Beleyuva pairu molakeyalli Kannada Lesson Grade VI is about Bal Gangadhar Tilak. Beleyuva pairu molakeyalli means see the plant when it is a sprout.

One day, in a school in Ratnagiri, peanut shells were scattered in a classroom. When the teacher entered and saw the mess, he asked who was responsible. The class remained silent, which made the teacher even angrier, and he started punishing the students. However, one boy stood up and refused to accept the punishment, asserting that he had not committed the mistake.

The next day, the boy’s father visited the school and defended his son, stating that he was truthful and never ate outside food. That boy later grew up to be Bal Gangadar Tilk, who famously declared, “Freedom is our birthright!”

ಬೆಳೆಯುವ ಪೈರು ಮೊಳಕೆಯಲ್ಲಿ

I. ಪದಗಳ ಅರ್ಥ ತಿಳಿಯಿರಿ: (Word Meaning)

ಬಿಡುವು = ವಿರಾಮ (Leisure)
ಸಿಟ್ಟು = ಕೋಪ (Anger)
ಮೌನ = ನಿಶ್ಶಬ್ದ (Silence)
ದಿಟ್ಟತನ = ಧೈರ್ಯ (Brave)
ನಾಯಕ = ಮುಂದಾಳು (Leader)
ದೂರು = ಆಪಾದನೆ (Complaint)

II. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ: Answer the following questions in one sentence.
೧. ಗುರುಗಳಿಗೆ ಸಿಟ್ಟು ಬರಲು ಕಾರಣವೇನು?
ಉ:ನೆಲದ ಮೇಲೆ ಚೆಲ್ಲಾಡಿದ್ದ ಕಡಲೆಕಾಯಿ ಸಿಪ್ಪೆಯನ್ನು ಕಂಡು ಗುರುಗಳಿಗೆ ಸಿಟ್ಟು ಬರಲು ಕಾರಣ.
೨. ತರಗತಿ ಮೌನವಾಗಿರುವುದನ್ನು ಕಂಡು ಗುರುಗಳು ಏನು ಮಾಡಿದರು?
ಉ:ತರಗತಿ ಮೌನವಾಗಿರುವುದನ್ನು ಕಂಡು ಗುರುಗಳು ಎಲ್ಲಾ ಮಕ್ಕಳಿಗೆ ಬೆತ್ತದೇಟು ಕೊಟ್ಟರು.
೩. ಒಬ್ಬ ಹುಡುಗ ಏಟು ತಿನ್ನಲು ಕೈಚಾಚದೆ ಗುರುಗಳಿಗೆ ಧೈರ್ಯದಿಂದ ಏನೆಂದು ಉತ್ತರಿಸಿದನು?
ಉ: ಒಬ್ಬ ಹುಡುಗ ಏಟು ತಿನ್ನಲು ಕೈಚಾಚದೆ ಗುರುಗಳಿಗೆ ಧೈರ್ಯದಿಂದ “ನಾನು ಕಡಲೆಕಾಯಿ ತಿಂದಿಲ್ಲ, ನಾನು ಏಟು ತಿನ್ನುವುದಿಲ್ಲ” ಎಂದು ಉತ್ತರಿಸಿದನು.
೪. ಗುರುಗಳಿಗೆ ಏಕೆ ಆಶ್ಚರ್ಯವಾಯಿತು?
ಉ:ಹುಡುಗನ ದಿಟ್ಟತನ ನೋಡಿ ಗುರುಗಳಿಗೆ ಆಶ್ಚರ್ಯವಾಯಿತು.
೫. ಬಾಲ ಮುಂದೆ ಯಾವ ಹೆಸರಿನಿಂದ ಪ್ರಸಿದ್ಧನಾದನು?
ಉ: ಬಾಲ ಮುಂದೆ ಬಾಲಗಂಗಾಧರ ತಿಲಕ ಎಂಬ ಹೆಸರಿನಿಂದ ಪ್ರಸಿದ್ಧನಾದನು.

III. ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ: Answer the following questions in tw0-three sentences.

೧. ಗುರುಗಳ ಕೋಪ ಹೆಚ್ಚಾಗಲು ಕಾರಣವೇನು?
ಉ: ನೆಲದ ಮೇಲೆ ಕಡಲೆಕಾಯಿ ಸಿಪ್ಪೆಯನ್ನು ಕಂಡು ಗುರುಗಳಿಗೆ ಸಿಟ್ಟು ಬಂತು. ಇದನ್ನು ಯಾರು ಮಾಡಿದವರು ಎಂದು ಕೇಳಿದಾಗ, ತರಗತಿ ಮೌನವಾಗಿತ್ತು. ಆದ್ದರಿಂದ ಗುರುಗಳ ಕೋಪ ಹೆಚ್ಚಾಯಿತು.
೨. ಹುಡುಗನ ತಂದೆ ಶಾಲೆಗೆ ಬಂದು ಏನೆಂದು ಹೇಳಿದರು?
ಉ: ಹುಡುಗನ ತಂದೆ ಶಾಲೆಗೆ ಬಂದು “ನನ್ನ ಮಗ ಹೇಳಿದ್ದು ಸತ್ಯ ಅವನು ಮನೆಯ ಹೊರಗೆ ಏನೂ ತಿನ್ನುವುದಿಲ್ಲ ಅಂಗಡಿ ಇಂದ ತಿಂಡಿ ಕೊಂಡು ತಿನ್ನಲು ನಾವು ಹಣ ಕೊಡುವುದಿಲ್ಲ” ಎಂದು ಹೇಳಿದರು.

IV. ಯಾರು ಯಾರಿಗೆ ಹೇಳಿದರು? (Who told to whom)
೧. “ಯಾರಿದನ್ನು ಮಾಡಿದವರು?”
ಉ:ಗುರುಗಳು ಮಕ್ಕಳಿಗೆ ಕೇಳಿದರು.
೨. “ನಾನು ಕಡಲೆಕಾಯಿ ತಿಂದಿಲ್ಲ, ಆದ್ದರಿಂದ ಏಟೂ ತಿನ್ನುವುದಿಲ್ಲ”
ಉ: ಹುಡುಗನು ಗುರುಗಳಿಗೆ ಹೇಳಿದನು.
೩. “ಅವನು ಮನೆಯ ಹೊರಗೆ ಏನೂ ತಿನ್ನುವುದಿಲ್ಲ”
ಉ: ಹುಡುಗನ ತಂದೆಯು ಗುರುಗಳಿಗೆ ಹೇಳಿದನು
೪. “ಸ್ವಾತಂತ್ರ್ಯ ನಮ್ಮ ಆಜನ್ಮಸಿದ್ಧ ಹಕ್ಕು”
ಉ: ಬಾಲಗಂಗಾಧರ ತಿಲಕ ದೇಶಕ್ಕೆ ಹೇಳಿದರು

V. ಕೆಳಗಿನ ಪದಗಳನ್ನು ಸ್ವಂತವಾಕ್ಯದಲ್ಲಿ ಬಳಸಿ ಮಾಡಿರಿ: (Make your own sentences)
೧. ಬಿಡುವು: ನಾನು ಬಿಡುವಿನ ಸಮಯದಲ್ಲಿ ಟಿವಿ ನೋಡುತ್ತೇನೆ.
೨. ಚೆಲ್ಲಾಡು: ಮಂಗ ಕಡಲೆಕಾಯಿ ಸಿಪ್ಪೆಯನ್ನು ಚೆಲ್ಲಾಡಿತು.
೩. ಅನ್ಯಾಯ: ಅದು ಅನ್ಯಾಯ.
೪. ಕೈ ಚಾಚು: ಯಾರ ಮುಂದೆ ಕೈ ಚಾಚಬಾರದು.

VI. ಮಾದರಿಯಂತೆ ಬರೆಯಿರಿ: (Answer the following like a model)
ಶಾಲೆ + ಇಂದ = ಶಾಲೆಯಿಂದ ಶಾಲೆ + ಅನ್ನು = ಶಾಲೆಯನ್ನು
ಶಾಲೆ + ಅ = ಶಾಲೆಯ ಶಾಲೆ + ಗೆ = ಶಾಲೆಗೆ

WORKBOOK

VII. (Write the meaning in Kannada)

Student = ವಿದ್ಯಾರ್ಥಿ                     Afternoon = ಮಧ್ಯಾಹ್ನ
Silence = ನಿಶ್ಯಬ್ದ                           Freedom = ಸ್ವಾತಂತ್ರ
Surprise = ಆಶ್ಚರ್ಯ                      Brave = ಸಾಹಸಿ
Teacher = ಶಿಕ್ಷಕ                             Famous = ಪ್ರಸಿದ್ಧ
Leader = ನಾಯಕ                          Incident = ಘಟನೆ

VIII. ಬಿಟ್ಟಸ್ಥಳ ತುಂಬಿರಿ (Fill in the blanks)
೧. ಶಾಲೆಯ ಘಂಟೆ ಬಾರಿಸಿತು.
೨. ಗುರುಗಳ ಕೋಪ ಇನ್ನೂ ಹೆಚ್ಚಾಯಿತು.
೩. ಪ್ರತಿಯೊಬ್ಬ ವಿದ್ಯಾರ್ಥಿಗೂ ಎರಡೆರಡು ಬೆತ್ತದೇಟು ಕೊಡಲಾರಂಭಿಸಿದರು.
೪. ಈ ಘಟನೆ ನಡೆದಿದ್ದು ಮಹಾರಾಷ್ಟ್ರದ ರತ್ನಗಿರಿಯ ಪ್ರಾಥಮಿಕ ಶಾಲೆಯಲ್ಲಿ.
೫. ನಮ್ಮ ದೇಶದ ಸ್ವಾತಂತ್ರ ಹೋರಾಟದ ನಾಯಕನಾದನು.

IX. ವಿರುದ್ಧ ಪದ ಬರೆಯಿರಿ (Write the Opposite word)
ಶಬ್ದ X ನಿಶ್ಶಬ್ದ                ಧೈರ್ಯ X ಅಧೈರ್ಯ             
ಸತ್ಯ X  ಅಸತ್ಯ              ಪ್ರಶ್ನೆ X ಉತ್ತರ             
ನ್ಯಾಯ X  ಅನ್ಯಾಯ         ಕೆಟ್ಟದು X ಒಳ್ಳೆಯದು

Click here to download beleyuva paru molakeyali grade VI