Hakkigalu kannada notes grade VIII written by Dr Siddalingayya. Hakkigalu kannada poem means birds, rebel dalits used their own voices to raise social awareness, challenge discrimination, and advocate for equality and justice.
For centuries, a marginalized social group suffered exploitation, injustice, humiliation, neglect, and oppression. Over time, this community began to voice its pain, struggles, and lived experiences through writing, giving rise to a powerful movement in Kannada literature known as Rebel Dalit Literature.
Dalit writers started documenting their own lives, shedding light on harsh social realities and initiating meaningful conversations about discrimination and inequality. Their literary contributions played a crucial role in creating social awareness, inspiring social change, and advocating for a society based on equality and justice.
ಹಕ್ಕಿಗಳು
ಕೃತಿಕಾರರ ಪರಿಚಯ: ಡಾಕ್ಟರ್ ಸಿದ್ದಲಿಂಗಯ್ಯ
ಜನ್ಮಸ್ಥಳ: ಮಂಚನಬೆಲೆ, ಮಾಗಡಿ ತಾಲೂಕು, ರಾಮನಗರ ಜಿಲ್ಲೆ ಕವನ ಸಂಕಲನ: ʼಹೊಲೆಮಾದಿಗರ ಹಾಡುʼ, ʼಸಾವಿರಾರು ನದಿಗಳುʼ, ʼಕಪ್ಪು ಕಾಡಿನ ನಾಡುʼ, ʼಮೆರವಣಿಗೆʼ,
ಗದ್ಯ ಕೃತಿಗಳು: ʼಅವತಾರಗಳುʼ, ʼಗ್ರಾಮ ದೇವತೆಗಳುʼ, ʼಹಕ್ಕಿನೋಟʼ ನಾಟಕಗಳು: ʼಪಂಚಮʼ, ʼನೆಲಸಮʼ, ʼಏಕಲವ್ಯʼ
ಪ್ರಶಸ್ತಿಗಳು: ರಾಜ್ಯೋತ್ಸವ ಪ್ರಶಸ್ತಿ, ಡಾ. ಅಂಬೇಡ್ಕರ್ ಶತಮಾನೋತ್ಸವ ವಿಶೇಷ ಬಹುಮಾನ, ರಾಜ್ಯ ಸಾಹಿತ್ಯ ಅಕಾಡೆಮಿ
I. ಪದಗಳ ಅರ್ಥ (Word Meaning)
ಅರಸು = ಹುಡುಕು, ಶೋಧಿಸು
ಕಮರು = ಕುಂದು, ಬಾಡು, ನಾಶವಾಗು
ಕರಾಳ= ಭಯಂಕರವಾದ, ವಿಕೃತವಾದ
ಗಂಜಲ = ಗೋಮೂತ್ರ
ಬಾಡು = ಕುಗ್ಗು, ಒಣಗು, ಕಳೆಗುಂದು
ಸೀಳು = ದಾರಿ, ಕವಲುದಾರಿ
ಅರಿ = ತಿಳಿ
ಎಂಜಲು = ತಿಂದು ಮಿಕ್ಕಿದ್ದು
ಕುಸಿ = ಆಯಾಸಗೊಂಡು, ಬೀಳು
ಪಾತಾಳ = ಭೂಮಿ ಕೆಳಗಿನ ಏಳು ಲೋಕಗಳಲ್ಲಿ ಒಂದು, ಬಹಳ ಆಳವಾದ ಸ್ಥಳ
ಬಿರಿ = ಅರಳು, ಬಿರುಕು
ಹೊತ್ತು = ಸಮಯ
II. ಪ್ರಶ್ನೆಗಳು
ಅ) ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)
೧. ಕುರಿದನಗಳನ್ನು ಕಾಯ್ದ ಬಾಲಕರಿಗೆ ಯಾವುದು ಸಿಗಲಿಲ್ಲ?
ಉ: ಕುರಿದನಗಳನ್ನು ಕಾಯ್ದ ಬಾಲಕರಿಗೆ ಹಾಲು ಸಿಗಲಿಲ್ಲ.
೨. ಎಂಜಲು ತೊಳೆದವರಿಗೆ ಏನು ಸಿಗಬೇಕಾಗಿತ್ತು?
ಉ: ಎಂಜಲು ತೊಳೆದವರಿಗೆ ಗಂಜಿ ಸಿಗಬೇಕಾಗಿತ್ತು.
೩. ಗಿಡಗಳ ಜೊತೆ ಬೆಳೆದವರಿಗೆ ಸಿಗದ ಭಾಗ್ಯ ಯಾವುದು?
ಉ: ಓದುವ ಬರೆಯುವ ಭಾಗ್ಯವು ಗಿಡಗಳ ಜೊತೆ ಬೆಳೆದವರಿಗೆ ಸಿಗಲಿಲ್ಲ.
೪. ಬಾಲಕರು ಚಳಿಯನ್ನು ತಡೆಯದೆ ಕುಸಿದುದು ಏಕೆ?
ಉ: ಗುಡಿಗೋಪುರದ ಬಣ್ಣದ ಹಾಗೆ ರಕ್ಷಣೆ ನೀಡಿ ಬಾಲಕರು ಚಳಿಯನ್ನು ತಡೆಯದೆ ಕುಸಿದರು.
೫. ಬಾಲಕರ ಕನಸುಗಳು ಹೇಗೆ ಕಮರಿ ಹೋಗಿವೆ?
ಉ: ಅರಳುವ ಮೊದಲೇ ಬಾಲಕರ ಕನಸುಗಳು ಕಮರಿ ಹೋಗಿವೆ.
ಆ) ಕೆಳಗಿನ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in three – four sentences)
೧. ಹಕ್ಕಿಗಳು ಕವಿತೆಯಲ್ಲಿ ಬಾಲಕರು ಯಾವ ಯಾವ ಅವಕಾಶಗಳಿಂದ ವಂಚಿತರಾಗಿದ್ದಾರೆ?
ಉ: ಕುರಿದನಗಳನ್ನು ಕಾಯ್ದ ಬಾಲಕರು ಹಾಲಿನಿಂದ ವಂಚಿತರಾಗಿದ್ದಾರೆ. ಗಿಡಗಳ ಜೊತೆ ಬೆಳೆದವರು ಓದು ಬರೆಯುವದರಿಂದ ವಂಚಿತರಾಗಿದ್ದಾರೆ. ಎಂಜಲು ತೊಳೆದವರು ಗಂಜಿಯಿಂದ ವಂಚಿತರಾಗಿದ್ದಾರೆ.
೨. ನೋವುಂಡ ಬಾಲಕರಿಗೆ ಯಾವ ಯಾವ ಅನುಭವಗಳಾಗಿವೆ?
ಉ: ಬೆಟ್ಟವನ್ನು ಹತ್ತಿ ಇಳಿಯುವ ಬಾಲಕರು ಆಳ ಪಾತಾಳದ ನೋವನ್ನು ಕಂಡಿದ್ದಾರೆ. ಉರಿ ಬಿಸಿಲಿನಲ್ಲಿ ಉರಿದ ಎಲೆಗಳಾಗಿ ಸುಟ್ಟು ಬೂದಿಯಾಗಿದ್ದಾರೆ.
೩. ಬಾಲಕರ ಹಾಡು ಮತ್ತು ನಾಡು ಯಾವ ಸ್ವರೂಪದ್ದಾಗಿದೆ? ಏಕೆ?
ಉ: ಬಾಲಕರು ಹೊತ್ತನ್ನು ಅರಿಯದೆ, ದಿಕ್ಕನ್ನು ಕಾಣದೇ ಕವಲು ದಾರಿಯ ಪ್ರಯಾಣಿಗರಾಗಿದ್ದಾರೆ. ನೋವಿನ ಹಾಡನ್ನು ಹಾಡುತ್ತಿದ್ದಾರೆ. ಕತ್ತಲ ನಾಡಲ್ಲಿ ಬೆಳಕನ್ನು ಅರಸುತ್ತಿರುವ ಹಕ್ಕಿಗಳಾಗಿದ್ದಾರೆ.
ಇ) ಕೆಳಗಿನ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in eight – ten sentences)
೧. ಬಾಲಕರದು ನೋವಿನ ಹಾಡು, ಕತ್ತಲ ನಾಡು ಎಂದು ಕವಿ ಏಕೆ ಕರೆದಿದ್ದಾರೆ?
ಉ: ಕುರಿದನಗಳನ್ನು ಕಾಯ್ದ ಬಾಲಕರು ಹಾಲಿನಿಂದ ವಂಚಿತರಾಗಿದ್ದಾರೆ. ಗಿಡಗಳ ಜೊತೆ ಬೆಳೆದವರು ಓದು ಬರೆಯುವದರಿಂದ ವಂಚಿತರಾಗಿದ್ದಾರೆ. ಎಂಜಲು ತೊಳೆದವರು ಗಂಜಿಯಿಂದ ವಂಚಿತರಾಗಿದ್ದಾರೆ. ಬಾಲಕರು ಹೊತ್ತನ್ನು ಅರಿಯದೆ, ದಿಕ್ಕನ್ನು ಕಾಣದೇ ಕವಲು ದಾರಿಯ ಪ್ರಯಾಣಿಗರಾಗಿದ್ದಾರೆ. ಗುಡಿಗೋಪುರದ ಬಣ್ಣದ ಹಾಗೆ ರಕ್ಷಣೆ ನೀಡಿ ಬಾಲಕರು ಚಳಿಯನ್ನು ತಡೆಯದೆ ಕುಸಿದಿದ್ದಾರೆ. ನೋವಿನ ಹಾಡನ್ನು ಹಾಡುತ್ತಿದ್ದಾರೆ. ಕತ್ತಲ ನಾಡಲ್ಲಿ ಬೆಳಕನ್ನು ಅರಸುತ್ತಿರುವ ಹಕ್ಕಿಗಳಾಗಿದ್ದಾರೆ ಎಂದು ಕವಿ ಕರೆದಿದ್ದಾರೆ.
೨. ʼಹಕ್ಕಿಗಳುʼ ಕವಿತೆಯಲ್ಲಿ ವ್ಯಕ್ತಗೊಂಡಿರುವ ಕವಿಯ ಭಾವನೆಗಳೇನು?
ಉ: ಕುರಿದನಗಳನ್ನು ಕಾಯ್ದ ಬಾಲಕರು ಹಾಲಿನಿಂದ ವಂಚಿತರಾಗಿದ್ದಾರೆ. ಗಿಡಗಳ ಜೊತೆ ಬೆಳೆದವರು ಓದು ಬರೆಯುವದರಿಂದ ವಂಚಿತರಾಗಿದ್ದಾರೆ. ಎಂಜಲು ತೊಳೆದವರು ಗಂಜಿಯಿಂದ ವಂಚಿತರಾಗಿದ್ದಾರೆ. ಬಾಲಕರು ಹೊತ್ತನ್ನು ಅರಿಯದೆ, ದಿಕ್ಕನ್ನು ಕಾಣದೇ ಕವಲು ದಾರಿಯ ಪ್ರಯಾಣಿಗರಾಗಿದ್ದಾರೆ. ಗುಡಿಗೋಪುರದ ಬಣ್ಣದ ಹಾಗೆ ರಕ್ಷಣೆ ನೀಡಿ ಬಾಲಕರು ಚಳಿಯನ್ನು ತಡೆಯದೆ ಕುಸಿದಿದ್ದಾರೆ. ನೋವಿನ ಹಾಡನ್ನು ಹಾಡುತ್ತಿದ್ದಾರೆ. ಕತ್ತಲ ನಾಡಲ್ಲಿ ಬೆಳಕನ್ನು ಅರಸುತ್ತಿರುವ ಹಕ್ಕಿಗಳಾಗಿದ್ದಾರೆ ಎಂದು ಕವಿ ತಮ್ಮ ಭಾವನೆಗಳನ್ನು ʼಹಕ್ಕಿಗಳುʼ ಕವಿತೆಯಲ್ಲಿ ವ್ಯಕ್ತ ಪಡಿಸಿದ್ದಾರೆ.
ಈ) ಸಂದರ್ಭದಲ್ಲಿ ವಿವರಿಸಿರಿ. (Explain the context)
೧. “ಹಾಲನು ಕುಡಿಯದೆ ಹೋದವರು”
ಆಯ್ಕೆ: ಈ ಮಾತನ್ನು ಡಾ. ಸಿದ್ಧಲಿಂಗಯ್ಯನವರು ಬರೆದ ʼಮೆರವಣಿಗೆʼ ಕವನ ಸಂಕಲನದ ʼಹಕ್ಕಿಗಳುʼ ಪದ್ಯದಿಂದ ಆರಿಸಲಾಗಿದೆ.
ಈ ಮಾತನ್ನು ಕವಿ ಹೇಳಿದ್ದಾರೆ.
ಕುರಿದನಗಳನ್ನು ಕಾಯುವ ದಲಿತ ಬಾಲಕರು ಹಾಲಿನಿಂದ ವಂಚಿತರಾಗಿದ್ದಾರೆ ಎಂದು ಕವಿ ಹೇಳಿದ್ದಾರೆ.
೨. “ಗಂಜಿಯ ಕಾಣದೆ ದುಡಿದವರು”
ಆಯ್ಕೆ: ಈ ಮಾತನ್ನು ಡಾ. ಸಿದ್ಧಲಿಂಗಯ್ಯನವರು ಬರೆದ ʼಮೆರವಣಿಗೆʼ ಕವನ ಸಂಕಲನದ ʼಹಕ್ಕಿಗಳುʼ ಪದ್ಯದಿಂದ ಆರಿಸಲಾಗಿದೆ.
ಈ ಮಾತನ್ನು ಕವಿ ಹೇಳಿದ್ದಾರೆ.
ಎಂಜಲು ತೊಳೆಯುವ ದಲಿತ ಬಾಲಕರಿಗೆ ಗಂಜಿಯೂ ಸಿಗುವುದಿಲ್ಲ ಎಂದು ಕವಿ ಹೇಳಿದ್ದಾರೆ.
೩. “ಕಮರುವ ಬಣ್ಣದ ಕನಸುಗಳು”
ಆಯ್ಕೆ: ಈ ಮಾತನ್ನು ಡಾ. ಸಿದ್ಧಲಿಂಗಯ್ಯನವರು ಬರೆದ ʼಮೆರವಣಿಗೆʼ ಕವನ ಸಂಕಲನದ ʼಹಕ್ಕಿಗಳುʼ ಪದ್ಯದಿಂದ ಆರಿಸಲಾಗಿದೆ.
ಈ ಮಾತನ್ನು ಕವಿ ಹೇಳಿದ್ದಾರೆ.
ಉರಿ ಬಿಸಿಲಿನಲ್ಲಿ ಸುಟ್ಟು ಬೂದಿಯಾದ ಹಾಗೆ ದಲಿತ ಬಾಲಕರ ಬಣ್ಣದ ಕನಸುಗಳು ಕಮರಿವೆ ಎಂದು ಕವಿ ಹೇಳಿದ್ದಾರೆ.
೪. “ಬೆಳಕನು ಅರಸುವ ಹಕ್ಕಿಗಳು”
ಆಯ್ಕೆ: ಈ ಮಾತನ್ನು ಡಾ. ಸಿದ್ಧಲಿಂಗಯ್ಯನವರು ಬರೆದ ʼಮೆರವಣಿಗೆʼ ಕವನ ಸಂಕಲನದ ʼಹಕ್ಕಿಗಳುʼ ಪದ್ಯದಿಂದ ಆರಿಸಲಾಗಿದೆ.
ಈ ಮಾತನ್ನು ಕವಿ ಹೇಳಿದ್ದಾರೆ.
ದಲಿತ ಬಾಲಕರು ಹೊತ್ತನ್ನು ಅರಿಯದೆ, ದಿಕ್ಕನ್ನು ಕಾಣದೇ ಕವಲು ದಾರಿಯ ಪ್ರಯಾಣಿಗರಾಗಿದ್ದಾರೆ. ಕತ್ತಲ ನಾಡಲ್ಲಿ ಬೆಳಕನ್ನು ಅರಸುತ್ತಿರುವ ಹಕ್ಕಿಗಳಾಗಿದ್ದಾರೆ ಎಂದು ಕವಿ ಹೇಳಿದ್ದಾರೆ.
III. ಭಾಷಾಭ್ಯಾಸ
ಅ) ಕೆಳಗಿನ ಅ ಪಟ್ಟಿಯೊಂದಿಗೆ ಬ ಪಟ್ಟಿಯನ್ನು ಹೊಂದಿಸಿ ಬರೆಯಿರಿ.(Match the following)
ಅ ಪಟ್ಟಿ ಬ ಪಟ್ಟಿ
೧. ವರ್ಣ ಅ) ದಿಸೆ ಬಣ್ಣ
೨. ಪ್ರಯಾಣ ಆ) ಪಕ್ಷಿ ಪಯಣ
೩. ಹಾಲು ಇ) ಪಯಣ ಪಾಲು
೪. ಹಕ್ಕಿ ಈ) ಬಣ್ಣ ಪಕ್ಷಿ
ಉ) ಪಾಲು
ಆ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ. (Write the opposite words)
ಇಳಿ X ಹತ್ತು ಕತ್ತಲು X ಬೆಳಕು
ಕನಸು X ನನಸು ನೋವು X ನಲಿವು
ಇ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿ ಬರೆಯಿರಿ. (Make your own sentences)
ಭಾಗ್ಯ = ನಮಗೆ ಓದು ಬರಹ ಕಲಿಯುವ ಭಾಗ್ಯ ಇದೆ.
ಬಣ್ಣದ ಕನಸು = ಆ ಬಾಲಕನ ಬಣ್ಣದ ಕನಸು ಅರಳುವ ಮೊದಲೇ ಕಮರಿ ಹೋಗಿದೆ.
ಉರಿಬಿಸಿಲು = ನಿನ್ನೆ ಉರಿಬಿಸಿಲು ತುಂಬಾ ಇತ್ತು.
ಕರಾಳ ನೋವು = ಆ ಬಾಲಕ ಕರಾಳ ನೋವನ್ನು ಅನುಭವಿಸಿದನು.
ಬಾಡುವ ಹೂವು = ಆ ಬಾಲಕನ ಕನಸು ಅರಳುವ ಮೊದಲೇ ಬಾಡಿದ ಹೂವಾಗಿತ್ತು.
ಈ) ಹಕ್ಕಿಗಳು ಕವಿತೆಯಲ್ಲಿ ಬಳಕೆಯಾಗಿರುವ ಕ್ರಿಯಾ ಪದಗಳನ್ನು ಪಟ್ಟಿ ಮಾಡಿರಿ. (Write the verb words from this poem)
ಉದಾಹರಣೆ: ಹತ್ತಿ, ಇಳಿ
ಓದು, ಹೋಗು, ಬೆಳೆದು, ದುಡಿದು, ಕುಸಿದು, ಕಾಣು, ಮೇಯಿಸು,
ತೊಳೆ, ಬೆಳೆ, ಕನರುವ,ಅರಸು
ಉ) ಯಾವುದೇ ಒಂದು ಪದಕ್ಕೆ ಗಳು ಮತ್ತು ಅರು ಪ್ರತ್ಯಯ ಸೇರಿದಾಗ ಬಹುವಚನ ರೂಪ ಪಡೆಯುತ್ತದೆ ಅಂತಹ ಪದಗಳನ್ನು ಹಕ್ಕಿಗಳು ಕವಿತೆಯಿಂದ ಆರಿಸಿ ಬರೆಯಿರಿ.
| ʼಗಳುʼ ಪ್ರತ್ಯಯ ಪದಗಳು | ʼಅರುʼ ಪ್ರತ್ಯಯದ ಪದಗಳು |
| ನಾವುಗಳು | ಹೋದವರು |
| ಹಕ್ಕಿಗಳು | ಬೆಳೆದವರು |
| ಕನಸುಗಳು | ದುಡಿದವರು |
| ಹೂವುಗಳು | ಕುಸಿದವರು |
| ಎಲೆಗಳು | ಪಯಣಿಗರು |
ಊ) ಈ ಕೆಳಗಿನ ಪದ್ಯದ ಭಾವಾರ್ಥ ಬರೆಯಿರಿ. (Write the meaning of the following verse).
ಕುರಿಗಳ ಕಾಯ್ದು ದನಗಳ ಮೇಯಿಸಿ
ಹಾಲನು ಕುಡಿಯದೆ ಹೋದವರು
ಓದುವ ಬರೆಯುವ ಭಾಗ್ಯವು ಸಿಗದೆ
ಗಿಡಗಳ ಜೊತೆಯಲಿ ಬೆಳೆದವರು
ಎಂಜಲು ತೊಳೆದು ಗಂಜಲ ಬಳಿದು
ಗಂಜಿಯ ಕಾಣದೆ ದುಡಿದವರು
ಗುಡಿಗೋಪುರದ ಬಣ್ಣಗಳಾಗಿ
ಚಳಿಯನು ತಡೆಯದೆ ಕುಸಿದವರು
ಈ ಕವಿತೆಯ ಭಾಗವನ್ನು ಡಾ. ಸಿದ್ಧಲಿಂಗಯ್ಯನವರು ಬರೆದ ʼಮೆರವಣಿಗೆʼ ಕವನ ಸಂಕಲನದ ʼಹಕ್ಕಿಗಳುʼ ಪದ್ಯದಿಂದ ಆರಿಸಲಾಗಿದೆ.
ಕುರಿದನಗಳನ್ನು ಕಾಯ್ದ ಬಾಲಕರು ಹಾಲಿನಿಂದ ವಂಚಿತರಾಗಿದ್ದಾರೆ. ಗಿಡಗಳ ಜೊತೆ ಬೆಳೆದವರು ಓದು ಬರೆಯುವದರಿಂದ ವಂಚಿತರಾಗಿದ್ದಾರೆ. ಎಂಜಲು ತೊಳೆದವರು ಗಂಜಿಯಿಂದ ವಂಚಿತರಾಗಿದ್ದಾರೆ. ಗುಡಿಗೋಪುರದ ಬಣ್ಣದ ಹಾಗೆ ರಕ್ಷಣೆ ನೀಡಿ ಬಾಲಕರು ಚಳಿಯನ್ನು ತಡೆಯದೆ ಕುಸಿದಿದ್ದಾರೆ ಎಂಬುದು ಈ ಪದ್ಯ ಭಾಗದ ಭಾವಾರ್ಥ.