“Halu tapasane,” a 4th grade poem by H.K. Avati, describes a dentist visiting a school for children’s dental check-ups. The dentist starts by checking the kids’ pockets, where he finds sweets and chocolates. When he examines their teeth, he discovers cavities and bleeding gums. In contrast, the dentist’s own teeth are perfectly healthy and shining brightly. Halu tapasane means teeth testing. This poem is written for

ಎಚ್.‌ ಕೆ. ಆವಟಿಯವರ 4ನೇ ತರಗತಿಯ “ಹಲ್ಲು ತಪಾಸಣೆ” ಎಂಬ ಕವಿತೆ, ಮಕ್ಕಳ ದಂತ ತಪಾಸಣೆಗಾಗಿ ಶಾಲೆಗೆ ಭೇಟಿ ನೀಡಿದ ದಂತವೈದ್ಯರನ್ನು ವಿವರಿಸುತ್ತದೆ. ದಂತವೈದ್ಯರು ಮಕ್ಕಳ ಜೇಬುಗಳನ್ನು ಪರಿಶೀಲಿಸುವ ಮೂಲಕ ಪ್ರಾರಂಭಿಸುತ್ತಾರೆ, ಅಲ್ಲಿ ಅವರು ಸಿಹಿತಿಂಡಿಗಳು ಮತ್ತು ಚಾಕೊಲೇಟ್‌ಗಳನ್ನು ಕಂಡುಕೊಳ್ಳುತ್ತಾರೆ. ಅವರು ಅವರ ಹಲ್ಲುಗಳನ್ನು ಪರೀಕ್ಷಿಸಿದಾಗ ಹುಳುಕುಗಳು ಮತ್ತು ಒಸಡುಗಳಲ್ಲಿ ರಕ್ತಸ್ರಾವವಾಗುವುದು ಕಂಡುಕೊಂಡರು. ಇದಕ್ಕೆ ವಿರುದ್ಧವಾಗಿ, ದಂತವೈದ್ಯರ ಸ್ವಂತ ಹಲ್ಲುಗಳು ಸಂಪೂರ್ಣವಾಗಿ ಆರೋಗ್ಯಕರವಾಗಿರುತ್ತವೆ ಮತ್ತು ಹೊಳೆಯುತ್ತವೆ.

ಹಲ್ಲು ತಪಾಸಣೆ (ಪದ್ಯ)

ಪ್ರಶ್ನೆ ಪತ್ರಿಕೆ – Question Paper

ಅ. ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer in one sentence)

೧. ವೈದ್ಯರ ಹಲ್ಲುಗಳು ಹೇಗೆ ಹೊಳೆಯುತಲಿದ್ದವು?

೨. ಏನನ್ನು ತಿಂದ ಹಲ್ಲನ್ನು ವೈದ್ಯರು ತೆರೆದು ನೋಡಿದರು?

೩. ಮಕ್ಕಳ ಹಲ್ಲು ತಪಾಸಣೆಗಾಗಿ ಶಾಲೆಗೆ ಬಂದಿದ್ದವರು ಯಾರು?

೪. ವೈದ್ಯರು ಮಕ್ಕಳ ಒಸಡಿನಲ್ಲಿ ಏನನ್ನು ಕಂಡರು?

ಆ. ಕನ್ನಡದಲ್ಲಿ ಅರ್ಥ ಬರೆಯಿರಿ. (Write the word meaning)

        ಕಡಲೆ, ಶೇಂಗಾ, ವೈದ್ಯ, ಚಿಕ್ಕ, ಹುಳುಕು, ಪುಟಾಣಿ

ಇ. ಎರಡು, ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer in 2 to 3 sentences)

೧. ಮಕ್ಕಳ ಹಲ್ಲುಗಳು. ಒಸಡುಗಳು ಹೇಗಿದ್ದವು?

೨. ವೈದ್ಯರಿಗೆ ಮಕ್ಕಳ ಜೇಬಿನಿಂದ ಏನೆಲ್ಲ ಸಿಕ್ಕಿದವು?

ಈ. ಪದ್ಯ ಪೂರ್ಣಗೊಳಿಸಿರಿ. (Complete the Poem)

        ವೈದ್ಯರು _________________________

        __________________________________

        _______________________ ತಪಾಸಣೆಗೆ

                ಹಲ್ಲಿಗೆ _________________________________

                ________________________________________

                ________________________ ಅವುಗಳಲಿ

ಉ. ವಚನ ಬದಲಿಸಿರಿ. (Write the plural form)

        ಶಾಲೆ, ಚೆಂಡು, ಹಲ್ಲು, ಜೇಬು, ಮಿಠಾಯಿ, ಒಸಡು, ತಿನಿಸು

ಊ. ಕೂಡಿಸಿ ಬರೆಯಿರಿ. (Join and make meaningful words)

೧. ಇನ್ನು + ಒಬ್ಬ =            ೨. ಉಂಟು + ಎಂದು =                ೩. ಏನು + ಉಂಟು =

೪. ಮತ್ತೆ + ಒಬ್ಬ =

ಋ. ಕೆಳಗಿನ ಪದಗಳಿಗೆ ಸರಿಯಾದ ರೂಪ ಬರೆಯಿರಿ. (Write the correct word)

೧. ಒಲಗೆ –                   ೨. ಹೊಬ್ಬನು –                                ೩. ಹೊಸಡು – ೪. ಅಲ್ಲು –

Click here to download halu tapasane worksheet