Masaledose is a popular South Indian dish. Masaledose a crispy crepe made from fermented rice and lentil batter. The inside is filled with a delicious potato masala. It’s often served with coconut chutney and sambar for a flavorful and satisfying meal.
ಮಸಾಲೆದೋಸೆ ದಕ್ಷಿಣ ಭಾರತದ ಜನಪ್ರಿಯ ಖಾದ್ಯ. ಇದು ನೆನೆಸಿದ ಅಕ್ಕಿ ಮತ್ತು ಉದ್ದಿನ ಹಿಟ್ಟಿನಿಂದ ಮಾಡಿದ ಗರಿಗರಿಯಾದ ದೋಸೆ ಆಗಿದೆ. ಒಳಗೆ ರುಚಿಯಾದ ಆಲೂಗಡ್ಡೆ ಮಸಾಲೆ ತುಂಬಿರುತ್ತದೆ. ಇದನ್ನು ಸಾಮಾನ್ಯವಾಗಿ ತೆಂಗಿನಕಾಯಿ ಚಟ್ನಿ ಮತ್ತು ಸಾಂಬಾರ್ ಜೊತೆಗೆ ಕೊಡಲಾಗುತ್ತದೆ.
ಅ. ಪದಗಳ ಅರ್ಥ ಬರೆಯಿರಿ (Write word meaning)
ಹುಯ್ಯು = ಎರೆಯು, ಹೊಯ್ಯು; ಕರ್ರನೆ = ಕಪ್ಪಗೆ; ಪೂಸು = ಹಚ್ಚು; ಸೂಸು = ಬೀರು; ಪುಷ್ಟಿ = ಬಲಿಷ್ಠ; ಕಾಡು = ಪೀಡಿಸು; ಪಲ್ಯ = ಕಾಯಿಪಲ್ಲೆ, ಪರಿಮಳ = ಸುವಾಸನೆ; ದುಂಡನೆ = ವ್ರತ್ತಾಕಾರ; ಅರಗು = ಕರಗು
ಆ. ಒಂದು ವಾಕ್ಯದಲ್ಲಿ ಬರೆಯಿರಿ (Answer in one sentence)
೧. ದೋಸೆ ಚುಂಯ್ ಚುಂಯ್ ಎಂದು ಯಾವುದರ ಮೇಲೆ ಸದ್ದು ಮಾಡುತ್ತದೆ?
ಉ: ದೋಸೆ ಚುಂಯ್ ಚುಂಯ್ ಎಂದು ಹೆಂಚಿನ ಮೇಲೆ ಸದ್ದು ಮಾಡುತ್ತದೆ.
೨. ಅಮ್ಮ ಯಾವ ದೋಸೆ ಹುಯ್ಯುವಳು?
ಉ: ಅಮ್ಮ ಹೂವಿನ ದೋಸೆ ಹುಯ್ಯುವಳು.
೩. ಕರ್ರನೆಯ ಹೆಂಚಿನಲ್ಲಿ ಎಂತಹ ದೋಸೆ ಸಿದ್ಧವಾಗುತ್ತದೆ?
ಉ: ಕರ್ರನೆಯ ಹೆಂಚಿನಲ್ಲಿ ಬೆಳ್ಳಿಯ ದೋಸೆ ಸಿದ್ಧವಾಗುತ್ತದೆ.
೪. ದೋಸೆ ಕರಗದೆ ಕಾಡುವದು ಯಾವಾಗ?
ಉ: ದೋಸೆ ಕರಗದೆ ಕಾಡುವದು ಬಕಬಕ ತಿಂದಾಗ.
ಇ. ಬಿಟ್ಟಸ್ಥಳ ತುಂಬಿರಿ. (Fill in the blanks)
೧. ಹಿಟ್ಟನು ಸೌಟಲಿ ಸರ್ರನೆ ಹೊಯ್ಯಲು.
೨. ಮೇಲೊಂದಿಷ್ಟು ಬೆಣ್ಣೆಯ ಪೂಸೆ.
೩. ಮೆಲ್ಲನೆ ಮೆಲ್ಲುವ ದುಂಡನೆ ದೋಸೆ.
೪. ಇಷ್ಟ ತೀರದ ಪುಷ್ಟಿಯ ದೋಸೆ.
ಈ. ಸ್ವಂತ ವಾಕ್ಯದಲ್ಲಿ ಬರೆಯಿರಿ. (Make your own sentence)
ಪರಿಮಳ : ತುಪ್ಪದ ಪರಿಮಳ ಚೆನ್ನಾಗಿದೆ.
ಅಚ್ಚುಮೆಚ್ಚು: ನನಗೆ ದೋಸೆ ಅಚ್ಚುಮೆಚ್ಚು.
ಉ. ನಕಾರಾತ್ಮಕ ರೂಪ ಬರೆಯಿರಿ (Write the negative form)
ಕುಣಿಯಿತು = ಕುಣಿಯಲಿಲ್ಲ
ಸೂಸಿತು = ಸೂಸಲಿಲ್ಲ
ತಿಂದರು = ತಿನ್ನಲಿಲ್ಲ