“Karuneya Haadhi” is about the kindness of Shri. Subhash Chandra Bose. Subhash Chandra Bose, an Indian leader, courageously fought against British rule for his country’s independence. He passionately believed in the freedom of India and dedicated himself to this cause. Bose founded the Indian National Army to challenge British authority. Even now, his bravery and unwavering resolve continue to motivate people. Karuneya haadhi means kindness path.

ಭಾರತೀಯ ನಾಯಕರಾದ ಸುಭಾಷ್ ಚಂದ್ರ ಬೋಸ್ ಅವರು ತಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷ್ ಆಡಳಿತದ ವಿರುದ್ಧ ಧೈರ್ಯದಿಂದ ಹೋರಾಡಿದರು. ಅವರು ಭಾರತದ ಸ್ವಾತಂತ್ರ್ಯವನ್ನು ಉತ್ಕಟವಾಗಿ ನಂಬಿದ್ದರು ಮತ್ತು ಈ ಉದ್ದೇಶಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡರು. ಬೋಸ್ ಅವರು ಬ್ರಿಟಿಷ್ ಅಧಿಕಾರವನ್ನು ಪ್ರಶ್ನಿಸಲು ಇಂಡಿಯನ್ ನ್ಯಾಷನಲ್ ಆರ್ಮಿ ಸ್ಥಾಪಿಸಿದರು. ಈಗಲೂ, ಅವರ ಶೌರ್ಯ ಮತ್ತು ಅಚಲ ಸಂಕಲ್ಪ ಜನರನ್ನು ಪ್ರೇರೇಪಿಸುತ್ತಲೇ ಇದೆ.

ಕರುಣೆಯ ಹಾದಿ

ಅ. ಅರ್ಥ ಬರೆಯಿರಿ. (Write word meaning)

ಕಪಾಟು = ಬೀರು, ಮರುಗು = ಸಂಕಟಪಡು, ಸ್ಪಂದಿಸು = ಮಿಡಿಯು, ವಿಶ್ವವಿಖ್ಯಾತ = ಜಗತ್‌ ಪ್ರಸಿದ್ಧ.

ಆ. ಬಿಟ್ಟ ಸ್ಥಳ ತುಂಬಿರಿ (Fill in the blanks)

೧. ಕಪಾಟಿನಿಂದ ಇರುವೆಗಳು ಸಾಲು ಸಾಲಾಗಿ ಹರಿದು ಬರುತ್ತಿದ್ದವು.
೨. ಕಪಾಟನ್ನು ತೆರೆದು ನೋಡಿದಾಗ ಪುಸ್ತಕಗಳ ನಡುವೆ ರೊಟ್ಟಿಗಳಿದ್ದವು.
೩. ನಿನ್ನಂತಹ ಕರುಣಾಮಯಿ ಮಗನನ್ನು ಪಡೆದ ನಾನೇ ಧನ್ಯ.

ಇ. ಗುಂಪಿಗೆ ಸೇರದ ಪದ ಗುರುತಿಸಿ ಬರೆಯಿರಿ. (Remove the odd word out)

೧. ತಾಯಿ, ಮಾತೆ, ಮಗಳು, ಜನನಿ – ಮಗಳು
೨. ಸಂತೋಷ, ದುಃಖ, ಆನಂದ, ಖುಷಿ – ದುಃಖ
೩. ರೊಟ್ಟಿ, ದೋಸೆ, ಉಪ್ಪಿಟ್ಟು, ಕಿತ್ತಳೆ –  ಕಿತ್ತಳೆ
೪. ಹರಸು, ಸೋಲಿಸು, ಹಾರೈಸು, ಆಶೀರ್ವದಿಸು – ಸೋಲಿಸು

ಈ. ಈ ಮಾತನ್ನು ಯಾರು ಯಾರಿಗೆ ಹೇಳಿದರು? (Who told whom)
೧. “ರೊಟ್ಟಿಗಳನ್ನು ಕಪಾಟಿನಲ್ಲಿ ಏಕೆ ಮುಚ್ಚಿಟ್ಟಿದ್ದೆ”
ಯಾರು ಹೇಳಿದರು?: ತಾಯಿ ಹೇಳಿದಳು.
ಯಾರಿಗೆ ಹೇಳಿದರು? : ಮಗುವಿಗೆ ಹೇಳಿದಳು.

೨. “ಇನ್ನು ಆ ರೊಟ್ಟಿಗಳ ಅಗತ್ಯವಿಲ್ಲ ತೆಗೆದು ಎಸೆದು ಬಿಡು”
ಯಾರು ಹೇಳಿದರು?:ಮಗ ಹೇಳಿದನು.
ಯಾರಿಗೆ ಹೇಳಿದರು? : ತಾಯಿಗೆ ಹೇಳಿದನು.

ಉ. ಸರಿಯಾದ ಪದಗಳ ಸಹಾಯದಿಂದ ಸರಿಯಾದ ಪ್ರಶ್ನೆಗಳನ್ನು ರಚಿಸಿರಿ. (Use the correct word form right questions)

೧. ರೊಟ್ಟಿಗಳನ್ನು ಯಾರಿಗೆ ಕೊಡಬೇಕಾಗಿತ್ತು?
೨. ಪುಸ್ತಕಗಳನ್ನು ಎಲ್ಲಿ ಇಟ್ಟಿರುವೆ?
೩. ಆ ಪೆಟ್ಟಿಗೆಯಲ್ಲಿರುವುದು ಏನು?
೪. ಮಕ್ಕಳು ತರಗತಿಗೆ ಯಾವಾಗ ಬಂದರು?

ಊ. ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer in one sentence)

೧. ಬಾಲಕನ ತಂದೆ ತಾಯಿಯವರ ಹೆಸರೇನು?
ಉ: ಬಾಲಕನ ತಂದೆ ಹೆಸರು ಜಾನಕಿನಾಥ ಬೋಸ್‌ ಮತ್ತು ತಾಯಿಯ ಹೆಸರು ಪ್ರಭಾವತಿದೇವಿ.
೨. ಬಾಲಕ ರೊಟ್ಟಿಗಳನ್ನು ಯಾರಿಗೆ ಕೊಡುತ್ತಿದ್ದನು?
ಉ: ಬಾಲಕ ರೊಟ್ಟಿಗಳನ್ನು ಒಬ್ಬ ಭಿಕ್ಷುಕಿಗೆ ಕೊಡುತ್ತಿದ್ದನು.
೩. ಆ ಧೀರ ನಾಯಕ ಯಾರು?
ಉ: ಆ ಧೀರ ನಾಯಕ “ಸುಭಾಷ್‌ ಚಂದ್ರಬೋಸ್”.

ಋ. ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in 2-3 sentences)

೧. ಏಕೆ ಅಳುತ್ತಿರುವೆ? ಎಂದು ತಾಯಿ ಕೇಳಿದಾಗ ಮಗನು ಕೊಟ್ಟ ಉತ್ತರವೇನು?
ಉ. ಮಗನು ತಾಯಿಗೆ “ ಅಮ್ಮಾ, ಪ್ರತಿದಿನ ನನ್ನ ಊಟದಿಂದ ರೊಟ್ಟಿ ತೆಗೆದಿಟ್ಟು ಒಬ್ಬ ಭಿಕ್ಷುಕಿಗೆ ಕೊಡುತಿದ್ದೆ. ಆದರೆ ಈ ಎರಡು ದಿನಗಳಿಂದ ಆ ಜಾಗದಲ್ಲಿ ಅವಳು ಕಾಣಿಸಲಿಲ್ಲ. ಇನ್ನು ಕಾಣಿಸುವ ಯಾವ ಲಕ್ಷಣವೂ ಇಲ್ಲ” ಎಂದು ಉತ್ತರ ಕೊಟ್ಟನು.
೨. ಸುಭಾಷ್ ಚಂದ್ರ ಬೋಸರ ಬಗ್ಗೆ ನಿಮಗೆ ಗೊತ್ತಿರುವ ವಿವರಗಳನ್ನು ಬರೆಯಿರಿ.
ಉ: ಸುಭಾಷ್ ಚಂದ್ರ ಬೋಸ್ ಭಾರತದ ಧೀರ ನಾಯಕ. ಅವರು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಬೋಸ್ ಅವರು ತಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಅವಿರತವಾಗಿ ಶ್ರಮಿಸಿದರು. ಅವರು ಬ್ರಿಟಿಷರ ವಿರುದ್ಧ ಹೋರಾಡಲು ಭಾರತೀಯ ರಾಷ್ಟ್ರೀಯ ಸೇನೆಯನ್ನು ರಚಿಸಿದರು. ಅವರ ಧೈರ್ಯ ಮತ್ತು ದೃಢಸಂಕಲ್ಪ ಇಂದಿಗೂ ಜನರನ್ನು ಪ್ರೇರೇಪಿಸುತ್ತದೆ.

ಅಭ್ಯಾಸ ಚಟುವಟಿಕೆ (Exercises)

ಎ. ಕೊಟ್ಟಿರುವ ಗಾದೆ ಮಾತುಗಳನ್ನು ಪೂರ್ಣಗೊಳಿಸಿರಿ. (Complete proverbs)

೧. ಕಾಯಕವೇ ಕೈಲಾಸ.
೨. ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ.
೩. ಕೈ ಕೆಸರಾದರೆ ಬಾಯಿ ಮೊಸರು.
೪. ಒಗ್ಗಟ್ಟಿನಲ್ಲಿ ಬಲವಿದೆ.

Click here to download Karuneya Hadhi Exercise