Doddavaru Yaaru kannada grace IV notes from savi kannada. Doddavaru Yaaru means who is big or superior.

Once upon a time, there lived a kind father and mother rat who loved their beautiful daughter dearly. When she grew up, they decided it was time to find her a suitable groom. Wanting the best for her, they thought, “Who could be greater than the mighty Sun?”

So, they went to the Sun and said, “O great Sun, will you marry our daughter?”
The Sun smiled warmly and replied, “I am powerful, but the Clouds can cover me. They are stronger than I am. You should ask them.”

The rats then went to the Clouds and said, “Dear Clouds, will you marry our daughter?”
The Clouds rumbled gently and said, “We may hide the Sun, but the Mountain King can stop us from moving. He is stronger than us.”

Next, the rats visited the Mountain King and made the same request. The Mountain laughed and said kindly, “I may be mighty, but little Mr. Rat can dig through me and make holes in my heart. He is indeed stronger than I am.”

Realizing this truth, the father and mother rats happily found a groom from their own kind. Their daughter married Mr. Rat, and they lived joyfully ever after.

ದೊಡ್ಡವರು ಯಾರು

ಅ) ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ. 
(Answer the following in one sentence)

೧. ಇಲಿಗಳ ಸಂಸಾರ ಎಲ್ಲಿ ವಾಸವಾಗಿತ್ತು? 
ಉ: ಇಲಿಗಳ ಸಂಸಾರ ಒಂದು ಊರಿನಲ್ಲಿ ವಾಸವಾಗಿತ್ತು.

೨. ತಂದೆ – ತಾಯಿ ಇಲಿಗಳು ಏನೆಂದು ಯೋಚಿಸಿದವು? 
ಉ: ತಂದೆ -ತಾಯಿ ಇಲಿಗಳು ಮಗಳಿಗೆ ತಕ್ಕ ವರನನ್ನು ಹುಡುಕಬೇಕೆಂದು ಯೋಚಿಸಿದವು. 

೩. ತಾಯಿ ಇಲಿ ಏನೆಂದು ಹೇಳಿತು?
ಉ: “ ಜಗತ್ತನೇ ಬೆಳಗುವ ಸೂರ್ಯ ನಮ್ಮ ಮಗಳಿಗೆ ತಕ್ಕ ವರ ” ಎಂದು ತಾಯಿ ಇಲಿ ಹೇಳಿತು.

೪. ಜಗತ್ತನ್ನು ಬೆಳಗುವವರು ಯಾರು? 
ಉ: ಜಗತ್ತನ್ನು ಬೆಳಗುವವರು ಸೂರ್ಯ . 

೫. ಸೂರ್ಯನಿಗೆ ಇಲಿಗಳು ಯಾವ ವಿಚಾರ ತಿಳಿಸಿದವು? 
ಉ: ಇಲಿಗಳು ಸೂರ್ಯನಿಗೆ ತಮ್ಮ ಮಗಳ ಮದುವೆಯ ವಿಚಾರ ತಿಳಿಸಿದವು . 

೬. ಯಾರ ಜೊತೆಯಲ್ಲಿ ಇಲಿಯ ಮದುವೆಯಾಯಿತು? 
ಉ: ಇಲಿರಾಯನ ಜೊತೆಯಲ್ಲಿ ಇಲಿಯ ಮದುವೆಯಾಯಿತು.

ಆ) ಕೊಟ್ಟಿರುವ ಮಾತನ್ನು ಯಾರು, ಯಾರಿಗೆ ಹೇಳಿದರು ? Who told whom?

೧.” ಜಗತ್ತನೇ ಬೆಳಗುವ ಸೂರ್ಯ ಬಹಳ  ದೊಡ್ಡವನು . ” 
ಯಾರು ? : ತಾಯಿ ಇಲಿ ಹೇಳಿತು
ಯಾರಿಗೆ ? : ತಂದೆ ಇಲಿಗೆ ಹೇಳಿತು 

೨. ”ಇಲ್ಲಾ ! ಇಲ್ಲಾ ! ನನಗಿಂತಲೂ ದೊಡ್ಡವನು ಬೆಟ್ಟದ ರಾಜನಿದ್ದಾನೆ “.
ಯಾರು?: ಮೋಡ ಹೇಳಿತು.
ಯಾರಿಗೆ?: ತಂದೆ ತಾಯಿ ಇಲಿಗಳಿಗೆ ಹೇಳಿತು.

೩. “ನಮ್ಮ ಮಗಳಿಗೆ ಇಲಿರಾಯನೇ ತಕ್ಕ ವರ.” 
ಯಾರು? : ತಂದೆ ಇಲಿ ಹೇಳಿತು. 
ಯಾರಿಗೆ? : ತಾಯಿ ಇಲಿಗೆ ಹೇಳಿತು.  

ಇ) ವಾಕ್ಯಗಳನ್ನು ಗಮನಿಸಿ , ಸರಿ / ತಪ್ಪುಗಳನ್ನು ಗುರುತಿಸು . ತಪ್ಪಿದ್ದರೆ ಸರಿಪಡಿಸಿ ಬರೆಯಿರಿ. (Correct the statement if it is wrong)

೧. ಒಂದು ಊರು , ಅಲ್ಲೊಂದು ಹುಲಿಗಳ ಇತ್ತು.
ಉ: ಒಂದು ಊರು , ಅಲ್ಲೊಂದು ಇಲಿಗಳ ಇತ್ತು. 

೨. ಮಗನಿಗೆ ಸರಿಯಾದ ವರ ಬೇಕೆ ಅದು ಇಲಿಗಳು ಯೋಚಿಸಿದವು.
ಉ: ಮಗಳಿಗೆ ಸರಿಯಾದ ವರ ಬೇಕೆಂದು ಇಲಿಗಳು ಯೋಚಿಸಿದವು. 

೩. ಬೆಟ್ಟದ ರಾಜನ ಬಳಿಗೆ ಇರುವೆಗಳು ಹೋದವು. 
ಉ: ಬೆಟ್ಟದ ರಾಜನ ಬಳಿಗೆ ಇಲಿಗಳು ಹೋದವು. 

ಈ) ಕೊಟ್ಟಿರುವ ಪದಗಳನ್ನು ಸರಿಯಾಗಿ ಜೋಡಿಸಿ ವಾಕ್ಯ ರಚಿಸಿ. (Using the given words make a sentence)

೧. ತಂದೆ ಇಲಿಗಳು ಯೋಚಿಸಿದವು ತಾಯಿ. 
ಉ: ತಂದೆ – ತಾಯಿ ಇಲಿಗಳು ಯೋಚಿಸಿದವು. 

೨. ಬೆಳಗುವ ಬಹಳ ಸೂರ್ಯ ದೊಡ್ಡವನು ಜಗತ್ತನೇ
ಉ: ಜಗತ್ತನೇ ಬೆಳಗುವ ಸೂರ್ಯ ಬಹಳ ದೊಡ್ಡವನು. 

೩. ಇಲಿಗಳು ಬೆಟ್ಟದ ಹೋದವು ಬಳಿಗೆ ರಾಜನ
ಉ: ಬೆಟ್ಟದ ರಾಜನ ಬಳಿಗೆ ಇಲಿಗಳು ಹೋದವು.

ಉ) ಈ ಕೆಳಗಿನ ಪದಗಳನ್ನು ಬಳಸಿ ರಚಿಸಿ ಸ್ವಂತ ವಾಕ್ಯ ರಚಿಸಿ. (Make your own sentence)

೧. ಯೋಚಿಸು: ನಾನು ಶಾಲೆಗೆ ಹೋಗಲು ಯೋಚಿಸಿದೆ.
೨. ತೀರ್ಮಾನಿಸು: ನಾನು ಮನೆಗೆ ಹೋಗಲು ತೀರ್ಮಾನಿಸಿದೆ.
೩. ಸಮರ್ಥ: ನಾನು ಸಮರ್ಥ ನಾಯಕಿ. 
೪. ಮದುವೆ : ತಂದೆ – ತಾಯಿ ಇಲಿಗಳು ಮಗಳಿಗೆ ಮದುವೆ ಮಾಡಿದವು.

ಭಾಷಾ ಚಟುವಟಿಕೆ 

ಅ) ಕೊಟ್ಟಿರುವ ಪದಗಳಲ್ಲಿ ಸರಿಯಾದ ಪದ ಆರಿಸಿ ಬಿಟ್ಟ ಸ್ಥಳದಲ್ಲಿ ಬರೆಯಿರಿ. (Fill in the blanks)

೧. ನವಿಲು ಸುಂದರವಾದ ಪಕ್ಷಿ.
೨. ಪಲ್ಲವಿ ಬಹಳ ಬುದ್ದಿವಂತ  ವಿದ್ಯಾರ್ಥಿ.
೩. ಕೋಗಿಲೆ ಇಂಪಾಗಿ  ಹಾಡುತ್ತದೆ. 
೪. ಮೋಹನ ಚೆನ್ನಾಗಿ ನೃತ್ಯ ಮಾಡುತ್ತಾನೆ.

ಆ)ಕೊಟ್ಟಿರುವ ಅಕ್ಷರಗಳನ್ನು ಬಳಸಿ ಪ್ರಾಣಿಗಳ ಹೆಸರು ಪಟ್ಟಿ ಮಾಡಿ. (Lists the names of animals using the given letters)

ಸು
ತ್ತೆ
ಹುಲಿ
ತೋಡಿಮ್ಮೆ
ರಿ

ಹಸು, ಹುಲಿ, ನರಿ, ಎಮ್ಮೆ, ಕತ್ತೆ, ಇಲಿ, ತೋಳ, ಕರಡಿ

ಇ) ಪ್ರಾಣಿ ಪಕ್ಷಿಗಳ ಕೂಗನ್ನು ಅನುಸರಿಸಿ ಸೂಕ್ತವಾದದಕ್ಕೆ ಗೆರೆ ಎಳೆದು ಹೊಂದಿಸಿ ಬರೆಯಿರಿ. (Follow the sounds of animals and birds and draw a line to match the correct one)

ಅ                     ಬ

ಕೋಳಿ              ಮೀಯಾಂವ್‌ ಮೀಯಾಂವ್‌   ಕೋಕೋ
ಕಾಗೆ                 ಬೌ ಬೌ ಕಾಕಾ
ಬೆಕ್ಕು                ಕಾಕಾ ಮೀಯಾಂವ್‌ ಮೀಯಾಂವ್‌
ನಾಯಿ              ಕುಹೂ ಕುಹೂ ಬೌ ಬೌ
ಕೋಗಿಲೆ           ಕೋಕೋ ಕುಹೂ ಕುಹೂ

ಈ) ಕೊಟ್ಟಿರುವ ಪದಗಳಲ್ಲಿ ಸರಿಯಾದ ರೂಪವನ್ನು ಗುರುತಿಸಿ ಬರೆಯಿರಿ. (Identify the correct form of the given words and write it)

ಹೆಣ್ಣು – ಎಣ್ಣು    
ತಾಇ –  ತಾಯಿ
ಮೋಡ – ಮೋಢ
ಸೂರ್ಯ – ಸೂರಿಯ
ವರ – ಒರ
ಬೆಟ್ಟ – ಬೆಟ್ಠ

Click here to download Doddavaru yaaru kannada notes