Gauravisu Jeevanava kannada poem written by DVG. Gauravisu Jeevanava 8th standard tili kannada poem.
We should respect our life and respect the spirit that is the source of this life. We should try to find prosperity in life by abandoning the feeling that this is someone else’s world, that I will not be here forever. Our body, mind and spirit should be pure. Then every work we do will be pure. That will lead to self-improvement.
There are many reasons in every object we see. We cannot find the reasons. That Supreme Soul creates everything for His own pleasure and enjoys it. Therefore, we should let go of the ego in us and learn to enjoy it.
D V Gundappa has expressed the ideas here that in every situation of life, we should cultivate humility and openness of heart and experience the bliss of Brahman.
ಗೌರವಿಸು ಜೀವನವ
ನಮ್ಮ ಜೀವನವನ್ನು ಗೌರವಿಸಬೇಕು. ಈ ಜೀವಕ್ಕೆ ಮೂಲವಾದ ಚೇತನವನ್ನು ಗೌರವಿಸಬೇಕು. ಇದು ಯಾರದೋ ಜಗತ್ತು, ನಾನೇನು ಇಲ್ಲಿ ಶಾಶ್ವತವಾಗಿರುವುದಿಲ್ಲ ಎನ್ನುವ ಭಾವವನ್ನು ತೊರೆದು ಬದುಕಿನಲ್ಲಿ ಸಮೃದ್ಧಿಯನ್ನು ಕಾಣಲು ಪ್ರಯತ್ನಿಸಬೇಕು. ನಮ್ಮ ದೇಹ ಮನಸ್ಸು ಮತ್ತು ಚೇತನ ಶುದ್ಧವಾಗಿರಬೇಕು. ಆಗ ನಾವು ಮಾಡುವ ಪ್ರತಿ ಕೆಲಸಗಳು ಶುದ್ಧವಾಗಿರುತ್ತವೆ. ಅದು ಆತ್ಮೋನ್ನತಿಗೆ ದಾರಿಯಾಗುತ್ತದೆ.
ನಾವು ನೋಡುವ ಪ್ರತಿ ವಸ್ತುವಿನಲ್ಲೂ ಹಲವು ಸೋಜಿಗಗಳಿವೆ. ಕಾರಣಗಳನ್ನು ಹುಡುಕಲು ನಮ್ಮಿಂದ ಸಾಧ್ಯವಿಲ್ಲ. ಆ ಪರಮಾತ್ಮ ತನಿಚ್ಛೆಯಂತೆ ತನ್ನ ಸಂತೋಷಕ್ಕೆ ಎಲ್ಲವನ್ನು ಸೃಷ್ಟಿಸಿ ಆನಂದ ಪಡುತ್ತಾನೆ. ಹೀಗಾಗಿ ನಮ್ಮಲ್ಲಿರುವ ಅಹಂಕಾರವನ್ನು ಬಿಟ್ಟು ಆನಂದ ಪಡುವುದನ್ನು ಕಲಿಯಬೇಕು.
ಬದುಕಿನ ಪ್ರತಿ ಸಂದರ್ಭದಲ್ಲೂ ತನ್ಮಯತೆಯನ್ನು ಹೃದಯ ವೈಶಾಲ್ಯತೆಯನ್ನು ರೂಢಿಸಿಕೊಂಡು ಬ್ರಹ್ಮಾನಂದವನ್ನು ಅನುಭವಿಸಬೇಕು ಎನ್ನುವ ವಿಚಾರಗಳನ್ನು ಡಿವಿಜಿ ಅವರು ಇಲ್ಲಿ ವ್ಯಕ್ತಪಡಿಸಿದ್ದಾರೆ.
ಗೌರವಿಸು ಜೀವನವ ಗೌರವಿಸು ಚೇತನವ
ಆರದು ಜಗವೆಂದು ಭೇದವೆಣಿಸದಿರು
ಹೋರುವದೇ ಜೀವನ ಸಮೃದ್ಧಿಗೋಸುಗ
ನಿನಗೆ ದಾರಿಯಾತ್ಮೋನ್ನತಿಗೆ – ಮಂಕುತಿಮ್ಮ
ತೃಣಕೆ ಹೆಸರೆಲ್ಲಿಯದು? ಬೇರಿನದೇ? ಮಣ್ಣಿನದೇ?
ದಿನಪನದೆ? ಚಂದ್ರನದೇ? ನೀರಿನದೇ?
ನಿನದೇ ತಣಿ ತಣಿವ ನಿನ್ನ ಕಣ್ಣಿನ ಪುಣ್ಯವೋ? ನೋಡು
ಗುಣಕೆ ಕಾರಣವೊಂದೇ – ಮಂಕುತಿಮ್ಮ
ಒಮ್ಮೆ ಹೂದೋಟದಲಿ ಒಮ್ಮೆ ಕೆಳಕೂಟದಲಿ
ಒಮ್ಮೆ ಸಂಗೀತದಲಿ ಒಮ್ಮೆ ಶಾಸ್ತ್ರದಲಿ
ಒಮ್ಮೆ ಸಂಸಾರದಲ್ಲಿ ಮತ್ತೊಮ್ಮೆ ಮೌನದಲ್ಲಿ
ಬ್ರಹ್ಮಾನುಭವಿಯಾಗೋ – ಮಂಕುತಿಮ್ಮ
ವಿಸ್ತಾರದಲ್ಲಿ ಬಾಳು ವೈಶಾಲ್ಯದಿಂ ಬಾಳು
ಕತ್ತಲೆಯ ಮೊಡಕು ಮೂಲೆಗಳ ಸೇರದಿರು
ಭಾಸ್ಕರನ ಅನುಗ್ರಹವೇ ನೂತ್ನ ಜೀವನ ಸತ್ವ
ಮೃತ್ಯು ನಿನಗಲ್ಪತೆಯು – ಮಂಕುತಿಮ್ಮ
I ಪದಗಳ ಅರ್ಥ
ಅನುಗ್ರಹ = ಕ್ರಪೆ, ಆಶೀರ್ವಾದ, ದಯೆ
ಆತ್ಮೋನ್ನತಿ = ಆಧ್ಯಾತ್ಮ ಸಾಧನೆಯಿಂದ ಉನ್ನತಿಗೇರುವುದು
ಕೂಟ = ಸಂಗ, ಗುಂಪು
ಜೀವನ = ಬದುಕು
ತೃಣ = ಹುಲ್ಲು, ಗರಿಕೆ
ನೂತ್ನ= ನೂತನ, ಹೊಸ
ಬ್ರಹ್ಮಾನುಭವಿ = ಅನುಭವದಿಂದ ಸಿದ್ದಿ ಪಡೆದವರು
ವಿಸ್ತಾರ = ಹರವು, ವಿಶಾಲತೆ
ಸತ್ವ = ಸಾರ, ಬಲ, ಇರುವಿಕೆ
ಅಲ್ಪ = ಕಡಿಮೆ
ಕೆಳೆ = ಸ್ನೇಹ, ಗೆಳೆತನ
ಚೇತನ = ಮನಸ್ಸು, ಶಕ್ತಿ, ಆತ್ಮ
ತಣಿ = ತಂಪಾಗು, ತೃಪ್ತಿಹೊಂದು
ದಿನಪ = ಸೂರ್ಯ, ರವಿ, ಆದಿತ್ಯ
ಪುಣ್ಯ = ಭಾಗ್ಯ, ಅದೃಷ್ಟ
ಭೇದ = ಒಡಕು, ಬಿರುಕು, ಭಿನ್ನತೆ
ಮೃತ್ಯು = ಸಾವು, ಮರಣ
ಸಮೃದ್ಧಿ = ಐಶ್ವರ್ಯ, ಪ್ರಗತಿ
ಆ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)
೧. ಕಣ್ಣಿನ ಪುಣ್ಯ ಯಾವುದು?
ಉ: ಹಸಿರು ಹುಲ್ಲನ್ನು ನೋಡುವುದು ಕಣ್ಣಿನ ಪುಣ್ಯ.
೨. ಡಿ ವಿ ಜಿಯವರು ಮಾನವ ಹೇಗೆ ಬಾಳಬೇಕು ಎಂದಿದ್ದಾರೆ?
ಉ: ಡಿ ವಿ ಜಿಯವರು ಮಾನವ ವಿಸ್ತಾರದಿಂದ ಹಾಗೂ ವೈಶಾಲ್ಯದಿಂದ ಬಾಳಬೇಕು ಎಂದಿದ್ದಾರೆ.
೩. ಡಿ ವಿ ಜಿಯವರು ಯಾವುದನ್ನು ಗೌರವಿಸಬೇಕು ಎಂದಿದ್ದಾರೆ?
ಉ: ಡಿ ವಿ ಜಿಯವರು ಜೀವನವನ್ನು ಗೌರವಿಸಬೇಕು ಎಂದಿದ್ದಾರೆ.
೪. ಆತ್ಮೋನತಿಗೆ ದಾರಿ ಯಾವುದೆಂದು ಡಿ ವಿ ಜಿಯವರು ಹೇಳಿದ್ದಾರೆ?
ಉ: ಯಾರದೋ ಜಗತ್ತು ಎಂದು ಭೇದ ಎಣಿಸದೇ ಬದುಕುವುದು
ಆತ್ಮೋನತಿಗೆ ದಾರಿ ಎಂದು ಡಿ ವಿ ಜಿಯವರು ಹೇಳಿದ್ದಾರೆ.
೫. ʼಗೌರವಿಸು ಜೀವನದʼ ಕಾವ್ಯ ಭಾಗದ ಮೂಲ ಕೃತಿ ಯಾವುದು?
ಉ: ʼಗೌರವಿಸು ಜೀವನದʼ ಕಾವ್ಯ ಭಾಗದ ಮೂಲ ಕೃತಿ ʼಮಂಕುತಿಮ್ಮನ ಕಗ್ಗʼ
ಆ) ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in two – three sentences)
೧) ತೃಣದ ಹಸಿರಿಗೆ ಕಾರಣವಾದ ಅಂಶಗಳಾವುವು?
ಉ: ತೃಣದ ಹಸಿರಿಗೆ ಕಾರಣವಾದ ಅಂಶಗಳು ಬೇರು, ಮಣ್ಣು, ಸೂರ್ಯ, ಚಂದ್ರ ಮತ್ತು ನೀರು. ಅದನ್ನು ಕಾಣುವ ನಮ್ಮ ಕಣ್ಗಳದ್ದೇ ಪುಣ್ಯ.
೨) ಡಿವಿಜಿ ಅವರು ಜೀವನ ಯಾವಾಗ ಸಮೃದ್ಧವಾಗುತ್ತದೆ ಎಂದಿದ್ದಾರೆ?
ಉ: ಈ ಜಗತ್ತು ನನ್ನದಲ್ಲ ಎಂಬ ಭೇದವನ್ನು ತೊರೆದು ಬದುಕಬೇಕು ಈ ಜೀವನಕ್ಕೆ ಕಾರಣವಾದ ಚೇತನವನ್ನು ಗೌರವಿಸಿದಾಗ ಜೀವನ ಸಮೃದ್ಧವಾಗುತ್ತದೆ ಎಂದು ಡಿವಿಜಿ ಹೇಳಿದ್ದಾರೆ.
೩) ಬ್ರಹ್ಮಾನುಭವ ಪಡೆಯುವುದು ಹೇಗೆ?
ಉ: ಒಮ್ಮೆ ಹೂದೋಟದಲ್ಲಿ, ಒಮ್ಮೆ ಗೆಳೆಯರ ಕೂಟದಲ್ಲಿ, ಒಮ್ಮೆ ಸಂಗೀತದಲ್ಲಿ, ಒಮ್ಮೆ ಶಾಸ್ತ್ರದಲ್ಲಿ, ಒಮ್ಮೆ ಸಂಸಾರದಲ್ಲಿ, ಮತ್ತೊಮ್ಮೆ ಮೌನದಲ್ಲಿ ಬ್ರಹ್ಮಾನಂದವನ್ನು ಪಡೆಯಬಹುದು.
೪) ಜೀವನ ಮತ್ತು ಚೇತನವನ್ನು ಏಕೆ ಗೌರವಿಸಬೇಕು?
ಉ: ಜಗತ್ತಿನಲ್ಲಿ ಭೇದವಿಲ್ಲದೆ ಶುದ್ಧತೆಯಿಂದ ಸಾಗಿದರೆ ಜೀವನ ಆತ್ಮೋನ್ನತಿಗೆ ಕಾರಣವಾಗುತ್ತದೆ. ಆದ್ದರಿಂದ ಜೀವನವನ್ನು ಅದರ ಚೇತನವನ್ನು ಗೌರವಿಸಬೇಕು.
೫) ಮೃತ್ಯು ಯಾವಾಗ ಅಲ್ಪವಾಗಿ ತೋರುತ್ತದೆ?
ಉ: ವಿಸ್ತಾರದಲ್ಲಿ ವೈಶಾಲ್ಯದಿಂದ ಬಾಳಿದಾಗ, ಕತ್ತಲೆ ಎಂಬ ಮೂಲೆಯನ್ನು ಸೇರದೆ ಸೂರ್ಯನ ಅನುಗ್ರಹದಿಂದ ನಿತ್ಯ ನೂತನವಾದ ಜೀವನವನ್ನು ಅನುಭವಿಸಿದಾಗ ಮೃತ್ಯು ಅಲ್ಪವಾಗುತ್ತದೆ.
ಇ) ಕೆಳಗಿನ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in eight – ten sentences)
೧) ಗೌರವಿಸು ಜೀವನವ ಪದ್ಯದಲ್ಲಿ ಅಂತರ್ಗತವಾಗಿರುವ ಕವಿಯ ಭಾವನೆಗಳನ್ನು ವಿವರಿಸಿ.
ಉ: ಈ ಜಗತ್ತು ನನ್ನದಲ್ಲ ಎಂಬ ಭೇದವನ್ನು ತೊರೆದು ಬದುಕಬೇಕು ಈ ಜೀವನಕ್ಕೆ ಕಾರಣವಾದ ಚೇತನವನ್ನು ಗೌರವಿಸಿದಾಗ ಜೀವನ ಸಮೃದ್ಧವಾಗುತ್ತದೆ. ಜಗತ್ತಿನಲ್ಲಿ ಭೇದವಿಲ್ಲದೆ ಶುದ್ಧತೆಯಿಂದ ಸಾಗಿದರೆ ಜೀವನ ಆತ್ಮೋನ್ನತಿಗೆ ಕಾರಣವಾಗುತ್ತದೆ.
ವಿಸ್ತಾರದಲ್ಲಿ ವೈಶಾಲ್ಯದಿಂದ ಬಾಳಿದಾಗ, ಕತ್ತಲೆ ಎಂಬ ಮೂಲೆಯನ್ನು ಸೇರದೆ ಸೂರ್ಯನ ಅನುಗ್ರಹದಿಂದ ನಿತ್ಯ ನೂತನವಾದ ಜೀವನವನ್ನು ಅನುಭವಿಸಿದಾಗ ಮೃತ್ಯು ಅಲ್ಪವಾಗುತ್ತದೆ.
ತೃಣದ ಹಸಿರಿಗೆ ಕಾರಣವಾದ ಅಂಶಗಳು ಬೇರು, ಮಣ್ಣು, ಸೂರ್ಯ, ಚಂದ್ರ ಮತ್ತು ನೀರು. ಅದನ್ನು ಕಾಣುವ ನಮ್ಮ ಕಣ್ಗಳದ್ದೇ ಪುಣ್ಯ.
ಒಮ್ಮೆ ಹೂದೋಟದಲ್ಲಿ, ಒಮ್ಮೆ ಗೆಳೆಯರ ಕೂಟದಲ್ಲಿ, ಒಮ್ಮೆ ಸಂಗೀತದಲ್ಲಿ, ಒಮ್ಮೆ ಶಾಸ್ತ್ರದಲ್ಲಿ, ಒಮ್ಮೆ ಸಂಸಾರದಲ್ಲಿ, ಮತ್ತೊಮ್ಮೆ ಮೌನದಲ್ಲಿ ಬ್ರಹ್ಮಾನಂದವನ್ನು ಪಡೆಯಬೇಕು. ಬದುಕಿನ ಪ್ರತಿ ಸಂದರ್ಭವನ್ನು ತನ್ಮಯತೆಯಿಂದ ಅನುಭವಿಸಬೇಕು.
ಇವು ಗೌರವಿಸು ಜೀವನವ ಪದ್ಯದಲ್ಲಿ ಅಂತರ್ಗತವಾಗಿರುವ ಕವಿಯ ಭಾವನೆಗಳು.
ಈ) ಸಂದರ್ಭದಲ್ಲಿ ವಿವರಿಸಿರಿ. (Explain the context in detail)
೧) “ಗುಣಕ್ಕೆ ಕಾರಣ ಒಂದೇ”
ಉ: ಈ ವಾಕ್ಯವನ್ನು ಡಿವಿಜಿ ಅವರು ಬರೆದಿರುವ “ಮಂಕುತಿಮ್ಮನ ಕಗ್ಗ” ಕೃತಿಯ “ಗೌರವಿಸು ಜೀವನವ” ಎಂಬ ಪದ್ಯದಿಂದ ಆರಿಸಿಕೊಳ್ಳಲಾಗಿದೆ. ಈ ಮಾತನ್ನು ಕವಿ ಹೇಳುತ್ತಾರೆ.
ಜಗತ್ತಿನಲ್ಲಿರುವ ಹಲವು ಸೋಜಿಗಗಳ ಗುಣಕ್ಕೆ ಕಾರಣಗಳನ್ನು ಹುಡುಕಲಾಗುವುದಿಲ್ಲ. ತೃಣದ ಹಸಿರಿಗೆ ಕಾರಣವಾದ ಅಂಶಗಳು ಬೇರು, ಮಣ್ಣು, ಸೂರ್ಯ, ಚಂದ್ರ ಮತ್ತು ನೀರು. ಅದನ್ನು ಕಾಣುವ ನಮ್ಮ ಕಣ್ಗಳ ಪುಣ್ಯದಿಂದಲೇ ಕಾರಣವೊಂದೇ ಹಲವಾರು ಎನ್ನುತ್ತಾರೆ.
೨) “ಆರದೋ ಜಗವೆಂದು ಭೇದವೆಣಿಸದಿರು”
ಉ: ಈ ವಾಕ್ಯವನ್ನು ಡಿವಿಜಿ ಅವರು ಬರೆದಿರುವ “ಮಂಕುತಿಮ್ಮನ ಕಗ್ಗ” ಕೃತಿಯ “ಗೌರವಿಸು ಜೀವನವ” ಎಂಬ ಪದ್ಯದಿಂದ ಆರಿಸಿಕೊಳ್ಳಲಾಗಿದೆ. ಈ ಮಾತನ್ನು ಕವಿ ಹೇಳುತ್ತಾರೆ.
ಜಗತ್ತಿನಲ್ಲಿ ಭೇದವಿಲ್ಲದೆ ಶುದ್ಧತೆಯಿಂದ ಸಾಗಿದರೆ ಜೀವನ ಆತ್ಮೋನ್ನತಿಗೆ ಕಾರಣವಾಗುತ್ತದೆ. ಆದ್ದರಿಂದ ಜೀವನವನ್ನು ಅದರ ಚೇತನವನ್ನು ಗೌರವಿಸಬೇಕು ಎಂದು ಹೇಳಿದ್ದಾರೆ.
೩) “ಬ್ರಹ್ಮಾನುಭವಿಯಾಗು”
ಉ: ಈ ವಾಕ್ಯವನ್ನು ಡಿವಿಜಿ ಅವರು ಬರೆದಿರುವ “ಮಂಕುತಿಮ್ಮನ ಕಗ್ಗ” ಕೃತಿಯ “ಗೌರವಿಸು ಜೀವನವ” ಎಂಬ ಪದ್ಯದಿಂದ ಆರಿಸಿಕೊಳ್ಳಲಾಗಿದೆ. ಈ ಮಾತನ್ನು ಕವಿ ಹೇಳುತ್ತಾರೆ.
ಒಮ್ಮೆ ಹೂದೋಟದಲ್ಲಿ, ಒಮ್ಮೆ ಗೆಳೆಯರ ಕೂಟದಲ್ಲಿ, ಒಮ್ಮೆ ಸಂಗೀತದಲ್ಲಿ, ಒಮ್ಮೆ ಶಾಸ್ತ್ರದಲ್ಲಿ, ಒಮ್ಮೆ ಸಂಸಾರದಲ್ಲಿ, ಮತ್ತೊಮ್ಮೆ ಮೌನದಲ್ಲಿ ಬ್ರಹ್ಮಾನಂದವನ್ನು ಪಡೆಯಬೇಕು ಎಂದು ಹೇಳಿದ್ದಾರೆ.
೪) “ವಿಸ್ತಾರದಲ್ಲಿ ಬಾಳು ವೈಶಾಲ್ಯದಿಂ ಬಾಳು”
ಉ: ಈ ವಾಕ್ಯವನ್ನು ಡಿವಿಜಿ ಅವರು ಬರೆದಿರುವ “ಮಂಕುತಿಮ್ಮನ ಕಗ್ಗ” ಕೃತಿಯ “ಗೌರವಿಸು ಜೀವನವ” ಎಂಬ ಪದ್ಯದಿಂದ ಆರಿಸಿಕೊಳ್ಳಲಾಗಿದೆ. ಈ ಮಾತನ್ನು ಕವಿ ಹೇಳುತ್ತಾರೆ.
ವಿಸ್ತಾರದಲ್ಲಿ ವೈಶಾಲ್ಯದಿಂದ ಬಾಳಿದಾಗ, ಕತ್ತಲೆ ಎಂಬ ಮೂಲೆಯನ್ನು ಸೇರದೆ ಸೂರ್ಯನ ಅನುಗ್ರಹದಿಂದ ನಿತ್ಯ ನೂತನವಾದ ಜೀವನವನ್ನು ಅನುಭವಿಸಿದಾಗ ಮೃತ್ಯು ಅಲ್ಪವಾಗುತ್ತದೆ ಎಂದು ಕವಿ ಹೇಳಿದ್ದಾರೆ.
III ಭಾಷಾಭ್ಯಾಸ
ಅ) ಕೆಳಗಿನ ಪದಗಳಲ್ಲಿ ಗುಂಪಿಗೆ ಸೇರದಿರುವ ಪದವನ್ನು ಆಯ್ದು ಬರೆಯಿರಿ. (Choose and write the word that does not belong to the group from the following words)
೧. ಸೂರ್ಯ, ಚಂದ್ರ, ಭಾಸ್ಕರ, ದಿನಪ
೨. ಕಣ್ಣು, ನೇತ್ರ, ನಯನ, ತ್ರಣ
೩. ಸಾವು, ಮೃತ್ಯು, ಹುಟ್ಟು, ನಿಧನ
೪. ಗೆಳೆತನ, ಶತ್ರು, ಸ್ನೇಹ, ಕೆಳೆ
ಆ) ಕೆಳಗೆ ನೀಡಿರುವ ಅ ಪಟ್ಟಿಯೊಂದಿಗೆ ಬಹು ಪಟ್ಟಿಯನ್ನು ಹೊಂದಿಸಿ ಬರೆಯಿರಿ. (Match the following)
ಅ ಬ
೧) ಗೌರವಿಸು ಅ) ಸಮೃದ್ಧಿ ಜೀವನವ
೨) ವಿಸ್ತಾರದಲ್ಲಿ ಬ) ಅನುಗ್ರಹ ಬಾಳು
೩) ಮೂಲೆಗಳ ಕ) ಬಾಳು ಸೇರದಿರು
೪) ಭಾಸ್ಕರನ ಡ) ಜೀವನವ ಅನುಗ್ರಹ
ಇ) ಸೇರದಿರು
ಇ) ಕೆಳಗೆ ನೀಡಿರುವ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ. (Make your own sentences)
ಚೇತನ = ಜೀವನದಲ್ಲಿ ಚೇತನವು ಇರಬೇಕು.
ಅನುಗ್ರಹ = ದೇವರ ಅನುಗ್ರಹವು ಎಲ್ಲರ ಮೇಲೂ ಇರುತ್ತದೆ.
ಗೌರವಿಸು = ನಾವು ಎಲ್ಲರನ್ನೂ ಗೌರವಿಸಬೇಕು.
ಮೌನ = ಮಾತು ಬೆಳ್ಳಿ ಮೌನ ಬಂಗಾರ.
ಸಮೃದ್ಧಿ = ಒಳ್ಳೆಯ ಮನಸಿದ್ದರೆ ಜೀವನ ಸಮೃದ್ಧಿ ಆಗಿರುತ್ತದೆ.
ಗುಣ = ನಮ್ಮಲ್ಲಿ ಒಳ್ಳೆಯ ಗುಣಗಳು ಇರಬೇಕು.
ಈ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಬರೆಯಿರಿ. (Write the opposite words)
ಪುಣ್ಯ X ಪಾಪ ಗೌರವ X ಅಗೌರವ ವಿವೇಕ X ಅವಿವೇಕ
ಸಮ X ಅಸಮ ಮೃತ್ಯು X ಜನನ ಭೇದ X ಅಭೇದ
ಚೇತನ X ಜಡ
ಉ) ಕೆಳಗಿನ ಪದಗಳನ್ನು ಬಿಡಿಸಿ ಸಂಧಿ ಹೆಸರಿಸಿರಿ. (Unscramble the following words and name the Sandhi)
ಹೆಸರೆಲ್ಲಿ= ಹೆಸರು + ಎಲ್ಲಿ = ಲೋಪಸಂಧಿ
ಕಾರಣವೊಂದೇ = ಕಾರಣ + ಒಂದೇ = ಆಗಮಸಂಧಿ
ಭೇದವೆಣಿಸು = ಭೇದ + ಎಣಿಸು = ಆಗಮಸಂಧಿ
ಆತ್ಮೋನ್ನತಿ = ಆತ್ಮ + ಉನ್ನತಿ = ಗುಣಸಂಧಿ
ಹೂದೋಟ = ಹೂ + ತೋಟ = ಆದೇಶಸಂಧಿ
ಬ್ರಹ್ಮಾನುಭವಿ = ಬ್ರಹ್ಮ + ಅನುಭವಿ = ಸವರ್ಣದೀರ್ಘ ಸಂಧಿ
ಭಾಸ್ಕರನನುಗ್ರಹ = ಭಾಸ್ಕರನ + ಅನುಗ್ರಹ = ಲೋಪಸಂಧಿ