Beesokalina padha kannada notes grade IV. Beesokalina padha folk song is how women would entratain themselves.

ಬೀಸೋಕಲ್ಲಿನ ಪದ

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)

೧. ರಾಗಿ ಹೇಗೆ ಉದುರುತ್ತದೆ?
೨. ಸರಸತಿಗೆ ಸಿಟ್ಟು ಬಂತು ಏಕೆ?
೩. ಬೀಸುವ ಕಲ್ಲಿನ ಹಿಡಿಗೂಟ ಹಿಡಿದು ಯಾರನ್ನು ನೆನೆಯುತ್ತಾರೆ?

ಆ) ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in two – three sentences)

೧. ಕಲ್ಲು ಕೊಟ್ಟಮ್ಮನನ್ನು ಏನೆಂದು ಹರಸುವಳು? 
೨. ಸಿಟ್ಟುಗೊಂಡ ಸರಸತಿಯನ್ನು ಸಮಾಧಾನ ಮಾಡಿದ ಬಗೆ
ಹೇಗೆ?

ಇ) ಪದ್ಯದ ಮೊದಲರ್ಧ ಸಾಲಿಗೆ ಎರಡನೇ ಅರ್ಧ ಸಾಲನ್ನು ಹೊಂದಿಸಿ ಬರೆಯಿರಿ. (Match the following)

        ಅ ಪಟ್ಟಿ                           ಬ ಪಟ್ಟಿ

೧.  ಬೆಲ್ಲಾದಾರುತಿಯಾ               ಬರುತೀನಿ

೨.  ಮತ್ತೆ ರಾತ್ರೀಗೆ                       ಬೆಳಗೇನು

೩.  ರಾಗಿಯು ಮುಗಿದಾವು          ಚಂದುಳ್ಳ ಮೇಗಲ್ಲು

೪. ಅಂದುಳ್ಳ ಅಡಿಗಲ್ಲು                     ರಾಜಾನ್ನ ಹೆಚ್ಚಾವು

ಈ) ಈ ಮಾದರಿಯಂತೆ ಕೊಟ್ಟಿರುವ ಪದಗಳಿಗೆ ಭಿನ್ನ ಅರ್ಥದಲ್ಲಿ ಸ್ವಂತ ವಾಕ್ಯ ಬರೆಯಿರಿ. (Make your own sentence like the example)

ಮಾದರಿ : 

ಅತ್ತೆ ನನ್ನ ಕಾಲಿಗೆ ಮುಳ್ಳು ಚುಚ್ಚಿದಾಗ ಅತ್ತೆನು.

ಅತ್ತೆ – ನಮ್ಮ ಅತ್ತೆ ನನಗೆ ಹೊಸ ಬಟ್ಟೆ ತಂದರು.

ತಂದೆ : 

ತಂದೆ : 

ಕಳೆ : 

ಕಳೆ : 

ಆಡು : 

ಆಡು : 

ಭಾಷಾ ಚಟುವಟಿಕೆ 

ಅ) ಆಡುಮಾತು ಮತ್ತು ಬರೆಹದ ಮಾತಿನ ನಡುವಿನ ವ್ಯತ್ಯಾಸ ಗಮನಿಸಿ. (Spoken and written language difference)

ಆಡು ಮಾತು           ಬರೆಹದ ರೂಪ 

ಬರ್ತಾನೆ           

ಕರೆವೋಲೆ 
ಯಿಲ್ಲ                      

ಅರಕೆ                       

ಅತ್ತಿರ                              

ಆ) ಅಕ್ಷರ ಬಳಸಿ ಪದ ಬರೆಯಿರಿ. (Make words using the table)

ಇ) ಕೆಳಗಿನ ಆಡು ನುಡಿಗಳನ್ನು ಮಾದರಿ ಬರೆಹದ ಭಾಷೆಯಲ್ಲಿ ಬರೆಯಿರಿ. (Write the following idioms in the language of the model writer)

ಮಾದರಿ : ಹೆಚ್ಯಾವು – ಹೆಚ್ಚಾದವು . 

ವದಗ್ಯಾವು –

ಮುಗಿದಾವು –

ಸಿಟ್ಯಾಕೆ –

ಬೆಳೆಯಾಲಿ –

ಚಟುವಟಿಕೆ 

ಅ) ಒಗಟು ಬಿಡಿಸು. Solve the puzzle

೧. ಅವ್ವನ ಹಾಸಿಗೆ ಸುತ್ತಾಕಾಗೋಲ್ಲ , ಅಪ್ಪನ ದುಡ್ಡು ಎಣಿಸಾಕಾಗೊಲ್ಲ.
೨. ಅಪ್ಪಾ ಎಂದರೆ ಮುಚ್ಚುತಾವ, ಅಮ್ಮ ಎಂದರೆ ತೆರಿತಾವ. 
೩. ಕರಿ ಸೀರಿ ಉಟ್ಟಾಳ, ಕಾಲುಂಗರ ಇಟ್ಟಾಳ, ಮೇಲೆ ಹೋಗತಾಳ, ಕೆಳಗೆ ಬರತಾಳ. 

ಆ) ಕೊಟ್ಟಿರುವ ಕತೆ ಓದಿ. ಇದಕ್ಕೆ ಗಾದೆಗಳನ್ನು ಬರೆಯಿರಿ. (Read the given story. Write proverbs for it)

ಒಂದು ಊರಿನಲ್ಲಿ ಒಬ್ಬ ರೈತನಿದ್ದನು. ಅವನಿಗೆ ಇಬ್ಬರು  ಸೋಮಾರಿ ಮಕ್ಕಳಿದ್ದರು. ಅನಾರೋಗ್ಯದಿಂದ ರೈತ ಹಾಸಿಗೆ ಹಿಡಿದನು. ಮಕ್ಕಳನ್ನು ಹತ್ತಿರ ಕರೆದು ” ಮಕ್ಕಳೇ ನಾನು ಸಂಪಾದಿಸಿದ ಸಂಪತ್ತನ್ನು ನಿಮಗಾಗಿ ಹೊಲದಲ್ಲಿ ಹೂತಿಟ್ಟಿದ್ದೇನೆ” ಎಂದು ಹೇಳಿದನು. ಮಕ್ಕಳಿಬ್ಬರು ಹಾರೆ ಗುದ್ದಲಿ ಹಿಡಿದು ಹೊಲಕ್ಕೆ ಹೋದರು. ಅಗೆದು ಅಗೆದು ನಿಧಿಗಾಗಿ ಹುಡುಕಿದರು. ನಿಧಿ ಸಿಗಲಿಲ್ಲ. ಅದೇ ದಿನ ಮಳೆ ಸುರಿಯಿತು. ಇನ್ನೇನು ಮಾಡುವುದು ಎಂದು ಧಾನ್ಯ ಬಿತ್ತಿದರು. ಉತ್ತಮ ಬೆಳೆ ಬಂತು. ಕೈ ತುಂಬ ಹಣ ಸಂಪಾದಿಸಿದರು. ರೈತ ಮಕ್ಕಳನ್ನು ಕರೆದು ”ಇದೇ ನಾನು ಹೊಲದಲ್ಲಿ ಹೂತಿಟ್ಟ ಸಂಪತ್ತು” ಎಂದು ಹೇಳಿದನು. 

ಇ) ಕೊಟ್ಟಿರುವ ಗಾದೆ ಮಾತನ್ನು ಬರೆಹದ ಭಾಷೆಗೆ ಬದಲಾಯಿಸು. (Convert the given proverb into written language)

೧. ಓಡಾಡ್ಕೊಂಡು ದನ ಕಾದ್ರೆ ಬೇಗ್ನೆ ಹೊತ್ತು ಮುಳುಗುತ್ತಾ ? 
೨. ಕಡ್ಲೆ ಇದ್ದಾಗ ಹಲ್ಲಿಲ್ಲ ,ಹಲ್ಲಿದ್ದಾಗ ಕಡ್ಲಿಲ್ಲ 
೩. ಕುಟ್ಟಾಕ ಬರದೊಳು ಕೇರಿ ಕೇರಿ ನೋಡಿದಳಂತ 

Click here to download beesokalina pada kannada notes