Jatreyalli ondu suttu kannada notes for grade VII. Jatreyalli ondu suttu means a day in a fair.
Venu went to the village fair with his grandfather. The fair was very colorful and full of joy. While walking around, Venu met his friend Irfan. Irfan told him happily that his father, along with a few other friends, had made the chariot for the fair. Many people had gathered around the chariot to watch the performances.
There were many folk artists at the fair. Yakshagana and Veeragase artists performed beautifully, and the drum beaters played loudly in front of the chariot. Venu enjoyed watching all these programs and felt very happy.
He also saw a Dombarata performance. A young girl was walking on a thin rope tied between two poles. She was balancing herself with a long stick. The children felt sad seeing her perform such a risky act. They spoke to the girl’s father and asked him to send her to school. This visit to the fair taught Venu an important lesson about culture, kindness, and the value of education.
ಜಾತ್ರೆಯಲ್ಲಿಒಂದು ಸುತ್ತು
I. ಪದಗಳ ಅರ್ಥ ತಿಳಿಯಿರಿ. (Write the word meaning)
ಆಕರ್ಷಿಸು – ಸೆಳೆ
ಕಾಯ್ದೆ – ಕಾನೂನು, ಕಟ್ಟಳೆ, ನಿಯಮ
ಕುಶಲತೆ – ನಿಪುಣತೆ
ಚರ್ಮವಾದ್ಯ -ಚರ್ಮದಿಂದ ಮಾಡಿದ ವಾದ್ಯ
ಜಾತ್ರೆ – ರಥೋತ್ಸವಕ್ಕೆ ಜನ ಸೇರುವುದು
ನಿರಂತರ – ಸದಾ, ಯಾವಾಗಲೂ
ನಿರ್ಮಿಸು – ತಯಾರಿಸು
ಬೆಂಡು ಬತ್ತಾಸು – ಒಂದು ಬಗೆಯ ಸಿಹಿತಿಂಡಿ
ಸನಿಹ – ಹತ್ತಿರ
ಸಮೂಹ – ಗುಂಪು
ಸೊಗಸು – ಚೆಲುವು
ಹರ್ಷೋದ್ಗಾರ – ಸಂತೋಷದ ಧ್ವನಿ
II. ಪ್ರಶ್ನೆಗಳು
ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)
೧. ಜಾತ್ರೆಯಲ್ಲಿನ ಅಂಗಡಿಗಳನ್ನು ನೋಡಿ ವೇಣು ಏನೆಂದು ಆಶ್ಚರ್ಯ ವ್ಯಕ್ತಪಡಿಸಿದನು?
ಉ: ಜಾತ್ರೆಯಲ್ಲಿನ ಅಂಗಡಿಗಳನ್ನು ನೋಡಿ ವೇಣು “ಅಬ್ಬಾ ! ಅಜ್ಜಾ, ಇಲ್ಲಿ ಎಷ್ಟೊಂದು ಅಂಗಡಿಗಳಿವೆಯಲ್ಲಾ! ಪ್ರತಿದಿನವೂ ಹೀಗೆ ಇರುತ್ತವೆಯೇ?” ಎಂದು ಆಶ್ಚರ್ಯ ವ್ಯಕ್ತಪಡಿಸಿದನು.
೨. ದೊಂಬರಾಟದ ಹುಡುಗಿ ಯಾವ ಸಾಹಸ ಮಾಡುತ್ತಿದ್ದಳು?
ಉ: ದೊಂಬರಾಟದ ಹುಡುಗಿ ತಂತಿಯ ಮೇಲೆ ನಡೆಯುತ್ತಾ ಸಾಹಸ ಮಾಡುತ್ತಿದ್ದಳು.
೩. ದೊಂಬರಾಟದ ಹುಡುಗಿಯನ್ನು ಕಂಡ ರಶ್ಮಿಗೆ ಕಾಡಿದ ಪ್ರಶ್ನೆಗಳೇನು?
ಉ: ದೊಂಬರಾಟದ ಹುಡುಗಿಯನ್ನು ದುಡಿಸಿವುದು, ಶಾಲೆಗೆ ಕಳುಹಿಸದಿರುವುದು ರಶ್ಮಿಗೆ ಕಾಡಿದ ಪ್ರಶ್ನೆಗಳು.
೪. ಅಜ್ಜನು ವೇದಿಕೆ ಮೇಲೆ ಯಾವ ಯಾವ ಕಾರ್ಯಕ್ರಮಗಳು ನಡೆಯುತ್ತವೆಂದು ಹೇಳಿದನು?ಉ: ಅಜ್ಜನು ವೇದಿಕೆಯ ಮೇಲೆ ನಾಟಕ, ಯಕ್ಷಗಾನ, ಬಯಲಾಟ, ನೃತ್ಯ
ಮುಂತಾದ ಕಾರ್ಯಕ್ರಮಗಳು ನಡೆಯುತ್ತವೆ ಎಂದು ಹೇಳಿದನು.
೫. ಜಾತ್ರೆಯಲ್ಲಿ ತೆರೆದಿಟ್ಟ ಪದಾರ್ಥಗಳನ್ನು ತಿನ್ನಬಾರದು ಏಕೆ?
ಉ: ತೆರೆದಿಟ್ಟ ತಿಂಡಿಗಳ ಮೇಲೆ ಧೂಳು, ಕ್ರಿಮಿಕೀಟಗಳು ಕುಳಿತಿರುತ್ತವೆ. ಅದನ್ನು ತಿಂದರೆ ವಾಂತಿ, ಭೇದಿ ಬರಬಹುದು. ಆದ್ದರಿಂದ ತೆರೆದಿಟ್ಟ ತಿಂಡಿಗಳನ್ನು ತಿನ್ನಬಾರದು.
ಆ) ಕೆಳಗಿನ ಪ್ರಶ್ನೆಗಳಿಗೆ ಎರಡು–ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in two – three sentences)
೧. ಜಾತ್ರೆಯಲ್ಲಿ ಯಾವ ಯಾವ ಅಂಗಡಿಗಳು ಇದ್ದವು?
ಉ: ಜಾತ್ರೆ ಮೈದಾನದಲ್ಲಿ ಆಟಿಕೆ ಸಾಮಾನು, ಬಲೂನು, ಗೊಂಬೆ, ಬಳೆ, ಸರ, ಬೆಂಡು ಬತ್ತಾಸು, ಸಿಹಿ ತಿಂಡಿಗಳ ಅಂಗಡಿಗಳು ಇದ್ದವು. ಬಟ್ಟೆ, ಪಾತ್ರೆ, ಹೂ-ಹಣ್ಣುಗಳ ಅಂಗಡಿಗಳು ಇದ್ದವು. ಹೋಟೆಲು, ಜೋಕಾಲಿ, ತೂಗುತೊಟ್ಟಿಲುಗಳು ಇದ್ದವು.
೨. ಜಾತ್ರೆಯಲ್ಲಿ ಬಹಳಷ್ಟು ಅಂಗಡಿಗಳು ಇರುತ್ತವೆ ಏಕೆ?
ಉ: ಜಾತ್ರೆಗೆ ಬಹಳಷ್ಟು ಜನ ಮತ್ತು ವ್ಯಾಪಾರಿಗಳು ಬರುತ್ತಾರೆ. ಜನ ತಮಗೆ ಬೇಕಾದುದನ್ನು ಕೊಂಡುಕೊಳ್ಳುತ್ತಾರೆ. ಇದು ವ್ಯಾಪಾರಿಗಳಿಗೆ ಒಳ್ಳೆಯ ಅವಕಾಶ. ಆದ್ದರಿಂದ ಜಾತ್ರೆಯಲ್ಲಿ ಬಹಳಷ್ಟು ಅಂಗಡಿಗಳು ಇರುತ್ತವೆ.
೩. ರಥದ ನಿರ್ಮಾಣದ ಬಗ್ಗೆ ಇರ್ಫಾನ್ ಏನೆಂದು ಹೇಳಿದನು?
ಉ: ಜಾತ್ರೆಯ ರಥವನ್ನು ನಿರ್ಮಿಸಿದವರು ತನ್ನ ತಂದೆ ಎಂದು ಇರ್ಫಾನ್ ಹೇಳಿದನು. ಅವರ ಜೊತೆ ಅವರ ಗೆಳೆಯರಾದ ರಮೇಶ್, ಜಾರ್ಜ್, ಮಹಮದ್, ವಿನ್ಸಂಟ್, ಶಂಕರಪ್ಪ ಇತರರೂ ಸೇರಿ ರಥವನ್ನು ನಿರ್ಮಿಸಿದರು. ಇದನ್ನು ಮಾಡಲು ಹಲವು ದಿನಗಳು ಆದವು ಎಂದು ರಥದ ನಿರ್ಮಾಣದ ಬಗ್ಗೆ ಇರ್ಫಾನ್ ಹೇಳಿದನು.
೪. ಅಜ್ಜನು ಶಿಕ್ಷಣ ಮತ್ತು ಪ್ರಾಣಿಗಳಿಗೆ ಸಂಬಂಧಿಸಿದಂತೆ ಮಕ್ಕಳಿಗೆ ಏನೆಂದು ಹೇಳಿದನು?
ಉ: ಚಿಕ್ಕ ಮಕ್ಕಳನ್ನು ದುಡಿಸುವುದು ತಪ್ಪು. ಅವರೂ ಎಲ್ಲರಂತೆ ಶಾಲೆಗೆ ಹೋಗಬೇಕು. ಅದಕ್ಕೇ ಮಕ್ಕಳ ಶಿಕ್ಷಣ ಮತ್ತು ಹಕ್ಕಿನ ಕಾಯ್ದೆ ಜಾರಿಗೆ ಬಂದಿರುವುದು. ಹಿಂದೆ ಆಟಗಳಲ್ಲಿ ಪ್ರಾಣಿಗಳನ್ನೂ ಬಳಸುತ್ತಿದ್ದರು. ಈಗ ಪ್ರಾಣಿಗಳನ್ನು ಬಳಸಬಾರದೆಂಬ ಕಾನೂನು ಇದೆ ಎಂದು ಅಜ್ಜನು ಶಿಕ್ಷಣ ಮತ್ತು ಪ್ರಾಣಿಗಳಿಗೆ ಸಂಬಂಧಿಸಿದಂತೆ ಮಕ್ಕಳಿಗೆ ಹೇಳಿದನು.
೫. ರಥದ ಮುಂದೆ ಸಾಗಿದ ಕಲಾ ತಂಡಗಳು ಯಾವುವು?
ಉ: ರಥದ ಮುಂದೆ ನಂದಿಧ್ವಜ, ಕಂಸಾಳೆ, ವೀರಗಾಸೆ, ಡೊಳ್ಳು ಕುಣಿತ, ಕೋಲಾಟ, ಹಾಲಕ್ಕಿ ಕುಣಿತ, ಜಾನಪದ ಕಲಾವಿದರು ನರ್ತಿಸುತ್ತಿದ್ದರು. ಬ್ಯಾಂಡ್, ಓಲಗ, ತಮಟೆ, ಕಹಳೆವಾದಕರು, ಯಕ್ಷಗಾನ ವೇಷಧಾರಿಗಳು ಕುಣಿಯುತ್ತಿದ್ದರು.
ಇ) ಈ ಮಾತುಗಳನ್ನು ಯಾರು ಯಾರಿಗೆ ಹೇಳಿದರು ತಿಳಿಸಿರಿ. (Who told whom)
೧. “ಜಾತ್ರೆಯಲ್ಲೇಕೆ ಇಷ್ಟೊಂದು ಅಂಗಡಿಗಳು.”
ಉ: ಈ ವಾಕ್ಯವನ್ನು ‘ಜಾತ್ರೆಯಲ್ಲಿ ಒಂದು ಸುತ್ತು’ ಎಂಬ ಗದ್ಯ ಪಾಠದಿಂದ ಆರಿಸಲಾಗಿದೆ. ಈ ಮಾತನ್ನು ರಶ್ಮಿಯು ತನ್ನ ಅಜ್ಜನಿಗೆ ಹೇಳಿದಳು.
೨. “ರಥದ ಮುಂದೆ ಸಾಗುತ್ತಿರುವ ವಿವಿಧ ವೇಷಧಾರಿಗಳು ಯಾರು?”
ಉ: ಈ ವಾಕ್ಯವನ್ನು ‘ಜಾತ್ರೆಯಲ್ಲಿ ಒಂದು ಸುತ್ತು’ ಎಂಬ ಗದ್ಯ ಪಾಠದಿಂದ ಆರಿಸಲಾಗಿದೆ. ಈ ಮಾತನ್ನು ವೇಣು ತನ್ನ ಅಜ್ಜನಿಗೆ ಹೇಳಿದನು.
೩. “ಹೌದು, ಅವಳ ಧೈರ್ಯ, ಸಾಹಸವನ್ನು ಮೆಚ್ಚಲೇಬೇಕು.”
ಉ:ಈ ವಾಕ್ಯವನ್ನು ‘ಜಾತ್ರೆಯಲ್ಲಿ ಒಂದು ಸುತ್ತು’ ಎಂಬ ಗದ್ಯ ಪಾಠದಿಂದ ಆರಿಸಲಾಗಿದೆ. ಈ ಮಾತನ್ನು ಇರ್ಫಾನನು ವೇಣುವಿಗೆ ಹೇಳಿದನು.
III. ಭಾಷಾಭ್ಯಾಸ
ಅ) ಕೆಳಗಿನ ಪದಗಳನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಬಳಸಿ ಬರೆಯಿರಿ. (Make your own sentence)
೧. ಆಕರ್ಷಿಸು : ಜಾತ್ರೆ ನನ್ನನ್ನು ಆಕರ್ಷಿಸಿತು.
೨. ಕುಶಲತೆ : ಜಾತ್ರೆಯಲ್ಲಿ ಕರ ಕುಶಲತೆ ಪ್ರದರ್ಶನ ಚೆನ್ನಾಗಿತ್ತು.
೩. ಸೊಗಸು : ಜೋಗ ಜಲಪಾತ ಸೊಗಸಾಗಿದೆ.
೪. ವೀಕ್ಷಿಸು : ನಾನು ಜೋಗ ಜಲಪಾತವನ್ನು ವೀಕ್ಷಿಸಿದೆನು.
೫. ಕುತೂಹಲ : ನಾನು ನಾಯಿಯನ್ನು ಕುತೂಹಲದಿಂದ ನೋಡಿದೆ.
ಆ) ಲಿಂಗ ಸಂಬಂಧಿ ‘ಅ’ ಪಟ್ಟಿಯಲ್ಲಿರುವ ಅಂಶಗಳಿಗೆ ‘ಬ’ ಪಟ್ಟಿಯ ಅಂಶಗಳನ್ನು ಹೊಂದಿಸಿ ಬರೆಯಿರಿ. (Match the following)
‘ಅ’ ಪಟ್ಟಿ ‘ಬ’ ಪಟ್ಟಿ
೧) ಅಜ್ಜಿ ಅಜ್ಜ
೨) ತಾಯಿ ತಂದೆ
೩) ಹುಡುಗಿ ಹುಡುಗ
೪) ಬಾಲಕಿ ಬಾಲಕ
೫) ಗಂಡಸು ಹೆಂಗಸು
೬) ಅತ್ತೆ ಮಾವ
೭) ಅಣ್ಣ ಅಕ್ಕ
ಇ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ. (Write the opposite words)
೧. ಅನುಕೂಲ X ಅನಾನುಕೂಲ
೨. ಸಂತೋಷ X ದುಃಖ
೩. ಧೈರ್ಯ X ಅಧೈರ್ಯ
೪. ಆಧಾರ X ನಿರಾಧಾರ
೫. ಸಮತೋಲನ X ಅಸಮತೋಲನ
೬. ಸನಿಹ X ದೂರ
ಈ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ. (Split the word)
೧. ಓಡಾಟ = ಓಡು + ಆಟ
೨. ಬಯಲಾಟ = ಬಯಲು + ಆಟ
೩. ಹರ್ಷೋದ್ಗಾರ = ಹರ್ಷ + ಉದ್ಗಾರ
೪. ದೊಂಬರಾಟ = ದೊಂಬರ + ಆಟ