್ನು ಆರಿಸಿ ಬರೆಯಿರಿ. (Choose and write foreign words from the given words)

 ನಡೆಸು, ಸೋಪು, ಕಾರ್ಖಾನೆ, ಡಿಪ್ಲೋಮಾ,ಪ್ರೌಢ, ಶಿಕ್ಷಣ, ಕಾಗದ, ಕಚೇರಿ, ದಿವಾನ

೩.ಕೊಟ್ಟಿರುವ ಗಾದೆಗಳ ಅರ್ಥವನ್ನು ವಿವರಿಸಿ ಬರೆಯಿರಿ. (Explain and write the meaning of the given proverbs)

೧. ಕೂಡಿ ಬಾಳಿದರೆ ಸ್ವರ್ಗ ಸುಖ.
೨. ಮಾತೆ ಮುತ್ತು ಮಾತೆ ಮೃತ್ಯು.

Click here to download the Bhagyashipigalu worksheet