Munde guri irabeku hinde guru irabeku kannda essay ICSE question. Munde guri irabeku hinde guru irabeku means “one should have a goal ahead and a teacher behind.

“One should have a goal ahead and a teacher behind” is a meaningful saying that gives direction to life. My life’s goal is to become a good human being who contributes knowledge, values, and service to society. Aim is not limited to personal success alone, but to bring light into the lives of others through my actions. My specific goal is to serve patients by becoming a doctor.

To move towards this goal, I am continuously engaging myself in learning. I strive to improve my abilities through education and experience and have adopted discipline in time management, hard work, and patience in my life. I nurture a mindset of learning from mistakes and moving forward with determination.

The people who inspire me on this journey are my teachers and my parents. They have taught me not only academic lessons but also how to live life with values. Their words, discipline, and value-based living always guide me. In addition, the biographies and achievements of great personalities have given birth to new dreams within me. My teachers have taught me knowledge, time discipline, hard work, and patience. They are also teaching me the sense of time, tolerance, and discipline required to become a doctor. They have made me understand that there is no room for mistakes in the medical profession. I choose to become a doctor not for my own livelihood, but to save and serve others.

Thus, with a clear goal ahead and the blessings of my teachers behind me, I move forward with confidence to achieve my goal.

“ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು ಎಂಬ ಹೇಳಿಕೆಯಂತೆ ನಿಮ್ಮ ಜೀವನದ ಗುರಿ ಯಾವುದು ಆ ಗುರಿಯಡೆಗೆ ಸಾಗಲು ನೀವು ಮಾಡುತ್ತಿರುವ ಪ್ರಯತ್ನ ಹಾಗೂ ಅದಕ್ಕೆ ಸ್ಪೂರ್ತಿದಾಯಕರು ಕುರಿತು ಪ್ರಬಂಧ ಬರೆಯಿರಿ”

ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು ಎಂಬ ಮಾತು ಜೀವನಕ್ಕೆ ದಿಕ್ಕು ತೋರಿಸುವ ಅರ್ಥಪೂರ್ಣ ಹೇಳಿಕೆ. ನನ್ನ ಜೀವನದ ಗುರಿ ಸಮಾಜಕ್ಕೆ ಜ್ಞಾನ, ಮೌಲ್ಯ ಮತ್ತು ಸೇವೆಯನ್ನು ಕೊಡುವ ಉತ್ತಮ ವ್ಯಕ್ತಿಯಾಗುವುದು. ಕೇವಲ ವೈಯಕ್ತಿಕ ಯಶಸ್ಸಲ್ಲದೇ, ನನ್ನ ಮೂಲಕ ಇತರರ ಬದುಕಿಗೂ ಬೆಳಕು ನೀಡುವ ಕೆಲಸ ಮಾಡಬೇಕೆಂಬುದು ನನ್ನ ಗುರಿಯಾಗಿದೆ. ನಾನು ವೈದ್ಯಳಾಗಿ ರೋಗಿಗಳ ಸೇವೆ ಮಾಡುವುದು ನನ್ನ ಗುರಿ.

ಈ ಗುರಿಯಡೆಗೆ ಸಾಗಲು ನಾನು ನಿರಂತರವಾಗಿ ನನ್ನನ್ನು ತೊಡಗಿಸಿಕೊಂಡಿದ್ದೇನೆ. ಶಿಕ್ಷಣ, ಮತ್ತು ಅನುಭವದ ಮೂಲಕ ನನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಸಮಯದ ಶಿಸ್ತು, ಶ್ರಮ ಹಾಗೂ ಸಹನೆಯನ್ನು ನನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ. ತಪ್ಪುಗಳಿಂದ ಪಾಠ ಕಲಿತು ಮುಂದೆ ಸಾಗುವ ಮನೋಭಾವವನ್ನು ಬೆಳೆಸಿಕೊಂಡಿರುತ್ತೇನೆ.

ಈ ಪ್ರಯಾಣದಲ್ಲಿ ನನಗೆ ಸ್ಪೂರ್ತಿಯಾಗಿರುವವರು ನನ್ನ ಗುರುಗಳು ಮತ್ತು ಪೋಷಕರು. ಅವರು ಕೇವಲ ಪಾಠವನ್ನೇ ಅಲ್ಲ, ಜೀವನವನ್ನು ಹೇಗೆ ಬದುಕಬೇಕು ಎಂಬುದನ್ನೂ ಕಲಿಸಿದ್ದಾರೆ. ಅವರ ಮಾತುಗಳು, ಶಿಸ್ತು ಮತ್ತು ಮೌಲ್ಯಯುತ ಬದುಕು ನನಗೆ ಸದಾ ಮಾರ್ಗದರ್ಶಕವಾಗಿವೆ. ಜೊತೆಗೆ ಮಹಾನ್ ವ್ಯಕ್ತಿಗಳ ಜೀವನಚರಿತ್ರೆಗಳು ಮತ್ತು ಅವರ ಸಾಧನೆಗಳು ನನ್ನಲ್ಲಿ ಹೊಸ ಕನಸುಗಳಿಗೆ ಜನ್ಮ ನೀಡಿವೆ. ನನ್ನ ಗುರುಗಳು ನನಗೆ ಜ್ಞಾನ, ಸಮಯದ ಶಿಸ್ತು, ಶ್ರಮ ಹಾಗೂ ಸಹನೆಯನ್ನು ಕಲಿಸಿದ್ದಾರೆ. ವೈದ್ಯರಿಗೆ ಬೇಕಾಗುವ ಸಮಯಪ್ರಜ್ಞೆ ತಾಳ್ಮೆ ಹಾಗೂ ಶಿಸ್ತನ್ನು ನನ್ನ ಗುರುಗಳು ನನಗೆ ಕಲಿಸಿಕೊಡುತ್ತಿದ್ದಾರೆ. ಹಾಗೆಯೇ ವೈದ್ಯರು ತಪ್ಪು ಮಾಡುವ ಯಾವ ಅವಕಾಶವೂ ಇರುವದಿಲ್ಲ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ. ನಾನು ನನ್ನ ಬದುಕಿಗಾಗಿ ವೈದ್ಯಳಾಗದೆ ಪರರನ್ನು ಉಳಿಸಲು ವೈದ್ಯಳಾಗುತ್ತೇನೆ.

ಹೀಗಾಗಿ, ಮುಂದೆ ಗುರಿ ಇಟ್ಟುಕೊಂಡು, ಹಿಂದೆ ಗುರುಗಳ ಆಶೀರ್ವಾದ ಇಟ್ಟುಕೊಂಡು ನಾನು ಆತ್ಮವಿಶ್ವಾಸದಿಂದ ನನ್ನ ಗುರಿಯನ್ನು ತಲುಪುತ್ತೇನೆ.

Click here to download Mundhe guri irabeku hindhe guru irabeku