Chitte poem is written by Dr. P Narayan Bhat. Chitte means butterfly. Poet is asking the butterfly who gave the color to it? He continues asking the butterfly, why it flies when anyone come to touch? He asks What is the secret you are sharing with the flower? Why are you angry with me? Come inside my house. Will give you hot dose and sweet honey.
ಚಿಟ್ಟೆ ಎಂದರೆ Butterfly. ಈ ಕವಿತೆಯನ್ನು ಡಾ. ಪಿ ನಾರಾಯಣ ಭಟ್ ಬರೆದಿದ್ದಾರೆ. ಚಿಟ್ಟೆಗೆ ಬಣ್ಣ ಕೊಟ್ಟವರು ಯಾರು ಎಂದು ಕವಿ ಕೇಳುತ್ತಿದ್ದಾರೆ. ಯಾರಾದರೂ ಮುಟ್ಟಲು ಬಂದಾಗ ಅದು ಏಕೆ ಹಾರುತ್ತದೆ? ಎಂದು ಕವಿ ಕೇಳುತ್ತಿದ್ದಾರೆ. ಹೂವಿನೊಂದಿಗೆ ನೀನು ಹಂಚಿಕೊಳ್ಳುತ್ತಿರುವ ರಹಸ್ಯವೇನು ಎಂದು ಅವರು ಕೇಳಿದರು. ನಿನಗೇಕೆ ನನ್ನ ಮೇಲೆ ಕೋಪ? ನನ್ನ ಮನೆಯೊಳಗೆ ಬಾ. ನಿನಗೆ ಬಿಸಿ ದೋಸೆ ಮತ್ತು ಸಿಹಿ ಜೇನುತುಪ್ಪವನ್ನು ನೀಡುತ್ತೇನೆ ಎಂದು ಅವರು ಹೇಳಿದರು.
ಅ. ಅರ್ಥ ಬರೆಯಿರಿ – Write word meaning in Kannada
ತಟ್ಟನೆ – ಕೂಡಲೆ (Quickly) ಪೋರಿ – ತು೦ಟಿ (Nauty girl)
ಸುಮ್ಮನೆ – ಕಾರಣವಿಲ್ಲದೆ (Simply) ತೋರುವೆ – ನೋಡಿಸುವೆ (Show)
ಗುಟ್ಟು – ರಹಸ್ಯ (Secret)
ಆ. ಪ್ರಾಸ ಪದ ಬರೆಯಿರಿ – Write rhyming Words
ಚಿಟ್ಟೆ – ಬಟ್ಟೆ ಹಾರಿ – ಪೋರಿ
ಸಿಟ್ಟು – ಗುಟ್ಟು ನಾನು – ಜೇನು
ಇ. ಪದ್ಯದಲ್ಲಿ ಬಿಟ್ಟಿರುವ ಪದಗಳನ್ನು ಬರೆಯಿರಿ – Fill in the blanks
ಮುಟ್ಟಲು ಬ೦ದರೆ
ತಟ್ಟನೆ ಹಾರಿ
ದೂರಕೆ ಓಡುವೆ
ಏತಕೆ ಪೋರಿ
ಸುಮ್ಮನೆ ನನ್ನಲಿ
ತೋರುವೆ ಸಿಟ್ಟು
ಹೂವಿನ ಹತ್ತಿರ
ಏನದು ಗುಟ್ಟು
ಈ. ಪ್ರಶ್ನೆಗಳಿಗೆ ಉತ್ತರ ಬರೆಯಿರಿ – Write the answer for the following questions.
೧. ಮುಟ್ಟಲು ಬ೦ದರೆ ಚಿಟ್ಟೆ ಏನು ಮಾಡುತ್ತದೆ?
ಉ. ಮುಟ್ಟಲು ಬ೦ದರೆ ಚಿಟ್ಟೆ ತಟ್ಟನೆ ಹಾರುತ್ತದೆ.
೨. ಚಿಟ್ಟೆ ಯಾರಿಗೆ ಗುಟ್ಟನ್ನು ಹೇಳುತ್ತದೆ?
ಉ. ಚಿಟ್ಟೆ ಹೂವಿನ ಹತ್ತಿರ ಗುಟ್ಟನು ಹೇಳುತ್ತದೆ.
೩. ಚಿಟ್ಟೆಗೆ ಏನು ಕೊಡುವೆನೆ೦ದು ಕವಿ ಹೇಳುವರು?
ಉ. ಚಿಟ್ಟೆಗೆ ಬಿಸಿ ಬಿಸಿ ದೋಸೆ ಮತ್ತು ಸಿಹಿ ಜೇನು ಕೊಡುವೆನೆ೦ದು ಕವಿ ಹೇಳಿದನು.
೪. ಚಿಟ್ಟೆ ಪದ್ಯವನ್ನು ಬರೆದ ಕವಿ ಯಾರು?
ಉ.ಚಿಟ್ಟೆ ಪದ್ಯವನ್ನು ಬರೆದ ಕವಿ ಡಾ. ಪಿ ನಾರಾಯಣ ಭಟ್.