Mahika Gupta lived in Delhi and was stuck in the Kedarnath temple floods on June 16, 2013. She was just 9 years old at that time. Despite the danger, she saved her 4-year-old brother. She received a “National Bravery Award” for her heroic act.
ಮಹಿಕಾ ಗುಪ್ತಾ ದೆಹಲಿಯಲ್ಲಿ ವಾಸಿಸುತ್ತಿದ್ದರು ಮತ್ತು ಜೂನ್ 16, 2013 ರಂದು ಕೇದಾರನಾಥ ದೇವಾಲಯದ ಪ್ರವಾಹದಲ್ಲಿ ಸಿಲುಕಿಕೊಂಡರು. ಆ ಸಮಯದಲ್ಲಿ ಅವರಿಗೆ ಕೇವಲ 9 ವರ್ಷ. ಅಪಾಯದ ನಡುವೆಯೂ ಆಕೆ ತನ್ನ 4 ವರ್ಷದ ಸಹೋದರನನ್ನು ರಕ್ಷಿಸಿದಳು. ಆಕೆಯ ವೀರ ಕೆಲಸಕ್ಕಾಗಿ “ರಾಷ್ಟ್ರೀಯ ಶೌರ್ಯ ಪ್ರಶಸ್ತಿ” ಪಡೆದರು.
ಬಾಲಕಿಯ ಸಾಹಸ
ಅ. ಸ್ವಂತ ವಾಕ್ಯದಲ್ಲಿ ಬರೆಯಿರಿ: (Make your own sentences)
೧. ಗಾಬರಿ: ನಾಯಿ ನೋಡಿ ನನಗೆ ಗಾಬರಿಯಾಯಿತು.
೨. ಸಾಹಸ: ನಾವು ಸಾಹಸ ಮಾಡಬೇಕು.
೩. ಸಹಾಯ: ನಾವು ಎಲ್ಲರಿಗೂ ಸಹಾಯ ಮಾಡಬೇಕು.
ಆ. ಗುಂಪಿಗೆ ಸೇರದ ಪದ ಗುರುತಿಸಿರಿ: (Write the odd one out)
೧. ತಾಯಿ, ಜನನಿ, ತಂದೆ, ಅಮ್ಮ
೨. ಪ್ರಶಸ್ತಿ, ಪುರಸ್ಕಾರ, ಸನ್ಮಾನ, ಅವಮಾನ
೩. ಸಂತಸ, ದುಃಖ, ಆನಂದ, ಸಂತೋಷ
೪. ಕುಮಾರ, ಕುವರಿ, ಬಾಲಕಿ, ಹುಡುಗಿ
ಇ. ಒಂದು ವಾಕ್ಯದಲ್ಲಿ ಉತ್ತರಿಸಿ: (Answer the following in one sentence)
೧. ಭೀಕರ ಮಳೆ ಬಂದಾಗ ಮಹಿಕಾ ಗುಪ್ತ ಎಲ್ಲಿದ್ದಳು?
ಉ: ಭೀಕರ ಮಳೆ ಬಂದಾಗ ಮಹಿಕಾ ಗುಪ್ತ ಕೇದಾರನಾಥ ದೇವಾಲಯದಲ್ಲಿದ್ದಳು.
೨. ಮಹಿಕಾ ಗುಪ್ತಳಿಗೆ ಯಾವ ಪ್ರಶಸ್ತಿ ನೀಡಲಾಯಿತು?
ಉ: ಮಹಿಕಾ ಗುಪ್ತಳಿಗೆ “ರಾಷ್ಟ್ರೀಯ ಶೌರ್ಯ ಪ್ರಶಸ್ತಿ” ನೀಡಲಾಯಿತು
೩. ನಮ್ಮ ದೇಶದ ಈಗಿನ ರಾಷ್ಟ್ರಪತಿ ಯಾರು?
ಉ: ನಮ್ಮ ದೇಶದ ಈಗಿನ ರಾಷ್ಟ್ರಪತಿ ದ್ರೌಪದಿ ಮುರ್ಮು.
ಈ. ಎರಡು ವಾಕ್ಯದಲ್ಲಿ ಉತ್ತರಿಸಿ: (Answer the following in two – three sentences)
೧. ಮಹಿಕಾ ಏಕೆ ಬೊಬ್ಬೆರಿದಳು?
ಉ: ದೇವಾಲಯದ ಒಳಗೆ ಮಹಿಕಾಳಿಗೆ ಅಪ್ಪ, ಅಮ್ಮ, ತಮ್ಮ ಕಾಣಲಿಲ್ಲ. ಅದಕ್ಕೆ ಮಹಿಕಾ ಬೊಬ್ಬೆರಿದಳು.
೨. ರಾಷ್ಟ್ರಪತಿಗಳು ಮಕ್ಕಳಿಗೆ ನೀಡಿದ ಸಂದೇಶವೇನು?
ಉ: ರಾಷ್ಟ್ರಪತಿಗಳು ಮಕ್ಕಳಿಗೆ “ಇಂದಿನ ಮಕ್ಕಳು ಮುಂದಿನ ಧೀರ ಜನಾಂಗವಾಗಬೇಕು” ಎಂಬ
ಸಂದೇಶ ನೀಡಿದರು.