Enadaru maadi doorabedi kannada lesson grade 8 tili kannada book. Enadaru maadi doorabedi class 8 is about do something just don’t complain.
“Enadaru Madi Durabedi,” written by Shrimati Nemichandra, highlights a simple yet powerful message: instead of complaining, take action. The writer recalls an incident where a relative’s son visited Bengaluru’s MG Road and was surprised to see shops filled with imported products offering attractive deals on items like refrigerators and showcases.
The author reflects on her own habits—especially how she often forgets to carry a cloth bag while buying vegetables and fruits, ending up with plastic bags. Her friend, Bharati Prabhu, sets a great example by always keeping reusable bags in her car, bike, and handbag to avoid plastic usage.
The writer also mentions a CNC report stating that excessive chemical pesticides and fertilizers have polluted the soil and water. Even cola companies were criticized for not filtering water properly, leading to chemical contamination in beverages.
She remembers a speech by Pu Ti Narasimhacharya during her college days, where he emphasized: “Don’t just complain—do something.” Inspired by this thought, the writer concludes that even small lifestyle changes can significantly help protect the environment.
ಏನಾದರೂ ಮಾಡಿ, ದೂರಬೇಡಿ…
I. ಪದಗಳ ಅರ್ಥ ಬರೆಯಿರಿ. (Write the word meaning)
ಇನಾಮು = ಬಹುಮಾನ
ಕಸುಬು = ಕೆಲಸ, ಉದ್ಯೋಗ
ಮೌಲ್ಯ = ಬೆಲೆ
ಕರಪತ್ರ = ಪ್ರಚಾರದ ಚೀಟಿ
ಕಾರ್ಖಾನೆ = ಯಂತ್ರಗಳ ಸಹಾಯದಿಂದ ದೊಡ್ಡ ಪ್ರಮಾಣದಲ್ಲಿ ವಸ್ತುಗಳನ್ನು ತಯಾರಿಸುವ ಸ್ಥಳ
ಕರಾಟೆ = ಆಕ್ಷೇಪಣೆ
ಕ್ರಾಂತಿ = ಆಂದೋಲನ
ಕಳಕಳಿ = ಆಸಕ್ತಿ
II. ಪ್ರಶ್ನೆಗಳು
ಅ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)
೧. ಭಾರತೀಯ ಪ್ರಭು ಅವರು ಸದಾ ಮನೆಯಿಂದಲೇ ಕೈಚೀಲ ಹಿಡಿದು ಹೊರಡುತ್ತಾರೆ ಏಕೆ?
ಉ: ಪರಿಸರ ಮಾಲಿನ್ಯವಾಗಬಾರದೆಂದು ಭಾರತೀಯ ಪ್ರಭು ಅವರು ಸದಾ ಮನೆಯಿಂದಲೇ ಕೈಚೀಲ ಹಿಡಿದು ಹೊರಡುತ್ತಾರೆ.
೨. ಅಂತರ್ಜಲ ಹೇಗೆ ಕಲುಷಿತವಾಗುತ್ತಿದೆ?
ಉ: ರಾಸಾಯನಿಕ ಕೀಟನಾಶಕ, ರಾಸಾಯನಿಕ ಗೊಬ್ಬರದಿಂದ ಅಂತರ್ಜಲ ಕಲುಷಿತವಾಗುತ್ತಿದೆ.
೩. ಲೇಖಕಿಯು ಸಿಎಸ್ಇ ವರದಿಯಲ್ಲಿ ಓದಿದ ವಿವರ ಯಾವುದು?
ಉ: ಲೇಖಕಿಯು ಸಿಎಸ್ಇ ವರದಿಯಲ್ಲಿ, ಕೃಷಿಯಲ್ಲಿ ಬಳಸುವ ರಾಸಾಯನಿಕ ಕೀಟ ನಾಶಕಗಳು ರಾಸಾಯನಿಕ ಗೊಬ್ಬರ ಇವೆಲ್ಲ ಅಂತರ್ಜಲವನ್ನು ಕಲುಷಿತಗೊಳಿಸುತ್ತವೆ. ಅಂತರ್ಜಲವನ್ನು ಬಳಸುವ ಕೋಲಾ ಕಂಪನಿಗಳು ಪೂರ್ಣವಾಗಿ ನೀರನ್ನು ಶುದ್ಧಿ ಮಾಡದೆ ಇದ್ದ ಕಾರಣ ಕೀಟನಾಶಕ ತಂಪು ಪಾನೀಯದಲ್ಲಿ ಉಳಿಯಿತು ಎಂದು ಓದಿದರು.
೪. ಅನಿವಾಸಿ ಭಾರತೀಯರ ಯಾವ ಮಾತುಗಳನ್ನು ಕೇಳಿದಾಗ ಲೇಖಕಿಗೆ ಕೆಡಕಿನಿಸುತ್ತಿತ್ತು?
ಉ: “ಭಾರತದಲ್ಲಿ ಸ್ವಚ್ಛತೆ ಇಲ್ಲ, ವ್ಯವಸ್ಥೆ ಇಲ್ಲ. ಅದಿಲ್ಲ- ಇದಿಲ್ಲ. ಇಲ್ಲಿ ನೋಡಿ ಎಷ್ಟು ಚೆನ್ನಾಗಿದೆ” ಎಂದು ಹೇಳುವ ಅನಿವಾಸಿ ಭಾರತೀಯರ ಮಾತುಗಳನ್ನು ಕೇಳಿದಾಗ ಲೇಖಕಿಗೆ ಕೆಡಕಿನಿಸುತ್ತಿತ್ತು.
ಆ) ಕೆಳಗಿನ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in three – four sentences)
೧. ವಿದೇಶಿ ಕಂಪನಿಯ ದಿನ ಬಳಕೆಯ ವಸ್ತುಗಳನ್ನು ತಿಳಿಸಿ.
ಉ: ಸೋಪು, ಟೂತ್ ಪೇಸ್ಟ್, ಚಪ್ಪಲಿ, ಕೋಲಾ ಮುಂತಾದವು ವಿದೇಶಿ ಕಂಪನಿಯ ದಿನ ಬಳಕೆಯ ವಸ್ತುಗಳು.
೨. ನಮ್ಮ ಸುತ್ತಮುತ್ತಲಿನ ಪರಿಸರವನ್ನು ನಾವು ಹೇಗೆ ಸುಧಾರಿಸಬಹುದು?
ಉ: ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಣ್ಣ ಯತ್ನದಿಂದ ಬದಲಾವಣೆ ತರಬೇಕು. ಏನಾದರೂ ಸುಧಾರಣೆ ತರಬೇಕೆಂದು ಪ್ರಯತ್ನ ಪಡಬೇಕು.
೩. ಯಾವ ಯಾವ ಕಾರಣಕ್ಕಾಗಿ ನಮ್ಮ ದೇಶ ಹಾಳಾಗಿ ಹೋಗುತ್ತಿದೆ ಎಂದು ಲೇಖಕರು ಹೇಳಿದ್ದಾರೆ?
ಉ: ಕೈ ಚೀಲವನ್ನು ತೆಗೆದುಕೊಳ್ಳದೇ, ಅಂಗಡಿಯವನಲ್ಲಿ ಪ್ಲಾಸ್ಟಿಕ್ ತೆಗೆದುಕೊಳ್ಳುವುದು. ರಸ್ತೆಯಲ್ಲಿ ಕಸ ಬಿಸಾಕುವುದು. ಏನೂ ಮಾಡದೇ ಸುಮ್ಮನಿರುವದು. ಇದೆಲ್ಲಾ ಕಾರಣಗಳಿಗೆ ನಮ್ಮ ದೇಶ ಹಾಳಾಗಿ ಹೋಗುತ್ತಿದೆ ಎಂದು ಲೇಖಕರು ಹೇಳಿದ್ದಾರೆ.
೪. ವರದಿಯ ಪ್ರಕಾರ ಕೋಲಾದಲ್ಲಿ ಕೀಟನಾಶಕ ಹೇಗೆ ಬಂತು?
ಉ: ಕೃಷಿಯಲ್ಲಿ ಬಳಸುವ ರಾಸಾಯನಿಕ ಕೀಟ ನಾಶಕಗಳು ರಾಸಾಯನಿಕ ಗೊಬ್ಬರ ಇವೆಲ್ಲ ಅಂತರ್ಜಲವನ್ನು ಕಲುಷಿತಗೊಳಿಸುತ್ತವೆ. ಅಂತರ್ಜಲವನ್ನು ಬಳಸುವ ಕೋಲಾ ಕಂಪನಿಗಳು ಪೂರ್ಣವಾಗಿ ನೀರನ್ನು ಶುದ್ಧಿ ಮಾಡದೆ ಇದ್ದ ಕಾರಣ ಕೀಟನಾಶಕ ಕೋಲಾದಲ್ಲಿ ಉಳಿಯಿತು.
ಇ) ಕೆಳಗಿನ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in eight – ten sentences)
೧. ವಿದೇಶಿ ಸಾಮಾನು, ವಿದೇಶಿ ಸಂಸ್ಕೃತಿಯ ಕುರಿತು ಲೇಖಕಿಯ ಅಭಿಪ್ರಾಯವನ್ನು ಸಂಗ್ರಹಿಸಿ ಬರೆಯಿರಿ.
ಉ: ಬೆಂಗಳೂರಿನ ಎಂ ಜಿ ರಸ್ತೆಯಲ್ಲಿ ಬರೀ ವಿದೇಶಿ ಅಂಗಡಿಗಳು. ಬರೀ ವಿದೇಶಿ ಸಂಸ್ಕೃತಿ. ಅಲ್ಲಿನ ಅಂಗಡಿಗಳಲ್ಲಿ ಸೋಪು, ಟೂತ್ ಪೇಸ್ಟ್, ಚಪ್ಪಲಿ, ಕೋಲಾ ಮುಂತಾದವು ವಿದೇಶಿ ಕಂಪನಿಯ ದಿನ ಬಳಕೆಯ ವಸ್ತುಗಳು ಸಿಗುತ್ತವೆ. ವಿದೇಶಿ ಕಂಪನಿಯ ಅಂಗಡಿಗಳಲ್ಲಿ ಫ್ರಿಜ್ಜು, ಶೋಕೆಸುಗಳನ್ನು ಬಹುಮಾನವಾಗಿ ಕೊಟ್ಟು ಸಾಮಾನುಗಳನ್ನು ಮಾರುತ್ತಾರೆ. ಹಾಗೆಯೇ, ವಿದೇಶದಲ್ಲಿ ಅನಿವಾಸಿ ಭಾರತೀಯರು “ಭಾರತದಲ್ಲಿ ಸ್ವಚ್ಛತೆ ಇಲ್ಲ, ವ್ಯವಸ್ಥೆ ಇಲ್ಲ. ಅದಿಲ್ಲ, ಇದಿಲ್ಲ ಎಂದು ದೂರುತ್ತಾರೆ. ಆದರೆ, ಅವರೇ ಭಾರತಕ್ಕೆ ಬಂದಾಗ ರಸ್ತೆಯಲ್ಲಿ ಕಸವನ್ನು ಎಸೆಯುತ್ತಾರೆ ಎಂದು ಲೇಖಕಿ ತನ್ನ ಅಭಿಪ್ರಾಯವನ್ನು ವಿವರಿಸುತ್ತಾರೆ.
೨. ʼಏನಾದರೂ ಮಾಡಿ, ದೂರಬೇಡಿʼ ಲೇಖನದಲ್ಲಿರುವ ಪ್ರಮುಖ ಅಂಶಗಳನ್ನು ಪಟ್ಟಿ ಮಾಡಿರಿ.
ಉ: ಜನರು ಕೈಚೀಲ ತೆಗೆದುಕೊಂಡು ಹೋಗದೇ ಅಂಗಡಿಯವನು ಕೊಡುವ ಪ್ಲಾಸ್ಟಿಕ್ ಚೀಲವನ್ನು ಬಳಸುತ್ತಾರೆ. ಅದೇ ಪ್ಲಾಸ್ಟಿಕ್ ಚೀಲವನ್ನು ರಸ್ತೆಯಲ್ಲಿ ಎಸೆಯುತ್ತಾರೆ. ವಿದೇಶಿ ಸಾಮಾನುಗಳನ್ನು ನಾವು ಖರೀದಿಸುತ್ತೇವೆ. ವಿದೇಶದಲ್ಲಿ ಅನಿವಾಸಿ ಭಾರತೀಯರು “ಭಾರತದಲ್ಲಿ ಸ್ವಚ್ಛತೆ ಇಲ್ಲ, ವ್ಯವಸ್ಥೆ ಇಲ್ಲ. ಅದಿಲ್ಲ, ಇದಿಲ್ಲ ಎಂದು ದೂರುತ್ತಾರೆ. ಆದರೆ, ಅವರೇ ಭಾರತಕ್ಕೆ ಬಂದಾಗ ರಸ್ತೆಯಲ್ಲಿ ಕಸವನ್ನು ಎಸೆಯುತ್ತಾರೆ. ಕೃಷಿಯಲ್ಲಿ ಬಳಸುವ ರಾಸಾಯನಿಕ ಕೀಟ ನಾಶಕಗಳು ರಾಸಾಯನಿಕ ಗೊಬ್ಬರ ಇವೆಲ್ಲ ಅಂತರ್ಜಲವನ್ನು ಕಲುಷಿತಗೊಳಿಸುತ್ತವೆ. ಲೇಖಕಿಯ ತಾಯಿ ಕೀಟನಾಶಕ ಬಳಸದೇ, ರಾಸಾಯನಿಕ ಗೊಬ್ಬರ ಬಳಸದೇ ತರಕಾರಿ, ಹಣ್ಣುಗಳನ್ನು ಬೆಳೆಸುತ್ತಿದ್ದರು. ಕಸವನ್ನು ಬೀದಿಗೆ ಎಸೆಯದೇ ಗುಂಡಿ ತೋಡಿ ಗೊಬ್ಬರ ಮಾಡುತ್ತಿದ್ದರು.
ನಾವು ಯಾವಾಗಲೂ ದೂರದೇ ಚಿಕ್ಕ ಚಿಕ್ಕ ಬದಲಾವಣೆಯನ್ನು ಮಾಡಿ ಸುಧಾರಣೆ ತರಬಹುದು. ನಮ್ಮ ಪರಿಸರವನ್ನು ಮಲಿನಗೊಳಿಸದೇ, ಜಲವನ್ನು ಕಲುಷಿತಗೊಳಿಸದೇ ಇರಿಸಬಹುದು.
ಈ) ಸಂದರ್ಭದಲ್ಲಿ ವಿವರಿಸಿ. (Explain the context in detail)
೧. “ನಮ್ಮ ದೇಶ ಹಾಳಾಗಿ ಹೋಗ್ತಾ ಇದೆ”
ಆಯ್ಕೆ: ಈ ವಾಕ್ಯವನ್ನು ಶ್ರೀಮತಿ ನೇಮಿಚಂದ್ರರವರು ಬರೆದ “ಬದುಕು ಬದಲಿಸಬಹುದು” ಕೃತಿಯ “ಏನಾದರೂ ಮಾಡಿ, ದೂರಬೇಡಿ” ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಸಣ್ಣ ಊರಿನಿಂದ ಬಂದ ಲೇಖಕರ ನೆಂಟರ ಮಗ ಬೆಂಗಳೂರಿನ ಎಂ ಜಿ ರಸ್ತೆಯನ್ನು ಸುತ್ತಿ ಬಂದನು. ವಿದೇಶಿ ಸಾಮಾನು, ವಿದೇಶಿ ಸಂಸ್ಕ್ರತಿಯನ್ನು ನೋಡಿದ ಸಂದರ್ಭದಲ್ಲಿ ಈ ಮಾತನ್ನು ಹೇಳಿದನು.
ಸ್ವಾರಸ್ಯ: ಸಣ್ಣ ಊರಿನಿಂದ ಬಂದ ಆ ಹುಡುಗನಿಗೆ ನಮ್ಮ ದೇಶದ ಬಗ್ಗೆ ಇರುವ ಕಳಕಳಿಯು ಇಲ್ಲಿಯ ಸ್ವಾರಸ್ಯವಾಗಿದೆ.
೨. “ ಸುಮ್ಮನೆ ದೂರ ಬೇಡಿ, ಏನಾದರೂ ಮಾಡಿ”
ಆಯ್ಕೆ: ಈ ವಾಕ್ಯವನ್ನು ಶ್ರೀಮತಿ ನೇಮಿಚಂದ್ರರವರು ಬರೆದ “ಬದುಕು
ಬದಲಿಸಬಹುದು” ಕೃತಿಯ “ಏನಾದರೂ ಮಾಡಿ, ದೂರಬೇಡಿ” ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಲೇಖಕರ ಕಾಲೇಜು ದಿನಗಳಲ್ಲಿ ಪು.ತಿ.ನ ಅವರನ್ನು ಕನ್ನಡ ಸಂಘದ ಕಾರ್ಯಕ್ರಮಕ್ಕೆ ಕರೆಸಿದ್ದರು. ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡುವ ಸಂದರ್ಭದಲ್ಲಿ ಅವರು ಮೇಲಿನ ಮಾತನ್ನು ಹೇಳಿದರು.
ಸ್ವಾರಸ್ಯ: ಯಾವಾಗಲೂ ದೂರದೇ ಏನಾದರೂ ಪ್ರಯತ್ನ ಮಾಡಬೇಕು ಎನ್ನುವ ಅವರ ಕಳಕಳಿ ಇಲ್ಲಿಯ ಸ್ವಾರಸ್ಯ.
೩. “ ಕೀಟನಾಶಕ ತಂಪು ಪಾನೀಯದಲ್ಲಿ ಉಳಿಯಿತು”
ಆಯ್ಕೆ: ಈ ವಾಕ್ಯವನ್ನು ಶ್ರೀಮತಿ ನೇಮಿಚಂದ್ರರವರು ಬರೆದ “ಬದುಕು
ಬದಲಿಸಬಹುದು” ಕೃತಿಯ “ಏನಾದರೂ ಮಾಡಿ, ದೂರಬೇಡಿ” ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಕೃಷಿಯಲ್ಲಿ ಬಳಸುವ ರಾಸಾಯನಿಕ ಕೀಟ ನಾಶಕಗಳು ರಾಸಾಯನಿಕ ಗೊಬ್ಬರ ಇವೆಲ್ಲ ಅಂತರ್ಜಲವನ್ನು ಕಲುಷಿತಗೊಳಿಸುತ್ತವೆ. ಅಂತರ್ಜಲವನ್ನು ಬಳಸುವ ಕೋಲಾ ಕಂಪನಿಗಳು ಪೂರ್ಣವಾಗಿ ನೀರನ್ನು ಶುದ್ಧಿ ಮಾಡದೆ ಇದ್ದ ಕಾರಣ ಕೀಟನಾಶಕ ಕೋಲಾದಲ್ಲಿ ಉಳಿಯಿತು, ಲೇಖಕರು ತಾವು ಓದಿದ ಸಿಎಸ್ ಸಿ ವರದಿಯ ಬಗ್ಗೆ ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದರು.
ಸ್ವಾರಸ್ಯ: ನಮ್ಮ ಜಲ ಹೇಗೆ ಕಲುಷಿತಗೊಂಡಿದೆ ಎಂಬುದು ಇಲ್ಲಿ ಸ್ವಾರಸ್ಯವಾಗಿದೆ.
೪. “ ಅದಿಲ್ಲ, ಇದಿಲ್ಲ ಇಲ್ಲಿ ನೋಡಿ ಎಷ್ಟು ಚೆನ್ನಾಗಿದೆ”
ಆಯ್ಕೆ: ಈ ವಾಕ್ಯವನ್ನು ಶ್ರೀಮತಿ ನೇಮಿಚಂದ್ರರವರು ಬರೆದ “ಬದುಕು
ಬದಲಿಸಬಹುದು” ಕೃತಿಯ “ಏನಾದರೂ ಮಾಡಿ, ದೂರಬೇಡಿ” ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಲೇಖಕರು ವಿದೇಶದಲ್ಲಿ ಅನಿವಾಸಿ ಭಾರತೀಯರ ಮನೆಯಲ್ಲಿ ಇದ್ದರು. ಲೇಖಕರ ಜೊತೆ ಮಾತನಾಡುವ ಸಂದರ್ಭದಲ್ಲಿ ಅವರು ಈ ಮಾತನ್ನು ಹೇಳಿದರು.
ಸ್ವಾರಸ್ಯ: ಭಾರತದ ಬಗ್ಗೆ ಅನಿವಾಸಿ ಭಾರತೀಯರ ಅಭಿಪ್ರಾಯ ಇಲ್ಲಿಯ ಸ್ವಾರಸ್ಯವಾಗಿದೆ.
ಭಾಷಾಭ್ಯಾಸ
೧. ಕೆಳಗಿನ ಅನ್ಯ ದೇಶೀಯ ಪದಗಳಿಗೆ ಕನ್ನಡದಲ್ಲಿ ಅರ್ಥ ಬರೆಯಿರಿ. ( Write the kannada meaning for the foreign words given below)
ಇನಾಮು = ಬಹುಮಾನ
ಫೋನು = ದೂರವಾಣಿ
ಬ್ಯಾಗ್ = ಚೀಲ
೨. ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ. (Make your own sentence)
ದೂರಬೇಡಿ = ಯಾರಬಗ್ಗೂ ದೂರಬೇಡಿ.
ಆಹ್ವಾನ =ನಮ್ಮ ಮನೆಗೆ ಒಂದು ಆಹ್ವಾನ ಪತ್ರಿಕೆ ಬಂತು.
ಕ್ರಾಂತಿ = ಗಾಂಧೀಜಿಯವರು ಕ್ರಾಂತಿಯ ವಿರೋಧಿಯಾಗಿದ್ದರು.
ಹೋರಾಟ = ಗಾಂಧೀಜಿಯವರು ಶಾಂತಿಯಿಂದ ಹೋರಾಟ ಮಾಡಿದರು.
ಕರಪತ್ರ =ನಾವು ಸ್ವಚ್ಛತೆಯ ಬಗ್ಗೆ ಕರಪತ್ರ ಹಂಚಿದೆವು.
Click here to download Enadharoo maadi durabedii kannada notes grade 8