
Iruveya Payana kannada poem (The Journey of an Ant) is a beautiful poem written by Dr. N. S. Lakshminarayana Bhat. Iruveya Payana grade VI. The poet describes the fascinating world of an ant and its tiny adventures. He tells us that the ant’s favorite places are the corners of doors, around the milk vessel, near the jaggery, and even inside a little boy’s pocket. For the small ant, these simple places become an entire world. The poet wonderfully imagines how the ant sees jaggery and sugar as huge mountains and the milk vessel as a deep, wide well. Through this poem, Dr. Bhat shows us how even the smallest creature has its own world full of wonders and journeys.
ಇರುವೆಯ ಪಯಣ
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ. (Answer the following question)
೧.ಇರುವೆ ಯಾವ ಯಾವ ಊರುಗಳನ್ನು ನೋಡಿ ಬಂದಿದೆ?
ಉ: ಇರುವೆ ಬಾಗಿಲಸಂದು, ಗೋಡೆಯ ಬಿರುಕು, ಬೆಲ್ಲದ ಡಬ್ಬ, ಹಿತ್ತಲು, ಹುಡುಗನ ಜೇಬು, ಹಾಲಿನ ಪಾತ್ರೆಯ ಸುತ್ತಲೂ ಹೀಗೆ ಮುಂತಾದ ಊರುಗಳನ್ನು ನೋಡಿ ಬಂದಿದೆ.
೨. ಬಸ್ಸೇ ಇಲ್ಲದ ಊರಿಗೆ ಇರುವೆ ಹೋಗಿ ಬಂದದ್ದು ಹೇಗೆ?
ಉ: ಬಸ್ಸೇ ಇಲ್ಲದ ಊರಿಗೆ ಇರುವೆ ನಡೆದುಕೊಂಡು ಹೋಗಿ ಬಂದಿದೆ.
೩. ಹುಡುಗನ ಜೇಬಿನತ್ತ ಇರುವೆ ಹೋಗಿದ್ದೇಕೆ?
ಉ: ಹುಡುಗನ ಜೇಬಿನತ್ತ ಇರುವೆ ತಿಂಡಿ ಇರುವುದಕ್ಕೆ ಹೋಯಿತು.
೪. ಹಾಲಿನ ಲೋಟವು ಇರುವೆಗೆ ಹೇಗೆ ಕಾಣಿಸುತ್ತದೆ?
ಉ: ಹಾಲಿನ ಲೋಟವು ಇರುವೆಗೆ ಬಾವಿಯಂತೆ ಕಾಣಿಸುತ್ತದೆ.
೫. ಇರುವೆ ಯಾವುದನ್ನು ಬಂಡೆ, ಬೆಟ್ಟ ಎಂದು ಹೇಳುತ್ತಿದೆ?
ಉ: ಇರುವೆಯು ಸಕ್ಕರೆಯನ್ನು ಬಂಡೆ, ಬೆಲ್ಲವನ್ನುಬೆಟ್ಟ ಎಂದು ಹೇಳುತ್ತಿದೆ.
೬. ಇರುವೆಯ ಕಣ್ಣಲ್ಲಿ ಸಣ್ಣ ಸಂಗತಿಗಳೂ ಹೇಗೆ ಬೃಹತ್ತಾಗಿ ಕಾಣುತ್ತವೆ ಎಂಬುದನ್ನು ಉದಾಹರಣೆ ಸಹಿತ ವಿವರಿಸಿ.
ಉ: ಇರುವೆ ಕಣ್ಣಿಗೆ ಸಕ್ಕರೆಯು ಬಂಡೆಯಂತೆ, ಬೆಲ್ಲವು ಬೆಟ್ಟದಂತೆ, ಹಾಲಿನ ಲೋಟ ಬಾವಿಯಂತೆ ಬೃಹತ್ತಾಗಿ ಕಾಣುತ್ತಿದೆ.