Manobala grade V chapter is a story about Will Power and Confidence. Manobala 5th grade lesson is about a potter called Maadanna from Solapura. Every week, Maadanna would take his pots to the market to sell. One day, it rained heavily, and his cart got stuck in the mud. He tried very hard to pull the cart out. Finally, after a lot of effort, he succeeded and was able to sell all his pots. The moral of the story is: Don’t give up—keep trying until you succeed.
ಮನೋಬಲ
ಅ) ಪದಗಳ ಅರ್ಥ ತಿಳಿಯಿರಿ. ( Write the word meaning)
೧. ಕುಂಬಾರ = ಮಣ್ಣಿನಿಂದ ಮಡಿಕೆ ಮಾಡುವವನು (Potter)
೨. ಮಾರಾಟ = ವ್ಯಾಪಾರ (To sell)
೩. ಗುಂಡಿ = ಹಳ್ಳ, ಗುಣಿ (Pit)
೪. ಕೆಸರು = ಕೊಚ್ಚೆ, ನೀರು ಬೆರೆತ ಮಣ್ಣು (Mud)
ಆ)ಕೆಳಗಿನ ಪದಗಳನ್ನು ಸ್ವಂತ ವಾಕ್ಯಗಳಲ್ಲಿ ಉಪಯೋಗಿಸಿರಿ (Make your own sentence)
೧. ಸಂತೆ: ನಾನು ಸಂತೆಗೆ ಹೋಗಿದ್ದೆ.
೨. ಮಾರಾಟ: ನಾನು ಮಡಕೆ ಮಾರಾಟ ಮಾಡಿದೆ.
೩. ಕೆಸರು: ನಾನು ಕೆಸರು ನೋಡಿದೆ.
೪. ಬಲಪ್ರಯೋಗ: ಮಕ್ಕಳ ಮೇಲೆ ಬಲಪ್ರಯೋಗ ಮಾಡಬಾರದು.
೫. ಸಮಾಧಾನ: ನಾನು ಸಮಾಧಾನ ಮಾಡಿದೆ.
ಇ) ಬಿಟ್ಟ ಸ್ಥಳಗಳಲ್ಲಿ ಸರಿಯಾದ ಪದಗಳನ್ನು ತುಂಬಿಸಿರಿ. (Fill in the blanks)
೧. ಆ ಊರಿನಲ್ಲಿ ಮಾದಣ್ಣನೆಂಬ ಕುಂಬಾರನಿದ್ದ.
೨. ಹಿಂದಿನ ರಾತ್ರಿ ಭರ್ಜರಿ ಮಳೆ ಬಂದಿತ್ತು.
೩. ಸಾಗುತ್ತಿದ್ದ ಗಾಡಿ ಗಕ್ಕನೆ ನಿಂತುಬಿಟ್ಟಿತು.
೪. ತಮ್ಮ ಕುಟುಂಬದವರೆಲ್ಲ ಒಂದು ವಾರ ಉಪವಾಸ ಇರಬೇಕಾಗುತ್ತದೆ ಎಂದು ಚಿಂತಿಸಿದ.
೫. ಎತ್ತುಗಳಿಗೂ ಹೇಹೇ ಎಂದು ಎಚ್ಚರಿಸಿದನು.
ಈ) ವಿರುದ್ಧ ಪದಗಳನ್ನು ಬರೆಯಿರಿ. (Write the opposite words)
ಗಟ್ಟಿ X ಮೃದು ಏರಿಸು X ಇಳಿಸು
ದೊಡ್ಡ X ಸಣ್ಣ ಮೇಲಕ್ಕೆ X ಕೆಳಕ್ಕೆ
ಉ) ಕೆಳಗಿನ ಅಕ್ಷರಗಳಿಗೆ ಗುಣಿತಾಕ್ಷರಗಳನ್ನು ಬರೆಯಿರಿ. (Write the Gunitakshara for thr following letters)
೧. ಮ: ಮ ಮಾ ಮಿ ಮೀ ಮು ಮೂ ಮೃ ಮೆ ಮೇ ಮೈ ಮೊ ಮೋ ಮೌ ಮಂ ಮಃ
೨. ಪ: ಪ ಪಾ ಪಿ ಪೀ ಪು ಪೂ ಪೃ ಪೆ ಪೇ ಪೈ ಪೊ ಪೋ ಪೌ ಪಂ ಪಃ
೩. ಘ: ಘ ಘಾ ಘಿ ಘೀ ಘು ಘೂ ಘೃ ಘೆ ಘೇ ಘೈ ಘೊ ಘೋ ಘೌ ಘಂ ಘಃ
೪. ತ: ತ ತಾ ತಿ ತೀ ತು ತೂ ತೃ ತೆ ತೇ ತೈ ತೊ ತೋ ತೌ ತಂ ತಃ
೫. ದ: ದ ದಾ ದಿ ದೀ ದು ದೂ ದೃ ದೆ ದೇ ದೈ ದೊ ದೋ ದೌ ದಂ ದಃ
ಊ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.(Write the answer in one sentences)
೧. ಮಾದಣ್ಣನು ಯಾವ ಊರಿನವನು?
ಉ: ಮಾದಣ್ಣನು ಸೋಲಾಪುರ ಊರಿನವನು.
೨. ಮಾದಣ್ಣನು ಗಾಡಿಯಲ್ಲಿ ಏನನ್ನು ತುಂಬಿಸಿಕೊಂಡು ಹೊರಟ?
ಉ: ಮಾದಣ್ಣನು ಗಾಡಿಯಲ್ಲಿ ಮಡಕೆಗಳನ್ನು ತುಂಬಿಸಿಕೊಂಡು ಹೊರಟ.
೩. ಗಾಡಿಯ ಚಕ್ರವು ಎಲ್ಲಿ ಹೂತು ಹೋಯಿತು?
ಉ: ಗಾಡಿಯ ಚಕ್ರವು ಕೆಸರಿನಲ್ಲಿ ಹೂತು ಹೋಯಿತು.
೪. ಮಾದಣ್ಣನು ಬೇಗ ಬೇಗನೆ ಗಾಡಿಯನ್ನು ಓಡಿಸಿಕೊಂಡು ಎಲ್ಲಿಗೆ ಹೋದನು?
ಉ: ಮಾದಣ್ಣನು ಬೇಗ ಬೇಗನೆ ಗಾಡಿಯನ್ನು ಓಡಿಸಿಕೊಂಡು ಸಂತೆಗೆ ಹೋದನು.