Guttu Rattu – The Secret Revealed
Guttu Rattu, a Kannada poem by A. P. Angadi Gangavati, tells the story of a clever crow and a nightingale. Guttu Rattu Kannada poem grade VI.
The crow works hard to build a nest, but the nightingale secretly lays its eggs in it. When the eggs hatch, the chicks begin to chirp “Kuhu Kuhu.” Hearing this, the crow realizes that the chicks are not its own but belong to the nightingale. With this secret now revealed, the crow sends them away.
This poem beautifully highlights themes of truth and discovery in nature.
ಗುಟ್ಟು ರಟ್ಟು
I. ಪದಗಳ ಅರ್ಥ ಬರೆಯಿರಿ (Write the word meaning)
ಕಸ = ಕೊಳಕು (garbage), ಕಾವು = ಶಾಖ ಕೊಡು (Hatch)
ಪುಕ್ಕ = ಹಕ್ಕಿಯ ಗರಿ (Feather), ಹೆಕ್ಕಿ = ಆರಿಸಿಕೊಂಡು (Pick up)
ರಟ್ಟಾಗು = ಪ್ರಕಟವಾಗು (To Reveal)
II. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)
೧. ಗೂಡನ್ನು ಯಾರು ಕಟ್ಟಿದರು?
ಉ: ಗೂಡನ್ನು ಕಾಗೆ ಕಟ್ಟಿತು.
೨. ಗೂಡಿನಲ್ಲಿ ಯಾರು ಮೊಟ್ಟೆ ಇಟ್ಟರು?
ಉ: ಗೂಡಿನಲ್ಲಿ ಕೋಗಿಲೆಯೊಂದು ಮೊಟ್ಟೆ ಇಟ್ಟಿತು.
೩. ಕೋಗಿಲೆಯ ಮರಿಗೆ ಕಾವು ಕೊಟ್ಟವರಾರು?
ಉ:ಕೋಗಿಲೆಯ ಮರಿಗೆ ಕಾವು ಕೊಟ್ಟವರು ಕಾಗೆ.
೪. ಕೋಗಿಲೆಯ ಗುಟ್ಟು ಹೇಗೆ ರಟ್ಟಾಯಿತು?
ಉ: ಕೋಗಿಲೆಯ ಕೂಗು ಕೇಳಿ ಗುಟ್ಟು ರಟ್ಟಾಯಿತು.
III. ಪದ್ಯವನ್ನು ಪೂರ್ಣಗೊಳಿಸಿರಿ. (Complete the poem)
ಕಾಗೆಯೊಂದು ಕಸವ ತಂದು
ಗೂಡು ಕಟ್ಟಿತು
ಕೋಗಿಲೆಯೊಂದು ಹಾರಿಬಂದು
ಮೊಟ್ಟೆ ಇಟ್ಟಿತು
ಮೊಟ್ಟೆ ತನ್ನದೆಂದು ಕಾಗೆ
ಕಾವು ಕೊಟ್ಟಿತು
ಪುಟ್ಟಮರಿ ಮೊಟ್ಟೆಯಿಂದ
ಹೆಜ್ಜೆ ಇಟ್ಟಿತು
IV. ಬಿಟ್ಟ ಸ್ಥಳವನ್ನು ತುಂಬಿರಿ. (Fill in the blanks)
೧. ಕೋಗಿಲೆಯೊಂದು ಹಾರಿಬಂದು ಮೊಟ್ಟೆ ಇಟ್ಟಿತು.
೨. ಪುಟ್ಟಮರಿ ಮೊಟ್ಟೆಯಿಂದ ಹೆಜ್ಜೆ ಇಟ್ಟಿತು.
೩. ಕೂಗು ಕೇಳಿ ಮರಿಯ ಗುಟ್ಟು ರಟ್ಟು ಆಯಿತು.
೪. ಒಡನೆ ಕಾಗೆಯು ಮರಿಯ ಕುಕ್ಕಿ ಹೊರಗೆ ಅಟ್ಟಿತು.
೫. ರೆಕ್ಕೆ ಬಲಿತ ಕೋಗಿಲೆ ಮರಿ ಹಾರಿ ಬಿಟ್ಟಿತು.
V. ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿರಿ. (Make your own sentence)
ಗೂಡು: ಅಲ್ಲಿ ಒಂದು ಗೂಡು ಇದೆ.
ಕಾವು ಕೊಡು: ಕಾಗೆ ಮೊಟ್ಟೆಗೆ ಕಾವು ಕೊಡುತ್ತದೆ.
ಹೆಜ್ಜೆ ಇಡು: ಮರಿ ಹೆಜ್ಜೆ ಇಡುತ್ತದೆ.
ಹಾರಿ ಬಿಡು: ಮರಿ ಆಕಾಶಕ್ಕೆ ಹಾರಿ ಬಿಡುತ್ತದೆ.
VI. ಈ ಪದ್ಯದಿಂದ ಪ್ರಾಸಪದಗಳನ್ನು ಬರೆಯಿರಿ. Write the rhyming words from the poem.
ತಂದು – ಬಂದು
ಕೊಟ್ಟಿತು – ಇಟ್ಟಿತು
ಬಿಟ್ಟಿತು – ಆಯಿತು
ಕಾಗೆಯೊಂದು – ಕೋಗಿಲೆಯೊಂದು
Click here to download gutu rattu Kannada poem grade VI