Granthalayagala mahatva athava sadbalake means importance of libraries (or) Good use of Libraries. Granthalayagala mahatva athava sadbalake Kannada essay explains the importance of the library. As the proverb goes, “A room without books is like a body without a soul”, everyone should have books and keep their soul in themselves. In today’s era, libraries are very important for the growth of knowledge and the proper use of precious time. A library is a temple where books are necessary for the acquisition of knowledge. For this, there are libraries in schools.
Books play an important role in human life. Just as food, water and air are important for the human body, books are necessary for the development of the human mind. Books are like close friends. They always pave the way for good thoughts. Libraries have been opened both in public and in schools and colleges for the development of knowledge. Here, books on every subject, i.e. literature, history, mythology, science and technology, children’s literature, etc. are kept. There are books in many languages. Libraries are like a treasure trove of knowledge. Libraries are the steps to the acquisition of knowledge. A house without books, a school and college without a library, is like a temple without God. Therefore, libraries have been opened in our schools and colleges from the beginning so that they should be like libraries. Those who have a passion for reading can use the e-library on the internet.
Overall, school and college libraries and public libraries provide information necessary for our knowledge development and help us become knowledgeable. By studying true scriptures as we do in the company of good people, we can swim to the shore of the ocean of knowledge.
“Good books are like the company of good people”
Sumana Sriram
ಗ್ರಂಥಾಲಯಗಳ ಮಹತ್ವ (ಅಥವಾ) ಗ್ರಂಥಾಲಯಗಳ ಸದ್ಬಳಕೆ
ಪೀಠಿಕೆ
“ಗ್ರಂಥಗಳಿಲ್ಲದ ಕೋಣೆ ಆತ್ಮವಿಲ್ಲದ ದೇಹವಿದ್ದಂತೆ” ಎಂಬ ನಾಣ್ಣುಡಿಯಂತೆ ಪ್ರತಿಯೊಬ್ಬರೂ ಗ್ರಂಥಗಳನ್ನು ಹೊಂದಿ ತಮ್ಮಲ್ಲಿ ಆತ್ಮವನ್ನು ಇಟ್ಟುಕೊಳ್ಳಬೇಕು. ಇಂದಿನ ಯುಗದಲ್ಲಿ ಜ್ಞಾನವೃದ್ಧಿಗೆ ಮತ್ತು ಅಮೂಲ್ಯವಾದ ಸಮಯದ ಸದುಪಯೋಗಕ್ಕೆ ಗ್ರಂಥಾಲಯಗಳು ಬಹು ಮುಖ್ಯವೆನಿಸುತ್ತದೆ. ಜ್ಞಾನಾರ್ಜನೆಗೆ ಅಗತ್ಯವಾದ ಗ್ರಂಥಗಳಿರುವ ಆಲಯವೇ ಗ್ರಂಥಾಲಯ. ಅದಕ್ಕೆ ಶಾಲೆಗಳಲ್ಲಿ ಗ್ರಂಥಾಲಯಗಳಿರುತ್ತವೆ.
ವಿಷಯ ನಿರೂಪಣೆ:
ಮಾನವನ ಜೀವನದಲ್ಲಿ ಪುಸ್ತಕಗಳು ಪ್ರಮುಖ ಪಾತ್ರ ವಹಿಸುತ್ತವೆ. ಮನುಷ್ಯನ ದೇಹಕ್ಕೆ ಅನ್ನ ,ನೀರು, ಗಾಳಿ ಹೇಗೆ ಮಹತ್ವವವೋ ಹಾಗೇ ಮಾನವನ ಮನಸ್ಸಿನ ವಿಕಾಸಕ್ಕೆ ಪುಸ್ತಕಗಳು ಅವಶ್ಯಕವಾಗಿರುತ್ತದೆ. ಪುಸ್ತಕಗಳು ಆತ್ಮೀಯ ಮಿತ್ರರಿದ್ದಂತೆ. ಸದಾ ಒಳ್ಳೆಯ ಯೋಚನೆಗಳಿಗೆ ದಾರಿಮಾಡಿಕೊಡುತ್ತವೆ. ಜ್ಞಾನ ವಿಕಾಸಕ್ಕಾಗಿ ಸಾರ್ವಜನಿಕವಾಗಿಯೂ, ಮತ್ತು ಶಾಲಾ ಕಾಲೇಜುಗಳಲ್ಲಿ ಗ್ರಂಥಾಲಯಗಳನ್ನು ತೆರೆಯಲಾಗಿದೆ. ಇಲ್ಲಿ ಪ್ರತಿಯೊಂದು ವಿಷಯಗಳು ಅಂದರೆ ಸಾಹಿತ್ಯ, ಇತಿಹಾಸ, ಪುರಾಣ, ವಿಜ್ಞಾನ ತಂತ್ರಜ್ಞಾನ, ಮಕ್ಕಳ ಸಾಹಿತ್ಯ ಮೊದಲಾದ ವಿಷಯಗಳ ಗ್ರಂಥಗಳನ್ನು ಇಟ್ಟಿರುತ್ತಾರೆ. ಹಲವಾರು ಭಾಷೆಗಳ ಪುಸ್ತಕಗಳು ಇರುತ್ತವೆ. ಗ್ರಂಥಾಲಯಗಳು ಜ್ಞಾನದ ನಿಧಿಯಿದ್ದಂತೆ. ಗ್ರಂಥಾಲಯವು ಜ್ಞಾನಾರ್ಜನೆಯ ಮೆಟ್ಟಿಲುಗಳು. ಪುಸ್ತಕಗಳಿಲ್ಲದ ಮನೆ, ಗ್ರಂಥಭಂಡಾರ ವಿಲ್ಲದ ಶಾಲಾ-ಕಾಲೇಜುಗಳು, ದೇವರಿಲ್ಲದ ಗುಡಿಯಿದ್ದಂತೆ. ಆದ್ದರಿಂದ ಗ್ರಂಥಾಲಯಗಳಂತೆ ಇರಲಿ ಎಂದು ನಮ್ಮ ಶಾಲಾ-ಕಾಲೇಜುಗಳಲ್ಲಿ ಗ್ರಂಥಾಲಯಗಳನ್ನು ಮೊದಲಿನಿಂದಲೂ ತೆರೆಯಲಾಗಿದೆ. ಓದುವ ಹವ್ಯಾಸವುಳ್ಳವರು ಅಂತರ್ಜಾಲದಲ್ಲಿ ಇ – ಲೈಬ್ರರಿಯನ್ನು ಬಳಸಬಹುದು.
ಉಪಸಂಹಾರ:
ಒಟ್ಟಾರೆಯಾಗಿ ಶಾಲಾ ಕಾಲೇಜುಗಳಲ್ಲಿನ ಮತ್ತು ಸಾರ್ವಜನಿಕ ಗ್ರಂಥಾಲಯಗಳು ನಮ್ಮ ಜ್ಞಾನ ವಿಕಾಸಕ್ಕೆ ಅವಶ್ಯವಾದ ಮಾಹಿತಿಯನ್ನು ಒದಗಿಸಿ ಜ್ಞಾನವಂತರಾಗಲು ಸಹಾಯವಾಗುತ್ತದೆ. ಸಜ್ಜನರ ಸಂಗ ಮಾಡಿದಂತೆ ಸಚ್ಯ ಗ್ರಂಥಗಳು ಅಧ್ಯಯನ ಮಾಡಿ ಜ್ಞಾನಸಾಗರವನ್ನು ಈಜಿ ದಡ ಸೇರಬಹುದು.
“ಒಳ್ಳೆಯ ಪುಸ್ತಕಗಳು ಸಜ್ಜನರ ಸಂಗವಿದ್ದಂತೆ”
ಸುಮನಾ ಶ್ರೀರಾಮ್