Kithura Kesari kannada poem grade VI CBSE syllabus. Kithura Kesari standard 6th is about Kithur Rani Chennamma.
Kithur Rani Chennamma was one of India’s earliest freedom fighters. She bravely opposed British rule in 1824, rejecting the Doctrine of Lapse. Her courage, leadership, and sacrifice made her a timeless symbol of resistance, pride, and women’s empowerment in Indian history.
ಕಿತ್ತೂರ ಕೇಸರಿ
ಪದಗಳ ಅರ್ಥ:
ದಿಟ್ಟ ಹೆಜ್ಜೆ, ಕೆಚ್ಚೆದೆ,ರಣಚಂಡಿ, ಚರಿತ್ರೆ, ಕುನ್ನಿ, ಜನಜನಿತ, ಪರಕೀಯ, ಕನವರಿಕೆ, ಅರಿ, ದುರ್ಮತಿ, ಮಮ್ಮಲ ಮರುಗು, ಸೆರೆಮನೆ, ಕಲಿ, ಮರುಜನ್ಮ
ಅ. ಬಿಟ್ಟ ಸ್ಥಳ ತುಂಬಿರಿ. (Fill in the blanks)
೧. ಅನ್ನಕ್ಕೆ ಬಂದಿರುವ ………….. ಮನ್ನಿಸದೆ.
೨. ಹೋದರೀ …………………… ಪರಕೀಯರಾ ವಶಕೆ !
೩. ಕರಿನೆಲದ ಗರಿಮೆಯನ್ನು ತೋರಿಸಲು ……………………
೪. ಮಮ್ಮಲನೆ ಮರುಗಿದಳು ………………… ಕೊರಗಿದಳು.
ಆ. ಕೊಟ್ಟಿರುವ ಪದ ಬಳಸಿ ಸಂತ ವಾಕ್ಯ ಬರೆಯಿರಿ. (Make your own sentence)
ಚರಿತ್ರೆ, ಋಣ, ಜಯಮಾಲೆ
ಇ. ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ. (Answer the following in one sentences)
ಅ. ಚೆನ್ನಮ್ಮ ಏನೆಂದು ಕನವರಿಸಿ ಹಲ್ಲು ಕಡಿದಳು?
ಆ. ನಮ್ಮ ಅನ್ನವನ್ನು ಉಂಡು ಕೊಬ್ಬಿರುವವರು ಯಾರು?
ಇ. ಚೆನ್ನಮ್ಮ ಸೈನಿಕರನ್ನು ಕುರಿತು ಏನೆಂದು ಹೇಳಿದಳು?
ಈ. ಯಾರ ಕೃಪೆಯಿಂದ ಸೈನ್ಯವನ್ನು ಕಟ್ಟಲಾಯಿತು?
ಉ. ಮರುಜನ್ಮ ನೀಡೆಂದು ಚೆನ್ನಮ್ಮ ಯಾರಲ್ಲಿ , ಯಾಕೆ ಕೇಳಿದಳು?
ಈ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿರಿ: (Answer the following two – three sentences)
೧. ರಾಣಿಚೆನ್ನಮ್ಮ ಹಲ್ಲು ಕಡಿದದ್ದು ಯಾಕೆ?
೨. ಚೆನ್ನಮ್ಮನಿಗೆ ನೋವಾಗಲು ಕಾರಣವೇನು?
೩. ಕೆಚ್ಚೆದೆಯ ಕಲಿಗಳಿಗೆ ಏನೆಂದು ಹೇಳಿದಳು?
೪. ಕಿತ್ತೂರ ಕೇಸರಿ ಕಣ್ಮುಚ್ಚಿ ಏನೆಂದು ಬೇಡಿಕೊಂಡಳು?
ಈ. ಪದ್ಯವನ್ನು ಪೂರ್ಣಗೊಳಿಸಿರಿ : (Complete the poem)
೧. ಮಲ್ಲಸಜ್ಜನ ………………………………….
………………………………………………………
………………………………………………………
……………………………………… ಕಡಿದಾಳಕೆ
೨. ನಿನ್ನ …………………………………………….
………………………………………………………
………………………………………………………
………………………………….. ಕಿತ್ತೂರ ಕೇಸರಿ !
ಊ. ಕೆಳಗಿನ ಪದಗಳನ್ನು ಅಚ್ಚಕನ್ನಡ , ಸಂಸ್ಕೃತ , ಇಂಗ್ಲೀಷ್ , ಪೋರ್ಚುಗೀಸ್ ಭಾಷೆಯ ಪದಗಳಾಗಿ ವಿಂಗಡಿಸಿ ಬರೆಯಿರಿ. (Divide the following words into Kannada, Sanskrit, English and Portuguese words and write them)
ರೋಡು, ಅಲಮಾರು, ಛೇರ್‌ಮನ್, ಭೂಮಿ, ಮನೆ, ಕೋರ್ಟು, ನದಿ, ಸ್ಕೂಲ್, ಸಾಬೂನ್, ಸಂಧ್ಯಾ, ಬ್ಯಾಂಕ್, ಮೇಜು, ಆರ್ಯ, ಪಾದ್ರಿ, ರಾತ್ರಿ, ಹೊಲ, ಗದ್ದೆ, ಹಿತ್ತಿಲು, ತಿಳಿವಳಿಕೆ, ಬಾಯಿ
ಋ. ಈ ಪದ್ಯದಲ್ಲಿರುವ ಪ್ರಾಸ ಪದಗಳನ್ನು ಆರಿಸಿ ಬರೆಯಿರಿ. (Choose and write the rhyming words in this poem)
ಭಾಷಾ ಆಟಗಳು
ಅ. ಇಲ್ಲಿ ದೇಶೀಯ ಮತ್ತು ಅನ್ಯದೇಶೀಯ ಪದಗಳನ್ನು ಒಂದು ಚೌಕದಲ್ಲಿ ಮಿಶ್ರಣ ಗೊಳಿಸಿ ನೀಡಿದೆ. ಜಾಣರಾದ ನೀವು ಅವುಗಳನ್ನು ಪ್ರತ್ಯೇಕಿಸಿ ಬರೆಯಿರಿ: (Write the domestic and foreign words separately.)
ದಿವಾನ , ಸೈಕಲ್ , ಅನಾನಸು , ವಜಾ, ಜರೂರು, ಬೆಲ್ಲ, ಸರದಾರ , ಸಿನಿಮಾ, ಖಾನಾವಳಿ, ನೀರು, ಚೂಡ, ಶಿಫಾರಸ್ಸು, ಮೇಜು , ಹುಲ್ಲು, ಪಗಾರ , ಸಾಬೂನು, ಎಕರೆ, ಸರಕಾರ, ಹೊಲ, ಕಛೇರಿ, ಜಾನುವಾರು , ಆಟ, ಲಾವಣಿ , ಬಟಾಟೆ, ಅಮಾಲ್ದಾರ್
ಆ. ಈ ಪದ್ಯವನ್ನು ಓದಿ ಕೆಳಗಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ. (Read this verse and answer the questions below.
ಬಂತಪ್ಪ ಬಂತು ಮಳೆಗಾಲ
ಬೀಜವ ಬಿತ್ತುವ ಈ ಕಾಲ
ಬೆಳೆಯನು ಬೆಳೆಯುವ ಈ ಕಾಲ
ಕೊಡೆಯನು ಹಿಡಿಯುವ ಈ ಕಾಲ II
ಬಂತಪ್ಪ ಬಂತು ಚಳಿಗಾಲ
ಎಲೆಗಳು ಉದುರುವ ಈ ಕಾಲ
ಗಡ ಗಡ ನಡುಗುವ ಈ ಕಾಲ
ಕಂಬಳಿ ಹೊದೆಯುವ ಈ ಕಾಲ II
ಬಂತಪ್ಪ ಬಂತು ಬೇಸಿಗೆ ಕಾಲ
ನೀರನು ಕುಡಿಯುವ ಈ ಕಾಲ
ಮಾವು ಸಿಗುವ ಈ ಕಾಲ
ಬಿಸಿಲಿಗೆ ಒಣಗುವ ಈ ಕಾಲ II
ಪ್ರಶ್ನೆಗಳು
೧. ಕಾಲಗಳು ಯಾವುವು?
೨. ಭೂಮಿಯ ಮೇಲೆ ಕಾಲಗಳು ಹೇಗೆ ಉಂಟಾಗುತ್ತವೆ?
೩. ಮಳೆ ಬಾರದಿದ್ದರೆ ಏನಾಗಬಹುದು?
೪ ಚಳಿಗಾಲ ಅಗತ್ಯವಿದೆಯೇ?
೫. ಈಗ ಬಿಸಿಲಿನ ಪ್ರಮಾಣ ಹೆಚ್ಚಾಗಿರಲು ಕಾರಣವೇನು?
೬. ಕಾಲಗಳೇ ಇಲ್ಲದಿದ್ದರೆ ಏನಾಗುತ್ತಿತ್ತು?