Danachintamani Atimabe kannada lesson grade VII is about Attimabbe. Danachintamani Atimabe kannada 6th standarad notes.
Attimabbe was a great and respected woman who lived in Karnataka during the 10th century under the Western Chalukya rule. She was born into a noble and cultured Jain family. Her parents were religious and kind-hearted, and they raised her with strong moral values, devotion to Jainism, and respect for learning and charity. From childhood, Attimabbe was known for her gentle nature, intelligence, and generous attitude towards others.
Attimabbe was married to Nagadeva, a brave and loyal general in the court of the Chalukya king Tailapa II. They lived a happy and respected life. However, after her husband’s death in battle, Attimabbe showed great courage and strength. Instead of choosing a life of sorrow, she dedicated her life to religion, charity, and public welfare. She also raised her son Anniga with good values and ensured he followed a righteous path.
Attimabbe was known for her kindness, humility, and generosity. She donated thousands of copies of the Jain religious book Shantipurana and supported many scholars and poets. She also built several Jain temples and monuments. Because of her noble character and charity, she earned the title “Danachintamani,” meaning “Jewel of Charity,” and remains an inspiring historical figure.
ದಾನ ಚಿಂತಾಮಣಿ ಅತ್ತಿಮಬ್ಬೆ
ಪದಗಳ ಅರ್ಥ (Word Meaning)
ಅನುಪಮ = ಹೋಲಿಕೆ ಮೀರಿದ, ಶ್ರೇಷ್ಠ
ಅವಳಿ = ಜೋಡಿ
ಉಪವಾಸ = ಆಹಾರ ಸ್ವೀಕರಿಸದಿರುವುದು A
ಜಿನ = ಜೈನ ಸನ್ಯಾಸಿ
ದ್ರಷ್ಟಿ = ನೋಟ
ಬಂಧು = ನೆಂಟ
ಮಿತ್ರ = ಗೆಳೆಯ, ಸ್ನೇಹಿತ
ಸಂಪನ್ನ = ಸಜ್ಜನ, ಶ್ರೇಷ್ಠ, ಧನಿಕ
ಅನನ್ಯ = ಬೇರೆ ಅಲ್ಲದ, ಅದ್ವಿತೀಯ
ಈಡೇರು = ನೆರವೇರು
ಕಲಿ = ವೀರ
ಜಿನಬಿಂಬ = ತೀರ್ಥಂಕರರ ಪ್ರತಿಮೆ
ಪ್ರಖ್ಯಾತ = ಪ್ರಸಿದ್ಧ
ಬಿಂಬ = ಪ್ರತಿರೂಪ
ಸನ್ನಡತೆ = ಒಳ್ಳೆಯ ನಡವಳಿಕೆ
ಹಸ್ತ = ಕೈ, ಕರ
ಟಿಪ್ಪಣಿಗಳು:
ದತ್ತಿ: ದಾನವಾಗಿ ಕೊಟ್ಟ ಭೂಮಿ, ಹಣ, ಇತ್ಯಾದಿ. ಒಂದು ನಿರ್ದಿಷ್ಟ ಉದ್ದೇಶದಿಂದ ಸಂಸ್ಥೆಯಲ್ಲಿ ಒಬ್ಬರ ಹೆಸರಿನಲ್ಲಿಟ್ಟ ಶಾಶ್ವತ ನಿಧಿ.
ಹಸ್ತಪ್ರತಿ: ಕೈಬರಹದ ಮೂಲಕ ಬರೆದ ಪ್ರತಿ, ಕೈ ಬರವಣಿಗೆಯ ಮೂಲ ಪ್ರತಿ. ವೈರಾಗ್ಯ: ಆಸೆಗಳನ್ನು ತ್ಯಜಿಸಿದ ಭಾವ
ಕೀರ್ತಿಶೇಷ: ಮರಣ ನಂತರವೂ ವ್ಯಕ್ತಿಯ ಕೀರ್ತಿ ಹಾಗೂ ಹೆಸರು ಅಮರವಾಗಿ ಉಳಿಯುವುದು
ಚಿಂತಾಮಣಿ: ಬಯಸುವುದನ್ನು ಕೊಡಬಲ್ಲ ದೇವಲೋಕದ ದಿವ್ಯರತ್ನ.
ಜಿನಾಲಯ: ಜೈನ ಧರ್ಮದವರ ಪ್ರಾರ್ಥನಾ ಸ್ಥಳ.
ಪ್ರಶ್ನೆಗಳು:
ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)
೧. ಅತ್ತಿಮಬ್ಬೆಯ ತಂದೆ ತಾಯಿಯ ಹೆಸರೇನು?
ಉ: ಅತ್ತಿಮಬ್ಬೆಯ ತಂದೆಯ ಹೆಸರು ಮಲ್ಲಪ್ಪಯ್ಯ ಮತ್ತು ತಾಯಿಯ ಹೆಸರು ಅಬ್ಬಕಬ್ಬೆ.
೨. ಅತ್ತಿಮಬ್ಬೆಯನ್ನು ಜನರು ಏನೆಂದು ಕೊಂಡಾಡುತ್ತಿದ್ದರು?
ಉ: ಅತ್ತಿಮಬ್ಬೆಯನ್ನು ಜನರು ದಾನಶೂರೆ, ದಯಾಶೀಲೆ, ಧರ್ಮಿಷ್ಠೆ ಮತ್ತು ರಣಧೀರೆ ಎಂದು ಕೊಂಡಾಡುತ್ತಿದ್ದರು.
೩. ಅತ್ತಿಮಬ್ಬೆಯ ಮೇಲಿನ ಅಭಿಮಾನವನ್ನು ರನ್ನ ಹೇಗೆ ತೋರಿದ್ದಾನೆ?
ಉ: ಅತ್ತಿಮಬ್ಬೆಯ ಮೇಲಿನ ಅಭಿಮಾನವನ್ನು ರನ್ನ ತನ್ನ ಮಗಳಿಗೆ ‘ ಅತ್ತಿಮಬ್ಬೆ ‘ ಎಂದು ಹೆಸರಿಟ್ಟು ತೋರಿದ್ದಾನೆ.
೪. ಬಾಲಕಿ ಅತ್ತಿಮಬ್ಬೆಯಲ್ಲಿದ್ದ ಗುಣಗಳಾವುವು?
ಉ: ಬಾಲಕಿ ಅತ್ತಿಮಬ್ಬೆಯು ಅತಿಚತುರೆ, ವಿನಯ, ವಿವೇಕ ಸಂಪನ್ನೆಯಾಗಿದ್ದಳು.
೫. ಅತ್ತಿಮಬ್ಬೆ ತನ್ನ ಅಣ್ಣಂದಿರಿಂದ ಯಾವ ವಿದ್ಯೆಗಳನ್ನು ಕಲಿತಳು?
ಉ: ಅತ್ತಿಮಬ್ಬೆ ತನ್ನ ಅಣ್ಣಂದಿರಿಂದ ಕತ್ತಿವರಸೆ, ಕುದುರೆ ಸವಾರಿ, ಬಿಲ್ವಿದ್ಯೆಗಳನ್ನು ಕಲಿತಳು.
೬. ಅತ್ತಿಮಬ್ಬೆ ಪ್ರಶಸ್ತಿಯನ್ನು ಯಾರಿಗೆ ನೀಡಲಾಗುತ್ತಿದೆ?
ಉ: ಅತ್ತಿಮಬ್ಬೆ ಪ್ರಶಸ್ತಿಯನ್ನು ಉತ್ತಮ ಮಹಿಳಾ ಸಾಹಿತಿಗೆ ನೀಡಲಾಗುತ್ತಿದೆ.
ಆ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following questions in two-three sentences)
೧. ಅತ್ತಿಮಬ್ಬೆಯ ವಿವಾಹ ಸಂದರ್ಭದಲ್ಲಿ ಬಂಧು ಮಿತ್ರರಿಗೆ ಏನನ್ನು ಉಡುಗೊರೆಯಾಗಿ ನೀಡಲಾಯಿತು?
ಉ: ಅತ್ತಿಮಬ್ಬೆಯ ವಿವಾಹ ಸಂದರ್ಭದಲ್ಲಿ ಬಂಧು ಮಿತ್ರರಿಗೆ ಪೊನ್ನ ಮಹಾಕವಿಯ ಶಾಂತಿಪುರಾಣದ ಸಾವಿರ ಹತ್ತಪ್ರತಿಗಳನ್ನು ಹಾಗೂ ಬಂಗಾರದ ಜಿನಬಿಂಬಗಳನ್ನು ಉಡುಗೊರೆಯಾಗಿ ನೀಡಲಾಯಿತು.
೨. ತಾಯಿಯಾಗುವ ಸಂದರ್ಭದಲ್ಲಿ ಅತ್ತಿಮಬ್ಬೆಯ ಮಹಾ ಬಯಕೆ ಏನಾಗಿತ್ತು?
ಉ: ತಾಯಿಯಾಗುವ ಸಂದರ್ಭದಲ್ಲಿ ಅತ್ತಿಮಬ್ಬೆಗೆ ೧೦೦೦ ಜಿನಾಲಯಗಳನ್ನು ಕಟ್ಟಿಸುವ, ಒಂದು ಸಾವಿರ ಬಂಗಾರದ ಜಿನಬಿಂಬಗಳನ್ನು ದಾನ ಮಾಡುವ ಮತ್ತು ಒಂದು ಸಾವಿರ ಮುನಿಗಳಿಗೆ ಆಹಾರ ನೀಡಬೇಕು ಎಂಬ ಮಹಾ ಬಯಕೆ ಉಂಟಾಗಿತ್ತು.
೩. ಅತ್ತಿಮಬ್ಬೆ ತನ್ನ ಗಂಡನೊಂದಿಗೆ ರಣರಂಗದಲ್ಲಿ ಹೇಗೆ ಹೋರಾಟ ಮಾಡುತ್ತಿದ್ದಳು?
ಉ: ಅತ್ತಿಮಬ್ಬೆ ತನ್ನ ಗಂಡನೊಂದಿಗೆ ರಣರಂಗದಲ್ಲಿ ಕತ್ತಿ ಹಿಡಿದು ವೀರಾವೇಶದಿಂದ ಹೋರಾಡುತ್ತಿದ್ದಳು. ಸಾರಥಿಯಾಗಿ ರಥ ನಡೆಸುತ್ತಿದ್ದಳು.
೪. ಅತ್ತಿಮಬ್ಬೆ ವಿದ್ಯಾ ಪೋಷಿತೆಯಾಗಿ ಮಾಡಿದ ಕಾರ್ಯಗಳೇನು?
ಉ: ಅತ್ತಿಮಬ್ಬೆ ವಿದ್ಯಾ ಪೋಷಿತೆಯಾಗಿ ಗುರುಕುಲಕ್ಕೆ ಧನ ಸಹಾಯ ಮಾಡಿದಳು. ವಿದ್ಯಾ, ವಿನಯ ಸಂಪನ್ನೆಯಾದ ಅತ್ತಿಮಬ್ಬೆ ವಿದ್ಯಾ ಪ್ರಗತಿಗೆ ನೇರವಾಗಿ ವಿದ್ಯಾ ಪೋಷಿತೆಯೇ ಆದಳು.
೫. ಅತ್ತಿಮಬ್ಬೆಯು ತನ್ನ ಗಂಡನ ಮರಣ ನಂತರ ಮಾಡಿದ ಕಾರ್ಯಗಳು ಯಾವುವು?
ಉ: ಅತ್ತಿಮಬ್ಬೆಯು ತನ್ನ ಗಂಡನ ಮರಣ ನಂತರ ವೈರಾಗ್ಯ ತಾಳಿದಳು. ತನ್ನ ಮಗನೊಂದಿಗೆ ಲಕ್ಕುಂಡಿಯಲ್ಲಿ ನೆಲೆಸಿ ಜಿನ ದೇವಾಲಯ ಕಟ್ಟಿಸಿದಳು. ಅಜಿತ ತೀರ್ಥಂಕರ ಪುರಾಣ ಬರೆಸಿ ಹಸ್ತ ಪ್ರತಿ ಹಂಚಿದಳು. ಜಿನಾಲಯಗಳಿಗೆ ದತ್ತಿಗಳನ್ನು ನೀಡಿದಳು.
ಇ) ‘ಅ’ ಪಟ್ಟಿಯ ಅಂಶಗಳನ್ನು ‘ಬ’ ಪಟ್ಟಿಯ ಅಂಶಗಳೊಂದಿಗೆ ಹೊಂದಿಸಿ ಬರೆಯಿರಿ.( Match the items in this list with the items in list B and write A list B list)
ಅ ಪಟ್ಟಿ ಬ ಪಟ್ಟಿ
೧) ಆದಿಪುರಾಣ ಅ) ಅತ್ತಿಮಬ್ಬೆ ಪಂಪಕವಿ
೨) ಶಾಂತಿಪುರಾಣ ಆ) ಲಕ್ಕುಂಡಿ ಪೊನ್ನಕವಿ
೩) ಸಾಹಸಭೀಮವಿಜಯ ಇ) ಪೊನ್ನಕವಿ ರನ್ನಕವಿ
೪) ದಾನಚಿಂತಾಮಣಿ ಈ) ಪಂಪಕವಿ ಅತ್ತಿಮಬ್ಬೆ
ಉ) ರನ್ನಕವಿ
ಈ) ಬಿಟ್ಟಿರುವ ಸ್ಥಳಗಳಲ್ಲಿ ಸರಿಯಾದ ಪದವನ್ನು ಬರೆದು ವಾಕ್ಯವನ್ನು ಪೂರ್ಣಗೊಳಿಸಿರಿ. (Complete the sentence by writing the correct word in the spaces provided.)
೧. ಅತ್ತಿಮಬ್ಬೆಯ ಗುರುಗಳ ಹೆಸರು ಜಿನಚಂದ್ರ
೨. ಅತ್ತಿಮಬ್ಬೆಯ ಗಂಡನ ಹೆಸರು ನಾಗದೇವ
೩. ರನ್ನನ ಗುರುಗಳ ಹೆಸರು ಅಜಿತಸೇನಾಚರ್ಯರು
೪. ರನ್ನನಿಗೆ ಇದ್ದ ಬಿರುದು ಕವಿ ಚಕ್ರವರ್ತಿ
೫. ಅತ್ತಿಮಬ್ಬೆಯ ಮಗನ ಹೆಸರು ಅಣ್ಣಿಗದೇವ
೬. ರನ್ನನ ಮಗಳ ಹೆಸರು ಅತ್ತಿಮಬ್ಬೆ
ಭಾಷಾಭ್ಯಾಸ
ಅ) ಇಲ್ಲಿ ನೀಡಿರುವ ಪದಗಳನ್ನು ನಿಮ್ಮ ಸ್ವಂತ ವಾಕ್ಯದಲ್ಲಿ ಬಳಸಿ ಬರೆಯಿರಿ.(Make your own sentence)
೧. ಸನ್ನಡತೆ = ನಾವೆಲ್ಲರೂ ಸನ್ನಡತೆಯಲ್ಲಿ ನಡೆಯಬೇಕು.
೨. ಸಂಸ್ಕಾರ = ನಮ್ಮ ಸಂಸ್ಕಾರ ಒಳ್ಳೆಯದಿರಬೇಕು.
೩. ವಿವೇಕ = ನಾವು ವಿವೇಕದಿಂದ ಇರಬೇಕು.
೪. ವಿನಯ = ನಾವು ವಿನಯದಿಂದ ಮಾತಾಡಬೇಕು.
೫. ಅನುಪಮ = ಅತ್ತಿಮಬ್ಬೆಯ ಸೇವೆ ಅನುಪಮವಾಗಿದೆ.
ಆ) ಇಲ್ಲಿ ನೀಡಿರುವ ಪದಗಳ ಅನ್ಯಲಿಂಗ ರೂಪ ಬರೆಯಿರಿ. (Change the gender)
ಧರ್ಮಿಷ್ಠೆ – ಧರ್ಮಿಷ್ಠ
ಚತುರ – ಚತುರೆ
ದಾನಶೂರ – ದಾನಶೂರೆ
ದಯಾಶೀಲೆ – ದಯಾಶೀಲ
ಸಂಪನ್ನೆ – ಸಂಪನ್ನ
ಕವಿ – ಕವಯತ್ರಿ
ಇ) ಇಲ್ಲಿ ನೀಡಿರುವ ಪದಗಳನ್ನು ಬಿಡಿಸಿ ಬರೆಯಿರಿ. (Split the words)
ವಿದ್ಯಾಭ್ಯಾಸ = ವಿದ್ಯೆ + ಅಭ್ಯಾಸ
ದಿವ್ಯದರ್ಶನ = ದಿವ್ಯ + ದರ್ಶನ
ಬಿರುದಾಂಕಿತ = ಬಿರುದು + ಅಂಕಿತ
ಜಿನಾಲಯ = ಜಿನ + ಆಲಯ
ವೀರಾವೇಶ = ವೀರ + ಆವೇಶ
ಸಾಹಿತ್ಯಾಭಿಮಾನಿ = ಸಾಹಿತ್ಯ + ಅಭಿಮಾನಿ
ಈ) ವಾಕ್ಯದಲ್ಲಿರುವ ಪದಗಳನ್ನು ಅರ್ಥ ಪೂರ್ಣವಾಗಿ ಜೋಡಿಸಿ ಬರೆಯಿರಿ. (Write the words in this sentence in a meaningful way)
೧. ಅತ್ತಿಮಬ್ಬೆ ನೆಲೆಸಿದಳು ಲಕ್ಕುಂಡಿಯಲ್ಲಿ
ಉ: ಅತ್ತಿಮಬ್ಬೆ ಲಕ್ಕುಂಡಿಯಲ್ಲಿ ನೆಲೆಸಿದಳು.
೨. ರಣರಂಗದಲ್ಲಿ ರಥ ಸಾರಥಿಯಾಗಿ ನಡೆಸುತ್ತಿದ್ದಳು ಅತ್ತಿಮಬ್ಬೆ
ಉ: ಅತ್ತಿಮಬ್ಬೆ ರಣರಂಗದಲ್ಲಿ ಸಾರಥಿಯಾಗಿ ರಥ ನಡೆಸುತ್ತಿದ್ದಳು.
೩. ಮರಣಾನಂತರ ನಾಗದೇವನ ವೈರಾಗ್ಯ ಅತ್ತಿಮಬ್ಬೆ ತಾಳಿದಳು
ಉ: ನಾಗದೇವನ ಮರಣಾನಂತರ ಅತ್ತಿಮಬ್ಬೆ ವೈರಾಗ್ಯ ತಾಳಿದಳು.
ಉ) ಇಲ್ಲಿ ನೀಡಿರುವ ಪದಗಳ ವಚನ ಬದಲಿಸಿ ಬರೆಯಿರಿ. (Change the tenses given here and write the words)
ಕೃತಿಗಳು – ಕೃತಿ ದತ್ತಿ – ದತ್ತಿಗಳು
ಮಗು – ಮಕ್ಕಳು ಅಣ್ಣ – ಅಣ್ಣಂದಿರು
ವೀರ – ವೀರರು ಬಾಲಕ – ಬಾಲಕರು
ಊ) ಇಲ್ಲಿ ನೀಡಿರುವ ಗಾದೆ ಮಾತುಗಳನ್ನು ವಿಸ್ತರಿಸಿ ಬರೆಯಿರಿ. (Expand the words given here and write the proverbs)
೧. ಬೆಳೆಯುವ ಸಿರಿ ಮೊಳಕೆಯಲ್ಲಿ
ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣುತ್ತದೆ.
ಮಕ್ಕಳಲ್ಲಿ ಕಾಣುವ ಒಳ್ಳೆಯ ಗುಣಗಳು ಅವರ ಭವಿಷ್ಯದ ಮಹತ್ವವನ್ನು ಸೂಚಿಸುತ್ತವೆ.
೨.ಮನೆಯೇ ಮೊದಲ ಪಾಠಶಾಲೆ
ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ತಂದೆ ತಾಯಿಯೇ ಮಕ್ಕಳ ಮೊದಲ ಗುರುಗಳು. ಅವರಿಂದಲೇ ಜೀವನದ ಮೂಲ ಮೌಲ್ಯಗಳು ಸಿಗುತ್ತವೆ.
One Response