Halinadu halige neerinadu neerige Kannada lesson grade VI is about how greediness can cause a problem in life. Halinadu halige neerinadu neerige grade 6th grade lesson teaches a life lesson

Somanna, a milk vendor, diluted his milk with water to increase profits. One day, he carried his earnings in a bag to purchase cows. Feeling fatigued, he rested under a tree, using the bag as a pillow. A monkey, mistaking the bag for food, seized it but was disappointed upon finding only coins. Somanna awoke to see the monkey discarding coins onto the ground and into a nearby lake. Distressed, he managed to retrieve the coins scattered on the ground. Ultimately, he recovered the money earned from selling milk but lost the portion equivalent to the water he had deceitfully added.

ಸೋಮಣ್ಣ ಎಂಬ ಹಾಲು ಮಾರಾಟಗಾರನು ಹೆಚ್ಚು ಲಾಭಕ್ಕಾಗಿ ಹಾಲಿಗೆ ನೀರು ಸೇರಿಸುತ್ತಿದ್ದನು. ಒಂದು ದಿನ, ಅವನು ಹಸುಗಳನ್ನು ಖರೀದಿಸಲು ತನ್ನ ಆದಾಯವನ್ನು ಚೀಲದಲ್ಲಿ ಇಟ್ಟುಕೊಂಡು ಹೊರಟನು. ದಾರಿಯಲ್ಲಿ ದಣಿದ ಸೋಮಣ್ಣ, ಮರದ ಕೆಳಗೆ ಆ ಚೀಲವನ್ನು ತಲೆಯಡಿಗೆ ಮಾಡಿಕೊಂಡು ನಿದ್ರೆಗೆ ಜಾರಿದನು. ಆಗ, ಒಂದು ಕೋತಿ ಆ ಚೀಲವನ್ನು ಆಹಾರವೆಂದು ಭಾವಿಸಿ ತೆಗೆದುಕೊಂಡಿತು, ಆದರೆ ಒಳಗೆ ನಾಣ್ಯಗಳನ್ನು ಕಂಡು ನಿರಾಶೆಯಾಯಿತು. ಸೋಮಣ್ಣ ಎಚ್ಚರಗೊಂಡು, ಕೋತಿ ನಾಣ್ಯಗಳನ್ನು ನೆಲದ ಮೇಲೆ ಮತ್ತು ಹತ್ತಿರದ ಕೆರೆಯಲ್ಲಿ ಎಸೆಯುತ್ತಿರುವುದನ್ನು ಕಂಡು ದುಃಖಿತನಾದನು. ಅವನು ನೆಲದ ಮೇಲೆ ಚದುರಿದ ನಾಣ್ಯಗಳನ್ನು ಸಂಗ್ರಹಿಸಲು ಪ್ರಯತ್ನಿಸಿದನು. ಅಂತಿಮವಾಗಿ, ಅವನು ಹಾಲಿನಿಂದ ಗಳಿಸಿದ ಹಣವನ್ನು ಮರಳಿ ಪಡೆದನು, ಆದರೆ ಅವನು ಸೇರಿಸಿದ ನೀರಿನ ಭಾಗವನ್ನು ಕಳೆದುಕೊಂಡನು.

ಹಾಲಿನದು ಹಾಲಿಗೆ ನೀರಿನದು ನೀರಿಗೆ

ಅ) ಪದಗಳ ಅರ್ಥ ಬರೆಯಿರಿ. (Write the word meaning)

ದನ = ಹಸು (Cow)                   ಆಯಾಸ = ದಣಿವು (Tired)
ಗಾಬರಿ= ಹೆದರಿಕೆ (Fear)              ವಿಶ್ರಾಂತಿ = ವಿರಾಮ, ಬಿಡುವು (Rest) ಮಾರ್ಗ = ದಾರಿ ( way)             
ಮೋಸಗಾರ = ವಂಚಕ (A cheat) ಎಸೆ = ಬಿಸಾಡು (Throw)             
ನಿರಾಶೆ = ಫಲಿಸದ ಆಸೆ (Disappointment)

Milkman = ಹಾಲು ಮಾರುವವನು                Cow = ದನ
Profit =    ಲಾಭ                 Money  = ಹಣ
Monkey = ಮಂಗ              Lake =  ಕೆರೆ
Coins =   ನಾಣ್ಯಗಳು         Diappointment = ನಿರಾಶೆ
Sale =      ಮಾರಾಟ           Tree = ಮರ

ಆ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)

೧. ಸೋಮಣ್ಣನು ಹೇಗೆ ಲಾಭಗಳಿಸುತ್ತಿದ್ದನು?
ಉ: ಸೋಮಣ್ಣನು ಹಾಲಿಗೆ ನೀರು ಬೆರೆಸಿ ಲಾಭಗಳಿಸುತ್ತಿದ್ದನು.
೨. ಸೋಮಣ್ಣನ ಹಣದ ಗಂಟನ್ನು ಯಾರು ತೆಗೆದುಕೊಂಡರು? ಏಕೆ?
ಉ: ಸೋಮಣ್ಣನ ಹಣದ ಗಂಟನ್ನು ಮಂಗ ತೆಗೆದುಕೊಂಡಿತು. ಅದು ಊಟದ ಗಂಟು ಎಂದುಕೊಂಡಿತು.
೩. ಸೋಮಣ್ಣನು ಎದೆ ಎದೆ ಬಡಿದುಕೊಳ್ಳಲು ಕಾರಣವೇನು?
ಉ: ಮಂಗ ಸೋಮಣ್ಣನ ಹಣವನ್ನು ನೆಲದ ಮೇಲೂ, ನೀರಿಗೂ ಎಸೆಯುವದನ್ನು ನೋಡಿ ಸೋಮಣ್ಣನು ಎದೆ ಎದೆ ಬಡಿದುಕೊಳ್ಳಲು ಕಾರಣ.
೪. ಸೋಮಣ್ಣನು ಮಂಗ ಮಾಡಿದ ಕೆಲಸದಿಂದ ಯಾವ ಪಾಠ ಕಲಿತ?
ಉ: ಸೋಮಣ್ಣನು ಅನ್ಯಾಯದ ಸಂಪಾದನೆ ನಮಗೆ ಉಳಿಯುವುದಿಲ್ಲವೆಂಬ ಪಾಠ ಕಲಿತ.
೫. ಸೋಮಣ್ಣ ಆಯಾಸದಿಂದ ಏನು ಮಾಡಿದನು?
ಉ: ಸೋಮಣ್ಣ ಆಯಾಸದಿಂದ ಬಳಲಿ ಒಂದು ಮರದ ಬುಡದಲ್ಲಿ ವಿಶ್ರಾಂತಿ ಪಡೆದನು.
೬. ಸೋಮಣ್ಣನಿಗೆ ಏಕೆ ಗಾಬರಿಯಾಯಿತು?
ಉ: ಹಣದ ಗಂಟು ಕಾಣದೇ ಸೋಮಣ್ಣನಿಗೆ ಗಾಬರಿಯಾಯಿತು.
೭. ನಿರಾಶೆಯಿಂದ ಮಂಗ ಏನು ಮಾಡಿತು?
ಉ: ನಿರಾಶೆಯಿಂದ ಮಂಗ ಹಣವನ್ನು ನೆಲದ ಮೇಲೂ, ನೀರಿಗೂ ಎಸೆಯಿತು.

ಇ) ಅರ್ಥಪೂರ್ಣ ವಾಕ್ಯ ರಚಿಸಿ. (Make meaningful sentences)

೧. ಸೋಮಣ್ಣ ಹೆಸರು ಹಾಲು ಮಾರುವವನ.
ಉ: ಹಾಲು ಮಾರುವವನ ಹೆಸರು ಸೋಮಣ್ಣ.
೨. ಬಂತು ಒಂದು ಅಲ್ಲಿಗೆ ಮಂಗ.
ಉ: ಅಲ್ಲಿಗೆ ಒಂದು ಮಂಗ ಬಂತು.
೩. ಮೇಲೆ ಹೊತ್ತಿನ ಸೋಮಣ್ಣನಿಗೆ ಸ್ವಲ್ಪ ಎಚ್ಚರವಾಯಿತು.
ಉ: ಸ್ವಲ್ಪ ಹೊತ್ತಿನ ಮೇಲೆ ಸೋಮಣ್ಣನಿಗೆ ಎಚ್ಚರವಾಯಿತು.
೪. ಹಣ ನೀರಿನ ಪಾಲಾಯಿತು ನೀರು.
ಉ: ನೀರಿನ ಹಣ ನೀರು ಪಾಲಾಯಿತು.

ಈ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in 2-3 sentences)

೧. ಸೋಮಣ್ಣ ಯಾರು? ಅವನು ಎಲ್ಲಿಗೆ ಹೋದನು? ಏಕೆ ?
ಉ: ಸೋಮಣ್ಣ ಹಾಲು ಮಾರುವವನು. ಅವನು ದನಗಳನ್ನು ಕೊಳ್ಳಲು ದನದ ಜಾತ್ರೆಗೆ ಹೋದನು.
೨. ಮಾರ್ಗ ಮಧ್ಯದಲ್ಲಿ ಸೋಮಣ್ಣ ಏಕೆ ನಿದ್ರಿಸಿ ಬಿಟ್ಟನು?
ಉ: ಮಾರ್ಗ ಮಧ್ಯದಲ್ಲಿ ಸೋಮಣ್ಣ ಆಯಾಸದಿಂದ ಬಳಲಿ ಒಂದು ಮರದ ಬುಡದಲ್ಲಿ ವಿಶ್ರಾಂತಿ ಪಡೆದನು.

ಉ) ಬಿಟ್ಟ ಸ್ಥಳವನ್ನು ಸರಿಯಾದ ಉತ್ತರದಿಂದ ತುಂಬಿರಿ. (Fill in the blanks)

೧. ಸೋಮಣ್ಣನ ಕೆಲಸ ಹಾಲು ಮಾರುವುದು.
೨. ಹಣವನ್ನು ಕೂಡಿಸಿಕೊಂಡು ದನದ ಜಾತ್ರೆ ಗೆ ಹೋಗಲು ನಿರ್ಧರಿಸಿದನು.
೩. ಹಣದ ಗಂಟನ್ನು ಬಿಚ್ಚಿ ನೋಡಿ ತಿಂಡಿಯಲ್ಲವೆಂದು ಮಂಗಕ್ಕೆ ನಿರಾಶೆ ಆಯಿತು.
೪. ಸೋಮಣ್ಣ ಹಾಲಿ ಗೆ ನೀರು ಬೆರೆಸಿ ಮಾರಿ ಹಣ ಮಾಡಿಕೊಂಡಿದ್ದನು.

ಊ) ವಿರುದ್ಧಾರ್ಥಕ ಪದ ಬರೆಯಿರಿ. (Write the opposite words)

ಆಯಾಸ X ನಿರಾಯಾಸ       ಶಾಂತಿ X ಅಶಾಂತಿ
ನ್ಯಾಯ X ಅನ್ಯಾಯ            ಆಸೆ X ನಿರಾಸೆ           ಪ್ರಾರಂಭ X ಅಂತ್ಯ

ಋ) ಬಿಡಿಸಿ ಬರೆಯಿರಿ (Split the word)

ಊರಿನಲ್ಲಿ = ಊರಿನ + ಅಲ್ಲಿ
ಬುಡದಲ್ಲಿ =  ಬುಡ + ಅಲ್ಲಿ
ಜಾತ್ರೆಯಲ್ಲಿ = ಜಾತ್ರೆ + ಅಲ್ಲಿ
ನಾಣ್ಯಗಳನ್ನು = ನಾಣ್ಯಗಳು +ಅನ್ನು
ಒಂದೊಂದಾಗಿ = ಒಂದು + ಒಂದಾಗಿ

ಎ) ಸರಿ ತಪ್ಪು ತಿಳಿಸಿ. (Write Correct or wrong)

೧. ಅವನು ಹಾಲಿಗೆ ಹಾಲು ಬೆರೆಸಿ ಹೆಚ್ಚು ಲಾಭ ಮಾಡುತ್ತಿದ್ದನು. ತಪ್ಪು
೨. ದನದ ಜಾತ್ರೆಯಲ್ಲಿ ಕುರಿಗಳನ್ನು ಕೊಳ್ಳಲು ಸೋಮಣ್ಣ ಹೊರಟನು. ತಪ್ಪು
೩. ಹಣದ ಗಂಟನ್ನು ತಲೆಯ ಕೆಳಗೆ ಇಟ್ಟುಕೊಂಡು ನಿದ್ರಿಸಿ ಬಿಟ್ಟನು. ಸರಿ
೪. ನೀರಿನಲ್ಲಿ ಬಿದ್ದಿದ್ದ ನಾಣ್ಯಗಳನ್ನೆಲ್ಲ ಆರಿಸಿಕೊಂಡನು. ತಪ್ಪು
೫. ಹಾಲಿನ ಹಣ ಮಾತ್ರ ಅವನಿಗೆ ದಕ್ಕಿತು ನೀರಿನ ಹಣ ನೀರು ಪಾಲಾಯಿತು. ಸರಿ

ಏ) ಹೊಂದಿಸಿ ಬರೆಯಿರಿ. (Match the following)

        ಅ                                     ಬ

ಹಾಡುವವನು                      ಮಾತುಗಾರ       ಹಾಡುಗಾರ
ಚಿತ್ರ ಬಿಡಿಸುವವನು             ಬರಹಗಾರ         ಚಿತ್ರಗಾರ
ಬರೆಯುವವನು                   ಚಿತ್ರಗಾರ           ಬರಹಗಾರ
ಮೋಸ ಮಾಡುವವನು         ಹಾಡುಗಾರ        ಮೋಸಗಾರ
ಮಾತಾಡುವವನು                ಮೋಸಗಾರ        ಮಾತುಗಾರ

Click here to download haalinadu haalige neerinadu neerige