“Bekkige aata ilige prana sankata” is a kannada proverb. A cat’s pleasure is a mouse’s life
Proverb is equivalent to Veda. It is the Upanishad of rural people. Proverbs are trivalent in meaning.
The cat’s food is a mouse. A cat does not hunt a mouse and eat it immediately but plays it well, tortures it to death and then eats it. Also, some human beings abuse the poor and the weak and inflict mental and physical violence. They make the poor and weak neither die nor live. Only when the strong and rich do good work and know that everyone is equal can anyone be happy on earth without hurting anyone.
Bekkige aata ilige prana sankata means, a cat’s pleasure is a mouse’s life.
ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ
ಗಾದೆ ವೇದಕ್ಕೆ ಸಮಾನ. ಇದು ಗ್ರಾಮೀಣ ಜನರ ಉಪನಿಷತ್ತು. ಇವು ಸಾಮಾನ್ಯವಾಗಿ ಲೋ ಕೋಕ್ತಿ, ಸುಭಾಷಿತ ,ಕವಿ ಸೂಕ್ತಿಗಳಂತೆ ಅಡಕವಾದ ಮಾತುಗಳಲ್ಲಿ ಇರುತ್ತವೆ. ಗಾದೆಗಳು ಅರ್ಥದಲ್ಲಿ ತ್ರಿವಿಕ್ರಮನಿದ್ದಂತೆ.
ಬೆಕ್ಕಿಗೆ ಆಹಾರ ಇಲಿ. ಬೆಕ್ಕು ಇಲಿಯನ್ನು ಬೇಟೆಯಾಡಿ ತಕ್ಷಣ ತಿನ್ನದೆ ಅದನ್ನು ಚೆನ್ನಾಗಿ ಆಟ ಆಡಿಸಿ, ಚಿತ್ರಹಿಂಸೆ ನೀಡಿ ಸಾಯಿಸಿ ನಂತರ ತಿನ್ನುತ್ತದೆ. ಹಾಗೆಯೇ ಕೆಲವು ಮನುಷ್ಯರು ಬಡವರ ಬಲಹೀನರ ಮೇಲೆ ದೌರ್ಜನ್ಯ ಮಾಡುತ್ತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಾರೆ. ಬಡವರು, ಬಲಹೀನರು ಸಾಯಲೂ ಬಾರದು ಬದುಕಲೂ ಬಾರದು ಎನ್ನುವಂತೆ ಮಾಡುತ್ತಾರೆ. ಬಲಶಾಲಿ, ಶ್ರೀಮಂತರಾದವರು ಲೋಕಹಿತದ ಕಾರ್ಯ ಮಾಡಿದಾಗ, ಎಲ್ಲರನ್ನು ಸಮಾನರು ಎಂದು ತಿಳಿದಾಗ ಮಾತ್ರ ಭೂಮಿ ಮೇಲೆ ಯಾರು ಯಾರಿಗೂ ನೋವು ಮಾಡದೆ ಸುಃಖವಾಗಿರಬಹುದು.
ಸುಮನಾ ಶ್ರೀರಾಮ್