Hutatma Balak means Martyred boy. Hutatma Balak 4th Standard Kannada Notes CBSE syllabus.
Narayana was a brave young boy who took part in India’s freedom struggle during the Quit India Movement. Though he was very young, he was deeply inspired by the call for independence. He woke up early morning and dressed up. Told his mother that he is joining the protest. The mother said that he is too young to join the protest. But Naaryan said” There is no young and old to fight for the freedom”. Narayan joined other protesters who marched through the streets of Durga, raising patriotic slogans and demanding freedom from British rule. During one such protest, the British police opened fire on the crowd to stop the demonstration. Narayana was hit by a bullet and died at a very young age. When he was in his deathbed in the hospital, one of the British officers visited him and asked ” what he wants?” Nariyan said ” Swraj” . His courage and sacrifice became a symbol of patriotism, reminding people that even young students played an important role in India’s fight for freedom.
ಹುತಾತ್ಮ ಬಾಲಕ
ಅ) ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ. (Answer the following in one sentence)
೧. ಬ್ರಿಟೀಷರಿಗೆ ಭಾರತವನ್ನು ಬಿಟ್ಟು ತೊಲಗಿ ಎಂದು ಎಚ್ಚರಿಕೆ ಕೊಟ್ಟವರು ಯಾರು?
ಉ: ಬ್ರಿಟೀಷರಿಗೆ ಭಾರತವನ್ನು ಬಿಟ್ಟು ತೊಲಗಿ ಎಂದು ಎಚ್ಚರಿಕೆ ಕೊಟ್ಟವರು ಗಾಂಧೀಜಿಯವರು.
೨. ಹುಬ್ಬಳ್ಳಿಯ ಜನತೆಗೆ ಪ್ರಮುಖವಾಗಿದ್ದ ದಿನ ಯಾವುದು?
ಉ: ೧೯೪೨ರ ಆಗಸ್ಟ್ ೧೫ ಹುಬ್ಬಳ್ಳಿಯ ಜನತೆಗೆ ಪ್ರಮುಖವಾಗಿದ್ದ ದಿನ.
೩. ನಾರಾಯಣನ ತಾಯಿ ಏನೆಂದು ಮಗನನ್ನು ಹರಸಿದಳು?
ಉ: ನಾರಾಯಣನ ತಾಯಿ ‘ ದೇವರು ನಿನಗೆ ಒಳ್ಳೆಯದು ಮಾಡಲಿ ‘ ಎಂದು ಮಗನನ್ನು ಹರಸಿದಳು.
೪. ನಾರಾಯಣನು ಕೂಗಿದ ಘೋಷಣೆ ಯಾವುದು?
ಉ: ‘ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ‘ ಎಂಬ ಘೋಷಣೆಯನ್ನು ನಾರಾಯಣನು ಕೂಗಿದನು.
೫. ಸಾವಿನ ಅಂಚಿನಲ್ಲಿದ್ದ ಬಾಲಕ ಏನನ್ನು ಕೇಳಿದ?
ಉ: ಸಾವಿನ ಅಂಚಿನಲ್ಲಿದ್ದ ಬಾಲಕ ‘ ಸ್ವರಾಜ್ಯ‘ ಬೇಕೆಂದು ಕೇಳಿದ.
ಆ) ಎರಡು / ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ. (Answer the following in two – three sentences)
೧. ಬಾಲಕ ನಾರಾಯಣ ಮುಂಜಾನೆ ಎದ್ದು ಹೇಗೆ ಸಿದ್ಧನಾದನು ?
ಉ: ಬಾಲಕ ನಾರಾಯಣ ಮುಂಜಾನೆ ಬೇಗನೇ ಎದ್ದು ಸ್ನಾನ ಮಾಡಿದನು. ಖಾದಿ ಚಡ್ಡಿ , ಅಂಗಿ ಮತ್ತು ಗಾಂಧಿ ಟೋಪಿಯನ್ನು ಧರಿಸಿದನು. ಮನೆಯ ಬೀರುವಿನಲ್ಲಿದ್ದ ತ್ರಿವರ್ಣದ ಧ್ವಜವನ್ನು ತೆಗೆದುಕೊಂಡು ಬ್ರಿಟೀಷರ ವಿರುದ್ಧ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಲು ಸಿದ್ದನಾದನು.
೨. ನಾರಾಯಣನ ತಾಯಿ ಏಕೆ ಅಚ್ಚರಿಗೊಂಡಳು?
ಉ: “ ಅಮ್ಮಾ ಬ್ರಿಟೀಷರ ವಿರುದ್ದ ಪ್ರತಿಭಟನಾ ಮೆರವಣಿ ನಡೆಯುತ್ತಿದೆ. ಅದಕ್ಕೆ ನಾನು ಹೋಗುತ್ತಿದ್ದೇನೆ ” ಎಂದು ನಾರಾಯಣ ಹೇಳಿದನು. “ ಮಗು, ನೀನು ಇನ್ನೂ ಚಿಕ್ಕವನು. ದೊಡ್ಡವರ ಮೆರವಣಿಗೆಯಲ್ಲಿ ನೀನು ಹೇಗೆ ಹೋಗುತ್ತೀಯಾ? ” ಎಂದು ತಾಯಿ ಕೇಳಿದಳು. ಅದಕ್ಕೆ ಅವನು “ ಅಮ್ಮ ಹಿರಿಯರು, ಕಿರಿಯರು ಎನ್ನುವುದು ಮುಖ್ಯವಲ್ಲ, ಭಾರತ ಮಾತೆಯ ಸೇವೆಯನ್ನು ಹೇಗೆ ಮಾಡುತ್ತೇವೆ ಎನ್ನುವುದೇ ಮುಖ್ಯ “ ಎಂದು ಹೇಳಿದನು. ಮಗನ ಈ ರೀತಿಯ ಮಾತನ್ನು ಕೇಳಿ ತಾಯಿ ಅಚ್ಚರಿಗೊಂಡಳು.
೩. ಪೊಲೀಸರು ಸಿಟ್ಟಿನಿಂದ ಏಕೆ ಕುದಿಯುತ್ತಿದ್ದರು?
ಉ:ದುರ್ಗದ ಬಯಲಿನಲ್ಲಿ ನಡೆದ ಮೆರವಣಿಗೆಯಲ್ಲಿ ನಾರಾಯಣ ತಾರಕ ಸ್ವರದಲ್ಲಿ “ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ “ ಎಂದು ಘೋಷಣೆ ಕೂಗುತ್ತಿದ್ದನು. ಇತರರು ಅವನ ಕೂಗನ್ನು ಪ್ರತಿಧ್ವನಿಸುತ್ತಿದ್ದರು. ಇದನ್ನು ಕಂಡ ಪೊಲೀಸರು ಸಿಟ್ಟಿನಿಂದ ಕುದಿಯುತ್ತಿದ್ದರು.
ಇ) ಈ ಮಾತನ್ನು ಯಾರು? ಯಾರಿಗೆ ಹೇಳಿದರು? (Who told whom)
೧. “ ಎಲ್ಲಿಗೆ ಹೋಗುತ್ತಿರುವೆ ಮಗು ? ”
ಯಾರು? : ತಾಯಿ ಹೇಳಿದಳು.
ಯಾರಿಗೆ? : ನಾರಾಯಣನಿಗೆ ಹೇಳಿದಳು.
೨. “ ಅಮ್ಮ ಹಿರಿಯರು ಕಿರಿಯರು ಎನ್ನುವುದು ಮುಖ್ಯವಲ್ಲ ”
ಯಾರು? : ನಾರಾಯಣ ಹೇಳಿದನು.
ಯಾರಿಗೆ? : ತಾಯಿಗೆ ಹೇಳಿದನು.
೩. “ ನಿನಗೆ ಏನು ಬೇಕು? ”
ಯಾರು? : ಆಂಗ್ಲ ಅಧಿಕಾರಿ ಕೇಳಿದನು.
ಯಾರಿಗೆ? : ನಾರಾಯಣನನ್ನು ಕೇಳಿದನು.
ಭಾಷಾ ಚಟುವಟಿಕೆ
ಅ) ಕೊಟ್ಟಿರುವ ಪದ ಗಮನಿಸಿ ವಿರುದ್ಧಾರ್ಥಕ ಪದ ಬರೆಯಿರಿ. (Write the opposite words)
ಅಹಿಂಸೆ X ಹಿಂಸೆ
ಕಿರಿಯ X ಹಿರಿಯ
ಸಾಧ್ಯ X ಅಸಾಧ್ಯ
ಬೇಕು X ಬೇಡ
ಆ) ಮಾದರಿಯಲ್ಲಿ ಸೂಚಿಸಿರುವಂತೆ ಪದ ಬಿಡಿಸಿ ಬರೆಯಿರಿ. (Split the word)
ಮಾದರಿ : ಧೈರ್ಯ + ವಂತ
೧. ಗುಣವಂತ = ಗುಣ + ವಂತ
೨. ಶೌರ್ಯವಂತ = ಶೌರ್ಯ + ವಂತ
೩. ಶಕ್ತಿವಂತ = ಶಕ್ತಿ + ವಂತ
೪. ಬುದ್ದಿವಂತ = ಬುದ್ದಿ + ವಂತ
೫. ಹಣವಂತ = ಹಣ + ವಂತ
ಇ) ಕೊಟ್ಟಿರುವ ಪದಗಳನ್ನು ಬಳಸಿ ಸಂತ ವಾಕ್ಯ ರಚಿಸಿ. (Make your own sentence)
ಘೋಷಣೆ = ಬಾಲಕ ನಾರಾಯಣ ‘ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ‘ ಎಂಬ ಘೋಷಣೆ ಕೂಗುತ್ತಿದ್ದನು .
ಅಹಿಂಸೆ : ಗಾಂಧೀಜಿಯವರು ಅಹಿಂಸೆಯ ಮಾರ್ಗವನ್ನು ಅನುಸರಿಸಿದರು.
ಜೋರಾಗಿ = ನಾರಾಯಣನು ಜೋರಾಗಿ ಘೋಷಣೆ ಕೂಗುತ್ತಿದ್ದರು.
ಆಶ್ಚರ್ಯ = ಬಾಲಕನ ಮಾತು ಕೇಳಿ ಅವನ ತಾಯಿ ಆಶ್ಚರ್ಯದಿಂದ ನೋಡಿದಳು.
ಮೆರವಣಿಗೆ = ಬಾಲಕ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದನು.
ಈ) ಈ ಕೆಳಗಿನ ಪದಗಳಿಗೆ ನುಡಿ ಕಣಜದಿಂದ ಅರ್ಥ ಹುಡುಕಿ ಬರೆಯಿರಿ. (Write the synonyms)
ನೆರವು : ಸಹಾಯ , ಬೆಂಬಲ , ಆಸರೆ
ಹರಸು = ಆಶೀರ್ವದಿಸು, ಅನುಗ್ರಹಿಸು
ಅದ್ಭುತ = ಆಶ್ಚರ್ಯ, ವಿಸ್ಮಯ
ಕಸುಬು = ಕೆಲಸ, ಉದ್ಯೋಗ