Hakigalu kannada poem grade VIII written by Dr Siddalingyya. Hakigalu poem kannada class 8 reference can be taken.
For centuries, a marginalized community faced exploitation and oppression. Over time, they began expressing their pain and lived experiences through writing, giving rise to Rebel Dalit Literature in Kannada. By documenting their own stories, Dalit writers highlighted social injustices, sparked awareness, and inspired movements toward equality and justice.
ಹಕ್ಕಿಗಳು
I. ಪದಗಳ ಅರ್ಥ (Word Meaning)
ಅರಸು, ಅರಿ, ಎಂಜಲು, ಕಮರು, ಕರಾಳ, ಗಂಜಲ, ಬಾಡು, ಸೀಳು, ಕುಸಿ, ಪಾತಾಳ, ಬಿರಿ, ಹೊತ್ತು
II. ಪ್ರಶ್ನೆಗಳು
ಅ) ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)
೧. ಕುರಿದನಗಳನ್ನು ಕಾಯ್ದ ಬಾಲಕರಿಗೆ ಯಾವುದು ಸಿಗಲಿಲ್ಲ?
೨. ಬಾಲಕರು ಚಳಿಯನ್ನು ತಡೆಯದೆ ಕುಸಿದುದು ಏಕೆ?
೩. ಗಿಡಗಳ ಜೊತೆ ಬೆಳೆದವರಿಗೆ ಸಿಗದ ಭಾಗ್ಯ ಯಾವುದು?
೪. ಎಂಜಲು ತೊಳೆದವರಿಗೆ ಏನು ಸಿಗಬೇಕಾಗಿತ್ತು?
೫. ಬಾಲಕರ ಕನಸುಗಳು ಹೇಗೆ ಕಮರಿ ಹೋಗಿವೆ?
ಆ) ಕೆಳಗಿನ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in three – four sentences)
೧. ಬಾಲಕರ ಹಾಡು ಮತ್ತು ನಾಡು ಯಾವ ಸ್ವರೂಪದ್ದಾಗಿದೆ? ಏಕೆ?
೨. ನೋವುಂಡ ಬಾಲಕರಿಗೆ ಯಾವ ಯಾವ ಅನುಭವಗಳಾಗಿವೆ?
೩. ಹಕ್ಕಿಗಳು ಕವಿತೆಯಲ್ಲಿ ಬಾಲಕರು ಯಾವ ಯಾವ ಅವಕಾಶಗಳಿಂದ ವಂಚಿತರಾಗಿದ್ದಾರೆ?
ಇ) ಕೆಳಗಿನ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in eight – ten sentences)
೧. ಬಾಲಕರು ನೋವಿನ ಹಾಡು ಕತ್ತಲ ನಾಡು ಎಂದು ಕವಿ ಏಕೆ ಕರೆದಿದ್ದಾರೆ?
೨. ʼಹಕ್ಕಿಗಳುʼ ಕವಿತೆಯಲ್ಲಿ ವ್ಯಕ್ತಗೊಂಡಿರುವ ಕವಿಯ ಭಾವನೆಗಳೇನು?
ಈ) ಸಂದರ್ಭದಲ್ಲಿ ವಿವರಿಸಿರಿ. (Explain the context)
೧. “ಕಮರುವ ಬಣ್ಣದ ಕನಸುಗಳು”
೨. “ಗಂಜಿಯ ಕಾಣದೆ ದುಡಿದವರು”
೩. “ಹಾಲನು ಕುಡಿಯದೆ ಹೋದವರು”
೪. “ಬೆಳಕನು ಅರಸುವ ಹಕ್ಕಿಗಳು”
III. ಭಾಷಾಭ್ಯಾಸ
ಅ) ಕೆಳಗಿನ ಅ ಪಟ್ಟಿಯೊಂದಿಗೆ ಬ ಪಟ್ಟಿಯನ್ನು ಹೊಂದಿಸಿ ಬರೆಯಿರಿ.(Match the following)
ಅ ಪಟ್ಟಿ ಬ ಪಟ್ಟಿ
೧. ವರ್ಣ ಅ) ದಿಸೆ
೨. ಪ್ರಯಾಣ ಆ) ಪಕ್ಷಿ
೩. ಹಾಲು ಇ) ಪಯಣ
೪. ಹಕ್ಕಿ ಈ) ಬಣ್ಣ
ಉ) ಪಾಲು
ಆ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ. (Write the opposite words)
ಇಳಿ, ನೋವು, ಕತ್ತಲು, ಕನಸು
ಇ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿ ಬರೆಯಿರಿ. (Make your own sentences)
ಭಾಗ್ಯ, ಕರಾಳ ನೋವು, ಬಾಡುವ ಹೂವು, ಬಣ್ಣದ ಕನಸು, ಉರಿಬಿಸಿಲು
ಈ) ಹಕ್ಕಿಗಳು ಕವಿತೆಯಲ್ಲಿ ಬಳಕೆಯಾಗಿರುವ ಕ್ರಿಯಾ ಪದಗಳನ್ನು ಪಟ್ಟಿ ಮಾಡಿರಿ. (Write the verb words from this poem)
ಉದಾಹರಣೆ: ಹತ್ತಿ ಇಳಿ
ಉ) ಯಾವುದೇ ಒಂದು ಪದಕ್ಕೆ ಗಳು ಮತ್ತು ಅರು ಪ್ರತ್ಯಯ ಸೇರಿದಾಗ ಬಹುವಚನ ರೂಪ ಪಡೆಯುತ್ತದೆ ಅಂತಹ ಪದಗಳನ್ನು ಹಕ್ಕಿಗಳು ಕವಿತೆಯಿಂದ ಆರಿಸಿ ಬರೆಯಿರಿ.
| ʼಗಳುʼ ಪ್ರತ್ಯಯ ಪದಗಳು | ʼಅರುʼ ಪ್ರತ್ಯಯದ ಪದಗಳು |
| ನಾವುಗಳು | ಹೋದವರು |
ಊ) ಈ ಕೆಳಗಿನ ಪದ್ಯದ ಭಾವಾರ್ಥ ಬರೆಯಿರಿ. (Write the meaning of the following verse).
ಕುರಿಗಳ ಕಾಯ್ದು ದನಗಳ ಮೇಯಿಸಿ
ಹಾಲನು ಕುಡಿಯದೆ ಹೋದವರು
ಓದುವ ಬರೆಯುವ ಭಾಗ್ಯವು ಸಿಗದೆ
ಗಿಡಗಳ ಜೊತೆಯಲಿ ಬೆಳೆದವರು
ಎಂಜಲು ತೊಳೆದು ಗಂಜಲ ಬಳಿದು
ಗಂಜಿಯ ಕಾಣದೆ ದುಡಿದವರು
ಗುಡಿಗೋಪುರದ ಬಣ್ಣಗಳಾಗಿ
ಚಳಿಯನು ತಡೆಯದೆ ಕುಸಿದವರು