Kannada sahitya sammelana 2024 , held from December 20th to 23rd at in Mandya, celebrated the richness of Kannada language, literature, and culture. Presided over by renowned writer G R Channabasappa. The Sammelana hosted literary discussions, poetry readings, book releases, and seminars, promoting the growth of Kannada literature and inspiring the younger generation. Kannada sahitya sammelana 2024 event highlighted the cultural significance of Kannada, fostering pride and unity among its speakers while paving the way for its preservation and global recognition.

ಕನ್ನಡ ಸಾಹಿತ್ಯ ಸಮ್ಮೇಳನ ೨೦೨೪

ಪೀಠಿಕೆ:
ಕನ್ನಡ ಸಾಹಿತ್ಯ ಸಮ್ಮೇಳನವು ಕನ್ನಡ ಭಾಷೆಯ ಸಂಸ್ಕೃತಿ, ಸಾಹಿತ್ಯ, ಮತ್ತು ಪರಂಪರೆಯ ಪ್ರಾಮುಖ್ಯತೆಯನ್ನು ತೋರುವ ಒಂದು ಪ್ರಮುಖ ಹಬ್ಬವಾಗಿದೆ. ೨೦೨೪ರ ಕನ್ನಡ ಸಾಹಿತ್ಯ ಸಮ್ಮೇಳನವು ಡಿಸೆಂಬರ್ ೨೦ರಿಂದ ೨೩ರವರೆಗೆ ಮಂಡ್ಯದಲ್ಲಿ ಜರುಗಿತು. ಈ ಸಮ್ಮೇಳನದಲ್ಲಿ ಹಲವಾರು ಗಣ್ಯರು ಭಾಗವಹಿಸಿದ್ದರು. ಶ್ರೀ ಗೊ ರೂ ಚನ್ನಬಸಪ್ಪರವರು ಸಮ್ಮೇಳನದ ಮುಖ್ಯ ಅಧ್ಯಕ್ಷರಾಗಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಉಪಸ್ಥಿತರಿದ್ದರು.

ವಿಷಯ ನಿರೂಪಣೆ:
ಈ ಸಮ್ಮೇಳನವು ಕನ್ನಡ ಭಾಷೆಯ ಅಭಿವೃದ್ಧಿ, ಸಾಹಿತ್ಯದ ಪ್ರೋತ್ಸಾಹ, ಮತ್ತು ಯುವ ಜನರಲ್ಲಿ ಭಾಷಾ ಪ್ರೀತಿಯನ್ನು ಬೆಳೆಯಲು ಮಹತ್ವದ ವೇದಿಕೆಯಾಗಿತ್ತು. ೨೦೨೪ರ ಸಮ್ಮೇಳನದಲ್ಲಿ ಸಾಹಿತ್ಯ ಚರ್ಚೆಗಳು, ಕಾವ್ಯ ವಾಚನ, ಪುಸ್ತಕ ಬಿಡುಗಡೆಗಳು ಮತ್ತು ಕನ್ನಡ ಭಾಷೆಗೆ ಸಂಬಂಧಿಸಿದ ಚರ್ಚೆಯ ಮೂಲಕ ಜ್ಞಾನದ ಬೆಳವಣಿಗೆಯಾಯಿತು. ಹಲವಾರು ಸಾಹಿತಿಗಳನ್ನು ಸನ್ಮಾನಿಸಲಾಯಿತು.

ಈ ಬಾರಿಯ ಸಮ್ಮೇಳನವು ಈ ಕಾಲದ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ವಿಷಯಗಳನ್ನು ಕನ್ನಡ ಸಾಹಿತ್ಯದ ದೃಷ್ಟಿಯಿಂದ ನೋಡಲಾಯಿತು. ಕನ್ನಡ ಭಾಷೆಯ ಪ್ರಾಮುಖ್ಯತೆಯನ್ನು ನೂತನ ತಲೆಮಾರಿಗೆ ತಲುಪಿಸಲು ಹಲವು ಆಕರ್ಷಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು. ೨೦೨೫ರ ಕನ್ನಡ ಸಾಹಿತ್ಯ ಸಮ್ಮೇಳನವು ಬಳ್ಳಾರಿಯಲ್ಲಿ ಆಯೋಜಿಸಲಾಗುವುದು.

ಉಪಸಂಹಾರ:
ಕನ್ನಡ ಸಾಹಿತ್ಯ ಸಮ್ಮೇಳನವು ಕನ್ನಡಿಗರಿಗೂ, ಕನ್ನಡ ಪ್ರಿಯರಿಗೂ ಭಾಷೆಯ ಬಗ್ಗೆ ಹೆಮ್ಮೆ ಮತ್ತು ಪ್ರೀತಿಯನ್ನು ಹೆಚ್ಚಿಸುತ್ತದೆ. ಈ ಸಮ್ಮೇಳನವು ಕನ್ನಡ ಭಾಷೆಯನ್ನು ಮುಂದಿನ ತಲೆಮಾರಿಗೆ ತಲುಪಿಸಲು ಮತ್ತು ಕನ್ನಡದ ಮಹತ್ವವನ್ನು ಜಗತ್ತಿಗೆ ತೋರಿಸಲು ಸದಾ ಪ್ರೇರಕವಾಗಿರುತ್ತದೆ.

Click here to download karnataka sahithya sammelana