Bhuvaneshwari Poem Notes 5th grade is about Karnataka godess. Bhuvaneshwari Kseeb Solutions For Class 5 written by B V Satyanarayana Rao
It is everyone’s responsibility to instill love and pride for the Kannada land and language among children. By helping them understand the history of our land, the valiant rulers who governed it, the leaders who worked tirelessly to build the state, and its rich heritage such as sculpture, culture, and traditions, we can make children realize the richness of this legacy. The present poem carries the message of awakening a sense of pride in them about the great heritage they have inherited.
Goddess Bhuvaneshwari of Karnataka is revered as the supreme mother and guardian deity of the Kannada land, symbolizing power, compassion, and prosperity. She is worshipped as the divine embodiment of Karnataka culture, heritage, and spiritual identity, inspiring unity and devotion among people.
Bhuvaneshwari Devi represents Shakti, the cosmic energy that protects the state and nurtures its people. Temples and cultural traditions associated with Karnataka Goddess Bhuvaneshwari highlight the deep connection between spirituality, Kannada history, and regional pride, making her a central figure in Karnataka’s religious and cultural life.
ಭುವನೇಶ್ವರಿ
I ಪದಗಳಅರ್ಥ
ಪದ = ಪಾದ, ಕಾಲುಗಳು
ಚರಿತೆ = ಇತಿಹಾಸ
ಸೊಬಗು = ಚೆಲುವು, ಅಂದ
ಮೆರೆ = ಖ್ಯಾತಿ ಹೊಂದು
ವೀರತಾಣ = ವೀರರ ಸ್ಥಳ
ಹಿರಿಮೆ = ಹೆಚ್ಚುಗಾರಿಕೆ
ಸಿರಿ = ಶ್ರೀ, ಸಂಪತ್ತು, ಚೆಲುವು
ವೈಭವ = ಐಶ್ವರ್ಯ
ಗರಿಮೆ = ಹಿರಿಮೆ
ಪತನ = ಅವನತಿ, ನಾಶ
ಶೀಘ್ರದಲ್ಲಿ = ಬೇಗನೆ, ಅಲ್ಪ ಸಮಯದಲ್ಲೇ
ಬೆರಗಾಗು = ವಿಸ್ಮಯ ಪಡು
ಸಿರಿಸಂಪದ = ಸಂಪತ್ತು
ದ್ರೋಹ = ಕೇಡನ್ನೆಣಿಸು, ವಿಶ್ವಾಸಘಾತ
ಸೆರೆ = ಬಂಧನ
ಅಂತಃಕಲಹ = ಒಳ ಜಗಳ
ಅಮರಿದರು = ಆಕ್ರಮಿಸು
ಚಳುವಳಿ = ಹೋರಾಟ
ತತ್ವ = ಸಿದ್ಧಾಂತ, ಸಾರಸತ್ವ
ಅಸಹಕಾರ = ಸಹಕರಿಸದಿರುವುದು
ಮೊಳೆತವು = ಚಿಗುರಿದವು
ವಿಶಾಲ = ವಿಸ್ತಾರವಾದ
ಉದಯ = ಮೂಡು, ಹುಟ್ಟು
ಪರಿ = ರೀತಿ
ಪಂಥ = ಮಾರ್ಗ, ಸಂಪ್ರದಾಯ
ಚಿಮ್ಮು = ನೆಗೆ, ಬೀಸು
ಪೋಷಿಸು = ಕಾಪಾಡು, ಮೊರೆ
ಅ) ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. (Answer the following questions)
೧. ಪಲ್ಲವರನ್ನು ಗೆದ್ದು ಮೆರೆದವರು ಯಾರು?
ಉ: ಪಲ್ಲವರನ್ನು ಗೆದ್ದು ಮೆರೆದವರು ಕದಂಬರು.
೨. ಬಾದಾಮಿಯಲ್ಲಿ ಆಳ್ವಿಕೆ ನಡೆಸಿದವರಾರು?
ಉ: ಬಾದಾಮಿಯಲ್ಲಿ ಆಳ್ವಿಕೆ ನಡೆಸಿದವರು ಚಾಲುಕ್ಯರು.
೩. ಯಾರ ಪತನದ ನಂತರ ವಿಜಯನಗರ ಬೆಳೆಯಿತು?
ಉ: ಹೊಯ್ಸಳರ ಪತನದ ನಂತರ ವಿಜಯನಗರ ಬೆಳೆಯಿತು.
೪. ಯುದ್ಧದಲ್ಲಿ ಆಂಗ್ಲರನ್ನು ಎದುರಿಸಿ ಗೆದ್ದವರು ಯಾರು?
ಉ: ಯುದ್ಧದಲ್ಲಿ ಆಂಗ್ಲರನ್ನು ಎದುರಿಸಿ ಗೆದ್ದವರು ಕಿತ್ತೂರು ರಾಣಿ ಚೆನ್ನಮ್ಮ.
೫. ಭಾರತ ಸ್ವಾತಂತ್ರ್ಯದ ಚಳವಳಿ ಯಾರ ತತ್ವದಲ್ಲಿ ಬೆಳೆಯಿತು?
ಉ: ಭಾರತ ಸ್ವಾತಂತ್ರ್ಯದ ಚಳವಳಿ ಗಾಂಧೀಜಿಯವರ ತತ್ವದಲ್ಲಿ ಬೆಳೆಯಿತು.
೬. ವಿಶಾಲ ಮೈಸೂರಿನ ಉದಯವಾದುದು ಯಾವಾಗ?
ಉ: ವಿಶಾಲ ಮೈಸೂರಿನ ಉದಯವಾದುದು ೧೯೫೬, ನವೆಂಬರ್ ೧ರಂದು.
೭. ನಮ್ಮ ನಾಡಿನಲ್ಲಿ ಯಾವುದು ಗೆಲ್ಲಬೇಕು? ಯಾವುದು ಬಾಳಬೇಕು?
ಉ: ನಮ್ಮ ನಾಡಿನಲ್ಲಿ ಕನ್ನಡ ಗೆಲ್ಲಬೇಕು. ಕನ್ನಡ ಬಾಳಬೇಕು.
ಆ) ಕೆಳಗಿನ ಪದ್ಯವನ್ನು ಪೂರ್ಣಗೊಳಿಸಿರಿ. (Complete the poem)
ಹೊಯ್ಸಳ ಪತನದ ನಂತರ ಬೆಳೆಯಿತು ವಿಜಯನಗರವತಿ ಶೀಘ್ರದಲ್ಲಿ I
ಲೋಕವೆ ಬೆರಗಾಗುವ ಸಿರಿಸಂಪದ ಮೆರೆಯಿತು ಈ ಸಾಮ್ರಾಜ್ಯದಲಿ
ಯುದ್ಧದಿ ಆಂಗ್ಲರನೆದುರಿಸಿ ಗೆದ್ದಳು ಚನ್ನಮ್ಮನು ಕಿತ್ತೂರಿನಲ್ಲಿ |
ದ್ರೋಹಕೆ ಸೆರೆಯಾಗುತ ದಿನವನು ದೂಡಿದಳವಳು ಜೈಲಿನಲ್ಲಿ
ಹಿಂದೂ ಮುಸ್ಲಿಂ ಕ್ರೈಸ್ತ ಜೈನ ಬಸವೇಶ್ವರರ ಸಿರಿಪಂಥವಿದೆ |
ಕೊಂಕಣಿ ಉರ್ದು ತುಳುವಿನ ಸಂಸ್ಕೃತಿ ಕನ್ನಡತನ ಜಲ ಚಿಮ್ಮುತಿದೆ
”ಕನ್ನಡ ಗೆಲ್ಲಲಿ ಕನ್ನಡಬಾಳಲಿ” ನಮ್ಮೀ ಕನ್ನಡ ನೆಲದಲ್ಲಿ |
“ ಕನ್ನಡ ಕಲಿಯಿರಿ ಕನ್ನಡ ಪೋಷಿಸಿ” ನಮ್ಮಯ ಕನ್ನಡನಾಡಿನಲಿ
ಭಾಷಾಭ್ಯಾಸ
ಅ) ಕೊಟ್ಟಿರುವ ಪದಗಳನ್ನು ಸೂಚನೆಯಂತೆ ಬದಲಾಯಿಸಿ. (Change as per the instructions given)
ಆಡಿದಳು – ಇದನ್ನು ವರ್ತಮಾನ ಕಾಲಕ್ಕೆ ಬದಲಿಸಿ – ಆಡುತ್ತಿದ್ದಾಳೆ
ನೋಡುವರು – ಇದನ್ನು ಏಕವಚನಕ್ಕೆ ಬದಲಿಸಿ – ನೋಡುವನು
ತಿಂದಿದ್ದು – ಇದರ ಮೂಲ ರೂಪ ಬರೆಯಿರಿ – ತಿನ್ನುವದು
ಬರುವುದು – ಇದನ್ನು ಭೂತಕಾಲಕ್ಕೆ ಬದಲಾಯಿಸಿ – ಬಂದಿತ್ತು
ಆ) ಇವುಗಳ ಧಾತು ರೂಪ ಬರೆಯಿರಿ. (Write the verb form)
ಕುಣಿವಳು – ಕುಣಿ
ಕುಡಿಯಿತು – ಕುಡಿ
ಬರೆಗಳು – ಬರೆ
ಬಂದನು – ಬರು
ಹೋಗುವರು – ಹೋಗು
ಕೃತಿಕಾರರ ಪರಿಚಯ
ಸತ್ಯವಿಠಲ ಅಂಕಿತದಿಂದ ಪ್ರಸಿದ್ಧರಾಗಿರುವ ಬಿ . ವಿ . ಸತ್ಯನಾರಾಯಣರಾವ್ ಅವರು ( ೧೯೪೮ ) ತುಮಕೂರು ಜಿಲ್ಲೆ ಶಿರಾ ತಾಲೂಕಿನ ಬುಕ್ಕಾಪಟ್ಟಣದವರು. ಮೆಕಾನಿಕಲ್ ಇಂಜಿನಿಯರಿಂಗ್ ಪದವೀಧರರಾದ ಇವರು ಪ್ರಕೃತ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಉಪಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವರು. ಗೀತ , ಸ್ತೋತ್ರ , ಕಾವ್ಯ , ಲಾವಣಿ , ಗದ್ಯ ಹೀಗೆ ವಿವಿಧ ಪ್ರಕಾರಗಳಲ್ಲಿ ಅರವತ್ತು ಕೃತಿಗಳನ್ನು ರಚಿಸಿದ್ದಾರೆ. ಹನ್ನೊಂದು ಭಾಮಿನಿ ಕಾವ್ಯಗಳನ್ನೂ ಬಸವ ಭಾರತಿ ಸುದೀರ್ಘ ಲಾವಣಿ ಕಾವ್ಯವನ್ನೂ ಸಂಪೂರ್ಣ ದೇವೀ ಮಹಾತ್ಮ ಬಸವೇಶ್ವರ ಲೀಲಾ ವೈಭವಂ , ಲಂಕೇಶ್ವರ ಸೋಮನಾಥ ಚಾರಿತ್ರ ಮುಂತಾದ ಕಾವ್ಯಗಳನ್ನೂ ರಚಿಸಿದ್ದಾರೆ. ಕನ್ನಡ – ಸಂಸ್ಕೃತ ಭಾಷೆಗಳೆರಡರಲ್ಲೂ ಪಾಂಡಿತ್ಯವುಳ್ಳವರು. ಬಾಹುಬಲಿಚರಿತಂ, ಗಾಯತ್ರೀರಾಮಾಯಣ, ಸಿರಿಗನ್ನಡ ವೈಜಂತಿ, ಕನ್ನಡನಾಡ ಚರಿತ್ರೆ, ತತ್ವಭಾರತಿ, ಭಾವಗೀತೆಗಳು, ಶ್ರೀಶಿವಕುಮಾರಸ್ವಾಮಿಗುರುಚರಿತಂ, ಗುರುದತ್ತಚರಿತಂ ಇವರ ಪ್ರಮುಖ ಕೃತಿಗಳು ನೃತ್ಯರೂಪಕ ಹಾಗೂ ನಾಮಾವಳಿಗಳನ್ನು ರಚಿಸಿದ್ದಾರೆ.
One Response