Namma mathu keli means listen to our words. Namma mathu keli kannada lesson grade V is about animals talking about their problems created by humans.
ನಮ್ಮ ಮಾತು ಕೇಳಿ
ಅ) ಪದಗಳ ಅರ್ಥ (Write the word meaning)
ಅಂಚು = ಕೊನೆ,
ಅಧಿಪತಿ = ಒಡೆಯ, ನಾಯಕ
ಅವಕಾಶ = ಸಂದರ್ಭ, ಎಡೆ
ಆಕ್ರೋಶ = ಗರ್ಜನೆ, ಕೋಪಿಸುವಿಕೆ
ಉಪೇಕ್ಷೆ = ಅಲಕ್ಷ, ಕಡೆಗಣಿಸುವಿಕೆ
ಕಾಡು = ಅರಣ್ಯ, ಅಡವಿ
ಕ್ಷೇಮಸಮಾಚಾರ = ಕುಶಲ, ಆರೋಗ್ಯ ಕುರಿತಾದ ವಿಷಯ
ಖಾರ = ತೀಕ್ಷ್ಣ,ಕಟು
ಗಳಿಸು = ಸಂಪಾದಿಸು , ಪಡೆ
ಚರ್ಚೆ = ವಾಗ್ವಾದ , ತರ್ಕ
ತಾಣ = ಸ್ನಾನ , ಸ್ಥಳ
ದೂರು = ನಿಂದಿಸು , ಆಪಾದನೆ
ನಾಯಕತ್ವ ಗುಣ = ಆಲೋಚಿಸಿ ಜವಾಬ್ದಾರಿಯನ್ನು
ನಿರ್ವಹಿಸುವ ಮನೋಭಾವ.
ಪಟಾಕಿ = ಉತ್ಸವಾದಿಗಳಲ್ಲಿ ಹಾರಿಸುವ ಸಣ್ಣ ಸಿಡಿಮದ್ದು ಪರಿಶೀಲಿಸಲು = ಸೂಕ್ಷ್ಮವಾಗಿ ವಿಚಾರಿಸಿ ನೋಡುವುದು
ಪ್ರದರ್ಶಿಸು = ಕಾಣುವಂತೆ ಮಾಡು, ಗಮನಿಸುವಂತೆ ತೋರಿಸು
ಫಲಕ = ವಿವರ ಬರೆದು ಹಾಕುವ ಹಲಗೆ.
ಫಲವತ್ತತೆ = ಫಲವುಳ್ಳ, ಸಾರವತ್ತಾದ
ಮದ್ದು = ಬಂದೂಕು, ಕೋವಿಗಳಲ್ಲಿ ತುಂಬುವ ಸ್ಫೋಟಕ ಪುಡಿ.
ಮುದ್ದಿಸು = ಪ್ರೀತಿಸು, ಮುದ್ದಾಡು
ಮುನ್ನಡೆ = ಏಳಿಗೆ, ಪ್ರಗತಿ
ಮೆಚ್ಚುಗೆ = ಪ್ರಶಂಸೆ
ರಾಕ್ಷಸ = ದಾನವ, ದುಷ್ಟಶಕ್ತಿ
ವಿಪದ ಗೊಬ್ಬರ = ರಾಸಾಯನಿಕ ಗೊಬ್ಬರ
ಸಿಡಿದುಹೋಗು = ಚಿಮ್ಮು, ಸ್ಫೋಟಗೊಳ್ಳು
ಆ) ಕೆಳಗಿನ ಪ್ರಶ್ನೆಗಳಿಗೆ ಬರೆಯಿರಿ. (Answer the following in one sentence)
೧. ಕಾಡಿನ ಅಧಿಪತಿ ಯಾರು?
ಉ: ಕಾಡಿನ ಅಧಿಪತಿ ಆನೆ.
೨. ಆನೆಯು ಯಾವುದರಲ್ಲಿ ವಿವರ ಬರೆದು ತರಲು ಸೂಚನೆ ನೀಡಿತು?
ಉ: ಆನೆಯು ಫಲಕದಲ್ಲಿ ವಿವರ ಬರೆದು ತರಲು ಸೂಚನೆ ನೀಡಿತು.
೩. ʼಮನುಷ್ಯರು ಕಡಿಮೆ ಆಹಾರ ನೀಡುತ್ತಾರೆʼ ಎಂದು ದೂರು ಬರೆದವರು ಯಾರು?
ಉ: ʼಮನುಷ್ಯರು ಕಡಿಮೆ ಆಹಾರ ನೀಡುತ್ತಾರೆʼ ಎಂದು ದೂರು ಬರೆದವರು ಎತ್ತು.
೪. ‘ಕಾಡು ನಿಮಗೂ ಬೇಕು’ ಎಂದು ಎಚ್ಚರಿಸಿದವರು ಯಾರು?
ಉ: ‘ಕಾಡು ನಿಮಗೂ ಬೇಕು‘ ಎಂದು ಎಚ್ಚರಿಸಿದವರು ಜಿಂಕೆ.
೫. ‘ಮದ್ದುಗುಂಡುಗಳನ್ನು ಸಿಡಿಸಬೇಡಿ‘ ಹೇಳಿದವರು ಯಾರು?
ಉ: ಮದ್ದುಗುಂಡುಗಳನ್ನು ಸಿಡಿಸಬೇಡಿ ‘ ಎಂದು ಹೇಳಿದವರು ಮಂಗ.
ಇ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯದಲ್ಲಿ ಉತ್ತರಿಸಿ. (Answer the following in two – three sentences)
೧. ಎತ್ತು ಹಿಡಿದ ಫಲಕದಲ್ಲಿ ಏನೆಂದು ಬರೆದಿತ್ತು?
ಉ: ಎತ್ತು ಹಿಡಿದ ಫಲಕದಲ್ಲಿ ”ನಮ್ಮನ್ನು ಹೆಚ್ಚು ಹೆಚ್ಚು ದುಡಿಸಿಕೊಳ್ಳುತ್ತೀರಿ. ಕಡಿಮೆ ಆಹಾರ ನೀಡುತ್ತೀರಿ. ನಮ್ಮ ಸೇವೆ ಬೇಕು; ನಾವು ಮಾತ್ರ ಬೇಡ ಅಲ್ಲವೇ? ನಮ್ಮ ಸೇವೆಯನ್ನು ಮರೆಯದಿರಿ,” “ದಯೆಯಿರಲಿ ಸಕಲ ಪ್ರಾಣಿಗಳಲ್ಲಿ” ಎಂದು ಬರೆದಿತ್ತು.
೨. ಜಿಂಕೆ ಹಿಡಿದ ಫಲಕದಲ್ಲಿ ಏನೆಂದು ಬರೆದಿತ್ತು?
ಉ: ಜಿಂಕೆ ಹಿಡಿದ ಫಲಕದಲ್ಲಿ “ನಮ್ಮ ಬದುಕಿನ ಆಧಾರತಾಣ ಕಾಡು, ಅದನ್ನು ನಾಶ ಮಾಡುತ್ತಿದ್ದೀರಿ. ನಮಗೆ ತಿನ್ನಲು ಹುಲ್ಲಿಲ್ಲ. ಮಲಗಲು ಮರದ ನೆರಳಿಲ್ಲ. ಕಾಡು ನಿಮಗೂ ಬೇಕು , ನಮಗೂ ಬೇಕು”. ”ನಮ್ಮನ್ನು ಉಳಿಸಿರಿ, ನೀವೂ ಉಳಿಯಿರಿ” ಎಂದು ಬರೆದಿತ್ತು.
೩. ಆಮೆ ಹಿಡಿದ ಫಲಕದಲ್ಲಿ ಏನೆಂದು ಬರೆದಿತ್ತು?
ಉ: ಆಮೆ ಹಿಡಿದ ಫಲಕದಲ್ಲಿ ”ನೀರು ಅಮೂಲ್ಯ ಸಂಪತ್ತು. ಅದನ್ನು ಹಾಳು ಮಾಡುತ್ತಿದ್ದೀರಿ, ಕಸಕಡ್ಡಿ ಹಾಕಿ ಕಲ್ಮಷಗೊಳಿಸುತ್ತಿದ್ದೀರಿ. ನಮಗೆ ನೀರಿನಲ್ಲಿರಲು ಕಷ್ಟವಾಗುತ್ತಿದೆ. ನೀರು ನಮ್ಮೆಲ್ಲರ ಜೀವ,” ”ನೀರನ್ನು ದುರ್ಬಳಕೆ ಮಾಡಬೇಡಿ, ಕಲುಷಿತಗೊಳಿಸಬೇಡಿ” ಎಂದು ಬರೆದಿತ್ತು .
೪. ಕರಡಿ ಹಿಡಿದ ಫಲಕದಲ್ಲಿ ಏನೆಂದು ಬರೆದಿತ್ತು?
ಉ: ಕರಡಿ ಹಿಡಿದ ಫಲಕದಲ್ಲಿ “ಎಲ್ಲವನ್ನೂ ನೀವೇ ತಿನ್ನುತ್ತೀರಿ. ತಿಂದು ಹೆಚ್ಚಾಗಿ ಹಾಳು ಮಾಡುತ್ತೀರಿ. ನಮ್ಮ ಹೊಟ್ಟೆ ಹಸಿವಿನ ಬಗ್ಗೆ ನೀವು ಗಮನಿಸುವುದಿಲ್ಲ. ನಮಗೇನೂ ಉಳಿಸುವುದಿಲ್ಲ.” “ನೀವೂ ತಿನ್ನಿ , ನಮಗೂ ತಿನ್ನಲು ಬಿಡಿ.” ಎಂದು ಬರೆದಿತ್ತು.
೫. ನಾಯಿ ಹಿಡಿದ ಫಲಕದಲ್ಲಿ ಏನೆಂದು ಬರೆದಿತ್ತು?
ಉ: ನಾಯಿ ಹಿಡಿದ ಫಲಕದಲ್ಲಿ “ನಾವೂ ನಡೆದಾಡಬೇಕು. ಓಡಾಡಬೇಕು. ನಮಗೂ ದಾರಿ ಬಿಡಿ. ಹಾದಿ ಬೀದಿಗಳಲ್ಲಿ ನೀವು ಮತ್ತು ನಿಮ್ಮ ವಾಹನಗಳೇ ತುಂಬಿವೆ. ಮೈಮೇಲೆ ಎಚ್ಚರವಿಲ್ಲದಂತೆ ಸಾಗುತ್ತೀರಿ. ಇತರರಿಗೂ ತೊಂದರೆ ಕೊಡುತ್ತೀರಿ.” “ಸರಿಯಾಗಿ ಚಲಿಸಿರಿ, ಚಲಿಸಲು ಬಿಡಿ.” ಎಂದು ಬರೆದಿತ್ತು.
ಈ) ಬಿಟ್ಟಸ್ಥಳಗಳನ್ನು ಸರಿಯಾದ ಪದಗಳಿಂದ ಭರ್ತಿ ಮಾಡಿರಿ. (Fill in the blanks)
೧. ಆನೆಯು ಎಲ್ಲ ಪ್ರಾಣಿಗಳಿಂದಲೂ ಮೆಚ್ಚುಗೆ ಯನ್ನು ಗಳಿಸಿತ್ತು .
೨. ಪ್ರಾಣಿಗಳು ಈ ದಿನದ ಸಭೆಗೆ ಸಿದ್ಧವಾಗಿ ಬಂದಿದ್ದವು .
೩. ಎಲ್ಲರ ಕುರಿತಾಗಿಯೂ ಈ ರೀತಿಯ ಆಕ್ರೋಶ ಸಲ್ಲದು .
೪. ಇವುಗಳನ್ನು ಇನ್ನೊಮ್ಮೆ ಪರಿಶೀಲಿಸಿ ಚರ್ಚಿಸೋಣ.
೫. ನಮ್ಮನ್ನು ಹೆಚ್ಚು ಹೆಚ್ಚು ದುಡಿಸಿಕೊಳ್ಳುತ್ತಿರಿ ಎಂದು ಎತ್ತು ಹೇಳಿತು.
ಭಾಷಾಭ್ಯಾಸ
ಅ) ವಚನ ಬದಲಿಸಿ ಬರೆಯಿರಿ. (Change Singular to plural or plural to singular)
೧. ಎತ್ತು – ಎತ್ತುಗಳು
೨. ನಾಯಕ – ನಾಯಕರು
೩. ಅಣ್ಣ೦ದಿರು – ಅಣ್ಣ
೪. ಪತ್ರಿಕೆಗಳು – ಪತ್ರಿಕೆ
೫. ಪತ್ರಗಳು – ಪತ್ರ
೬. ಮಿತ್ರರು – ಮಿತ್ರ
೭. ಅದು – ಅವು
೮. ನೀವು – ನೀನು