
Male kannada grade 4 poem is written by Palakala Seetarama Bhatta. Male means rain. Rain is nature’s way of giving the Earth a big drink of water. 🌧️ It falls from clouds when they get too heavy with tiny drops of water. Rain helps plants grow, fills rivers and lakes, and keeps animals happy. Sometimes it comes with thunder and lightning, making the sky look like a show. And after a rain, you might even spot a rainbow smiling in the sky! 🌈
ಮಳೆ
ಅ) ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ. (Answer the following in one sentence)
೧. ಬಿಸಿಲ ಝಳಕೆ ನೀರು ಏನಾಯಿತು?
ಉ: ಬಿಸಿಲ ಝಳಕ್ಕೆ ನೀರು ಆವಿಯಾಯಿತು.
೨. ಮಳೆ ಸುರಿದಿದ್ದರಿಂದ ಏನೇನು ತುಂಬಿ ಹರಿಯಿತು?
ಉ: ಮಳೆ ಸುರಿದಿದ್ದರಿಂದ ಕೆರೆಯು, ಹೊಳೆಯು, ಹಳ್ಳ, ಕೊಳ್ಳ ತುಂಬಿ ಹರಿಯಿತು.
೩. ಮೋಡ ಯಾವಾಗ ಭಾರವಾಯಿತು?
ಉ: ಮೋಡ ಮೇಲಕೇರಿ ತಂಪು ತಗುಲಿದಾಗ ಆವಿಯಾಗಿ ಭಾರವಾಯಿತು.
ಆ ) ಬಿಟ್ಟ ಸ್ಥಳ ತುಂಬಿರಿ. (Fill in the blanks)
೧. ‘ಮುತ್ತಿನಂಥ ಮಳೆಯ ನೀರು ಕೆಳಗೆ ಸುರಿಯಿತು.’
೨. ನೆಲದ ಮೇಲೆ ಗುಡ್ಡಬೆಟ್ಟ ಅಡ್ಡವಾಯಿತು.
೩. ಘಳಿಗೆಯೊಳಗೆ ಬಾನು ತುಂಬ ಮೋಡ ಕವಿಯಿತು.
೪. ಮೋಡ ಮೇಲಕೇರಿದಾಗ ತಂಪು ತಗುಲಿತು.
ಇ) ಪದ್ಯದಲ್ಲಿ ಬಿಟ್ಟಿರುವ ಸಾಲುಗಳನ್ನು ಬರೆಯಿರಿ. (Complete the poem)
ನೆಲದ ಮೇಲೆ ಗುಡ್ಡ ಬೆಟ್ಟ
ಅಡ್ಡವಾಯಿತು |
ತಡೆದು ನಿಂತ ಮೋಡವೆಲ್ಲ
ಮೇಲಕೇರಿತು
ಈ) ಗುಂಪಿಗೆ ಸೇರದ ಪದ ಗುರುತಿಸಿ ಬರೆಯಿರಿ. (Write the odd one out)
೧. ಕೆರೆ, ಕಟ್ಟೆ, ಸಮುದ್ರ, ಸೂರ್ಯ
೨. ಮಿಂಚು, ಭೂಮಿ, ಮಳೆ, ಗುಡುಗು
೩. ಸರೋವರ, ಪರ್ವತ, ಬೆಟ್ಟ, ಗುಡ್ಡ
೪. ನೊಗ, ಕುಂಟೆ, ನೇಗಿಲು, ಮಂಚ
ಉ) ಕೊಟ್ಟಿರುವ ಪದಗಳಿಗೆ ಸಮಾನಾರ್ಥಕ ಪದಗಳನ್ನು ಬರೆ. (Write the synonyms)
ಕಾಡು : ಅರಣ್ಯ, ಕಾನನ, ಅಡವಿ, ವನ
ಸೂರ್ಯ : ಆದಿತ್ಯ, ಭಾಸ್ಕರ, ರವಿ, ಭಾನು
ಭೂಮಿ : ಧರೆ, ಧಾತ್ರಿ, ಇಳೆ
ಊ) ಅಕ್ಷರ ಬಳಸಿ ಪದ ರಚಿಸು, ತಿರುಗಿಸಿ ಓದಿ ಆನಂದಿಸಿ. (Correct the jumbled word)
ವಿ ಕ ಕ ಟ ವಿ = ವಿಕಟಕವಿ
ಕ ಕ ನ = ಕನಕ
ಮನನ = ನಮನ
ರಸುರಸುರ = ಸುರರಸುರ
ಜೀವವನನ = ನವಜೀವನ
ದ್ರಾಮನಸಿಮಸಿದ್ರಾ = ಮದ್ರಾಸಿನ ಸಿದ್ರಾಮ
ಋ) ಸೂಚನೆಗಳನ್ನು ಅರ್ಥೈಸಿಕೊಂಡು ಪದಬಂಧ ಪೂರ್ಣಗೊಳಿಸಿ. (Fill in the cross word puzzle)
ಎಡದಿಂದ ಬಲಕ್ಕೆ:
೧. 24 ನಿಮಿಷಗಳನ್ನು ಹೀಗೆ ಹೇಳುತ್ತಾರೆ (೩ ಅಕ್ಷರ) – ಘಳಿಗೆ
೨. ಜೀವರಾಶಿ ನೆಲೆಸಿರುವ ಪ್ರಪಂಚ (೩ ಅಕ್ಷರ) – ಜಗತ್ತು
೩. ಕೆರೆ ಜೊತೆಯಲ್ಲಿ ಜೋಡಿ ಪದ (೨ ಅಕ್ಷರ) – ಕಟ್ಟೆ
೪. ನಾವು ನಿಂತಿರುವ ಸ್ಥಳ (೨ ಅಕ್ಷರ) – ನೆಲ
೫. ಮೋಡ ಕರಗಿ ಬೀಳುವದು (೨ ಅಕ್ಷರ) – ಮಳೆ
೬. ಮೇಲೆ ನೋಡಿದಾಗ ಕಾಣುವದು (೩ ಅಕ್ಷರ) – ಬಿಸಿಲು
೭. ಈ ಸಮಯ ಮತ್ತು ಮುತ್ತಿನಂತದು (೩ ಅಕ್ಷರ) – ಹೊತ್ತು
ಮೇಲಿನಿಂದ ಕೆಳಕ್ಕೆ:
೧. ಗಟ್ಟಿಯಾದ ಪದಾರ್ಥ ಇದು (೨ ಅಕ್ಷರ) – ಘನ
೨. ನೀರಿಗೆ ಮತ್ತೊಂದು ಹೆಸರು (೨ ಅಕ್ಷರ) – ಜಲ
೩. ಇದರೊಳಗಿರುವದು ಉಪ್ಪಿನ ನೀರು (೩ ಅಕ್ಷರ) – ಕಡಲು
೪. ಭೂಮಿಗೆ ಬರುವ ಇನ್ನೊಂದು ಹೆಸರು (೨ ಅಕ್ಷರ) – ಇಳೆ
೫. ಮಲ್ಲಿಗೆಯ ಬಣ್ಣ (೨ ಅಕ್ಷರ) – ಬಿಳಿ
೬. ವಾಸ ಮಾಡಲು ಇದು ಬೇಕು (೨ ಅಕ್ಷರ) – ಮನೆ
೭. ಕಪ್ಪೆ ಚಿಪ್ಪಿನಲ್ಲಿರುವದು (೨ ಅಕ್ಷರ) – ಮುತ್ತು
ಎ) ಪ್ರಾಸ ಪದಗಳನ್ನು ಬರೆಯಿರಿ. (Write the rhyming words)
ಸುರಿಯಿತು – ಹರಿಯಿತು
ತಗುಲಿತು – ತೊಡಗಿತು
ಕವಿಯಿತು – ಕರಗಿತು
ಅಡ್ಡವಾಯಿತು – ಮೇಲಕ್ಕೆೇರಿತು
ಏ) ಜೋಡುನುಡಿಗಳನ್ನು ಬರೆಯಿರಿ. (Write the jodunudi)
ಬೆಟ್ಟಗುಡ್ಡ
ಕೆರೆತೊರೆ
ಗುಡುಗುಮಿಂಚು/ ಗುಡುಗುಸಿಡಿಲು
ಕಸಕಡ್ಡಿ
ಮುತ್ತುರತ್ನ
ಐ) ಕೊಟ್ಟಿರುವ ಪದಗಳನ್ನು ಬಳಸಿ ಕವನ ರಚಿಸಿರಿ. (Make your own poem with the give words) (ಕವಿಯಿತು, ಮಳೆ, ಮೋಡ, ಇಳೆಗೆ, ಹೊಳೆ, ಬೆಳೆಯು, ಬೆಳೆಯಿತು, ತುಂಬಿತು, ಇಳಿಯಿತು, ಬಂದಿತು)
ಮೋಡ ಕವಿಯಿತು
ಮಳೆ ಬಂದಿತು
ಇಳೆಗೆ ಇಳಿಯಿತು
ಹೊಳೆ ತುಂಬಿತು
ಬೆಳೆಯು ಬೆಳೆಯಿತು
ಒ) ಮಳೆ ಹೆಚ್ಚಾಗಿರುವದರಿಂದ ಆಗುವ ಪರಿಣಾಮಗಳೇನು?
ಉ: ಮಳೆ ಹೆಚ್ಚಾಗಿರುವದರಿಂದ ಕೆರೆ, ತೊರೆ, ಹಳ್ಳ, ಹೊಳೆ, ನದಿಗಳು ತುಂಬಿ ಹರಿಯುತ್ತವೆ. ಮನೆ, ರಸ್ತೆಗಳಲ್ಲಿ ನೀರು ತುಂಬುತ್ತದೆ. ಇದರಿಂದ ತುಂಬಾ ಹಾನಿಗಳು ಉಂಟಾಗುತ್ತವೆ.
ಓ) ಯಾವ ಕಾಲದಲ್ಲಿ ಮರಗಿಡಗಳು ಚಿಗುರುತ್ತವೆ?
ಉ: ವಸಂತ ಕಾಲದಲ್ಲಿ ಮರಗಿಡಗಳು ಚಿಗುರುತ್ತವೆ.
ಔ)ಮಳೆ ಬರುವ ಮುನ್ನ ಆಕಾಶದಲ್ಲಿ ಉಂಟಾಗುವ ಬದಲಾವಣೆಗಳನ್ನು ಗಮನಿಸಿ ಬರೆಯಿರಿ.
ಉ: ಮಳೆ ಬರುವ ಮುನ್ನ ಆಕಾಶದಲ್ಲಿ ಕಪ್ಪನೆ ಮೋಡ ಕವಿಯುತ್ತದೆ. ಗುಡುಗು, ಮಿಂಚು, ಸಿಡಿಲು ಬರುತ್ತದೆ. ಮಳೆ ಬರುತ್ತದೆ.
ಅಂ) ಮಳೆಯೇ ಬರೆದಿದ್ದರೆ ಏನಾಗುತ್ತಿತ್ತು ಯೋಚಿಸಿ ಬರೆಯಿರಿ.
ಉ: ಮಳೆಯೇ ಬರೆದಿದ್ದರೆ ಬರಗಾಲ ಬರುತ್ತದೆ. ಇದರಿಂದ ನಮಗೆ ಆಹಾರಕ್ಕೆ ತೊಂದರೆಯಾಗುತ್ತದೆ.