Gandharvasena kannada notes is a story of a donkey. Gandharvasena kannada story teach us not to trust us without any validation.
One day in a royal kingdom, the king’s court began as usual. Suddenly, the minister entered crying and announced in grief: “Gandharvasena has died!” Hearing this, the king was deeply saddened. He immediately adjourned the court and declared four days of mourning holidays.
The king then went to his queens and, with tears in his eyes, told them that Gandharvasena had passed away. The queens too began to cry bitterly. Seeing the royal family so upset, a curious servant thought: “Who exactly is this Gandharvasena?”
The servant asked the queens, but they didn’t know. The queens in turn asked the king, but even he had no answer. The king questioned his minister, but the minister too was confused. He admitted he didn’t actually know who Gandharvasena was!
Determined to solve the mystery, the minister went to the kingdom’s general. The general said he had no clue either. “It was my wife who told me,” he explained. So, the general went back to his wife and asked her. She replied: “I don’t know, but when I went to wash clothes near the lake, I saw the laundry lady crying about Gandharvasena’s death.”
Finally, the minister and general visited the laundry lady’s house. There, she was sobbing uncontrollably. When they asked her about Gandharvasena, she said through her tears:
“Gandharvasena was my obedient donkey… and he has died.”
ಗಂಧರ್ವಸೇನ
ಪದಗಳ ಅರ್ಥ (Word Meaning)
ಒಡ್ಡೋಲಗ – ರಾಜಸಭೆ, ದರ್ಬಾರು
ರೋದನ – ಅಳುವಿಕೆ,
ಚುಂಬನ – ಮುತ್ತು,
ಉದ್ಗರಿಸು – ಹೇಳು, ಹೊರಗಡೆಗು
ಪರಿಸಮಾಪ್ತಿ – ಮುಕ್ತಾಯ, ಕೊನೆ
ಶೋಕ – ದುಃಖ, ಅಳಲು
ಗದ್ಗದ ಕಂಠ – ಬಿಗಿದ ಕಂಠ
ಅಂತಃಪುರ – ರಾಣಿವಾಸ
ನಿಟ್ಟುಸಿರು – ದೀರ್ಘವಾಗಿ ಬಿಡುವ ಉಸಿರು
ಬಡಪಾಯಿ – ಅಶಕ್ತ, ದುರ್ಬಲ
ತೀರಿಕೊಳ್ಳು – ಮರಣ ಹೊಂದು
ಮಾರ್ನುಡಿ – ಪ್ರತಿಯಾಗಿ ಮಾತನಾಡು
ಪತ್ತೆ – ಗುರುತು, ಸುಳಿವು
ಬೊಬ್ಬಿಡು – ಕೂಗು, ಅರಚು
ನಿಜಾಂಶ – ಸತ್ಯ
ಪಕ್ಕೆಲುಬು – ಎರಡು ಬದಿಯ ಎಲುಬುಗಳು
ಅ. ಸರಿಯಾದ ಪದಗಳನ್ನು ಆಯ್ಕೆ ಮಾಡಿ ಬಿಟ್ಟ ಸ್ಥಳ ತುಂಬಿರಿ. (Fill in the blanks)
೧. ರಾಜನು ಒಡ್ಡೋಲಗ ವನ್ನು ಅಲ್ಲಿಗೇ ಪರಿಸಮಾಪ್ತಿಗೊಳಿಸಿದ.
೨. ಸೇವಕಿ ಚುರುಕು ಬುದ್ಧಿಯವಳು.
೩. ಮಂತ್ರಿ ಅರಮನೆಗೆ ಬಂದು ರಾಜನ ಕಾಲಿಗೆ ಬಿದ್ದು ನಿಜಾಂಶ ಹೇಳಿದ.
೪. ರಾಜನಿಗೆ ಗಂಧರ್ವಸೇನ ತೀರಿದ ವಿಷಯ ತಿಳಿಸಿದ್ದು ಮಂತ್ರಿ.
೫. ಅಂತಃಪುರ ಇದರ ಅರ್ಥ ರಾಣಿವಾಸ.
ಆ. ಈ ಪದಗಳ ಅರ್ಥ ಬರೆಯಿರಿ. (Word Meaning)
೧. ನಿಟ್ಟುಸಿರು : ದೀರ್ಘವಾಗಿ ಬಿಡುವ ಉಸಿರು
೨. ಪರಿಸಮಾಪ್ತಿ : ಮುಕ್ತಾಯ
೩. ಮಾರ್ನುಡಿ : ಪ್ರತಿಯಾಗಿ ಮಾತನಾಡು
೪. ಉದ್ಗರಿಸು: ಹೇಳು , ಹೊರಗೆಡಹು
ಇ . ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ. (Answer the following in one sentence)
೧. ಮಂತ್ರಿ ಅಳುತ್ತಾ ರಾಜನ ಬಳಿ ಏನೆಂದು ಹೇಳಿದ ?
ಉ: ಮಂತ್ರಿ ಅಳುತ್ತಾ ರಾಜನ ಬಳಿ ಬಂದು “ಗಂಧರ್ವ ಸೇನರು ತೀರಿಕೊಂಡರಂತೆ ” ಎಂದು ಹೇಳಿದ.
೨. ಗಂಧರ್ವಸೇನ ತೀರಿಕೊಂಡ ವಿಷಯವನ್ನು ರಾಜ ಯಾರಿಗೆ ಹೇಳಿದ ?
ಉ: ಗಂಧರ್ವಸೇನ ತೀರಿಕೊಂಡ ವಿಷಯವನ್ನು ರಾಜ ರಾಣಿವಾಸದವರಿಗೆ ಹೇಳಿದನು.
೩. ರಾಣಿಯ ಸೇವಕಿ ಏನೆಂದು ಆಲೋಚನೆ ಮಾಡಿದಳು ?
ಉ: ರಾಣಿಯ ಸೇವಕಿ, “ ನಮ್ಮ ಮಹಾರಾಜರಿಗೂ, ಆ ಗಂಧರ್ವ ಸೇನರಿಗೂ ಏನು ಸಂಬಂಧ?” ಎಂದು ಆಲೋಚನೆ ಮಾಡಿದಳು.
೪. ರಾಣಿಯರು ನಗಲು ಕಾರಣವೇನು ?
ಉ: ರಾಜ ಮತ್ತು ಅವನ ಆಸ್ಥಾನದವರ ಮೂರ್ಖತನಕ್ಕೆ ರಾಣಿಯರು ನಗಲು ಕಾರಣ.
ಈ ಕೆಳಗಿನ ಪ್ರಶ್ನೆಗೆ ಐದು – ಆರು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in one sentence)
೧. ರಾಜನ ಒಡ್ಡೋಲಗ ನಡೆದ ಪ್ರಸಂಗವನ್ನು ವಿವರಿಸಿರಿ.
ಉ : ರಾಜನ ಒಡ್ಡೋಲಗ ನಡೆಯುತ್ತಿದ್ದಾಗ ಮಂತ್ರಿ ಗಟ್ಟಿಯಾಗಿ ಅಳುತ್ತಾ ಬಂದನು. ನಮಸ್ಕರಿಸಿ, ʼಮಹಾರಾಜರೇ ಗಂಧರ್ವ ಸೇನರು ತೀರಿಕೊಂಡರಂತೆʼ ಎಂದು ಹೇಳುತ್ತಾ ಮೂರ್ಛೆ ಹೋದನು. ರಾಜನು ಒಡ್ಡೋಲಗವನ್ನು ಅಲ್ಲಿಗೆ ಪರಿಸಮಾಪ್ತಿಗೊಳಿಸಿ ಕಣ್ಣೀರು ಸುರಿಸುತ್ತಾ ಗಂಧರ್ವಸೇನರ ಆತ್ಮಶಾಂತಿಗೆ ನಾಲ್ಕು ದಿನಗಳ ಕಾಲ ರಾಜ್ಯಾದ್ಯಂತ ಎಲ್ಲರೂ ಶೋಕಾಚರಣೆ ಮಾಡಬೇಕೆಂದು ಆಜ್ಞಾಪಿಸಿದನು. ಮಂತ್ರಿಯ ಆರೈಕೆಗೆ ವೈದ್ಯರನ್ನು ಕರೆಸಿ ಉಪಚರಿಸುವಂತೆ ರಾಜಭಟರಿಗೆ ತಿಳಿಸಿ ಅಂತಃಪುರಕ್ಕೆ ಬಂದನು.
೨. ಗಂಧರ್ವಸೇನ ಯಾರು ಎಂಬುದನ್ನು ತಿಳಿಯಲು ಮಂತ್ರಿಯ ಪ್ರಯತ್ನಗಳೇನು?
ಉ: ಮಂತ್ರಿಯು ಪಡೆಯ ಮುಖ್ಯಸ್ಥನನ್ನು ಗಂಧರ್ವಸೇನನ ಬಗ್ಗೆ ಕೇಳಿದನು. ಪಡೆಯ ಮುಖ್ಯಸ್ಥನು ತನ್ನ ಹೆಂಡತಿ ಗಂಧರ್ವಸೇನ ತೀರಿಕೊಂಡರೆಂದು ಅಳುತ್ತಿದ್ದಳು ಎಂದು ಹೇಳಿದನು. ಮಂತ್ರಿ ಮತ್ತು ಮುಖ್ಯಸ್ಥರು ಅವನ ಮನೆಗೆ ಹೋಗಿ ಅವನ ಹೆಂಡತಿಯನ್ನು ಕೇಳಿದರು. ಅದಕ್ಕೆ ಅವಳು ತಾನು ಬೆಳಿಗ್ಗೆ ಕೆರೆಗೆ ಸ್ನಾನಕ್ಕೆ ಹೋದಾಗ ಮಡಿವಾಳ್ತಿಯು ಗಂಧರ್ವಸೇನ ತೀರಿಕೊಂಡರೆಂದು ಅಳುತ್ತಿದ್ದನ್ನು ಹೇಳಿದಳು. ಮಂತ್ರಿ ಮತ್ತು ಮುಖ್ಯಸ್ಥರು ತಲೆ ಚಚ್ಚಿಕೊಂಡು ಮಡಿವಾಳ್ತಿಯ ಮನೆಗೆ ಹೋದರು. ಅಲ್ಲಿ ಮಡಿವಾಳ್ತಿಯು ಗಂಧರ್ವಸೇನ ತನ್ನ ಕತ್ತೆ, ಅದು ತೀರಿಕೊಂಡಿತು ಎಂದು ಅಳತೊಡಗಿದಳು.
ಉ. ಸಂದರ್ಭ ಸಹಿತ ವಿವರಿಸಿರಿ. (Explain the context in detail)
೧.“ ರಾಜ ಅಲ್ಲಿಯೂ ಕರುಳು ಕಿತ್ತು ಬರುವಂತೆ ಅಳತೊಡಗಿದ . ”
ಆಯ್ಕೆ : ಈ ವಾಕ್ಯವನ್ನು ‘ ಜಾನಪದ ಕಥೆ’ಯ ‘ಗಂಧರ್ವಸೇನ‘ ಎಂಬ ಕಥೆಯಿಂದ ಆರಿಸಲಾಗಿದೆ.
ಸಂದರ್ಭ : ಈ ವಾಕ್ಯವನ್ನು ಕಥೆಗಾರ ರಾಜನ ಬಗ್ಗೆ ಮಕ್ಕಳಿಗೆ ಹೇಳುತ್ತಿದ್ದಾರೆ.
ವಿವರಣೆ : ಗಂಧರ್ವಸೇನ ಸತ್ತನೆಂದು ಮಂತ್ರಿ ಅಳುತ್ತಾ ಮೂರ್ಛೆ ಹೋದನು. ರಾಜನು ಒಡ್ಡೋಲಗವನ್ನು ಪರಿಸಮಾಪ್ತಿಗೊಳಿಸಿ ರಾಣಿವಾಸದವರಿಗೆ ವಿಷಯ ತಿಳಿಸಿ, ಕರುಳು ಕಿತ್ತು ಬರುವಂತೆ ಅಳತೊಡಗಿದ.
೨.“ ಸ್ವಾಮಿ , ಅವರು ಯಾರು ? ಏನಾಗಿದ್ದರು ? ಎಂದು ನನಗೆ ತಿಳಿಯದು.”
ಆಯ್ಕೆ : ಈ ವಾಕ್ಯವನ್ನು ‘ ಜಾನಪದ ಕಥೆ’ಯ ‘ಗಂಧರ್ವಸೇನ‘ ಎಂಬ ಕಥೆಯಿಂದ ಆರಿಸಲಾಗಿದೆ.
ಸಂದರ್ಭ : ಈ ವಾಕ್ಯವನ್ನು ಪಡೆಯ ಮುಖ್ಯಸ್ಥ ಮಂತ್ರಿಗೆ ಗಂಧರ್ವಸೇನನ ಬಗ್ಗೆ ಕೇಳುತ್ತಾ ಹೇಳಿದನು.
ಸ್ವಾರಸ್ಯ : ಪಡೆಯ ಮುಖ್ಯಸ್ಥನ ಮೂರ್ಖತನ ಇಲ್ಲಿ ತಿಳಿದು ಬಂದಿದೆ.
೩. “ನಿನ್ನೆ ರಾತ್ರಿ ಕಣ್ಣು ಮುಚ್ಕೊಂಬಿಟ್ಟ.”
ಆಯ್ಕೆ : ಈ ವಾಕ್ಯವನ್ನು ‘ ಜಾನಪದ ಕಥೆ’ಯ ‘ಗಂಧರ್ವಸೇನ‘ ಎಂಬ ಕಥೆಯಿಂದ ಆರಿಸಲಾಗಿದೆ.
ಸಂದರ್ಭ : ಈ ವಾಕ್ಯವನ್ನು ಮಡಿವಾಳ್ತಿ ತನ್ನ ಕತ್ತೆ ಗಂಧರ್ವಸೇನ ಹಿಂದಿನ ರಾತ್ರಿ ತೀರಿಕೊಂಡ ಬಗ್ಗೆ ಮಂತ್ರಿ , ಪಡೆಯ ಮುಖ್ಯಸ್ಥ ಮತ್ತು ಆತನ ಹೆಂಡತಿಗೆ ಹೇಳಿದಳು.
ಸ್ವಾರಸ್ಯ: ಪ್ರಾಣಿಗಳ ಬಗ್ಗೆ ಇದ್ದ ಪ್ರೇಮ, ಪ್ರೀತಿ ಇಲ್ಲಿ ವ್ಯಕ್ತವಾಗಿದೆ.
೪. “ ಒಂದು ಕುರಿ ಹಳ್ಳಕ್ಕೆ ಬಿದ್ದರೆ ಎಲ್ಲಾ ಬಿದ್ದವು .”
ಆಯ್ಕೆ : ಈ ವಾಕ್ಯವನ್ನು ‘ ಜಾನಪದ ಕಥೆ’ಯ ‘ಗಂಧರ್ವಸೇನ‘ ಎಂಬ ಕಥೆಯಿಂದ ಆರಿಸಲಾಗಿದೆ.
ಸಂದರ್ಭ : ಈ ವಾಕ್ಯವನ್ನು ಕಥೆಗಾರರು ರಾಜ ಮತ್ತು ಆತನ ಆಸ್ಥಾನದವರ ಮೂರ್ಖತನದ ಬಗ್ಗೆ ಬರೆದಿದ್ದಾರೆ,
ಸ್ವಾರಸ್ಯ : ಕುರಿಗಳು ಯಾವಾಗಲೂ ತಲೆ ಬಗ್ಗಿಸಿ ತನ್ನ ಮುಂದೆ ಇರುವ ಕುರಿಯನ್ನು ಹಿಂಬಾಲಿಸುತ್ತವೆ. ಇದು ಮೂರ್ಖತನಕ್ಕೆ ಉದಾಹರಣೆಯಾಗಿದೆ . ಈ ಗಾದೆಯನ್ನು ಇಲ್ಲಿ ವಿವರಿಸಲಾಗಿದೆ .
ಊ . ಕೆಳಗಿನವುಗಳನ್ನು ನುಡಿಗಟ್ಟು , ಗಾದೆ , ಒಗಟುಗಳಾಗಿ ವಿಂಗಡಿಸಿ ಬರೆಯಿರಿ. (Write all these under nudigattu, gade and ogatu)
ನುಡಿಗಟ್ಟು:
ಮೂಗು ತೂರಿಸು
ಕಾಲಿಗೆ ಬುದ್ಧಿಹೇಳು
ಬೆನ್ನಿಗೆ ಚೂರಿ ಹಾಕು
ತಲೆ ಹಾಕು
ಕರುಳು ಹಿಂಡು
ಮಂಕು ಬೂದಿ ,
ಗಾದೆ:
ಕೇಳಿದ ಕಿವಿ ಊರಿಗೆ ಮಾರಿ ತಂದಿತು
ಒಂದು ಕುರಿ ಹಳ್ಳಕ್ಕೆ ಬಿದ್ದರೆ ಎಲ್ಲಾ ಬಿದ್ದವು
ಮುಚ್ಚಿಟ್ಟದ್ದು ಮಣ್ಣಿನ ಪಾಲು
ಒಗಟು:
ದಾಸ್ ಬುರುಡೆ ದೌಲತ್ ಬುರುಡೆ ಲೋಕಕ್ಕೆಲ್ಲ ಎರಡೆ ಬುರುಡೆ
ಚಿನ್ನದ ಪೆಟ್ಟಿಗೆಯಲ್ಲಿ ಬೆಳ್ಳಿ ಲಿಂಗ
ಚಿಕ್ಕ ತೋಟ ಚೂರು ಕಸ ಬಿದ್ದರೆ ಹಾಳು