Navilu means peacock. The peacock, India’s national bird, is famous for its bright and colorful feathers. Male peacocks, called peafowls, spread their beautiful tail feathers in a fan shape to attract females. These birds come from South Asia but can be found in many places because they are so lovely. Navilu or Peacocks are symbols of grace and elegance in many cultures. They live in forests and areas with lots of trees and open spaces. They eat seeds, insects, and small animals. Peacocks are known for their loud calls that can be heard from far away. These birds appear in many art forms, from traditional Indian paintings to modern designs.

ಭಾರತದ ರಾಷ್ಟ್ರೀಯ ಪಕ್ಷಿಯಾದ ನವಿಲು ತನ್ನ ವರ್ಣರಂಜಿತ ಗರಿಗಳಿಗೆ ಹೆಸರುವಾಸಿಯಾಗಿದೆ. ನವಿಲುಗಳು ಎಂದು ಕರೆಯಲ್ಪಡುವ ಗಂಡು ನವಿಲುಗಳು ಹೆಣ್ಣುಗಳನ್ನು ಆಕರ್ಷಿಸಲು ತಮ್ಮ ಸುಂದರವಾದ ಗರಿಗಳನ್ನು ಫ್ಯಾನ್ ಆಕಾರದಲ್ಲಿ ಹರಡುತ್ತವೆ. ಈ ಪಕ್ಷಿಗಳು ದಕ್ಷಿಣ ಏಷ್ಯಾದಿಂದ ಬಂದಿವೆ. ಆದರೆ ಅನೇಕ ಸ್ಥಳಗಳಲ್ಲಿ ಕಂಡುಬರುತ್ತವೆ. ಏಕೆಂದರೆ ಅವುಗಳು ತುಂಬಾ ಸುಂದರವಾಗಿವೆ. ನವಿಲುಗಳು ಅನೇಕ ಸಂಸ್ಕೃತಿಗಳಲ್ಲಿ ಅನುಗ್ರಹ ಮತ್ತು ಸೊಬಗುಗಳ ಸಂಕೇತಗಳಾಗಿವೆ. ಅವರು ಕಾಡುಗಳು ಮತ್ತು ಸಾಕಷ್ಟು ಮರಗಳು ಮತ್ತು ತೆರೆದ ಸ್ಥಳಗಳನ್ನು ಹೊಂದಿರುವ ಪ್ರದೇಶಗಳಲ್ಲಿ ವಾಸಿಸುತ್ತಾರೆ. ಅವರು ಬೀಜಗಳು, ಕೀಟಗಳು ಮತ್ತು ಸಣ್ಣ ಪ್ರಾಣಿಗಳನ್ನು ತಿನ್ನುತ್ತಾರೆ. ನವಿಲುಗಳು ತಮ್ಮ ಕರೆಗಳಿಗೆ ಹೆಸರುವಾಸಿಯಾಗಿದ್ದು ಅದು ದೂರದಿಂದ ಕೇಳುತ್ತದೆ. ಈ ಪಕ್ಷಿಗಳು ಸಾಂಪ್ರದಾಯಿಕ ಭಾರತೀಯ ವರ್ಣಚಿತ್ರಗಳಿಂದ ಆಧುನಿಕ ವಿನ್ಯಾಸಗಳವರೆಗೆ ಅನೇಕ ಕಲಾ ಪ್ರಕಾರಗಳಲ್ಲಿ ಕಾಣಿಸಿಕೊಳ್ಳುತ್ತವೆ.

ಅ. ಪದಗಳ ಅರ್ಥ ಬರೆಯಿರಿ. (Write the word meaning)

ಅಲೆ= ತೆರೆ,   ಕತ್ತು = ಕೊರಳು, ಕೊಂಕು = ಡೊಂಕು, ಛಾಯೆ = ನೆರಳು,
ತುರಾಯಿ = ಹಕ್ಕಿಗಳ ಜುಟ್ಟು, ನಯನ = ಕಣ್ಣು, ಅಕ್ಷಿ, ನೇತ್ರ,  ಆವಾಸ = ನೆಲೆ,ಮನೆ, ಕಮಾನು = ಅರ್ಧಚಂದ್ರಾಕೃತಿಯ ರಚನೆ, ಚಮಕಿಸು = ಹೊಳಪು, ಜಿನುಗು = ತೊಟ್ಟಿಕ್ಕು, ನರ್ತನ = ಕುಣಿತ, ಬಾಧೆ = ತೊಂದರೆ, ನೋವು, ಅಡ್ಡಿ, ಮನೋಹರ = ಸುಂದರ, ಮುರುಳಿ = ಕೊಳಲು, ರಾಷ್ಟ್ರಪಕ್ಷಿ = ರಾಷ್ಟ್ರ ಗೌರವಕ್ಕೆ ಪಾತ್ರವಾದ ಪಕ್ಷಿ, ವರ್ಣ = ಬಣ್ಣ,  ಸಿಪಾಯಿ = ಸೈನಿಕ, ಯೋಧ, ಹಿಂಡು = ಗುಂಪು, ಮುರಳಿ ಮೋಹನ = ಕೃಷ್ಣ, ಮೋಹನ = ಆಕರ್ಷಣೆ, ಸೆಳೆತ, ಲಾವಣ್ಯ = ಸೊಗಸು,
ಶಿಖಿ = ನವಿಲಿನ ತಲೆ ಮೇಲಿನ ಜುಟ್ಟು, ಸಹಸ್ರಾಕ್ಷ = ಸಾವಿರ ಕಣ್ಣು, ಹುಲ್ಲುಗಾವಲು = ಹುಲ್ಲಿನ ಮೈದಾನ

ಆ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)

೧. ನವಿಲಿನ ಕಣ್ಣುಗಳು ಹೇಗೆ ಹೊಳೆಯುತ್ತವೆ?
ಉ: ನವಿಲಿನ ಕಣ್ಣುಗಳು ಫಳಫಳ ಹೊಳೆಯುತ್ತವೆ.
೨. ನವಿಲು ಯಾವ ರೀತಿ ಕುಣಿಯುತ್ತದೆ?
ಉ: ನವಿಲು ಥಕ ಥೈ ರೀತಿ ಕುಣಿಯುತ್ತದೆ.
೩. ನವಿಲಿಗೆ ಇರುವ ಇತರ ಹೆಸರುಗಳಾವುವು?
ಉ: ನವಿಲಿಗೆ ಇರುವ ಇತರ ಹೆಸರುಗಳು  ಶಿಖಿ, ಸಹಸ್ರಾಕ್ಷ , ಮಯೂರ.
೪. ಕವಿಗಳು ನವಿಲನ್ನು ಕುರಿತು ಏಕೆ ಕವಿತೆ ರಚಿಸಿರುತ್ತಾರೆ?
ಉ:ಕವಿಗಳು ನವಿಲಿನ ರೂಪ, ಲಾವಣ್ಯಕ್ಕೆ ಮನಸೋತು ಕವಿತೆ ರಚಿಸಿರುತ್ತಾರೆ.
೫. ನವಿಲಿಗೆ ಭಾರತದಲ್ಲಿ ಗೌರವ ಲಭಿಸಿದೆ?
ಉ: ನವಿಲಿಗೆ ಭಾರತದಲ್ಲಿ ರಾಷ್ಟ್ರಪಕ್ಷಿ ಎಂಬ ಗೌರವ ಲಭಿಸಿದೆ.
೬. ನವಿಲಿಗೆ ಸಂಬಂಧಿಸಿದ ನಾಟ್ಯ ಪ್ರಕಾರ ಯಾವುದು?
ಉ: ನವಿಲಿಗೆ ಸಂಬಂಧಿಸಿದ ನಾಟ್ಯ ಪ್ರಕಾರ ಮಯೂರ ನಾಟ್ಯ.
೭. ನವಿಲುಗರಿ ಯಾರ ಜುಟ್ಟಿನ ಅಲಂಕಾರವಾಗಿ ಬಳಕೆಯಾಗಿದೆ?
ಉ: ನವಿಲುಗರಿ ಮುರಳಿ ಮೋಹನನ ಜುಟ್ಟಿನ ಅಲಂಕಾರವಾಗಿ ಬಳಕೆಯಾಗಿದೆ
೮. ನವಿಲುಗಳು ಯಾವ ದೇಶಗಳಲ್ಲಿ ಕಂಡು ಬರುತ್ತದೆ?
ಉ: ನವಿಲುಗಳು ಭಾರತ, ಶ್ರೀಲಂಕಾ, ಜಾವ, ಮಯನ್ಮಾರ್ ದೇಶಗಳಲ್ಲಿ ಕಂಡು ಬರುತ್ತದೆ.

ಇ. ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in 2-3 sentences)

೧.ನವಿಲು ಎಂತಹ ಸಂದರ್ಭದಲ್ಲಿ ಕುಣಿಯುತ್ತದೆ?
ಉ: ಜುಳು ಜುಳು ಹರಿಯುವ ನದಿ. ಹಚ್ಚ ಹಸಿರಿನ ಮೈದಾನ. ಕರಿಮೋಡದ ಅಲೆಗಳು. ತಣ್ಣನೆಯ ಗಾಳಿ. ಆಕಾಶದಲ್ಲಿ ಬಣ್ಣ ಬಣ್ಣದ ಕಾಮನಬಿಲ್ಲು. ಜಿನುಗುವ ಸೋನೆ ಮಳೆ. ಈ ಸಂದರ್ಭದಲ್ಲಿ ನವಿಲು ಕುಣಿಯುತ್ತದೆ.
೨.ನವಿಲು ಕುಣಿಯುವ ರೀತಿಯನ್ನು ವರ್ಣಿಸಿ.
ಉ: ನವಿಲಿನ ಗರಿಯು ಬಣ್ಣ ಬಣ್ಣದ ಬೀಸಣಿಕೆಯಂತೆ ಕಾಣುತ್ತದೆ. ಅದು ಕತ್ತನ್ನು ಅತ್ತ ಇತ್ತ ತಿರುಗಿಸುತ್ತದೆ. ಅದರ ಗರಿಗಳಲ್ಲಿರುವ ಸಾವಿರಾರು ಕಣ್ಣುಗಳು ಫಳಫಳ ಹೊಳೆಯುತ್ತವೆ. ಅದು ಥಕಥೈ ಎಂದು ಕುಣಿಯುತ್ತಿದೆ.
೩.ನವಿಲಿನ ಗರಿಯ ವಿಶೇಷತೆಗಳೇನು?
ಉ: ನವಿಲುಗರಿಯಲ್ಲಿ ಹೊಳಪುಳ್ಳ ಕಣ್ಣಿದೆ. ಅದು ಹಸಿರು ಮಿಶ್ರಿತ ನೀಲಿ ಬಣ್ಣದಿಂದ ಸಿಂಗಾರಗೊಂಡಿದೆ. ಅದರ ಸುತ್ತ ತಾಮ್ರ ಮಿಶ್ರಿತ ಬಂಗಾರ ಬಣ್ಣದ ಉಂಗುರವಿದೆ. ಈ ಗರಿಯ ನೋಟ ಮನಸ್ಸನ್ನು ಸೆಳೆಯುತ್ತದೆ.
೪.ನವಿಲನ್ನು ಸಹಸ್ರಾಕ್ಷ ಎಂದು ಏಕೆ ಕರೆಯುವರು?
ಉ: ನವಿಲುಗರಿಯ ಹೊಳಪುಳ್ಳ ಕಣ್ಣು ಹಸಿರು ಮಿಶ್ರಿತ ನೀಲಿ ಬಣ್ಣದಲ್ಲಿದೆ. ಅದರ ಸುತ್ತ ತಾಮ್ರ ಮಿಶ್ರಿತ ಬಂಗಾರ ಬಣ್ಣದ ಉಂಗುರ ಹೊಳೆಯುತ್ತದೆ. ಆದ್ದರಿಂದ ನವಿಲನ್ನು ಸಾವಿರ ಕಣ್ಣುಳ್ಳ ಸಹಸ್ರಾಕ್ಷ ಎಂದು ಕರೆಯುತ್ತಾರೆ.
೫.ಗಂಡು ನವಿಲಿನ ವಿಶೇಷತೆ ಏನು?
ಹೆಣ್ಣು ನವಿಲಿಗಿಲ್ಲದ ರೂಪ ಗಂಡು ನವಿಲಿಗಿದೆ. ಅದರ ನರ್ತನ ಕಂಡು ಕಲಾವಿದರು ಮಯೂರ ನಾಟ್ಯವೆಂಬ ಕಲಾ ಪ್ರಕಾರವನ್ನೇ ರಚಿಸಿದ್ದಾರೆ. ನವಿಲಿನ ಕುಣಿತ ನಯನ ಮನೋಹರ.
೬.ನವಿಲು ವಾಸಿಸುವ ಸ್ಥಳಗಳಾವುವು?
ಉ: ನವಿಲು ಜಗತ್ತಿನ ಎಲ್ಲಾ ಪ್ರದೇಶಗಳಲ್ಲಿ ವಾಸಿಸುತ್ತದೆ. ಗುಡ್ಡದ ಹುಲ್ಲುಗಾವಲುಗಳಲ್ಲಿ, ನದಿ, ಕೆರೆ, ಹೊಳೆ, ಹಳ್ಳ ಇರುವಲ್ಲಿ ಹೆಚ್ಚು ಇರುತ್ತವೆ. ಇವು ಹಿಂಡು ಹಿಂಡಾಗಿ ವಾಸಿಸುತ್ತವೆ.
೭. ನವಿಲನ್ನು ರೈತ ಮಿತ್ರ ಎಂದು ಏಕೆ ಕರೆಯುತ್ತಾರೆ?
ಉ: ನವಿಲು ಬೆಳೆದು ಫಸಲಿಗೆ ಕೀಟಬಾಧೆ ತಗುಲದಂತೆ ಬೆಳೆಗಳನ್ನು ರಕ್ಷಿಸುತ್ತದೆ. ಕೀಟಗಳನ್ನು ತಿನ್ನುತ್ತದೆ. ನವಿಲು ಇರುವಲ್ಲಿ ಹಾವುಗಳು ಸುಳಿಯಲಾರವು. ಈ ಕಾರಣಕ್ಕೆ ನವಿಲನ್ನು ರೈತರ ಮಿತ್ರ ಎಂದು ಕರೆಯುತ್ತಾರೆ.

ಈ. ಹೊಂದಿಸಿ ಬರೆಯಿರಿ. (Match the following )

ಅ  
ಅ)ರೈತಮಿತ್ರ   ೧) ಹೊಳಪು ನವಿಲು     
ಆ) ತುರಾಯಿ ೨) ನವಿಲು   ಜುಟ್ಟು
ಇ) ಮನೋಹರ    ೩) ಕಾಮನಬಿಲ್ಲು   ಸುಂದರ
ಈ) ಆಕಾಶ ೪) ಜುಟ್ಟು      ಕಾಮನಬಿಲ್ಲು
ಉ) ಚಮಕಿಸು       ೫) ಸುಂದರ ಹೊಳಪು

ಉ. ಬಿಟ್ಟ ಸ್ಥಳ ತುಂಬಿರಿ. (Fill in the blanks)

೧.ಷಣ್ಮುಖನ ವಾಹನ ನವಿಲು
೨.ನವಿಲು ನೋಡಲು ಎಷ್ಟು ಸುಂದರವೋ ಅಷ್ಟೇ ಶಿಸ್ತಿನ ಸಿಪಾಯಿ
೩.ನವಿಲು ಇರುವ ಪ್ರದೇಶಗಳಲ್ಲಿ ಇವು ಸುಳಿಯಲಾರವು ಹಾವುಗಳು
೪.ನವಿಲಿಗೆ ಹಸಿರು ಛಾಯೆ ಈ ದೇಶಗಳಲ್ಲಿ ಇರುತ್ತದೆ ಜಾವ, ಮಯನ್ಮಾರ್.
೫.ನವಿಲಿಗೆ ಸಂಭಂದಿಸಿದ ನಾಟ್ಯ ಪ್ರಕಾರ ಮಯೂರ ನಾಟ್ಯ.
೬.ನವಿಲುಗರಿ ಮುರಳಿ ಮೋಹನನ ಜುಟ್ಟಿನ ಅಲಂಕಾರವಾಗಿ ಬಳಸಲಾಗಿದೆ.
೭.ನವಿಲಿಗೆ ರಾಷ್ಟ್ರಪಕ್ಷಿ ಎಂಬ ಗೌರವ ಲಭಿಸಿದೆ.
೮.ನೀಲಿ ಬಣ್ಣದ ನವಿಲುಗಳು ಭಾರತ ಮತ್ತು ಶ್ರೀಲಂಕಾ ದೇಶಗಳಲ್ಲಿ ಕಂಡುಬರುತ್ತವೆ.

ಊ. ವಿರುದ್ಧ ಪದಗಳನ್ನು ಬರೆಯಿರಿ. (Write the opposite words)

ಆರಂಭ X  ಅಂತ್ಯ               ತೆಗಳು X ಹೊಗಳು
ಹಿಂಸೆ X  ಅಹಿಂಸೆ                ಶಿಸ್ತು X  ಅಶಿಸ್ತು

ಋ. ಕೆಳಗಿನ ಪದಗಳನ್ನು ಸ್ವಂತ ವಾಕ್ಯಗಳಲ್ಲಿ ಬರೆಯಿರಿ. (Make your own sentence)

ಹಚ್ಚಹಸಿರು: ಕಾಡು ಹಚ್ಚ ಹಸಿರಾಗಿದೆ.
ಅಪರಾಧ: ಅಪರಾಧ ಮಾಡುವದು ಒಳ್ಳೆಯದಲ್ಲ.
ಸುಂದರ: ನವಿಲು ಸುಂದರವಾದ ಪಕ್ಷಿ.
ಸಂಕೇತ: ಬಿಳಿ ಶಾಂತಿಯ ಸಂಕೇತ.
ಮನಸೋಲು: ನವಿಲಿಗೆ ಎಲ್ಲರೂ ಮನಸೋಲುತ್ತಾರೆ.
ಶಿಸ್ತಿನ ಸಿಪಾಯಿ: ಇರುವೆ ಶಿಸ್ತಿನ ಸಿಪಾಯಿ.

ಎ. ಹತ್ತು ಪಕ್ಷಿಗಳ ಹೆಸರು ಬರೆಯಿರಿ. (List 10 birds)

ಪಾರಿವಾಳ, ಕೋಗಿಲೆ, ಗುಬ್ಬಿ, ಹದ್ದು, ಗಿಡುಗ, ಕಾಗೆ, ಮೈನಾ, ನವಿಲು, ಗಿಳಿ, ಕೊಕ್ಕರೆ.

Click here to download Navilu exercises