Muddu chandira poem for Grade VI, is about the moon. Muddu chandira means beautiful moon. It describes the beautiful moon that appears at night, resembling a laddu. The moon playfully hides among the clouds, which look like cotton spread across a sheet of paper. The poet wonders if the moon is frightened because the clouds have surrounded it. in Muddu chandira poem, a child then invites the moon to come to their house to play.

VI ನೇ ತರಗತಿಯ “ಮುದ್ದು ಚಂದಿರ” ಕವಿತೆ ಚಂದ್ರನ ಬಗ್ಗೆ. ಇದು ರಾತ್ರಿಯಲ್ಲಿ ಕಾಣಿಸಿಕೊಳ್ಳುವ ಸುಂದರ ಚಂದ್ರನನ್ನು ಬಣ್ಣಿಸುತ್ತದೆ. ಚಂದ್ರನು ಲಡ್ಡುವನ್ನು ಹೋಲುತ್ತಾನೆ. ಕಾಗದದ ಹಾಳೆಯಲ್ಲಿ ಹತ್ತಿ ಹರಡಿದಂತೆ ಕಾಣುವ ಮೋಡಗಳ ನಡುವೆ ಚಂದ್ರನು ಅಡಗಿಕೊಳ್ಳುತ್ತಾನೆ. ಮೋಡಗಳು ತನ್ನನ್ನು ಸುತ್ತುವರಿದಿರುವುದರಿಂದ ಚಂದ್ರನು ಹೆದರುತ್ತಾನೆಯೇ ಎಂದು ಕವಿ ಆಶ್ಚರ್ಯ ಪಡುತ್ತಾನೆ. ನಂತರ ಒಂದು ಮಗು ತನ್ನ ಮನೆಗೆ ಆಡಲು ಬರಲು ಚಂದ್ರನನ್ನು ಕರೆಯುತ್ತಾನೆ.

ಮುದ್ದು ಚಂದಿರ

ಅ. ಪದಗಳ ಅರ್ಥ ಇಂಗ್ಲೀಷ್‌ ನಲ್ಲಿ ಬರೆಯಿರಿ. (Write the English word meaning)

ಚಂದಿರ, ಆಡು, ಇಳೆ , ಓಡು, ಹೆದರು, ಮೋಡ, ಹತ್ತಿ, ಸುಂದರ

ಆ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ. (Answer the following in one sentence)

೧. ಹತ್ತಿಯೂ ತೇಲುತ ಹಾರುತ ಏನಾಗಿದೆ?
೨. ಯಾರು ಓಡುತ್ತಿದ್ದಾರೆ?
೩. ಆಟವಾಡಲು ಚಂದಿರ ಎಲ್ಲಿಗೆ ಬರಬೇಕು?

ಇ. ಬಿಟ್ಟ ಸ್ಥಳ ಭರ್ತಿ ಮಾಡಿ. (Fill in the blanks)

೧. …………………………. ನಾವ್ ಕುಣಿಕುಣಿದಾಡುವ
೨. ‌………………… ಮೈಯನು ಸುತ್ತುವರೆಂದು ಚಂದ್ರನು ಬೆದರಿಹನೇ.
೩. ಕರೆದರೆ ಬರುವನೆ ನಮ್ಮಯ ………………. ಆಡಲು ಜಾಗವಿದೆ.

ಈ. ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿರಿ. (Make your own sentence)

ಸುಂದರ:
ಮನೆ:
ಮೋಡ:

ಉ. ಗುಂಪಿಗೆ ಸೇರದ ಪದ ಗುರುತಿಸಿ ಬರೆಯಿರಿ. (Identify and write the word that does not belong to the group)

೧. ಚಂದ್ರ, ಸೂರ್ಯ, ನಕ್ಷತ್ರ, ಮನೆ
೨. ಹರುಷ, ಭಯ, ಸಂತೋಷ, ಆನಂದ
೩. ರಾತ್ರಿ, ಹಗಲು, ಹತ್ತಿ, ಸಂಜೆ
೪. ಇಳೆ, ಆಕಾಶ, ಭೂಮಿ, ಪೃಥ್ವಿ

Click here to download mudu chandira worksheet