Ni Nanagiddare kannada poem written by Kayyara Kinganna Rai. Ni Nanagiddare is about the conversation between donkey and horse.
A human being is naturally a social creature and cannot survive alone. From birth, people depend on one another for emotional, physical, and social support. In the same way, animals and birds also live in groups, showing that togetherness is essential for survival in the natural world. Life is full of challenges, difficulties, and unexpected situations that everyone must face at some point. These hardships remind us that no one is free from struggles. Therefore, when we see someone dealing with problems, we should not feel happy or satisfied about their suffering. Instead, we must show kindness, empathy, and a willingness to help. Offering support during tough times strengthens relationships, builds trust, and reflects true humanity. The central message of the poem is that unity, compassion, and mutual support are the foundations of a meaningful and harmonious life.
ನೀ ನನಗಿದ್ದರೆ
ಪದಗಳ ಅರ್ಥ ಬರೆಯಿರಿ. (Write the word meaning)
ಹೊರೆ = ತೂಕ, ಭಾರ, ಕಂತೆ
ಕಂಗಾಲು = ಅಶಕ್ತವಾಗು, ದುರ್ಬಲವಾಗು
ಉಪಕಾರ= ಸಹಾಯ
ಸೊಕ್ಕು = ಮದ, ಗರ್ವ, ಬೀಗು
ಹಿಗ್ಗು = ಸಂತೋಷ,
ಚಾಳಿಸು = ಹೀಯಾಳಿಸು, ಪೀಡಿಸು
ಅ) ಬಿಟ್ಟ ಸ್ಥಳವನ್ನು ಸರಿಯಾದ ಪದಗಳಿಂದ ತುಂಬಿರಿ. (Fill in the blanks)
೧. ಕತ್ತೆಯ ಬೆನ್ನಿಗೆ ಹೇರಿಸಿದ ಕುದುರೆಯ ಜತೆಯಲ್ಲಿ ಸಾಗಿಸಿದ
೨. ನಡುಗಿತು ಕತ್ತೆಯ ಕೈಕಾಲು ಬಿದ್ದಿತು ಭೂಮಿಗೆ ಕಂಗಾಲು
೩. ಹೊತ್ತಿತು ಕುದುರೆಯು ಹೊರೆಯನ್ನು ಅತ್ತಿತು ಬಗ್ಗಿಸಿತದು ಬೆನ್ನ
೪. ಒಂದಿಷ್ಟಾದರೂ ಹೊತ್ತುಬಿಡು ನನ್ನಯ ಪ್ರಾಣವ ಉಳಿಸಿಕೊಡು
ಆ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)
೧. ಭೀಮಣ್ಣನು ಎಲ್ಲಿಗೆ ಹೋದನು?
ಉ: ಭೀಮಣ್ಣನು ಸಂತೆಗೆ ಹೋದನು.
೨. ಭೀಮಣ್ಣನು ಏನನ್ನು ಕೊಂಡನು?
ಉ: ಭೀಮಣ್ಣನು ಹಿಂಡಿಯನ್ನು ಕೊಂಡನು.
೩. ಕತ್ತೆಯು ಹೊರೆಯನ್ನು ಯಾರಿಗೆ ಹೊರು ಎಂದು ಕೇಳಿತು?
ಉ: ಕತ್ತೆಯು ಹೊರೆಯನ್ನು ಕುದುರೆಗೆ ಹೊರು ಎಂದು ಕೇಳಿತು.
೪. ಕುದುರೆಯು “ನನ್ನಯ ಪ್ರಾಣವ ಉಳಿಸು” ಎಂದು ಯಾರನ್ನು ಕೇಳಿತು?
ಉ: ಕುದುರೆಯು “ನನ್ನಯ ಪ್ರಾಣವ ಉಳಿಸು” ಎಂದು ಕತ್ತೆಯನ್ನು ಕೇಳಿತು.
೫. ʼನೀ ನನಗಿದ್ದರೆʼ ಈ ಪದ್ಯದ ನೀತಿ ಏನು?
ಉ: ʼನೀ ನನಗಿದ್ದರೆʼ ಈ ಪದ್ಯದ ನೀತಿ “ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದರೆ, ಅವರೂ ನಮಗೆ ಸಹಾಯ ಮಾಡುತ್ತಾರೆ.”
ಇ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯದಲ್ಲಿ ಉತ್ತರಿಸಿರಿ. (Answer the following in two – three sentences)
೧. ಕತ್ತೆಯು ಸಹಾಯ ಕೇಳಿದಾಗ ಕುದುರೆ ಏನೆಂದು ಹೇಳಿತು?
ಉ: ದಣಿಯು ನಿನ್ನನ್ನು ಸಾಕಿದ್ದು ಹೊರೆಯನ್ನು ಹೊರಲು. ನೀನೇ ಹೊರೆಯನ್ನು ಹೊರು ಎಂದು ಕತ್ತೆಯು ಸಹಾಯ ಕೇಳಿದಾಗ ಕುದುರೆ ಹೇಳಿತು.
೨. ಕುದುರೆಯು ಕತ್ತೆಯನ್ನು ಏನೆಂದು ಬೇಡಿಕೊಂಡಿತು?
ಉ: ಕುದುರೆಯು ಕತ್ತೆಯನ್ನು ಒಂದಿಷ್ಟು ಭಾರವನ್ನು ಹೊತ್ತು ತನ್ನ ಪ್ರಾಣವ ಉಳಿಸಿಕೊಡು ಎಂದು ಬೇಡಿಕೊಂಡಿತು.
ಈ) ಈ ಪದಗಳನ್ನು ಬಿಡಿಸಿ ಬರೆದು ಸಂಧಿ ಹೆಸರಿಸಿರಿ. (Split the word and name the sandhi)
೧. ನಿನ್ನುಪಕಾರ = ನಿನ್ನ + ಉಪಕಾರ
೨. ಒಂದಿಷ್ಟಾದರು= ಒಂದಿಷ್ಟು + ಆದರು
೩. ನನಗಿದ್ದರೆ = ನನಗೆ + ಇದ್ದರೆ
೪. ನಮ್ಮೊಳಗೆ = ನಮ್ಮ + ಒಳಗೆ
ಉ) ಈ ಪದ್ಯದಲ್ಲಿ ಬಂದಿರುವ ಪ್ರಾಸ ಪದಗಳನ್ನು ಪಟ್ಟಿ ಮಾಡಿರಿ. (Write the rhyming words of the poem)
ಹೇರಿಸಿದ – ಸಾಗಿಸಿದ
ಕೇಳಿಸಿತು – ಚಾಳಿಸಿತು
ಹಾಕಿದನು – ಸಾಕಿದನು
ನಡಿ – ಹಿಡಿ
ಕೈಕಾಲು – ಕಂಗಾಲು
ಹೊರೆಯನ್ನ – ಬೆನ್ನ
ಹೊತ್ತುಬಿಡು – ಉಳಿಸಿಕೊಡು
ಹಿಗ್ಗಿನಲಿ – ಸೊಕ್ಕಿನಲಿ
ಹಿಗ್ಗಿದ್ದಿ – ಬುದ್ದಿ