Mallajiya malige kannada chapter grade V is about a shop, owner named Malaji. Mallajiya malige Malige means shop.
Mallajji sells everything from coconut sweets, coconut sweets, snacks, areca nuts, sugar, tea powder, camphor, biscuits, salt, snow powder, chocolate, peppermint… All people’s problems are solved very easily at Mallaji’s shop. No lawyers or witnesses are needed here. Her verdict is like that of a judge. So it is like a popular “people’s court”. Mallajji’s shop is always open. She is always in the shop. Everything is available here. Wonder when she will bring all the things.
ಮಲ್ಲಜ್ಜಿಯ ಮಳಿಗೆ
ಅ) ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. (Answer the following in one question)
೧. ಸೃಜನ್ ಯಾರಿಗೆ ಪತ್ರವನ್ನು ಬರೆದನು?
ಉ: ಸೃಜನ್ ತನ್ನ ತಂಗಿ ಸೌಜನ್ಯಗಳಿಗೆ ಪತ್ರ ಬರೆದನು.
೨. ಯಾರಿಗೆ ಮಿಠಾಯಿ ಎಂದರೆ ಇಷ್ಟ?
ಉ: ಮಕ್ಕಳಿಗೆ ಮಿಠಾಯಿ ಎಂದರೆ ಬಲು ಇಷ್ಟ.
೩. ಮಲ್ಲಜ್ಜಿ ಎಲ್ಲರೊಂದಿಗೆ ಹೇಗೆ ಮಾತನಾಡುತ್ತಾಳೆ?
ಉ: ಮಲ್ಲಜ್ಜಿ ಎಲ್ಲರೊಂದಿಗೆ ನಗುನಗುತ್ತಾ, ಪ್ರೀತಿಯಿಂದ, ಸಮಾಧಾನದಿಂದ ಮಾತನಾಡುತ್ತಾಳೆ.
೪. ಮಲ್ಲಜ್ಜಿಯ ಕೋರ್ಟಿನಲ್ಲಿ ವಕೀಲರ ಶುಲ್ಕ ಎಷ್ಟು?
ಉ: ಮಲ್ಲಜ್ಜಿಯ ಕೋರ್ಟಿನಲ್ಲಿ ಶುಲ್ಕವೇ ಇರುವುದಿಲ್ಲ.
೫. ಸೃಜನ್‌ಗೆ ಮಲ್ಲಜ್ಜಿಯ ಮಳಿಗೆ ಯಾವ ಲೋಕದಂತೆ ತೋರಿದೆ?
ಉ: ಸೃಜನ್‌ಗೆ ಮಲ್ಲಜ್ಜಿಯ ಮಳಿಗೆ ಜಾದೂ ಲೋಕವಿದ್ದಂತೆ ತೋರುತ್ತದೆ.
ಆ) ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ. (Answer the following in one question)
೧. ಮಲ್ಲಜ್ಜಿಯ ಮಳಿಗೆಯಲ್ಲಿ ದೊರೆಯುವ ವಸ್ತುಗಳು ಯಾವುವು?
ಉ: ಮಲ್ಲಜ್ಜಿಯ ಮಳಿಗೆಯಲ್ಲಿ ಕಡಲೆಪುರಿ, ಕೊಬ್ಬರಿ ಮಿಠಾಯಿ, ತಿಂಡಿ ತಿನಿಸು, ಎಲೆ – ಅಡಿಕೆ, ಸಕ್ಕರೆ – ಚಹಾಪುಡಿ, ಊದುಕಡ್ಡಿ – ಕರ್ಪೂರ, ಬಿಸ್ಕಿಟ್ – ಖಾರ , ಸ್ನೋ – ಪೌಡರ್, ಚಾಕಲೇಟ್ , ಪೆಪ್ಪರ್‌ಮೆಂಟ್ … ಹೀಗೆ ಎಲ್ಲಾ ವಸ್ತುಗಳು ದೊರೆಯುತ್ತವೆ.
೨. ಮಲ್ಲಜ್ಜಿಯ ನ್ಯಾಯಾಲಯದ ಕುರಿತು ವಿವರಿಸಿ.
ಉ: ಮಲ್ಲಜ್ಜಿಯ ಮಳಿಗೆಯಲ್ಲಿ ಎಲ್ಲಾ ಜನರ ಸಮಸ್ಯೆಗಳು ಬಹಳ ಸುಲಭವಾಗಿ ಪರಿಹಾರವಾಗುತ್ತವೆ. ಇಲ್ಲಿ ಯಾವ ವಕೀಲರೂ, ಸಾಕ್ಷಿಗಳೂ ಬೇಕಿಲ್ಲ. ಇವಳ ತೀರ್ಪು, ನ್ಯಾಯಧೀಶನ ತೀರ್ಪಿನ ಹಾಗೆ. ಆದ್ದರಿಂದ ಇದೊಂದು ಜನಪ್ರಿಯ “ಜನತಾ ನ್ಯಾಯಾಲಯ” ಇದ್ದಂತೆ.
೩. ಸೃಜನ್‌ಗೆ ಮಲ್ಲಜ್ಜಿಯ ಮಳಿಗೆ ಜಾದೂಲೋಕವೆನಿಸಿದ್ದು ಏಕೆ?
ಉ: ಮಲ್ಲಜ್ಜಿಯ ಮಳಿಗೆ ಸದಾ ತೆರೆದೇ ಇರುತ್ತದೆ. ಅವಳು ಯಾವಾಗಲೂ ಅಂಗಡಿಯಲ್ಲೇ ಇರುತ್ತಾಳೆ. ಇಲ್ಲಿ ಎಲ್ಲಾ ವಸ್ತುಗಳು ದೊರೆಯುತ್ತವೆ. ಎಲ್ಲಾ ವಸ್ತುಗಳನ್ನು ಯಾವಾಗ ತರುತ್ತಾಳೆ ಎಂಬುದು ಸೃಜನ್‌ಗೆ ಸೋಜಿಗ. ಆದ್ದರಿಂದ ಸೃಜನ್‌ಗೆ ಮಲ್ಲಜ್ಜಿಯ ಮಳಿಗೆ ಜಾದೂಲೋಕವೆನಿಸಿದ್ದು.
ಇ) ಬಿಟ್ಟ ಸ್ಥಳಗಳನ್ನು ಸರಿಯಾದ ಪದಗಳಿಂದ ತುಂಬಿರಿ. (Fill in the blanks)
೧. ಮಲ್ಲಜ್ಜಿ ನಗುತ್ತಾ ಪ್ರೀತಿಯಿಂದ ಮಿಠಾಯಿ ಕೊಡುತ್ತಾಳೆ.
೨. ಅವರ ಜಾತಕ ಸಮೇತ ವಿವರಿಸಿ ಬಿಡುತ್ತಾಳೆ.
೩. ಮಕ್ಕಳಿಂದ ಹಿಡಿದು ಮುದುಕರವರೆಗಿನ ದೂರುಗಳನ್ನು ದೂರಮಾಡಿ ಬಿಡುತ್ತಾಳೆ.
೪. ಇದರ ಬಾಗಿಲು ಸದಾ ತೆರೆದೇ ಇರುತ್ತದೆ.
೫. ‘ಮಲ್ಲಜ್ಜಿಯ ಮಳಿಗೆ‘ ನನಗೆ ಒಂದು ಜಾದೂಲೋಕ ಇದ್ದಂತೆ.
ಭಾಷಾಭ್ಯಾಸ
ಅ) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ. (Answer the following questions)
೧. ಸಮಾನಾರ್ಥಕ ಪದ ಬರೆಯಿರಿ.
ಪತ್ರ = ಕಾಗದ, ಓಲೆ
ಉಚಿತ = ಪುಕ್ಕಟೆ, ಔಚಿತ್ಯ
ತುರ್ತು = ಜರೂರು, ಕೂಡಲೇ
ಶುಲ್ಕ = ಸುಂಕ, ದಂಡ
ತೀರ್ಪು = ನಿರ್ಣಯ, ತೀರ್ಮಾನ .
೨. ಯಾವುದಾದರೂ ನಾಲ್ಕು ವಿಧದ ಪತ್ರಗಳನ್ನು ಹೆಸರಿಸಿರಿ.
ನಾಲ್ಕು ವಿಧದ ಪತ್ರಗಳು
೧. ವೈಯಕ್ತಿಕ ಪತ್ರಗಳು
೨. ಮನವಿ ಪತ್ರಗಳು
೩. ಆಡಳಿತ ಪತ್ರಗಳು
೪. ಪತ್ರಿಕಾ ವರದಿ ಪತ್ರಗಳು
Click here to download Malajiya malige grade V kannada notes