Bhagiratha Kannada notes grade III. King Bhagiratha was a noble ruler of the Ikshvaku dynasty. His ancestors had been turned to ashes due to a curse, and their souls could only attain peace if the holy River Ganga descended from heaven to purify them. Determined to fulfill this duty, Bagiratha performed intense penance for many years to please Lord Brahma. Moved by his devotion, Brahma granted his wish but warned that Ganga’s mighty force could destroy the Earth. Bhagiratha then prayed to Lord Shiva, who agreed to receive Ganga on his matted locks and release her gently. When Ganga finally descended, Shiva trapped her in his hair and then let her flow softly down to Earth. Following Bhagirata, the sacred river reached the ashes of his ancestors, granting them salvation. Since then, Ganga has been revered as a divine river that purifies all who bathe in her waters.

ಭಗೀರಥ

ಅ) ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಬರೆಯಿರಿ (Answer the following in one sentence)

೧. ಭಗೀರಥ ಯಾರಿಗೆ ಸ್ವರ್ಗ ಸಿಗಬೇಕೆಂದು ಚಿಂತಿಸುತ್ತಿದ್ದನು?
ಉ: ಭಗೀರಥ ತನ್ನ ಅರವತ್ತು ಸಾವಿರ ಜನ ತಾತಂದಿರರಿಗೆ ಸ್ವರ್ಗ ಸಿಗಬೇಕೆಂದು ಚಿಂತಿಸುತ್ತಿದ್ದನು.

೨. ಋಷಿಗಳು ಭಗೀರಥನಿಗೆ ಏನೆಂದು ಹೇಳಿದರು?
ಉ: ಗಂಗೆಯನ್ನು ಭಗೀರಥನ ತಾತಂದಿರ ಬೂದಿಯ ಮೇಲೆ ಹರಿಸಬೇಕೆಂದು ಋಷಿಗಳು ಹೇಳಿದರು.

೩. ಭಗೀರಥನು ಏಕೆ ತಪಸ್ಸಿಗೆ ಕುಳಿತನು?
ಉ: ದೇವಲೋಕದ ಗಂಗೆಯನ್ನು ಭೂಮಿಗೆ ತರಲು ಭಗೀರಥನು ತಪಸ್ಸಿಗೆ ಕುಳಿತನು.

೪. ಗಂಗೆ ಭಗೀರಥನಿಗೆ ಏನೆಂದು ಹೇಳಿದಳು?
ಉ: “ ನಿನ್ನ ಇಚ್ಛೆಯಂತೆ ನಾನು ಭೂಮಿಗೆ ಧುಮುಕುತ್ತೇನೆ ಆದರೆ ನನ್ನ ರಭಸವನ್ನು ತಡೆಯುವವರು ಯಾರು ಎಂದಳು”.

೫. ಗಂಗೆ ಹರಿಯುವ ರಭಸವನ್ನು ತಡೆದವರು ಯಾರು?
ಉ: ಗಂಗೆ ಹರಿಯುವ ರಭಸವನ್ನು ತಡೆದವರು ಶಿವ.

ಆ) ‘ ಅ’ ಪಟ್ಟಿಯಲ್ಲಿನ ಹೆಸರುಗಳನ್ನು ‘ ಬ ‘ ಪಟ್ಟಿಯೊಂದಿಗೆ ಹೊಂದಿಸಿ ಬರೆ. (Match the following)

ಅ                        ಬ                         ಉತ್ತರ

ಗಂಗೆ                    ರಾಜ                    ನದಿ

ಜಹ್ನು                 ನದಿ                     ಮಹರ್ಷಿ

ಭಗೀರಥ             ಮಹರ್ಷಿ            ರಾಜ

ಇ) ಈ ಕೆಳಗಿನ ಘಟನೆಗಳನ್ನು ಅನುಕ್ರಮವಾಗಿ ಬರೆ. (Arrange the scenario in order)

೧. ಗಂಗೆ ಭೂಮಿಗೆ ಧುಮ್ಮಿಕ್ಕಿ ಹರಿದು ಬಂದಳು.

೨. ಶಿವನು ಗಂಗೆಯನ್ನು ಶಿರದಲ್ಲಿ ಧರಿಸಿದ.

೩. ಗಂಗೆಯನ್ನು ಭೂಮಿಗೆ ತರಲೇಬೇಕೆಂದು ಭಗೀರಥ ತಪಸ್ಸು ಮಾಡಿದ.

೪. ಜಹ್ನು ಮಹರ್ಷಿ ಗಂಗೆಯನ್ನು ಕಿವಿಯ ಮೂಲಕ ಹರಿಯಲು ಬಿಟ್ಟನು.

ಉತ್ತರ:

೧. ಗಂಗೆಯನ್ನು ಭೂಮಿಗೆ ತರಲೇಬೇಕೆಂದು ತಪಸ್ಸು ಮಾಡಿದ.

೨. ಗಂಗೆ ಭೂಮಿಗೆ ಧುಮ್ಮಿಕ್ಕಿ ಹರಿದು ಬಂದಳು.

೩. ಶಿವನು ಗಂಗೆಯನ್ನು ಶಿರದಲ್ಲಿ ಧರಿಸಿದ.

೪. ಜಹ್ನು ಮಹರ್ಷಿ ಗಂಗೆಯನ್ನು ಕಿವಿಯ ಮೂಲಕ ಹರಿಯಲು ಬಿಟ್ಟನು.

ಈ) ಕೊಟ್ಟಿರುವ ಮಾತನ್ನು ಯಾರು , ಯಾರಿಗೆ ಹೇಳಿದರು? (Who told to whom)

೧. “ಗಂಗೆಯನ್ನು ನಾನು ಶಿರದಲ್ಲಿ ಧರಿಸುತ್ತೇನೆ .”
ಉ: ಈ ಮಾತನ್ನು ಶಿವನು ಭಗೀರಥನಿಗೆ ಹೇಳುತ್ತಾನೆ .

೨. “ ನಿನ್ನ ಇಚ್ಚೆಯಂತೆ ನಾನು ಭೂಮಿಗೆ ಧುಮುಕುತ್ತೇನೆ ” .
ಉ: ಈ ಮಾತನ್ನು ಗಂಗೆಯು ಭಗೀರಥನಿಗೆ ಹೇಳುತ್ತಾಳೆ .

ಭಾಷಾ ಚಟುವಟಿಕೆ

ಅ) ಈ ಪದಗಳಿಗೆ ನಾನಾರ್ಥ ಬರೆಯಿರಿ. Write the different meanings of these words.

೧. ಮುನಿ = ಋಷಿ , ತಪಸ್ವಿ

೨. ತರು = ಮರ , ವೃಕ್ಷ

ಆ) ಈ ನುಡಿಗಟ್ಟುಗಳನ್ನು ವಾಕ್ಯಗಳಲ್ಲಿ ಬಳಸಿ ಬರೆಯಿರಿ. (Write sentences using these phrases)

೧. ಎಳ್ಳಷ್ಟು = ನಾನು ದಾನ ಮಾಡಿದ್ದರಲ್ಲಿ ಎಳ್ಳಷ್ಟು ಮರಳಿ ಕೇಳುವುದಿಲ್ಲ.

೨. ಎದೆಗುಂದು = ನಾನು ಪರೀಕ್ಷೆಯನ್ನು ಎದೆಗುಂದದೆ ಎದುರಿಸುತ್ತೇನೆ.

ಅ) ಈ ಕೆಳಗಿನ ಪದ್ಯ ಭಾಗಕ್ಕೆ ಸೂಕ್ತ ಲೇಖನ ಚಿಹ್ನೆಗಳನ್ನು ಹಾಕಿರಿ. Put the appropriate article symbols in the following verse.

೧. ಭಗೀರಥನ ಅನೇಕ ವರ್ಷಗಳ ಕಠಿಣ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷಳಾದ ಗಂಗೆ ನಿನ್ನ ಇಚ್ಛೆಯಂತೆ ನಾನು ಭೂಮಿಗೆ ಧುಮುಕುತೇನೆ  ಆದರೆ ನನ್ನ ರಭಸವನ್ನು ತಡೆಯುವವರು ಯಾರು ಎಂದಳು

ಉತ್ತರ : ಭಗೀರಥನ ಅನೇಕ ವರ್ಷಗಳ ಕಠಿಣ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷಳಾದ ಗಂಗೆ , “ನಿನ್ನ ಇಚ್ಛೆಯಂತೆ ನಾನು ಭೂಮಿಗೆ ಧುಮುಕುತ್ತೇನೆ. ಆದರೆ, ನನ್ನ ರಭಸವನ್ನು ತಡೆಯುವವರು ಯಾರು?” ಎಂದಳು.

ಚಟುವಟಿಕೆ

ಆ) ನಮ್ಮ ರಾಜ್ಯದಲ್ಲಿ ಹರಿಯುವ ನದಿಗಳ ಹೆಸರನ್ನು ಪಟ್ಟಿ ಮಾಡು.

ಉ: ತುಂಗಾ, ಭದ್ರಾ, ತುಂಗಭದ್ರಾ, ಕಾವೇರಿ, ಮಲಪ್ರಭಾ.

Click here to download Bhagirata kannada lesson notes