Malerayana huttu kannada lesson grade VI is written by B S Panduranga Rao. Malerayana huttu kannada lesson grade 6th is about the nature.

Once upon a time, the Ocean King, feeling mischievous, decided to play a prank. He brought heavy rains and floods, causing houses to submerge, animals to be swept away, and people to cry in despair. Mother Earth was in distress, and her cries reached the Sky and the Sun. Angered by the chaos, the Sun sent intense heat down, scaring the Ocean King. In response, the Ocean King created clouds to combat the heat.

Following the Ocean King’s command, the clouds brought even heavier rains. The Sun, now furious, summoned the Wind to help. The Wind chased the clouds around, eventually driving them to crash into a mountain. There, the clouds released their rain, forming a river.

This event inspired a song, celebrating the rain’s arrival and its essential role in replenishing gardens and fields:

Huyyo! huyyo! maleraya:
Huvina thotake neerilla,
Baro! baaro! maLeraya;
Baleya totake nirilla.

Thus, the playful antics of the Ocean King, the Sun’s anger, and the Wind’s intervention led to the birth of a life-giving river and a song that cherishes the rain’s importance.

ಮಳೆರಾಯನ ಹುಟ್ಟು

I. ಪದಗಳ ಅರ್ಥ ಬರೆಯಿರಿ. (Write the word meaning)

ಪ್ರವಾಹ = ನೆರೆ, ಉಕ್ಕೇರಿದ ನೀರು             ಚೀರು = ಕೂಗು
ತಾಪ = ಬಿಸಿ     ಗರ್ಜಿಸು = ಜೋರಾಗಿ ಕೂಗು
ಹೆಪ್ಪುಗಟ್ಟು = ಸಾಂದ್ರವಾಗು, ಒಂದೆಡೆ ಸೇರು, ಗಟ್ಟಿಯಾಗು
ಸೇಡು = ದ್ವೇಷ         ಯುಕ್ತಿ = ಉಪಾಯ    ಕೀಟಲೆ = ತುಂಟ ಬುದ್ದಿ
ತಾತತೂತಾಯಿತು = ತಾಕಿ ತೂತಾಯಿತು

II. ಪ್ರಶ್ನೆಗಳು

ಅ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)

೧. ಭೂದೇವಿಯ ಗೋಳು ಎಲ್ಲಿಗೆ ಮುಟ್ಟಿತು?
ಉ: ಭೂದೇವಿಯ ಗೋಳು ಆಕಾಶಕ್ಕೆ ಮುಟ್ಟಿತು.
೨. ಲೋಕವೆಲ್ಲ ಏಕೆ ನಡುಗಿತು?
ಉ: ಲೋಕವೆಲ್ಲ ಸೂರ್ಯನ ಕೋಪಕ್ಕೆ ನಡುಗಿತು.
೩. ಸಮುದ್ರರಾಜ ಚೀರತೊಡಗಿದ್ದೇಕೆ?
ಉ: ಸಮುದ್ರರಾಜ ಮೈಯಲ್ಲ ಸೂರ್ಯನ ಕಿರಣಗಳಿಂದ ಸುಟ್ಟಿದ್ದಕ್ಕೆ ಚೀರತೊಡಗಿದ.
೪. ಮೋಡಣ್ಣ ಸೂರ್ಯನನ್ನು ಮರೆ ಮಾಡಿದಾಗ ಏನಾಯಿತು?
ಉ: ಮೋಡಣ್ಣ ಸೂರ್ಯನನ್ನು ಮರೆ ಮಾಡಿದಾಗ ಕರ್ರನೆ ಕತ್ತಲಾಯಿತು.
೫. ಮೋಡಣ್ಣನಿಗೆ ಬುದ್ಧಿ ಕಲಿಸಲು ಸೂರ್ಯ ಯಾರಲ್ಲಿ ಕೇಳಿಕೊಂಡ?
ಉ: ಮೋಡಣ್ಣನಿಗೆ ಬುದ್ಧಿ ಕಲಿಸಲು ಸೂರ್ಯ ಗಾಳಿರಾಯನಲ್ಲಿ ಕೇಳಿಕೊಂಡ.
೬. ನದಿ ಹೇಗೆ ಹುಟ್ಟಿತು?
ಉ: ಮೋಡದಿಂದ ಮಳೆ ಬಂದು ಭೂಮಿಯ ಮೇಲೆ ನೀರು ಹರಿದು ನದಿ ಹುಟ್ಟಿತು.
೭. ಸಮುದ್ರರಾಜ ಯಾರಿಗೆ ಭಯಪಡುತ್ತಾನೆ?
ಉ: ಸಮುದ್ರರಾಜ ಸೂರ್ಯನಿಗೆ ಭಯಪಡುತ್ತಾನೆ.

ಆ. ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in two-three sentence)

೧. ಭೂದೇವಿಯ ಅಳುವನ್ನು ಕಂಡ ಸೂರ್ಯ ಏನು ಮಾಡಿದ?
ಉ: ಭೂದೇವಿಯ ಅಳುವನ್ನು ಕಂಡ ಸೂರ್ಯನು ಸಮುದ್ರರಾಜನ ಮೇಲೆ ಕಿಡಿಕಿಡಿಯಾದನು. ಒಂದು ಸಲ ತಿರುಗಿ ನೋಡಿದನು. ಲೋಕವೇ ನಡುಗಿತು.
೨. ಮೋಡ ಹೇಗೆ ಹುಟ್ಟಿತು?
ಉ: ಬಿಸಿಲಿನ ತಾಪಕ್ಕೆ ಸಮುದ್ರರಾಜನ ಮೈ ಬೆವರಿತ್ತು. ಬೆವರಿದ ನೀರು ಹಬೆಯಾಗಿ ಆಕಾಶದಲ್ಲಿ ಒಂದು ಕಡೆ ಸೇರಿತ್ತು. ಬೆಟ್ಟಗಳ ಸಾಲಿನಂತೆ ಕಪ್ಪಗೆ ಹೆಪ್ಪುಗಟ್ಟಿತು. ಹೀಗೆ ಮೋಡವು ಹುಟ್ಟಿತು.
೩. ಸೂರ್ಯನ ಕೋಪ ಮೋಡದತ್ತ ತಿರುಗಲು ಕಾರಣವೇನು?
ಉ: ಮೋಡವು ಸೂರ್ಯನನ್ನು ಮರೆ ಮಾಡಿದ್ದರಿಂದ ಭೂದೇವಿಗೆ ಸೂರ್ಯನಿಂದ ಬರುತ್ತಿದ್ದ ಬೆಳಕು ನಿಂತಿತು. ಗಿಡ ಮರಗಳು ಬಾಡಿ ಮುದುಡಿದವು. ಮನುಷ್ಯ ಪ್ರಾಣಿ ಸಾಯುವಂತಾಯಿತು.
೪. ಗಾಳಿ ಮೋಡಣ್ಣನನ್ನು ಎಲ್ಲೆಲ್ಲಿ ಓಡಾಡಿಸಿತು?
ಉ: ಗಾಳಿರಾಯ ಮೋಡಣ್ಣನನ್ನು ಎಲ್ಲಾ ಕಡೆ ಓಡಿಸಿದ. ಬಂಡೆಗಳಿಗೆ ಡಿಕ್ಕಿ ಹೊಡೆಸಿದ.
೫. ಗಾಳಿ ಮೋಡಗಳ ಯುದ್ಧದಿಂದ ಕೊನೆಗೆ ಯಾವ ಹಾಡು ಹುಟ್ಟಿತು?
ಉ: ಹುಯ್ಯೋ! ಹುಯ್ಯೋ! ಮಳೆರಾಯ;
     ಹೂವಿನ ತೋಟಕ್ಕೆ ನೀರಿಲ್ಲ.
     ಬಾರೋ! ಬಾರೋ! ಮಳೆರಾಯ;
     ಬಾಳೆ ತೋಟಕ್ಕೆ ನೀರಿಲ್ಲ.

ಇ. ಕೆಳಗಿನ ಮಾತನ್ನು ಯಾರು ಯಾರಿಗೆ ಹೇಳಿದರು ತಿಳಿಸಿರಿ. (Who told Whom)

೧. “ಮಗು ನೋಡು, ಸೂರ್ಯ ನನಗೆ ಹಗೆ”
ಉ: ಸಮುದ್ರರಾಜನು ಮೋಡಣ್ಣನಿಗೆ ಹೇಳಿದನು.
೨. “ಆನೆಯ ಮುಂದೆ ಆಡೇ”
ಉ: ಸೂರ್ಯನು ತನಗೆ ತಾನೇ ಹೇಳಿಕೊಂಡನು.
೩. “ದುರುಳರಿಬ್ಬರನ್ನು ನೋಡಿಕೋ”
ಉ:ಸೂರ್ಯನು ಮೋಡಣ್ಣನಿಗೆ ಹೇಳಿದನು.

ಈ. ಬಿಟ್ಟ ಸ್ಥಳಗಳನ್ನು ತುಂಬಿರಿ. (Fill in the blanks)

೧. ಸೂರ್ಯ ಬೆಂಕಿಯ ಮುದ್ದೆ.
೨. ಸೂರ್ಯನ ಕಿರಣಗಳೇ ಬಿಸಿಲು.
೩. ಭೂದೇವಿಗೆ ಸೂರ್ಯನಿಂದ ಬರುತ್ತಿದ್ದ ಬೆಳಕು ನಿಂತಾಗ ಗಿಡಮರಗಳು ಬಾಡಿ ಮುದುಡಿದವು.
೪. ಗಾಳಿರಾಯ ಮೋಡಣ್ಣನನ್ನು ಬೆಟ್ಟಕ್ಕೆ ಡಿಕ್ಕಿ ಹೊಡೆಸಿದ.
೫. ಆಕಾಶದಿಂದ ಮಳೆಯಾಗಿ ಸುರಿದ ನೀರು ಹೊಳೆಯಾಗಿ ಹರಿಯಿತು.
೬. ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ.

ಉ: ಕೆಳಗಿನ ಪದಗಳನ್ನು ಸ್ವಂತ ವಾಕ್ಯಗಳಲ್ಲಿ ಬಳಸಿ ಬರೆಯಿರಿ. (Make your own sentence)

ಪ್ರವಾಹ: ನದಿಯ ಪ್ರವಾಹ ನಿಂತಿತು.
ಹಾವಳಿ: ನಿನ್ನೆ ಗದ್ದೆಗೆ ಆನೆಯು ಹಾವಳಿ ಮಾಡಿತು.
ಕಾಂತಿ: ಸೂರ್ಯನ ಕಿರಣಗಳ ಕಾಂತಿ ನಮಗೆ ಬೇಕು.
ವಿಚಿತ್ರ: ಪ್ರಕೃತಿಯು ವಿಚಿತ್ರವಾಗಿದೆ.
ಹಿಂಬಾಲಿಸು: ಒಂದು ನಾಯಿ ನನ್ನನ್ನು ಹಿಂಬಾಲಿಸುತ್ತಿತ್ತು.

Click here to download malirayana huttu exercise

Leave a Reply

Your email address will not be published. Required fields are marked *