Kittura Kesari kannada poem grade VI CBSE syllabus. Kittura Kesari standard 6th is about Kithur rani chennamma.
Kithur Rani Chennamma was one of India’s earliest freedom fighters. She bravely opposed British rule in 1824, rejecting the Doctrine of Lapse. Her courage, leadership, and sacrifice made her a timeless symbol of resistance, pride, and women’s empowerment in Indian history.
ಕಿತ್ತೂರು ರಾಣಿ ಚೆನ್ನಮ್ಮ ಭಾರತದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿಗಳಲ್ಲಿ ಒಬ್ಬರು. ೧೮೨೪ರಲ್ಲಿ ಬ್ರಿಟಿಷರ ದತ್ತು ಸಿದ್ಧಾಂತವನ್ನು ವಿರೋಧಿಸಿ ಧೈರ್ಯದಿಂದ ಹೋರಾಡಿದರು. ಅವರ ಶೌರ್ಯ, ನಾಯಕತ್ವ ಮತ್ತು ತ್ಯಾಗವು ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಅಮರವಾದ ಸ್ಥಾನ ಪಡೆದಿದೆ.
ಕಿತ್ತೂರ ಕೇಸರಿ
ಪದಗಳ ಅರ್ಥ:
ದಿಟ್ಟ ಹೆಜ್ಜೆ – ಧೈರ್ಯದ ಹೆಜ್ಜೆ , ಸಾಹಸದ ನಡೆ
ಚರಿತ್ರೆ -ಇತಿಹಾಸ
ಕುನ್ನಿ – ನಾಯಿಮರಿ
ಜನಜನಿತ – ಪ್ರಸಿದ್ಧವಾದ
ಪರಕೀಯ – ವಿದೇಶಿಯ, ಅನ್ಯ
ಕನವರಿಕೆ – ನಿದ್ದೆಯಲ್ಲಿ ಮಾತಾಡಿಕೊಳ್ಳುವಿಕೆ, ಒಂದೇ ವಿಷಯವನ್ನು ಮತ್ತೆ ಮತ್ತೆ ಯೋಚಿಸುವಿಕೆ
ಕೆಚ್ಚೆದೆ – ಗಟ್ಟಿಯಾದ ಎದೆ, ಎದೆಗಾರಿಕೆ
ರಣಚಂಡಿ – ಯುದ್ಧದೇವತೆ , ದುರ್ಗೆ
ದುರ್ಮತಿ- ಕೆಟ್ಟಬುದ್ಧಿ , ದುಪ್ಪ ವ್ಯಕ್ತಿ
ಮಮ್ಮಲ ಮರುಗು – ವಿಶೇಷವಾಗಿ ದುಃಖಪಡು, ಅತಿಶಯವಾಗಿ ಮರುಗು
ಅರಿ – ತಿಳಿ
ಸರೆಮನೆ – ಕಾರಾಗೃಹ , ಬಂದೀಖಾನೆ
ಕಲಿ – ವೀರ , ಶೂರ
ಮರುಜನ – ಪುನರ್ಜನ್ಮ
ಅ. ಬಿಟ್ಟಸ್ಥಳ ತುಂಬಿರಿ. (Fill in the blanks)
೧. ಅನ್ನಕ್ಕೆ ಬಂದಿರುವ ಕುನ್ನಿಗಳ ಮನ್ನಿಸದೆ.
೨.ಹೋದರೀ ಸಿರಿನಾಡು ಪರಕೀಯರಾ ವಶಕೆ !
೩.ಕರಿನೆಲದ ಗರಿಮೆಯನ್ನು ತೋರಿಸಲು ಬಿಳಿಯರಿಗೆ.
೪.ಮಮ್ಮಲನೆ ಮರುಗಿದಳು ಮನನೊಂದು ಕೊರಗಿದಳು.
ಆ. ಕೊಟ್ಟಿರುವ ಪದ ಬಳಸಿ ಸಂತ ವಾಕ್ಯ ಬರೆಯಿರಿ. (Make your own sentence)
೧. ಚರಿತ್ರೆ = ನಮ್ಮ ದೇಶದ ಚರಿತ್ರೆ ವಿಶಾಲವಾದುದು.
೨. ಜಯಮಾಲೆ = ಕ್ರಿಕೆಟ್ ನಲ್ಲಿ ಭಾರತ ಜಯಮಾಲೆಯನ್ನು ಧರಿಸಿತು.
೩. ಋಣ = ದೇಶ ಸೇವೆ ಮಾಡಿ ಋಣ ತೀರಿಸಬೇಕು.
ಇ. ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ. (Answer the following in one sentences)
ಅ. ಚೆನ್ನಮ್ಮ ಏನೆಂದು ಕನವರಿಸಿ ಹಲ್ಲು ಕಡಿದಳು?
ಉ: ನಮ್ಮ ಸಿರಿನಾಡು ಪರಕೀಯರ ವಶವಾದರೆ ಮಲ್ಲಸಜ್ಜನಿಗೆ ನೋವಾಗುತ್ತದೆ ಎಂದು ಕನವರಿಸಿಹಲ್ಲು ಕಡಿದಳು.
ಆ. ನಮ್ಮ ಅನ್ನವನ್ನು ಉಂಡು ಕೊಬ್ಬಿರುವವರು ಯಾರು?
ಉ: ನಮ್ಮ ಅನ್ನವನ್ನು ಉಂಡು ಕೊಬ್ಬಿರುವವರು ಬ್ರಿಟಿಷರು.
ಇ. ಚೆನ್ನಮ್ಮ ಸೈನಿಕರನ್ನು ಕುರಿತು ಏನೆಂದು ಹೇಳಿದಳು?
ಉ: ಚೆನ್ನಮ್ಮ ಸೈನಿಕರನ್ನುಕುರಿತು “ಛಲತೊಟ್ಟು ಹುಲಿಯಂತೆ ನುಗ್ಗೋಣ”, ಎಂದು ಹೇಳಿದಳು.
ಈ. ಯಾರ ಕೃಪೆಯಿಂದ ಸೈನ್ಯವನ್ನುಕಟ್ಟಲಾಯಿತು?
ಉ: ರಾಜಗುರುವಿನ ಕೃಪೆಯಿಂದ ಸೈನ್ಯವನ್ನು ಕಟ್ಟಲಾಯಿತು.
ಉ. ಮರುಜನ್ಮ ನೀಡೆಂದು ಚೆನ್ನಮ್ಮ ಯಾರಲ್ಲಿ, ಯಾಕೆ ಕೇಳಿದಳು?
ಮರುಜನ್ಮ ನೀಡೆಂದು ಚೆನ್ನಮ್ಮಕರುನಾಡ ಒಡತಿಯ ಹತ್ತಿರ, ಮರುಜನ್ಮ ನೀಡು, ಹೆಣ್ಣಾಗಿ ಇದೆ ನೆಲದಲ್ಲಿ ಹುಟ್ಟಿ ನಿನ್ನ ಋಣವನ್ನು ತೀರಿಸುತ್ತೇನೆ ಎಂದು ಕೇಳಿದಳು.
ಈ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು– ಮೂರು ವಾಕ್ಯಗಳಲ್ಲಿ ಉತ್ತರಿಸಿರಿ: (Answer the following two – three sentences)
೧. ರಾಣಿ ಚೆನ್ನಮ್ಮ ಹಲ್ಲು ಕಡಿದದ್ದು ಯಾಕೆ?
ಉ: ನಮ್ಮ ಸಿರಿನಾಡು ಪರಕೀಯರ ವಶವಾದರೆ ಎಂದು ಕನವರಿಸಿದಳು. ಮಲ್ಲಸಜ್ಜನಿಗೆ ನೋವಾಗುತ್ತದೆ ಎಂದು ರಾಣಿಚೆನ್ನಮ್ಮ ಹಲ್ಲು ಕಡಿದಳು.
೨. ಕೆಚ್ಚೆದೆಯ ಕಲಿಗಳಿಗೆ ಏನೆಂದು ಹೇಳಿದಳು?
ಉ: ಕೆಚ್ಚೆದೆಯಕಲಿಗಳಿಗೆ ಚೆನ್ನಮ್ಮ ‘ಏಳಿರೆ ಕೆಚ್ಚೆದೆಯ ಕಲಿಗಳೇ ನೀವು ! ಕರಿ ನೆಲದ ಗರಿಮೆಯನ್ನು ತೋರಿಸಲು ಬಿಳಿಯರಿಗೆ ಛಲತೊಟ್ಟು ಹುಲಿಯಂತೆ ನುಗ್ಗೋಣ’ ಎಂಬುದಾಗಿ ಹೇಳಿದಳು.
೩. ಚೆನ್ನಮ್ಮನಿಗೆ ನೋವಾಗಲು ಕಾರಣವೇನು?
ಉ: ಚೆನ್ನಮ್ಮಳು ಗಳಿಸಿದ ಜಯ ಕೆಲವೇ ದಿನಗಳಲ್ಲಿ ದುರ್ಮತಿಯರಿಂದ ಸೋಲಾಯಿತು. ತಾಯಿ ನೆಲದ ರಕ್ಷಣೆ ಕೈ ಮೀರಿತೆಂದು ಅವಳಿಗೆ ನೋವಾಗಲು ಕಾರಣ.
೪. ಕಿತ್ತೂರ ಕೇಸರಿ ಕಣ್ಮುಚ್ಚಿ ಏನೆಂದು ಬೇಡಿಕೊಂಡಳು?
ಉ: ಕಿತ್ತೂರ ಕೇಸರಿ ಕಣ್ಮುಚ್ಚಿಕರುನಾಡ ಒಡತಿಯ ಹತ್ತಿರ, ಮರುಜನ್ಮ ನೀಡು, ಹೆಣ್ಣಾಗಿ ಇದೆ ನೆಲದಲ್ಲಿ ಹುಟ್ಟಿ ನಿನ್ನ ಋಣವನ್ನು ತೀರಿಸುತ್ತೇನೆ ಎಂದು ಬೇಡಿಕೊಂಡಳು.
ಈ. ಪದ್ಯವನ್ನು ಪೂರ್ಣಗೊಳಿಸಿರಿ: (Complete the poem)
೧. ಮಲ್ಲಸಜ್ಜನ ಮನಕೆ ನೋವಾಗಬರಬಹುದೆ?
ಹೋದರೀ ಸಿರಿನಾಡು ಪರಕೀಯರಾ ವಶಕೆ!
ಮಂಚಕ್ಕೆ ಒರಗಿರುವ ಕಿರಯರಸಿ ಕನವರಸಿ ಚೆನ್ನಮ್ಮ
ಕನವರಿಸಿ ಕಟಕಟನೆ ಹಲ್ ಕಡಿದಾಳಕೆ
೨. ನಿನ್ನ ಋಣ ತೀರಿಸಲು ನನಗಾಗಲಿಲ್ಲಮ್ಮ!
ಈ ಒಂದೆ ಜನ್ಮದಲಿ ಕರುನಾಡ ಒಡತಿ !
‘ಮರುಜನ್ಮ ನೀಡನೆಗೆ ಹೆಣ್ಣಾಗಿ ಈ ನೆಲದಿ’
ಕಣ್ಮುಚ್ಚಿ ಬೇಡಿದಳು ಕಿತ್ತೂರ ಕೇಸರಿ !
ಊ. ಕೆಳಗಿನಪದಗಳನ್ನುಅಚ್ಚಕನ್ನಡ, ಸಂಸ್ಕೃತ, ಇಂಗ್ಲೀಷ್, ಪೋರ್ಚುಗೀಸ್ ಭಾಷೆಯ ಪದಗಳಾಗಿ ವಿಂಗಡಿಸಿ ಬರೆಯಿರಿ. (Divide the following words into Kannada, Sanskrit, English and Portuguese words and write them)
ಅಚ್ಚಕನ್ನಡ: ಮನೆ, ನದಿ, ಗದ್ದೆ, ಹಿತ್ತಿಲು, ಹೊಲ, ಬಾಯಿ
ಸಂಸ್ಕೃತ: ಭೂಮಿ, ಸಂಧ್ಯಾ, ಆರ್ಯ, ರಾತ್ರಿ
ಇಂಗ್ಲೀಷ್: ರೋಡು, ಸ್ಕೂಲ್, ಛೇರ್ಮನ್, ಬ್ಯಾಂಕ್
ಪೋರ್ಚುಗೀಸ್: ಅಲಮಾರು, ಕೋರ್ಟು, ಸಾಬೂನ್
ಋ. ಈ ಪದ್ಯದಲ್ಲಿರುವ ಪ್ರಾಸಪದಗಳನ್ನು ಆರಿಸಿ ಬರೆಯಿರಿ. (Choose and write the rhyming words in this poem)
ಕೇಳಿರಿಂದು – ಜನಜನಿತವಿಂದು
ವಶಕೆ – ಕಡಿದಳಾಕೆ
ಸೇವೆಗೆಂದು – ಧರಿಸೋಣವೆಂದು
ನೀವು – ನಾವು
ಸಿಡಿದೆದ್ದರೊಡನೆ – ಸೇನೆ
ರಣಚಂಡಿಯಾಗಿ– ಸಾಗಿ
ಸತ್ಯ – ನಿತ್ಯ
ಭಾಷಾ ಆಟಗಳು
ಅ. ಇಲ್ಲಿ ದೇಶೀಯ ಮತ್ತು ಅನ್ಯದೇಶೀಯ ಪದಗಳನ್ನು ಒಂದು ಚೌಕದಲ್ಲಿ ಮಿಶ್ರಣಗೊಳಿಸಿ ನೀಡಿದೆ. ಜಾಣರಾದ ನೀವು ಅವುಗಳನ್ನು ಪ್ರತ್ಯೇಕಿಸಿ ಬರೆಯಿರಿ: (Write the domestic and foreign words separately.)
ಅನ್ಯದೇಶೀಯ: ದಿವಾನ , ಸೈಕಲ್ , ಅನಾನಸು ,ಜರೂರು, ಸರದಾರ , ಸಿನಿಮಾ, ಮೇಜು , ಪಗಾರ , ಸಾಬೂನು, ಕಛೇರಿ, ಅಮಾಲ್ದಾರ್
ದೇಶೀಯ: ಬೆಲ್ಲ, ವಜಾ, ಖಾನಾವಳಿ, ನೀರು, ಶಿಫಾರಸ್ಸು, ಚೂಡ, ಹುಲ್ಲು, ಎಕರೆ , ಸರಕಾರ, ಹೊಲ, ಜಾನುವಾರು , ಆಟ, ಲಾವಣಿ
ಆ. ಈ ಪದ್ಯವನ್ನು ಓದಿ ಕೆಳಗಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ. (Read this verse and answer the questions below.
ಬಂತಪ್ಪ ಬಂತು ಮಳೆಗಾಲ
ಬೀಜವ ಬಿತ್ತುವ ಈ ಕಾಲ
ಬೆಳೆಯನು ಬೆಳೆಯುವ ಈ ಕಾಲ
ಕೊಡೆಯನು ಹಿಡಿಯುವ ಈ ಕಾಲ II
ಬಂತಪ್ಪ ಬಂತು ಚಳಿಗಾಲ
ಎಲೆಗಳು ಉದುರುವ ಈ ಕಾಲ
ಗಡ ಗಡ ನಡುಗುವ ಈ ಕಾಲ
ಕಂಬಳಿ ಹೊದೆಯುವ ಈ ಕಾಲ II
ಬಂತಪ್ಪ ಬಂತು ಬೇಸಿಗೆ ಕಾಲ
ನೀರನು ಕುಡಿಯುವ ಈ ಕಾಲ
ಮಾವು ಸಿಗುವ ಈ ಕಾಲ
ಬಿಸಿಲಿಗೆ ಒಣಗುವ ಈ ಕಾಲ II
ಪ್ರಶ್ನೆಗಳು
೧. ಕಾಲಗಳು ಯಾವುವು?
ಉ: ಕಾಲಗಳು ಮಳೆಗಾಲ, ಚಳಿಗಾಲ ಹಾಗೂ ಬೇಸಿಗೆ ಕಾಲ.
೨. ಭೂಮಿಯ ಮೇಲೆ ಕಾಲಗಳು ಹೇಗೆ ಉಂಟಾಗುತ್ತವೆ?
ಉ: ಭೂಮಿಯು ತನ್ನ ಸುತ್ತ ಸುತ್ತುತ್ತಾ, ಸೂರ್ಯನನ್ನು ಸುತ್ತುವುದರಿಂದ ಕಾಲಗಳು ಉಂಟಾಗುತ್ತವೆ.
೩. ಮಳೆಬಾರದಿದ್ದರೆ ಏನಾಗಬಹುದು?
ಉ: ಮಳೆ ಬಾರದಿದ್ದರೆ ಬರಗಾಲ ಉಂಟಾಗುತ್ತದೆ.
೪. ಚಳಿಗಾಲ ಅಗತ್ಯವಿದೆಯೇ?
ಉ:ಬಿಸಿಲ ಬೇಗೆಯಿಂದ, ಮಳೆಯಿಂದ ನಮಗೆ ಚಳಿಗಾಲ ಅಗತ್ಯವಿದೆ. ಚಳಿಗಾಲದ ಸ್ವಲ್ಪ ಮಟ್ಟಿನ ತೇವಾಂಶ ಬೇಕಾಗುತ್ತದೆ. ಆದ್ದರಿಂದ ಚಳಿಗಾಲ ಅಗತ್ಯವಿದೆ.
೫. ಈಗ ಬಿಸಿಲಿನ ಪ್ರಮಾಣ ಹೆಚ್ಚಾಗಿರಲು ಕಾರಣವೇನು?
ಉ: ಮರಗಿಡಗಳಿಲ್ಲದೇ ಗಾಳಿ ಬೀಸುವುದು ಕಡಿಮೆ. ಮಳೆ ಇರದೇ ಬಿಸಿಲ ಪ್ರಮಾಣ ಹೆಚ್ಚಿದೆ
೬. ಕಾಲಗಳೇ ಇಲ್ಲದಿದ್ದರೆ ಏನಾಗುತ್ತಿತ್ತು?
ಉ: ಕಾಲಗಳೇ ಇಲ್ಲದಿದ್ದಲ್ಲಿ ಜನ ಜೀವನ ಅಸ್ತವ್ಯಸ್ತವಾಗುತ್ತಿತ್ತು. ಮಳೆ ಇಲ್ಲದೆ ನೀರಿಲ್ಲ. ನೀರಿಲ್ಲದೇ ಬೆಳೆಯಿಲ್ಲ. ಬೆಳೆ ಇಲ್ಲದೆ ಆಹಾರವೂ ಇಲ್ಲ.
ಕವಿ ಕೃತಿ ಪರಿಚಯ:
ಪರಗೊಂಡ ಗುರುಪಾದಪ್ಪ ಸಿದ್ದಾಪುರ ಇವರ ಕಾವ್ಯನಾಮ ಪ.ಗು. ಸಿದ್ದಾಪುರ. ಇವರು ೦೧-೦೬-೧೯೫೮ರಲ್ಲಿ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ದಶಾಳ ಎಂಬ ಊರಿನಲ್ಲಿ ಜನಿಸಿದರು. ಇವರ ತಂದೆ ಹೆಸರು ಗುರುಪಾದಪ್ಪ. ತಾಯಿ ಹೆಸರು ಯಮುನಾ ಬಾಯಿ. ಇವರು ಎಂ. ಎ, ಎ.ಎಂ (ಆರ್ಟ ಮಾಸ್ಟರ್) ಪದವಿ ಪಡೆದಿದ್ದು, ಬಸವನ ಬಾಗೇವಾಡಿ ಮುಳವಾಡ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡದಲ್ಲಿ ನೂರಾರು ಮಕ್ಕಳ ಕವಿತೆಗಳು, ಕಥೆಗಳನ್ನು ರಚಿಸಿದ್ದಾರೆ. ಅನೇಕ ಕೃತಿಗಳನ್ನು ಸಂಪಾದನೆ ಮಾಡಿದ್ದಾರೆ. ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ೨೦೧೦ರಲ್ಲಿ ಪಡೆದುಕೊಂಡಿರುವ ಇವರು ಅನೇಕ ಸಾಹಿತ್ಯ ಕೃತಿಗಳನ್ನು ನೀಡಿದ್ದಾರೆ. ಇವರ ಮಕ್ಕಳ ನೂರಾರು ಕವಿತೆಗಳು ಎಂಬ ಕೃತಿಯಿಂದ ಈ ಪದ್ಯವನ್ನು ಆರಿಸಿಕೊಳ್ಳಲಾಗಿದೆ.
One Response