Noda banni Srirangapatna lesson grade IV is about Srirangapatna, located near Mysuru, Karnataka, is a town rich in history and culture. It’s best known for the Ranganathaswamy Temple, dedicated to Lord Vishnu, which stands as a fine example of Dravidian architecture. Another key attraction is the Daria Daulat Bagh, Tipu Sultan’s summer palace, showcasing beautiful frescoes and intricate wooden carvings. The Gumbaz is Tipu Sultan’s mausoleum, featuring impressive Mughal architecture and serene gardens. For history enthusiasts, the Shrirangapatna Fort is significant, having witnessed several battles, including the famous siege of 1799. The fort also houses the Jamiya Masjid and the Obelisk, marking the spot where Tipu Sultan fell. Nature lovers can visit the Ranganathittu Bird Sanctuary, home to numerous migratory birds. The Cauvery River adds to the town’s charm, offering scenic beauty and opportunities for boating. Srirangaptna’s blend of religious, historical, and natural attractions makes it a must-visit destination. Noda banni Srirangapatna grade 4th chapter gives a glipse of Srirangaptna.
ನೋಡ ಬನ್ನಿ ಶ್ರೀರಂಗಪಟ್ಟಣ
ಅ. ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)
೧. ಮಕ್ಕಳು ಯಾವ ಊರಿಗೆ ಪ್ರವಾಸ ಹೊರಟರು?
ಉ: ಮಕ್ಕಳು ಶ್ರೀರಂಗಪಟ್ಟಣ ಊರಿಗೆ ಪ್ರವಾಸ ಹೊರಟರು.
೨. ಶ್ರೀರಂಗಪಟ್ಟಣ ಯಾವ ಜಿಲ್ಲೆಗೆ ಸೇರಿದೆ?
ಉ: ಶ್ರೀರಂಗಪಟ್ಟಣ ಮಂಡ್ಯ ಜಿಲ್ಲೆಗೆ ಸೇರಿದೆ.
೩. ಜಾಮೀಯಾ ಮಸೀದಿ ಯಾರ ಅವಧಿಯಲ್ಲಿ ನಿರ್ಮಿಸಲಾಗಿದೆ?
ಉ: ಜಾಮೀಯಾ ಮಸೀದಿ ಟಿಪ್ಪುಸುಲ್ತಾನ್ ಅವಧಿಯಲ್ಲಿ ನಿರ್ಮಿಸಲಾಗಿದೆ.
೪. ಟಿಪ್ಪುಸುಲ್ತಾನ್ ವಾಸವಿದ್ದ ಅರಮನೆಯ ಹೆಸರೇನು?
ಉ: ಟಿಪ್ಪುಸುಲ್ತಾನ್ ವಾಸವಿದ್ದ ಅರಮನೆಯ ಲಾಲ್ ಮಹಲ್.
ಆ. ಬಿಟ್ಟಸ್ಥಳ ತುಂಬಿರಿ. (Fill in the blanks)
೧. ನಾಲ್ಕನೇ ತರಗತಿಯ ಮಕ್ಕಳು ಶಿಕ್ಷಕರೊಂದಿಗೆ ಪ್ರವಾಸಕ್ಕೆ ಹೊರಟರು.
೨. ಐತಿಹಾಸಿಕ ಪುರಾಣ ಪ್ರಸಿದ್ಧ ಶ್ರೀರಂಗಪಟ್ಟಣ ಕ್ಕೆ ಸುಸ್ವಾಗತ.
೩. ಟಿಪ್ಪುಸುಲ್ತಾನ್ ಮಡಿದ ಸ್ಥಳದ ಬಗ್ಗೆ ಮಾಹಿತಿ ಇದೆ.
೪. ಇತಿಹಾಸ ಪ್ರಸಿದ್ಧವಾದ ಆದಿ ರಂಗನಾಥಸ್ವಾಮಿ ದೇವಾಲಯ ಕ್ಕೆ ಹೋಗೋಣ.
ಇ. ಎರಡು, ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer in two-three sentences)
೧. ಶ್ರೀರಂಗಪಟ್ಟಣದಲ್ಲಿ ಕೋಟೆಯನ್ನು ಏಕೆ ಕಟ್ಟಿದ್ದಾರೆ?
ಉ: ಊರನ್ನು ಶತ್ರುಗಳಿಂದ ರಕ್ಷಿಸಲು ಶ್ರೀರಂಗಪಟ್ಟಣದಲ್ಲಿ ಕೋಟೆಯನ್ನು ಕಟ್ಟಿದ್ದಾರೆ.
೨. ಮದ್ದಿನ ಮನೆಯನ್ನು ಏಕೆ ನಿರ್ಮಿಸಿದ್ದಾರೆ?
ಉ: ಯುದ್ಧದ ಸಮಯದಲ್ಲಿ ಮದ್ದು ಗುಂಡುಗಳನ್ನು ಶತ್ರುಗಳಿಂದ ಸುರಕ್ಷಿತವಾಗಿ ಇಡಲು ಮದ್ದಿನ ಮನೆಯನ್ನು ನಿರ್ಮಿಸಿದ್ದಾರೆ.
ಈ. ಸ್ವಂತ ವಾಕ್ಯದಲ್ಲಿ ಬರೆಯಿರಿ. (Make your own sentences)
ಪ್ರವಾಸ: ನಾನು ಮೈಸೂರು ಪ್ರವಾಸಕ್ಕೆ ಹೋಗಿದ್ದೆ.
ಕಾರಾಗ್ರಹ: ಬೆಂಗಳೂರಿನಲ್ಲಿ ಕಾರಾಗ್ರಹ ಇದೆ.
ನಾಮಫಲಕ: ನನ್ನ ಶಾಲೆಯ ಮುಂದೆ ನಾಮಫಲಕ ಇದೆ.
ದೇವಾಲಯ: ನಾನು ಗಣೇಶನ ದೇವಾಲಯಕ್ಕೆ ಹೋಗಿದ್ದೆ.
ಉ. ಯಾರು, ಯಾರಿಗೆ ಹೇಳಿದರು? (Who told whom?)
೧. ಊರನ್ನು ಶತ್ರುಗಳಿಂದ ರಕ್ಷಿಸಲು ಕೋಟೆಯನ್ನು ಕಟ್ಟಿದ್ದಾರೆ.
ಯಾರು ಹೇಳಿದರು? ಶಿಕ್ಷಕರು / ಗುರುಗಳು ಹೇಳಿದರು
ಯಾರಿಗೆ ಹೇಳಿದರು? ಮೇರಿಗೆ ಹೇಳಿದಳು
೨. ಟಿಪ್ಪು ಸುಲ್ತಾನ್ ಮಡಿದ ಸ್ಥಳದ ಬಗ್ಗೆ ಮಾಹಿತಿ ಇದೆ.
ಯಾರು ಹೇಳಿದರು? ಪೀಟರ್ ಹೇಳಿದನು
ಯಾರಿಗೆ ಹೇಳಿದರು? ಶಿಕ್ಷಕರಿಗೆ ಹೇಳಿದನು
೩.ಯಾವುದೋ ಹಳೆಯ ಅರಮನೆ ಸ್ಥಳ ಕಾಣುತ್ತಿದೆ.
ಯಾರು ಹೇಳಿದರು? ಗೌರಿ ಹೇಳಿದಳು
ಯಾರಿಗೆ ಹೇಳಿದರು? ಶಿಕ್ಷಕರಿಗೆ ಹೇಳಿದಳು
ಊ. ವಿರುದ್ಧ ಪದ ಬರೆಯಿರಿ. (Write Opposite words)
ಭಯ X ನಿರ್ಭಯ ಕರುಣೆ Xನಿಷ್ಕರುಣೆ
ಜಯ X ಅಪಜಯ ವಿರೋಧ X ಅವಿರೋಧ
ಋ. ಕೆಳಗೆ ಕೊಟ್ಟಿರುವ ಅದಲು ಬದಲು ಪದಗಳನ್ನು ಸರಿಪಡಿಸಿ ಬರೆಯಿರಿ.(Correct the jumbled words)
೧. ಕಾಣುತ್ತಿರುವ ಓದು ಸೂಚನಾ ಫಲಕವನ್ನು ಅಲ್ಲಿ.
ಉ: ಅಲ್ಲಿ ಕಾಣುತ್ತಿರುವ ಸೂಚನಾ ಫಲಕವನ್ನು ಓದು.
೨. ಕಟ್ಟಿದ್ದಾರೆ? ಕೋಟೆಯನ್ನು ಏಕೆ ಈ
ಉ: ಏಕೆ ಈ ಕೋಟೆಯನ್ನು ಕಟ್ಟಿದ್ದಾರೆ?
೩. ಮೈಸೂರು ಕೊನೆಯ ಇದು ಯುದ್ಧ.
ಉ: ಇದು ಕೊನೆಯ ಮೈಸೂರು ಯುದ್ಧ.