Buddhana Salahe grade VIII Kannada lesson is about how lord Budda stopped the war between two kingdoms. Buddhana Salahe class 8th means suggestion of Buddha. The kingdoms of Vatsa and Magadha were located on either side of the sacred River Ganga. Thanks to the river’s water, the land in both kingdoms was fertile and green. Crops flourished, and people lived happily. The people of both kingdoms worshipped the Ganga as a mother goddess.
However, over time, the kings of both kingdoms became greedy. They wanted full control over the Ganga River. Their selfish desire for power led to preparations for war.
At that moment, Lord Buddha arrived.
He said wisely,
“The blood of human beings is more valuable than river water. Water is necessary for life—but you are ready to die for it?
If hatred is used to defeat hatred, only jealousy remains in the end.
War destroys peace.
Nature is a blessing to all living beings, not a curse.
When this blessing is shared equally, happiness and peace will follow.”
Moved by Buddha’s powerful words, the kings of Vatsa and Magadha abandoned their plans for war and chose to live in peace and harmony.
Moral of the Story:
- Selfishness and greed can lead to destruction.
- Peace is more powerful than war.
- Nature is meant to be shared, not fought over.
- True wisdom lies in avoiding conflict and living in harmony.
ಬುದ್ಧನ ಸಲಹೆ
II. ಪ್ರಶ್ನೆಗಳು:

ಅ) ಬಿಟ್ಟ ಸ್ಥಳಗಳನ್ನು ಸೂಕ್ತ ಪದದಿಂದ ಭರ್ತಿ ಮಾಡಿರಿ. (Fill in the blanks)
೧. ಸಿದ್ದಾರ್ಥನ ತಂದೆಯ ಹೆಸರು ಶುದ್ಧೋಧನ.
೨. ವತ್ಸ ಮತ್ತು ಮಗಧ ರಾಜ್ಯಗಳ ನಡುವೆ ಹರಿಯುವ ನದಿ ಗಂಗಾ.
೩. ವತ್ಸ ಮತ್ತು ಮಗಧ ರಾಜ್ಯಗಳ ನಡುವೆ ಶಾಂತಿ ನೆಲೆಸುವಂತೆ ಮಾಡಿದವರು ಬುದ್ಧ.
೪. ಬುದ್ಧನ ಸಲಹೆ ಪಾಠದ ಆಕಾರ ಕೃತಿ ಶತಮಾನದ ಮಕ್ಕಳ ಸಾಹಿತ್ಯ.
ಆ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)
೧. ಗಂಗಾ ನದಿ ಯಾವ ಸಮುದ್ರವನ್ನು ಸೇರುತ್ತದೆ?
ಉ: ಗಂಗಾ ನದಿ ಬಂಗಾಳ ಸಮುದ್ರವನ್ನು ಸೇರುತ್ತದೆ.
೨. ಬುದ್ಧನ ಪ್ರಕಾರ ನದಿ ನೀರಿಗಿಂತ ಹೆಚ್ಚು ಬೆಲೆಯುಳ್ಳದ್ದು ಯಾವುದು?
ಉ: ಬುದ್ಧನ ಪ್ರಕಾರ ನದಿ ನೀರಿಗಿಂತ ಹೆಚ್ಚು ಬೆಲೆಯುಳ್ಳದ್ದು ಶಾಂತಿ.
೩. ಬುದ್ಧ ದೇವನು ಹೇಳುವಂತೆ ಜೀವನದಲ್ಲಿ ಸುಖ, ಶಾಂತಿ ಸಿಗಬೇಕಾದರೆ ಏನು ಮಾಡಬೇಕು?
ಉ: ಬುದ್ಧ ದೇವನು ಹೇಳುವಂತೆ ಜೀವನದಲ್ಲಿ ಸುಖ, ಶಾಂತಿ ಸಿಗಬೇಕಾದರೆ ಪ್ರಕೃತಿಯನ್ನು ಸಮಾನವಾಗಿ ಹಂಚಿಕೊಳ್ಳಬೇಕು.
೪. ವತ್ಸ ಮತ್ತು ಮಗಧ ರಾಜ್ಯದವರು ಯುದ್ಧವನ್ನು ಏಕೆ ನಿಲ್ಲಿಸಿದರು?
ಉ: ಜೀವನದಲ್ಲಿ ಸುಖ, ಶಾಂತಿ ಸಿಗಬೇಕಾದರೆ ಪ್ರಕೃತಿಯನ್ನು ಸಮಾನವಾಗಿ ಹಂಚಿಕೊಳ್ಳಬೇಕು ಎಂಬ ಬುದ್ಧದೇವನ ಬೋಧನೆಯನ್ನು ಅರಿತರು. ಅದಕ್ಕೆ ವತ್ಸ ಮತ್ತು ಮಗಧ ರಾಜ್ಯದವರು ಯುದ್ಧವನ್ನು ನಿಲ್ಲಿಸಿದರು.
ಇ) ಕೆಳಗಿನ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in three to four sentences)
೧. ವತ್ಸ ಮತ್ತು ಮಗಧ ರಾಜ್ಯದ ಜನರು ಗಂಗಾ ನದಿಯನ್ನು ತಾಯಿಯಂತೆ ಏಕೆ ಪೂಜಿಸುತ್ತಿದ್ದರು?
ಉ: ಗಂಗಾ ನದಿಯ ನೀರಿನಿಂದ ಎರಡೂ ರಾಜ್ಯಗಳ ನೆಲ ಸಸ್ಯ ಶಾಮಲವಾಗಿತ್ತು. ಎರಡೂ ರಾಜ್ಯಗಳಲ್ಲಿ ಹಸಿರು ತುಂಬಿ ಬೆಳೆ ಬೆಳೆದು ಜನರು ಸುಖವಾಗಿದ್ದರು. ಹಾಗಾಗಿ ವತ್ಸ ಮತ್ತು ಮಗಧ ರಾಜ್ಯದ ಜನರು ಗಂಗಾ ನದಿಯನ್ನು ತಾಯಿಯಂತೆ ಪೂಜಿಸುತ್ತಿದ್ದರು.
೨. ವತ್ಸ ಮತ್ತು ಮಗಧ ರಾಜ್ಯಗಳ ನಡುವೆ ದ್ವೇಷ ಏಕೆ ಹೆಚ್ಚಾಯಿತು?
ಉ: ಎರಡೂ ರಾಜ್ಯಗಳ ರಾಜರಿಗೆ ಗಂಗಾ ನದಿಯ ಮೇಲೆ ತಮ್ಮ ಸಂಪೂರ್ಣ ಅಧಿಕಾರ ಸ್ಥಾಪಿಸಬೇಕೆಂಬ ಸ್ವಾರ್ಥ, ದುರಾಸೆ ಉಂಟಾಯಿತು. ಹಾಗಾಗಿ ವತ್ಸ ಮತ್ತು ಮಗಧ ರಾಜ್ಯಗಳ ನಡುವೆ ದ್ವೇಷ ಹೆಚ್ಚಾಯಿತು.
೩. ಬುದ್ಧನು ಹೇಳುವಂತೆ ದ್ವೇಷ ದುಃಖವನ್ನು ಹೇಗೆ ಹೆಚ್ಚಿಸುತ್ತದೆ?
ಉ: ದ್ವೇಷದಿಂದ ದ್ವೇಷವನ್ನು ಜಯಿಸಲು ಹೋದರೆ ಕೊನೆಗೆ ಉಳಿಯುವದು ಈರ್ಷ್ಯೆ. ದ್ವೇಷದಿಂದ ದುಃಖವೇ ಹೊರತು ಸುಖವಿಲ್ಲ. ದ್ವೇಷ ದುಃಖವನ್ನು ಹೆಚ್ಚಿಸುತ್ತದೆ ಎಂದು ಬುದ್ಧನು ಹೇಳಿದನು.
೪. ಬುದ್ಧ ದೇವನು ವತ್ಸ ಮತ್ತು ಮಗಧ ರಾಜ್ಯಗಳ ನಡುವಿನ ಯುದ್ಧವನ್ನು ಏಕೆ ತಪ್ಪಿಸಿದನು?
ಉ: ದ್ವೇಷದಿಂದ ದ್ವೇಷವನ್ನು ಜಯಿಸಲು ಹೋದರೆ ಕೊನೆಗೆ ಉಳಿಯುವದು ಈರ್ಷ್ಯೆ. ಯುದ್ಧದಿಂದ ಶಾಂತಿ ನಾಶವಾಗುತ್ತದೆ. ಪ್ರಕೃತಿ ಜೀವಿಗಳಿಗೆ ವರವೇ ಹೊರತು ಶಾಪವಲ್ಲ. ಈ ವರವನ್ನು ಎಲ್ಲರೂ ಸಮಾನವಾಗಿ ಹಂಚಿಕೊಂಡಾಗ ಸುಖ ಶಾಂತಿ ಸಿಗುತ್ತದೆ ಎಂದು ಬುದ್ಧ ದೇವನು ವತ್ಸ ಮತ್ತು ಮಗಧ ರಾಜ್ಯಗಳ ನಡುವಿನ ಯುದ್ಧವನ್ನು ತಪ್ಪಿಸಿದನು.
ಈ) ಕೆಳಗಿನ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in eight – ten sentences)
೧. ವತ್ಸ ಮತ್ತು ಮಗಧ ರಾಜ್ಯಗಳು ಯುದ್ಧ ಮರೆತು ಶಾಂತಿಯಿಂದ ನೆಲೆಸಿದು ಹೇಗೆ?
ಉ: ವತ್ಸ ಮತ್ತು ಮಗದ ರಾಜ್ಯಗಳು ಗಂಗಾ ನದಿಯ ಎರಡೂ ಬದಿಗಳಲ್ಲಿ ಇದ್ದವು. ಗಂಗಾ ನದಿಯ ನೀರಿನಿಂದ ಎರಡೂ ರಾಜ್ಯಗಳ ನೆಲ ಸಸ್ಯ ಶಾಮಲವಾಗಿತ್ತು, ಹಸಿರು ತುಂಬಿ ಬೆಳೆ ಬೆಳೆದು ಜನರು ಸುಖವಾಗಿದ್ದರು. ಎರಡೂ ರಾಜ್ಯದವರು ಗಂಗಾ ನದಿಯನ್ನು ತಾಯಿಯಂತೆ ಪೂಜಿಸುತ್ತಿದ್ದರು. ಆದರೆ ಎರಡೂ ರಾಜ್ಯಗಳ ರಾಜರಿಗೆ ಗಂಗಾ ನದಿಯ ಮೇಲೆ ತಮ್ಮ ಸಂಪೂರ್ಣ ಅಧಿಕಾರ ಸ್ಥಾಪಿಸಬೇಕೆಂಬ ಸ್ವಾರ್ಥ, ದುರಾಸೆ ಉಂಟಾಗಿ ಯುದ್ಧಕ್ಕೆ ಸಿದ್ಧರಾದರು.
ಅಲ್ಲಿಗೆ ಬಂದ ಬುದ್ಧದೇವನು, ನದಿ ನೀರಿಗಿಂತ ಎಲ್ಲರ ರಕ್ತ ಬೆಲೆಯುಳ್ಳದ್ದು. ಜೀವನಕ್ಕೆ ನೀರು ಅವಶ್ಯಕ. ಆದರೆ ನೀವು ಸಾಯಲು ಸಿದ್ಧರಾಗಿದ್ದೀರಿ. ದ್ವೇಷದಿಂದ ದ್ವೇಷವನ್ನು ಜಯಿಸಲು ಹೋದರೆ ಕೊನೆಗೆ ಉಳಿಯುವದು ಈರ್ಷ್ಯೆ. ಯುದ್ಧದಿಂದ ಶಾಂತಿ ನಾಶವಾಗುತ್ತದೆ. ಪ್ರಕೃತಿ ಜೀವಿಗಳಿಗೆ ವರವೇ ಹೊರತು ಶಾಪವಲ್ಲ. ಈ ವರವನ್ನು ಎಲ್ಲರೂ ಸಮಾನವಾಗಿ ಹಂಚಿಕೊಂಡಾಗ ಸುಖ,ಶಾಂತಿ ಸಿಗುತ್ತದೆ ಎಂದು ಬುದ್ಧ ದೇವನು ಹೇಳಿದಾಗ, ವತ್ಸ ಮತ್ತು ಮಗಧ ರಾಜ್ಯಗಳು ಯುದ್ಧ ಮರೆತು ಶಾಂತಿಯಿಂದ ನೆಲೆಸಿದವು.
೨. ಬದುಕಿನಲ್ಲಿ ಸುಖ – ಶಾಂತಿ ನೆಮ್ಮದಿಗಳನ್ನು ಕಂಡುಕೊಳ್ಳುವುದು ಹೇಗೆ? ಚರ್ಚಿಸಿ.
ಉ: ಕಪಿಲವಸ್ತು ನಗರದ ಹತ್ತಿರದ ಗಂಗಾನದಿಯ ಎರಡೂ ಬದಿಗಳಲ್ಲಿ ವತ್ಸ ಮತ್ತು ಮಗಧ ರಾಜ್ಯಗಳಿದ್ದವು. ಗಂಗಾ ನದಿಯ ನೀರಿನಿಂದ ಎರಡೂ ರಾಜ್ಯಗಳ ನೆಲ ಸಸ್ಯ ಶಾಮಲವಾಗಿತ್ತು, ಹಸಿರು ತುಂಬಿ ಬೆಳೆ ಬೆಳೆದು ಜನರು ಸುಖವಾಗಿದ್ದರು. ಎರಡೂ ರಾಜ್ಯದವರು ಗಂಗಾ ನದಿಯನ್ನು ತಾಯಿಯಂತೆ ಪೂಜಿಸುತ್ತಿದ್ದರು. ಆದರೆ ಎರಡೂ ರಾಜ್ಯಗಳ ರಾಜರಿಗೆ ಗಂಗಾ ನದಿಯ ಮೇಲೆ ತಮ್ಮ ಸಂಪೂರ್ಣ ಅಧಿಕಾರ ಸ್ಥಾಪಿಸಬೇಕೆಂಬ ಸ್ವಾರ್ಥ, ದುರಾಸೆ ಉಂಟಾಗಿ ಯುದ್ಧಕ್ಕೆ ಸಿದ್ಧರಾದರು.
ಅಲ್ಲಿಗೆ ಬಂದ ಬುದ್ಧದೇವನು, ನದಿ ನೀರಿಗಿಂತ ಎಲ್ಲರ ರಕ್ತ ಬೆಲೆಯುಳ್ಳದ್ದು. ಜೀವನಕ್ಕೆ ನೀರು ಅವಶ್ಯಕ. ಆದರೆ ನೀವು ಸಾಯಲು ಸಿದ್ಧರಾಗಿದ್ದೀರಿ. ದ್ವೇಷದಿಂದ ದ್ವೇಷವನ್ನು ಜಯಿಸಲು ಹೋದರೆ ಕೊನೆಗೆ ಉಳಿಯುವದು ಈರ್ಷ್ಯೆ. ಯುದ್ಧದಿಂದ ಶಾಂತಿ ನಾಶವಾಗುತ್ತದೆ. ಪ್ರಕೃತಿ ಜೀವಿಗಳಿಗೆ ವರವೇ ಹೊರತು ಶಾಪವಲ್ಲ. ಈ ವರವನ್ನು ಎಲ್ಲರೂ ಸಮಾನವಾಗಿ ಹಂಚಿಕೊಂಡಾಗ ಸುಖ,ಶಾಂತಿ ಸಿಗುತ್ತದೆ ಎಂದು ಬುದ್ಧ ದೇವನು ಹೇಳಿದಾಗ, ಯುದ್ಧ ನಿಲ್ಲಿಸಿ ಎಲ್ಲರೂ ಶಾಂತಿಯಿಂದ ನೆಲೆಸಿದರು. ಈ ಕಥೆಯಿಂದ ಹಂಚಿಕೊಂಡು ಬದುಕಿದರೆ ಸುಖ, ಶಾಂತಿ, ನೆಮ್ಮದಿಯನ್ನು ಕಂಡುಕೊಳ್ಳಬಹುದು ಎಂಬ ಪಾಠವನ್ನು ಕಲಿಯಬಹುದು.
ಉ) ಸಂದರ್ಭದೊಡನೆ ವಿವರಿಸಿರಿ. (Write the correct context for the following)
೧. “ಮನುಷ್ಯನ ರಕ್ತ ನದಿ ನೀರಿಗಿಂತ ಬೆಲೆಯುಳ್ಳದ್ದು”
ಉ: ಈ ಮಾತನ್ನು ಡಾ. ನಿರುಪಮಾರವರು ಬರೆದಿರುವ “ಬುದ್ಧನ ಸಲಹೆ” ಪಾಠದಿಂದ ಆರಿಸಿಕೊಳ್ಳಲಾಗಿದೆ.
ಈ ಮಾತನ್ನು ವತ್ಸ ಮತ್ತು ಮಗದ ರಾಜ್ಯದವರಿಬ್ಬರೂ ಬುದ್ಧನಿಗೆ ಹೇಳಿದರು. ವತ್ಸ ಮತ್ತು ಮಗಧ ರಾಜ್ಯಗಳು ಗಂಗಾ ನದಿಯ ಮೇಲೆ ತಮ್ಮ ಸಂಪೂರ್ಣ ಅಧಿಕಾರ ಸ್ಥಾಪಿಸಬೇಕೆಂದು ಯುದ್ಧಕ್ಕೆ ಸಿದ್ಧರಾಗುತ್ತಾರೆ. ಆಗ ಬುದ್ಧ ನಿಂತು ಅವರನ್ನು ನದಿಯ ನೀರು ಮತ್ತು ಮಾನವ ರಕ್ತ ಇವೆರಡರಲ್ಲಿ ಯಾವುದು ಬೆಲೆಯುಳ್ಳದ್ದು ಎಂದು ಕೇಳಿದ ಸಂದರ್ಭದಲ್ಲಿ ಮೇಲಿನ ಮಾತನ್ನು ಹೇಳುತ್ತಾರೆ.
೨. “ನೀವು ಜೀವಿಸಬೇಕೆಂದಿದ್ದೀರಲ್ಲವೇ ? ಮತ್ತೆ ಸಾಯಲೇಖ ಸಿದ್ದರಾಗಿದ್ದೀರಿ?”
ಉ: ಈ ಮಾತನ್ನು ಡಾ. ನಿರುಪಮಾರವರು ಬರೆದಿರುವ “ಬುದ್ಧನ ಸಲಹೆ” ಪಾಠದಿಂದ ಆರಿಸಿಕೊಳ್ಳಲಾಗಿದೆ.
ಈ ಮಾತನ್ನು ಬುದ್ಧನು ವತ್ಸ ಮತ್ತು ಮಗದ ರಾಜ್ಯದವರಿಬ್ಬರಿಗೂ ಹೇಳಿದರು.
ಗಂಗಾ ನದಿಯ ಮೇಲಿನ ಅಧಿಕಾರವನ್ನು ಸ್ಥಾಪಿಸಲು ಯುದ್ಧಕ್ಕೆ ಸಿದ್ದರಾಗಿದ್ದ ಎರಡು ರಾಜ್ಯದವರನ್ನು ನೀರಿಗಿಂತ ಹೆಚ್ಚು ಬೆಲೆಯುಳ್ಳ ರಕ್ತವನ್ನು ಹರಿಸಲು ಏಕೆ ಸಿದ್ಧರಾಗಿದ್ದೀರಿ ಎಂದು ಬುದ್ಧನು ಪ್ರಶ್ನಿಸಿದನು. ಅದಕ್ಕೆ ಅವರು ನಮ್ಮ ಜೀವಗಳಿಗೆ ಈ ಗಂಗಾ ನದಿಯ ನೀರು ತುಂಬಾ ಅವಶ್ಯಕವಲ್ಲವೇ ಎಂದು ಕೇಳುವ ಸಂದರ್ಭದಲ್ಲಿ ಬುದ್ಧ ಈ ಮಾತನ್ನು ಹೇಳುತ್ತಾನೆ.
೩. “ ಪ್ರಕೃತಿ ಜೀವಿಗಳಿಗೆ ವರವೇ ಹೊರತು ಶಾಪವಲ್ಲ “
ಉ: ಈ ಮಾತನ್ನು ಡಾ. ನಿರುಪಮಾರವರು ಬರೆದಿರುವ “ಬುದ್ಧನ ಸಲಹೆ” ಪಾಠದಿಂದ ಆರಿಸಿಕೊಳ್ಳಲಾಗಿದೆ. ಈ ಮಾತನ್ನು ಬುದ್ಧನು ವತ್ಸ ಮತ್ತು ಮಗದ ರಾಜ್ಯದವರಿಬ್ಬರಿಗೂ ಹೇಳಿದರು. ಗಂಗಾ ನದಿಯ ಮೇಲಿನ ಅಧಿಕಾರವನ್ನು ಸ್ಥಾಪಿಸಲು ಯುದ್ಧಕ್ಕೆ ಸಿದ್ದರಾಗಿದ್ದ ಎರಡು ರಾಜ್ಯದವರಿಗೆ ಯುದ್ಧದಿಂದ ಶಾಂತಿ ನಾಶವಾಗುತ್ತದೆ. ನೀರು, ಆಹಾರ ಎಲ್ಲವೂ ಮುಖ್ಯವಾದಂತೆ ಶಾಂತಿಯು ಮುಖ್ಯವಾಗುತ್ತದೆ ಎಂದು ಭೋದಿಸುವ ಸಂದರ್ಭದಲ್ಲಿ ಬುದ್ದನು ಈ ಮಾತನ್ನು ಹೇಳುತ್ತಾನೆ.
ಭಾಷಾಭ್ಯಾಸ
ಅ) ಸ್ವರಾಕ್ಷಗಳಿಂದ ಆರಂಭಗೊಳ್ಳುವ ಪದಗಳನ್ನು ಬುದ್ಧನ ಸಲಹೆ ಪಾಠದಿಂದ ಆಯ್ದು ಅವುಗಳನ್ನು ಅಕಾರಾದಿಯಾಗಿ ಜೋಡಿಸಿ ಬರೆಯಿರಿ. (Choose words starting with svarakshas from Buddha’s advice lesson and arrange them alphabetically)
ಉದಾ: ಅದನ್ನು ,ಅರಸು, ಉತ್ತರ
ಅದನ್ನು, ಅಧಿಕಾರ, ಅರಸ, ಅರಸು, ಅವಶ್ಯಕ, ಆಹಾರ, ಆಳುತ್ತಿದ್ದರು, ಇರುವ, ಈರ್ಷ್ಯ, ಉತ್ತರ
ಆ) ಬುದ್ಧನ ಸಲಹೆ ಪಾಠದಲ್ಲಿ ಅನುಸ್ವಾರ ವಿಸರ್ಗಗಳಿಂದ ಕೂಡಿರುವ ಪದಗಳನ್ನು ಆಯ್ದು ಬರೆಯಿರಿ. (In the Buddha’s advice lesson, select and write the words that are associated with anuswara visarga)
ಉದಾ: ಗಂಗಾ, ಒಂದು, ದುಃಖ, ಪುನಃ
ಗಂಗಾ, ಸುಭಿಕ್ಷದಿಂದ, ಸಂಪೂರ್ಣ, ಬಂತು, ನೀರಿಗಿಂತ, ದ್ವೇಷದಿಂದ, ಶಾಂತಿ, ಅಂದಿನಿಂದ, ನಂತರ, ಒಂದು, ತಾಯಿಯಂತೆ, ನಿಂತುಕೊಂಡ, ಹಿಂದಕ್ಕೆ, ಮಂತ್ರಿ
ಇ) ಪ್ರಸ್ತುತ ಪಾಠದಲ್ಲಿ ಸ, ಶ, ಷ ಅಕ್ಷರಗಳಿರುವ ಪದಗಳನ್ನು ಪಟ್ಟಿ ಮಾಡಿ ಅವುಗಳ ಸ್ಪಷ್ಟ ಉಚ್ಚಾರಣೆಯನ್ನು ಅಭ್ಯಾಸ ಮಾಡಿರಿ. (In the present lesson, list the words with the letters sa, sha, SHA and practice their clear pronunciation.
ಉದಾ: ಸಸ್ಯಶಾಮಲೆ, ಸಂನ್ಯಾಸ, ದೇಶ, ಸುಖ, ಶಾಂತಿ, ಈರ್ಷ್ಯೆ
ಸಸ್ಯಶಾಮಲೆ, ಸನ್ಯಾಸ, ದ್ವೇಷ, ದೇಶ, ಶಾಂತಿ, ಈರ್ಷ್ಯ, ಶಾಪ, ಸ್ನೇಹ, ಶುದ್ದೋದನ, ಸಿದ್ದಾರ್ಥ, ಸುಭಿಕ್ಷ, ಸ್ವಾರ್ಥ, ಸಂಪೂರ್ಣ
ಈ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದ ಬರೆಯಿರಿ. (Write the opposite words)
ಮೌಲ್ಯ X ಅಪಮೌಲ್ಯ ಸುಖ X ದುಃಖ
ವರ X ಶಾಪ ಸತ್ಯ X ಸುಳ್ಳು
ಪವಿತ್ರ X ಅಪವಿತ್ರ ಸ್ವಾರ್ಥ X ನಿಸ್ವಾರ್ಥ
ಉ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಉಪಯೋಗಿಸಿರಿ. (Make your own sentence)
ಹಿಂಜರಿಕೆ = ಒಳ್ಳೆಯ ಕೆಲಸಗಳನ್ನು ಮಾಡಲು ಹಿಂಜರಿಕೆ ಇರಬಾರದು.
ವಿವೇಕ = ಯಾವಾಗಲೂ ವಿವೇಕದಿಂದ ನಿರ್ಧಾರ ತೆಗೆದುಕೊಳ್ಳಬೇಕು.
ಸ್ವಾರ್ಥ = ಹೊಂದಾಣಿಕೆ ಇರಬೇಕು ಎಂದರೆ ಮನುಷ್ಯರು ಸ್ವಾರ್ಥವನ್ನು ಬಿಡಬೇಕು.
ಸುಖಶಾಂತಿ = ಜಗತ್ತಿನಲ್ಲಿ ಸುಖ ಶಾಂತಿ ನೆಲೆಸಲಿ.
ಸುಭಿಕ್ಷ = ಭಾರತವು ಹಲವಾರು ನದಿಗಳಿಂದ ಸುಭಿಕ್ಷವಾಗಿದೆ.
ಸಸ್ಯಶಾಮಲ = ಕಾವೇರಿ ನದಿಯ ದಡದಲ್ಲಿರುವ ಎಲ್ಲಾ ಊರುಗಳು ನೀರಿನಿಂದ ಸಸ್ಯಶಾಮಲವಾಗಿ ಸುಭಿಕ್ಷವಾಗಿದೆ.