Malee kannada poem grade IV. Malee means rain, poet Palkaala Sitaram Bhat. ಭೂಮಿಗೆ ನೀರು ಕುಡಿಯಲು ಪ್ರಕೃತಿಯು ನೀಡಿರುವ ಒಂದು ಮಾರ್ಗವೆಂದರೆ ಮಳೆ. 🌧️ ಮೋಡಗಳು ಸಣ್ಣ ಸಣ್ಣ ಹನಿಗಳಿಂದ ತುಂಬಿದಾಗ ಮಳೆ ಬೀಳುತ್ತದೆ. ಮಳೆಯು ಸಸ್ಯಗಳು ಬೆಳೆಯಲು ಸಹಾಯ ಮಾಡುತ್ತದೆ, ನದಿಗಳು ಮತ್ತು ಸರೋವರಗಳನ್ನು ತುಂಬುತ್ತದೆ ಮತ್ತು ಪ್ರಾಣಿಗಳನ್ನು ಸಂತೋಷವಾಗಿರಿಸುತ್ತದೆ. ಕೆಲವೊಮ್ಮೆ ಗುಡುಗು ಮತ್ತು ಮಿಂಚಿನೊಂದಿಗೆ ಬರುತ್ತದೆ, ಇದು ಆಕಾಶವನ್ನು ಒಂದು ಪ್ರದರ್ಶನದಂತೆ ಕಾಣುವಂತೆ ಮಾಡುತ್ತದೆ. ಮತ್ತು ಮಳೆಯ ನಂತರ, ಆಕಾಶದಲ್ಲಿ ನಗುತ್ತಿರುವ ಮಳೆಬಿಲ್ಲನ್ನು ಸಹ ನೀವು ನೋಡಬಹುದು!
ಮಳೆ
ಅ) ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ. (Answer the following in one sentence)
೧. ಮೋಡ ಯಾವಾಗ ಭಾರವಾಯಿತು ?
೨. ಮಳೆ ಸುರಿದಿದ್ದರಿಂದ ಏನೇನು ತುಂಬಿ ಹರಿಯಿತು ?
೩. ಬಿಸಿಲ ಝಳಕೆ ನೀರು ಏನಾಯಿತು ?
ಆ) ಬಿಟ್ಟ ಸ್ಥಳ ತುಂಬಿರಿ. (Fill in the blanks)
೧. ‘ಮುತ್ತಿನಂಥ ……………… ನೀರು ಕೆಳಗೆ ಸುರಿಯಿತು.’
೨. ಮೇಲಕೇರಿದಾಗ …………………. ತಗುಲಿತು.
೩. ಘಳಿಗೆಯೊಳಗೆ ಬಾನು ತುಂಬ ……………… ಕವಿಯಿತು.
೪. ನೆಲದ ಮೇಲೆ ………………… ಅಡ್ಡವಾಯಿತು.
ಇ) ಪದ್ಯದಲ್ಲಿ ಬಿಟ್ಟಿರುವ ಸಾಲುಗಳನ್ನು ಬರೆಯಿರಿ. (Complete the poem)
ನೆಲದ ಮೇಲೆ ಗುಡ್ಡ ಬೆಟ್ಟ
…………………………
…………………………. ಮೋಡವೆಲ್ಲ
ಮೇಲಕೇರಿತು
ಈ) ಗುಂಪಿಗೆ ಸೇರದ ಪದ ಗುರುತಿಸಿ ಬರೆಯಿರಿ. (Write the odd one out)
೧. ಮಿಂಚು, ಭೂಮಿ, ಮಳೆ, ಗುಡುಗು
೨. ಕೆರೆ, ಕಟ್ಟೆ, ಸಮುದ್ರ, ಸೂರ್ಯ
೩. ಸರೋವರ, ಪರ್ವತ, ಬೆಟ್ಟ, ಗುಡ್ಡ
೪. ನೊಗ, ಕುಂಟೆ, ನೇಗಿಲು, ಮಂಚ
ಉ) ಕೊಟ್ಟಿರುವ ಪದಗಳಿಗೆ ಸಮಾನಾರ್ಥಕ ಪದಗಳನ್ನು ಬರೆ. (Write the synonyms)
ಕಾಡು , ಸೂರ್ಯ, ಭೂಮಿ
ಊ) ಅಕ್ಷರ ಬಳಸಿ ಪದ ರಚಿಸು, ತಿರುಗಿಸಿ ಓದಿ ಆನಂದಿಸಿ. (Correct the jumbled word)
ವಿ ಕ ಕ ಟ ವಿ
ಕ ಕ ನ
ಮನನ
ರಸುರಸುರ
ಜೀವವನನ
ದ್ರಾಮನಸಿಮಸಿದ್ರಾ
ಋ) ಸೂಚನೆಗಳನ್ನು ಅರ್ಥೈಸಿಕೊಂಡು ಪದಬಂಧ ಪೂರ್ಣಗೊಳಿಸಿ. (Fill in the cross word puzzle)
ಎಡದಿಂದ ಬಲಕ್ಕೆ:
೧. 24 ನಿಮಿಷಗಳನ್ನು ಹೀಗೆ ಹೇಳುತ್ತಾರೆ (೩ ಅಕ್ಷರ)
೨. ಜೀವರಾಶಿ ನೆಲೆಸಿರುವ ಪ್ರಪಂಚ (೩ ಅಕ್ಷರ)
೩. ಕೆರೆ ಜೊತೆಯಲ್ಲಿ ಜೋಡಿ ಪದ (೨ ಅಕ್ಷರ)
೪. ನಾವು ನಿಂತಿರುವ ಸ್ಥಳ (೨ ಅಕ್ಷರ)
೫. ಮೋಡ ಕರಗಿ ಬೀಳುವದು (೨ ಅಕ್ಷರ)
೬. ಮೇಲೆ ನೋಡಿದಾಗ ಕಾಣುವದು (೩ ಅಕ್ಷರ)
೭. ಈ ಸಮಯ ಮತ್ತು ಮುತ್ತಿನಂತದು (೩ ಅಕ್ಷರ)
ಮೇಲಿನಿಂದ ಕೆಳಕ್ಕೆ:
೧. ಗಟ್ಟಿಯಾದ ಪದಾರ್ಥ ಇದು (೨ ಅಕ್ಷರ)
೨. ನೀರಿಗೆ ಮತ್ತೊಂದು ಹೆಸರು (೨ ಅಕ್ಷರ)
೩. ಇದರೊಳಗಿರುವದು ಉಪ್ಪಿನ ನೀರು (೩ ಅಕ್ಷರ)
೪. ಭೂಮಿಗೆ ಬರುವ ಇನ್ನೊಂದು ಹೆಸರು (೨ ಅಕ್ಷರ)
೫. ಮಲ್ಲಿಗೆಯ ಬಣ್ಣ (೨ ಅಕ್ಷರ)
೬. ವಾಸ ಮಾಡಲು ಇದು ಬೇಕು (೨ ಅಕ್ಷರ)
೭. ಕಪ್ಪೆ ಚಿಪ್ಪಿನಲ್ಲಿರುವದು (೨ ಅಕ್ಷರ)
ಎ) ಪ್ರಾಸ ಪದಗಳನ್ನು ಬರೆಯಿರಿ. (Write the rhyming words)
ಸುರಿಯಿತು –
ತಗುಲಿತು –
ಕವಿಯಿತು –
ಅಡ್ಡವಾಯಿತು –
ಏ) ಜೋಡುನುಡಿಗಳನ್ನು ಬರೆಯಿರಿ. (Write the jodunudi)
ಬೆಟ್ಟ
ಕೆರೆ
ಗುಡುಗು
ಕಸ
ಮುತ್ತು
ಐ) ಕೊಟ್ಟಿರುವ ಪದಗಳನ್ನು ಬಳಸಿ ಕವನ ರಚಿಸಿರಿ. (Make your own poem with the give words) (ಕವಿಯಿತು, ಮಳೆ, ಮೋಡ, ಇಳೆಗೆ, ಹೊಳೆ, ಬೆಳೆಯು, ಬೆಳೆಯಿತು, ತುಂಬಿತು, ಇಳಿಯಿತು, ಬಂದಿತು)
ಒ) ಮಳೆ ಹೆಚ್ಚಾಗಿರುವದರಿಂದ ಆಗುವ ಪರಿಣಾಮಗಳೇನು?
ಓ) ಯಾವ ಕಾಲದಲ್ಲಿ ಮರಗಿಡಗಳು ಚಿಗುರುತ್ತವೆ?
ಔ) ಮಳೆ ಬರುವ ಮುನ್ನ ಆಕಾಶದಲ್ಲಿ ಉಂಟಾಗುವ ಬದಲಾವಣೆಗಳನ್ನು ಗಮನಿಸಿ ಬರೆಯಿರಿ. ಅಂ) ಮಳೆಯೇ ಬರೆದಿದ್ದರೆ ಏನಾಗುತ್ತಿತ್ತು ಯೋಚಿಸಿ ಬರೆಯಿರಿ.