Ghandarvasena kannada notes is about the story of a donkey. The obedient donkey, Ghandarvasena of laundry lady dies and the story is surrounded by it.
ಗಂಧರ್ವಸೇನ
ಅ. ಸರಿಯಾದ ಪದಗಳನ್ನು ಬಿಟ್ಟ ಸ್ಥಳ ತುಂಬಿರಿ. (Fill in the blanks)
೧. ರಾಜನು …………….. ವನ್ನು ಅಲ್ಲಿಗೇ ಪರಿಸಮಾಪ್ತಿಗೊಳಿಸಿದ.
೨. ಸೇವಕಿ ………………… ಬುದ್ಧಿಯವಳು.
೩. ಮಂತ್ರಿ ಅರಮನೆಗೆ ಬಂದು ರಾಜನ ಕಾಲಿಗೆ ಬಿದ್ದು ……………… ಹೇಳಿದ.
೪. ರಾಜನಿಗೆ ಗಂಧರ್ವಸೇನ ತೀರಿದ ವಿಷಯ ತಿಳಿಸಿದ್ದು …………….
೫. ಅಂತಃಪುರ ಇದರ ಅರ್ಥ …………………..
ಆ . ಈ ಪದಗಳ ಅರ್ಥ ಬರೆಯಿರಿ. (Word Meaning)
ನಿಟ್ಟುಸಿರು, ಪರಿಸಮಾಪ್ತಿ, ಮಾರ್ನುಡಿ, ಉದ್ಗರಿಸು
ಇ . ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ. (Answer the following in one sentence)
೧. ರಾಣಿಯರು ನಗಲು ಕಾರಣವೇನು?
೨. ರಾಣಿಯ ಸೇವಕಿ ಏನೆಂದು ಆಲೋಚನೆ ಮಾಡಿದಳು?
೩. ಗಂಧರ್ವಸೇನ ತೀರಿಕೊಂಡ ವಿಷಯವನ್ನು ರಾಜ ಯಾರಿಗೆ ಹೇಳಿದ?
೪. ಮಂತ್ರಿ ಅಳುತ್ತಾ ರಾಜನ ಬಳಿ ಏನೆಂದು ಹೇಳಿದ ?
೫. ಗಂಧರ್ವಸೇನ ಯಾರು?
ಈ) ಕೆಳಗಿನ ಪ್ರಶ್ನೆಗೆ ಐದು – ಆರು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in one sentence)
೧. ರಾಜನ ಒಡ್ಡೋಲಗ ನಡೆದ ಪ್ರಸಂಗವನ್ನು ವಿವರಿಸಿರಿ.
೨. ಗಂಧರ್ವಸೇನ ಯಾರು ಎಂಬುದನ್ನು ತಿಳಿಯಲು ಮಂತ್ರಿಯ ಪ್ರಯತ್ನಗಳೇನು?
ಉ. ಸಂದರ್ಭ ಸಹಿತ ವಿವರಿಸಿರಿ. (Explain the context in detail)
೧ “ನಿನ್ನೆ ರಾತ್ರಿ ಕಣ್ಣು ಮುಚ್ಕೊಂಬಿಟ್ಟ.”
೨.“ ಸ್ವಾಮಿ , ಅವರು ಯಾರು ? ಏನಾಗಿದ್ದರು ? ಎಂದು ನನಗೆ ತಿಳಿಯದು.”
೩. .“ ರಾಜ ಅಲ್ಲಿಯೂ ಕರುಳು ಕಿತ್ತು ಬರುವಂತೆ ಅಳತೊಡಗಿದ . ”
೪. “ ಒಂದು ಕುರಿ ಹಳ್ಳಕ್ಕೆ ಬಿದ್ದರೆ ಎಲ್ಲಾ ಬಿದ್ದವು .”
ಊ . ಕೆಳಗಿನವುಗಳನ್ನು ನುಡಿಗಟ್ಟು , ಗಾದೆ , ಒಗಟುಗಳಾಗಿ ವಿಂಗಡಿಸಿ ಬರೆಯಿರಿ. (Write all these under nudigattu, gade and ogatu)
ಮೂಗು ತೂರಿಸು, ಕಾಲಿಗೆ ಬುದ್ಧಿಹೇಳು, ಬೆನ್ನಿಗೆ ಚೂರಿ ಹಾಕು, ತಲೆ ಹಾಕು, ಕರುಳು ಹಿಂಡು, ಮುಚ್ಚಿಟ್ಟದ್ದು ಮಣ್ಣಿನ ಪಾಲು, ದಾಸ್ ಬುರುಡೆ ದೌಲತ್ ಬುರುಡೆ ಲೋಕಕ್ಕೆಲ್ಲ ಎರಡೆ ಬುರುಡೆ, ಚಿನ್ನದ ಪೆಟ್ಟಿಗೆಯಲ್ಲಿ ಬೆಳ್ಳಿ ಲಿಂಗ, ಚಿಕ್ಕ ತೋಟ ಚೂರು ಕಸ ಬಿದ್ದರೆ ಹಾಳು, ಮಂಕು ಬೂದಿ, ಕೇಳಿದ ಕಿವಿ ಊರಿಗೆ ಮಾರಿ ತಂದಿತು, ಒಂದು ಕುರಿ ಹಳ್ಳಕ್ಕೆ ಬಿದ್ದರೆ ಎಲ್ಲಾ ಬಿದ್ದವು