Bisokallina Pada kannada poem is a folk song. Bisokallina Pada kannada notes is available here.
Many folk poems have originated from the villages of our country. The villagers, while doing their daily chores, would create such songs to express their emotions and find joy in their work. One such folk song is about the beesokallu (the traditional grinding stone).
A village woman, while doing her household chores and winnowing grains, sings a song. She sings, “Oh mother Kallamma, as you grind the ragi gently, I will light a sweet jaggery lamp for you.” Holding the handle of the two stones — the beautiful lower stone and the fine upper stone — she says, “As I do this work, I remember my parents who gave me life.”
When her work is done, she proudly says, “Now the ragi grinding is over; I have winnowed the fragrant rice well; I have completed all my tasks.” She then speaks to the grinding stone affectionately, saying, “Dear ragi stone, I will lift and put you aside with my strength. Please don’t be upset that I spun you fast. Let the ragi grow well in the bamboo basket, and I will come back at night to grind again.”
In the end, she offers her blessings, saying, “May the mother who gave me this stone be blessed with all prosperity; may her son arrive seated in a palanquin, and may a daughter-in-law adorned with jasmine flowers enter that home.”
ಬೀಸೋಕಲ್ಲಿನ ಪದ
ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)
೧. ರಾಗಿ ಹೇಗೆ ಉದುರುತ್ತದೆ?
ಉ: ರಾಗಿಯು ಜಲ್ಲ ಜಲ್ಲನೆ ಉದುರುತ್ತದೆ .
೨. ಬೀಸುವ ಕಲ್ಲಿನ ಹಿಡಿಗೂಟ ಹಿಡಿದು ಯಾರನ್ನು ನೆನೆಯುತ್ತಾರೆ?
ಉ: ಬೀಸುವ ಕಲ್ಲಿನ ಹಿಡಿಗೂಟ ಹಿಡಿದ ತಂದೆ – ತಾಯಿಗಳ ನೆನೆಯುತ್ತಾರೆ .
೩. ಸರಸತಿಗೆ ಸಿಟ್ಟು ಬಂತು ಏಕೆ?
ಉ: ಸರಸತಿಗೆ ಕಲ್ಲು ಬಿಟ್ಟಿದ್ದಕ್ಕೆ ಸಿಟ್ಟು ಬಂತು.
ಆ) ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in two – three sentences)
೧. ಕಲ್ಲು ಕೊಟ್ಟಮ್ಮನನ್ನು ಏನೆಂದು ಹರಸುವಳು?
ಉ: ಕಲ್ಲು ಕೊಟ್ಟಮ್ಮಗೆ ಎಲ್ಲಾ ಭಾಗ್ಯವು ಬರಲಿ. ಪಲ್ಲಕ್ಕಿಯ ಮೇಲೆ ಮಗ ಬರಲಿ. ಆ ಮನೆಗೆ ಮಲ್ಲಿಗೆ ಮುಡಿಯುವ ಸೊಸೆ ಬರಲಿ ಎಂದು ಹರಸುವಳು .
೨. ಸಿಟ್ಟುಗೊಂಡ ಸರಸತಿಯನ್ನು ಸಮಾಧಾನ ಮಾಡಿದ ಬಗೆ ಹೇಗೆ?
ಉ: ಸಿಟ್ಟುಗೊಂಡ ಸರಸತಿಯನ್ನು ಕುಕ್ಕೆಯಲ್ಲಿ ರಾಗಿ ಬೆಳೆಯಲಿ. ಮತ್ತೆ ರಾತ್ರಿ ತೆಗೆದುಕೊಂಡು ಬರುತ್ತೇನೆಂದು ಸಮಾಧಾನ ಮಾಡಿದಳು.
ಇ) ಪದ್ಯದ ಮೊದಲರ್ಧ ಸಾಲಿಗೆ ಎರಡನೇ ಅರ್ಧ ಸಾಲನ್ನು ಹೊಂದಿಸಿ ಬರೆಯಿರಿ. (Match the following)
ಅ ಪಟ್ಟಿ ಬ ಪಟ್ಟಿ
೧. ಬೆಲ್ಲಾದಾರುತಿಯಾ ಬೆಳಗೇನು
೨. ಮತ್ತೆ ರಾತ್ರೀಗೆ ಬರುತೀನಿ
೩. ರಾಗಿಯು ಮುಗಿದಾವು ರಾಜಾನ್ನ ಹೆಚ್ಚಾವು
೪. ಅಂದುಳ್ಳ ಅಡಿಗಲ್ಲು ಚಂದುಳ್ಳ ಮೇಗಲ್ಲು
ಈ) ಈ ಮಾದರಿಯಂತೆ ಕೊಟ್ಟಿರುವ ಪದಗಳಿಗೆ ಭಿನ್ನ ಅರ್ಥದಲ್ಲಿ ಸ್ವಂತ ವಾಕ್ಯ ಬರೆಯಿರಿ. (Make your own sentence like the example)
ಮಾದರಿ :
ಅತ್ತೆ – ನನ್ನ ಕಾಲಿಗೆ ಮುಳ್ಳು ಚುಚ್ಚಿದಾಗ ಅತ್ತೆನು.
ಅತ್ತೆ – ನಮ್ಮ ಅತ್ತೆ ನನಗೆ ಹೊಸ ಬಟ್ಟೆ ತಂದರು.
ತಂದೆ : ನನ್ನ ತಂದೆ ತುಂಬಾ ಒಳ್ಳೆಯವರು.
ತಂದೆ : ನಾನು ಹೊಸ ಪುಸ್ತಕಗಳನ್ನು ತಂದೆನು.
ಕಳೆ : ನಾನು ಶಾಲೆಯಲ್ಲಿ ಪೆನ್ನನ್ನು ಕಳೆದೆನು.
ಕಳೆ : ನಾನು ಹೊಲದಲ್ಲಿ ಬೆಳೆದ ಕಳೆಯನ್ನು ತೆಗೆದೆನು.
ಆಡು : ನನ್ನ ಮನೆಯಲ್ಲಿ ಆಡುಗಳನ್ನು ಸಾಕಿದ್ದೇನೆ.
ಆಡು : ನಾನು ಶಾಲೆಯಲ್ಲಿ ಆಟವನ್ನು ಆಡುತ್ತೇನೆ.
ಭಾಷಾ ಚಟುವಟಿಕೆ
ಅ) ಆಡುಮಾತು ಮತ್ತು ಬರೆಹದ ಮಾತಿನ ನಡುವಿನ ವ್ಯತ್ಯಾಸ ಗಮನಿಸಿ. (Spoken and written language difference)
ಆಡು ಮಾತು ಬರೆಹದ ರೂಪ
ಬರ್ತಾನೆ ಬರುತ್ತಾನೆ
ಯಿಲ್ಲ ಇಲ್ಲ
ಅರಕೆ ಹರಕೆ
ಅತ್ತಿರ ಹತ್ತಿರ
ಕರೆವೋಲೆ ಕರೆಯೋಲೆ
ಆ) ಅಕ್ಷರ ಬಳಸಿ ಪದ ಬರೆಯಿರಿ. (Make words using the table)

ಕಸಿ, ಕಸ, ಕಹಿ, ಕದ, ಕರೆ

ಮಣ್ಣು, ಮಗ್ಗಿ, ಮಠ, ಮಟ್ಟ, ಮಡ್ಡಿ
ಇ) ಕೆಳಗಿನ ಆಡು ನುಡಿಗಳನ್ನು ಮಾದರಿ ಬರೆಹದ ಭಾಷೆಯಲ್ಲಿ ಬರೆಯಿರಿ. (Write the following idioms in the language of the model writer)
ಮಾದರಿ : ಹೆಚ್ಯಾವು – ಹೆಚ್ಚಾದವು .
ವದಗ್ಯಾವು – ಒದಗುವವು
ಮುಗಿದಾವು – ಮುಗಿಯುವವು
ಸಿಟ್ಯಾಕೆ – ಸಿಟ್ಟು ಏಕೆ
ಬೆಳೆಯಾಲಿ – ಬೆಳೆಯಲಿ
ಚಟುವಟಿಕೆ
ಅ) ಒಗಟು ಬಿಡಿಸು. Solve the puzzle
೧. ಅವ್ವನ ಹಾಸಿಗೆ ಸುತ್ತಾಕಾಗೋಲ್ಲ , ಅಪ್ಪನ ದುಡ್ಡು ಎಣಿಸಾಕಾಗೊಲ್ಲ.
ಉ: ಆಕಾಶ – ನಕ್ಷತ್ರಗಳು
೨. ಕರಿ ಸೀರಿ ಉಟ್ಟಾಳ, ಕಾಲುಂಗರ ಇಟ್ಟಾಳ, ಮೇಲೆ ಹೋಗತಾಳ, ಕೆಳಗೆ ಬರತಾಳ.
ಉ: ಒನಕೆ
೩. ಅಪ್ಪಾ ಎಂದರೆ ಮುಚ್ಚುತಾವ, ಅಮ್ಮ ಎಂದರೆ ತೆರಿತಾವ.
ಉ: ತುಟಿಗಳು
ಆ) ಕೊಟ್ಟಿರುವ ಕತೆ ಓದಿ. ಇದಕ್ಕೆ ಗಾದೆಗಳನ್ನು ಬರೆಯಿರಿ. (Read the given story. Write proverbs for it)
ಒಂದು ಊರಿನಲ್ಲಿ ಒಬ್ಬ ರೈತನಿದ್ದನು. ಅವನಿಗೆ ಇಬ್ಬರು ಸೋಮಾರಿ ಮಕ್ಕಳಿದ್ದರು. ಅನಾರೋಗ್ಯದಿಂದ ರೈತ ಹಾಸಿಗೆ ಹಿಡಿದನು. ಮಕ್ಕಳನ್ನು ಹತ್ತಿರ ಕರೆದು ” ಮಕ್ಕಳೇ ನಾನು ಸಂಪಾದಿಸಿದ ಸಂಪತ್ತನ್ನು ನಿಮಗಾಗಿ ಹೊಲದಲ್ಲಿ ಹೂತಿಟ್ಟಿದ್ದೇನೆ” ಎಂದು ಹೇಳಿದನು. ಮಕ್ಕಳಿಬ್ಬರು ಹಾರೆ ಗುದ್ದಲಿ ಹಿಡಿದು ಹೊಲಕ್ಕೆ ಹೋದರು. ಅಗೆದು ಅಗೆದು ನಿಧಿಗಾಗಿ ಹುಡುಕಿದರು. ನಿಧಿ ಸಿಗಲಿಲ್ಲ. ಅದೇ ದಿನ ಮಳೆ ಸುರಿಯಿತು. ಇನ್ನೇನು ಮಾಡುವುದು ಎಂದು ಧಾನ್ಯ ಬಿತ್ತಿದರು. ಉತ್ತಮ ಬೆಳೆ ಬಂತು. ಕೈ ತುಂಬ ಹಣ ಸಂಪಾದಿಸಿದರು. ರೈತ ಮಕ್ಕಳನ್ನು ಕರೆದು ”ಇದೇ ನಾನು ಹೊಲದಲ್ಲಿ ಹೂತಿಟ್ಟ ಸಂಪತ್ತು” ಎಂದು ಹೇಳಿದನು.
೧. ಕೈ ಕೆಸರಾದರೆ ಬಾಯಿಗೆ ಮೊಸರು
೨. ಆಳಾಗಿ ದುಡಿ, ಅರಸನಾಗಿ ಉಣ್ಣು
೩. ಬಿತ್ತಿದಂತೆ ಬೆಳೆ
ಇ) ಕೊಟ್ಟಿರುವ ಗಾದೆ ಮಾತನ್ನು ಬರೆಹದ ಭಾಷೆಗೆ ಬದಲಾಯಿಸು. (Convert the given proverb into written language)
೧. ಓಡಾಡ್ಕೊಂಡು ದನ ಕಾದ್ರೆ ಬೇಗ್ನೆ ಹೊತ್ತು ಮುಳುಗುತ್ತಾ?
ಉ: ಓಡಾಡಿಕೊಂಡು ದನ ಕಾಯ್ದರೆ ಬೇಗನೆ ಹೊತ್ತು ಮುಳುಗುತ್ತದೆಯಾ?
೨. ಕಡ್ಲೆ ಇದ್ದಾಗ ಹಲ್ಲಿಲ್ಲ ,ಹಲ್ಲಿದ್ದಾಗ ಕಡ್ಲಿಲ್ಲ
ಉ: ಕಡಲೆ ಇದ್ದಾಗ ಹಲ್ಲಿಲ್ಲ, ಹಲ್ಲಿದ್ದಾಗ ಕಡಲೆ ಇಲ್ಲ .
೩. ಕುಟ್ಟಾಕ ಬರದೊಳು ಕೇರಿ ಕೇರಿ ನೋಡಿದಳಂತ
ಉ: ಕುಟ್ಟಲಿಕ್ಕೆ ಬರದೇ ಇರುವವಳು ಕೇರಿ ಕೇರಿ ನೋಡಿದಳಂತೆ.
ಪದ್ಯದ ಸಾರಾಂಶ: Summary of the poem
ನಮ್ಮ ದೇಶದ ಹಳ್ಳಿಗಳಿಂದ ಅನೇಕ ಜನಪದ ಕಾವ್ಯಗಳು ಹುಟ್ಟಿಕೊಂಡಿವೆ. ಹಳ್ಳಿಯ ಜನರು ತಮ್ಮ ದೈನಂದಿನ ಕೆಲಸಗಳನ್ನು ಮಾಡುತ್ತಾ, ಮನರಂಜನೆ ಮತ್ತು ಭಾವನೆಗಳನ್ನು ವ್ಯಕ್ತಪಡಿಸಲು ಇಂತಹ ಪದ್ಯಗಳನ್ನು ರಚಿಸುತ್ತಿದ್ದರು. ಬೀಸೋಕಲ್ಲಿನ ಕುರಿತಾದ ಈ ಜನಪದ ಪದ್ಯವೂ ಅದರಲ್ಲಿ ಒಂದು.
ಹಳ್ಳಿಯ ಒಬ್ಬ ಹೆಣ್ಣುಮಗಳು ಮನೆಯ ಕೆಲಸಗಳಲ್ಲಿ ತೊಡಗಿಕೊಂಡು, ಕಾಳುಗಳನ್ನು ಬೀಸುತ್ತಾ ಹಾಡು ಹಾಡುತ್ತಾಳೆ. ಆಕೆ “ಕಲ್ಲಮ್ಮ ತಾಯಿ, ನೀನು ರಾಗಿಯನ್ನು ಮೆಲ್ಲುತ್ತಾ ಇರೋಣ, ನಾನು ನಿನಗೆ ಬೆಲ್ಲದ ಆರತಿಯನ್ನು ಬೆಳಗುತ್ತೇನೆ” ಎಂದು ಹಾಡುತ್ತಾಳೆ. ಅಂದವಾದ ಅಡಿಗಲ್ಲು, ಸೊಗಸಾದ ಮೇಗಲ್ಲು — ಈ ಎರಡೂ ಕಲ್ಲಿನ ಮೇಲಿರುವ ಹಿಡಿಗೂಟ ಹಿಡಿದುಕೊಂಡು, “ನನಗೆ ಜನ್ಮ ನೀಡಿದ ತಂದೆ ತಾಯಿಗಳನ್ನು ನೆನೆಸಿಕೊಳ್ಳುತ್ತೇನೆ” ಎನ್ನುತ್ತಾಳೆ.
ಅವಳ ಕೆಲಸ ಮುಗಿದಾಗ, “ಈಗ ರಾಗಿ ಬೀಸುವುದು ಮುಗಿದಿದೆ, ಸುಗಂಧಭರಿತ ಅಕ್ಕಿಯನ್ನು ಹೆಚ್ಚಾಗಿ ಬೀಸಿದ್ದೇನೆ, ನಾನು ಮಾಡಬೇಕಿದ್ದ ಕೆಲಸ ಮುಗಿಸಿದೆ” ಎಂದು ಹೆಮ್ಮೆಯಿಂದ ಹೇಳುತ್ತಾಳೆ. “ರಾಗೀಕಲ್ಲೇ, ನನ್ನ ಶಕ್ತಿಯಿಂದ ನಿನ್ನನ್ನು ತೂಗಿಬಿಡುತ್ತೇನೆ, ನೀನು ತಿರುಗಿಕೊಂಡು ಕೋಪಿಸಿಕೊಳ್ಳಬೇಡ. ಬಿದಿರಿನ ಬುಟ್ಟಿಯಲ್ಲಿ ರಾಗಿ ಬೆಳೆಯಲಿ, ಅದನ್ನು ತೆಗೆದುಕೊಂಡು ನಾನು ರಾತ್ರಿ ಮತ್ತೆ ಬರುತ್ತೇನೆ” ಎಂದು ಸಮಾಧಾನಪಡಿಸುತ್ತಾಳೆ.
ಕೊನೆಗೆ ಆಕೆ ಕಲ್ಲನ್ನು ನೀಡಿದ ಅಮ್ಮನಿಗೆ ಹಾರೈಸುತ್ತಾಳೆ – “ಅಮ್ಮನಿಗೆ ಎಲ್ಲ ಭಾಗ್ಯಗಳು ದೊರಕಲಿ, ಆಕೆಯ ಮಗ ಪಲ್ಲಕ್ಕಿಯಲ್ಲಿ ಕುಳಿತು ಬರಲಿ, ಆ ಮನೆಯ ಬಾಗಿಲಿಗೆ ಮಲ್ಲಿಗೆ ಮುಡಿಯುವ ಸೋಸೆ ಬರಲಿ” ಎಂದು ಆಶೀರ್ವದಿಸುತ್ತಾಳೆ.
Click here to download beesokalina pada kannada notes