Ondu Marada Bele means value of a tree. Ondu Marada Bele kannada lesson notes grade VIII written by Ha Ma Nayak.

In America, Paul Kellen committed the crime of killing a 500-year-old tree by applying herbicide. For this offense, the American court sentenced him to nine years in prison and imposed a fine of ten thousand dollars. Tree lovers in the U.S. donated more than a hundred thousand dollars to save the tree. They placed greeting cards at the base of the tree wishing it a speedy recovery, and they prayed for its long life.

But in India, especially in Bengaluru, the situation is entirely different. Near the house of a prominent person in the city, there stood an old banyan tree belonging to the Bengaluru Municipal Corporation. Claiming that the tree was causing inconvenience, this influential individual complained to the authorities and requested that it be cut down.

Here, cutting down trees is considered a very ordinary matter. Even though it is against the law, people continue to fell trees. Along state and national highways, these killings happen openly in broad daylight. Some of these killings happen right before everyone’s eyes, while others occur through deceit—first by removing a few leaves, then trimming a few branches, and slowly, step by step, the entire tree is destroyed.

The value of a single tree is more than sixteen lakh rupees. The oxygen it releases is worth two and a half lakh rupees. The carbon dioxide it absorbs is worth five lakh. Preventing soil erosion is worth another two and a half lakh. Allowing water to seep into the ground, increasing groundwater levels, and preventing floods is worth three lakh. The value of the food and manure it provides is fifty thousand. Offering shelter and protection to birds, animals, and insects is worth another two and a half lakh. In this way, a scientist calculated the total value of a healthy tree.

But beyond all these calculations, there is a value far greater than anything else — without trees, it is impossible to protect humankind.

ಒಂದು ಮರದ ಬೆಲೆ

ಪದಗಳ ಅರ್ಥ ಬರೆಯಿರಿ. (Write the word meaning)

ಅಂತರ್ಜಲ = ಭೂಮಿಯ ಆಳದಲ್ಲಿರುವ ನೀರು
ಗೊಡವೆ = ಉಸಾಬರಿ, ಗೋಜು
ಡಾಲರ್ = ಅಮೇರಿಕಾದ ರೂಪಾಯಿ,
ತೆತ್ತು= ನೀಡಿ, ಕೊಟ್ಟು
ದೂರು = ಅಹವಾಲು, ಮೊರೆ
ದೇಣಿಗೆ = ಚಂದಾ, ವಂತಿಕೆ, ದಾನ
ಲಭಿಸು = ದೊರಕು, ಪ್ರಾಪ್ತವಾಗು
ಸಜೆ = ಶಿಕ್ಷೆ, ಸೆರೆಮನೆ ವಾಸ
ಕೃತ್ಯ= ಕೆಲಸ
ಜಾಮೀನು = ಹೊಣೆ, ಒತ್ತೆ
ತೊಗಟೆ = ಸಿಪ್ಪೆ
ದಿಮ್ಮಿ = ಕತ್ತರಿಸಿದ ಮರ, ಕೊರಡು
ದೃಷ್ಟಿಕೋನ = ನೋಡುವ ರೀತಿ
ಪ್ರವಾಹ = ನೀರು ತುಂಬಿ ಹರಿಯುವದು
ವೃಕ್ಷ = ಮರ, ತರು
ಸಸ್ಯನಾಶಕ = ಗಿಡಗಳನ್ನು ಕೊಲ್ಲುವ ರಾಸಾಯನಿಕ

ಪ್ರಶ್ನೆಗಳು

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following questions in one sentences)

೧. ಪಾಲ್‌ ಕೆಲೆನ್‌ ಮಾಡಿದ ಅಪರಾಧವೇನು?
ಉ: ಐನೂರು ವರ್ಷದ ಮರವನ್ನು ಸಸ್ಯನಾಶಕ ಹಾಕಿ ಕೊಂದದ್ದು ಪಾಲ್‌ ಕೆಲೆನ್‌ ಮಾಡಿದ ಅಪರಾಧ.

೨. ಪಾಲ್‌ ಕೆಲೆನ್‌ಗೆ ಅಮೇರಿಕೆಯ ನ್ಯಾಯಾಲಯ ಯಾವ ಶಿಕ್ಷೆ ನೀಡಿತು?
ಉ: ಅಮೇರಿಕೆಯ ನ್ಯಾಯಾಲಯ ಪಾಲ್‌ ಕೆಲೆನ್‌ಗೆ ಒಂಬತ್ತು ವರ್ಷ ಸಜೆ ಮತ್ತು ಹತ್ತು ಸಾವಿರ ಡಾಲರ್ ದಂಡ ವಿಧಿಸಿತು.

೩. ಭಾರತ ಹಾಗೂ ಅಮೇರಿಕದ ಸಂಸ್ಕೃತಿಗಳಿಗೆ ಎಷ್ಟು ವರ್ಷಗಳ ಇತಿಹಾಸವಿದೆ?
ಉ: ಭಾರತದ ಸಂಸ್ಕೃತಿಗೆ ಎರಡು ಸಾವಿರ ವರ್ಷಗಳ ಇತಿಹಾಸ ಹಾಗೂ ಅಮೇರಿಕದ ಸಂಸ್ಕೃತಿಗೆ ಇನ್ನೂರು ವರ್ಷಗಳ ಇತಿಹಾಸವಿದೆ.

೪. ಅಮೇರಿಕದ ಜನ ಮರಗಳನ್ನು ಉಳಿಸಲು ಏಕೆ ಮುಂದಾಗುತ್ತಾರೆ?
ಉ: ಅಮೇರಿಕದ ಜನರಿಗೆ ತಮ್ಮ ಭವಿಷ್ಯದ ಬಗ್ಗೆ ಆಸಕ್ತಿ ಇದೆ.
೫. ಹಾ. ಮಾ. ನಾಯಕರು ಹೇಳುವಂತೆ ಎಲ್ಲವನ್ನು ಮೀರಿದ ಮರದ ಬೆಲೆ ಯಾವುದು?
ಉ: ಹಾ. ಮಾ. ನಾಯಕರು ಹೇಳುವಂತೆ ಮನುಕುಲವನ್ನು ಕಾಪಾಡಲು ಮರಗಳಿಲ್ಲದೆ ಸಾಧ್ಯವಿಲ್ಲ ಎಂಬ ಸತ್ಯವೇ ಎಲ್ಲವನ್ನು ಮೀರಿದ ಬೆಲೆ.

ಆ) ಕೆಳಗಿನ ಪ್ರಶ್ನೆಗಳಿಗೆ ಮೂರು- ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following questions in one sentences)

೧. ಮರವನ್ನು ಉಳಿಸಲು ಅಮೆರಿಕಾದ ವೃಕ್ಷ ಪ್ರೇಮಿಗಳು ಯಾವ ರೀತಿ ಸ್ಪಂದಿಸಿದರು?
ಉ: ಮರವನ್ನು ಉಳಿಸಲು ಅಮೆರಿಕಾದ ವೃಕ್ಷ ಪ್ರೇಮಿಗಳು ಒಂದು ಲಕ್ಷಕ್ಕೂ ಹೆಚ್ಚಿನ ಡಾಲರ್‌ ಗಳ ದೇಣಿಗೆ ನೀಡಿದರು. ಮರಕ್ಕೆ ಬೇಗನೆ ಆರೋಗ್ಯವಾಗಲಿ ಎಂದು ಹಾರೈಸಿ ಮರದ ಬುಡದಲ್ಲಿ ಶುಭಾಶಯ ಪತ್ರಗಳನ್ನು ನೀಡಿದರು. ಮರಕ್ಕೆ ದೀರ್ಘಾಯುಷ್ಯ ಕೋರಿ ಪ್ರಾರ್ಥನೆ ಸಲ್ಲಿಸಿದರು.

೨. ಬೆಂಗಳೂರಿನಲ್ಲಿ ಗಣ್ಯ ವ್ಯಕ್ತಿಯೊಬ್ಬರು ತಮ್ಮ ಮನೆಯ ಬಳಿಯಲ್ಲಿನ ಮರ ತೆಗೆಸಲು ಹೇಗೆ ಪ್ರಯತ್ನಿಸಿದರು?
ಉ: ಬೆಂಗಳೂರಿನಲ್ಲಿ ಗಣ್ಯ ವ್ಯಕ್ತಿಯೊಬ್ಬರ ಮನೆಯ ಬಳಿ ಬೆಂಗಳೂರು ಮಹಾನಗರ ಪಾಲಿಕೆಯ ಒಂದು ಹಳೆಯ ಆಲದ ಮರವಿತ್ತು. ಆ ಮರದಿಂದ ತೊಂದರೆಯಾಗುತ್ತಿದೆ ಎಂದು ಈ ಗಣ್ಯ ವ್ಯಕ್ತಿಯು ದೂರನ್ನು ಕೊಟ್ಟು ಸಂಬಂಧಪಟ್ಟ ಆಡಳಿತ ವರ್ಗದವರಿಗೆ ಆ ಮರವನ್ನು ಕಡಿಯಲು ಹೇಳಿದರು.

೩. ಭಾರತದಲ್ಲಿ ಮರಗಳ ನಾಶ ಹೇಗೆ ನಿರಾತಂಕವಾಗಿ ನಡೆಯುತ್ತಿದೆ?
ಉ: ನಮ್ಮಲ್ಲಿ ಮರ ಕತ್ತರಿಸುವುದು ತೀರ ಸಾಮಾನ್ಯವಾದ ವಿಚಾರ. ಕಾನೂನಿಗೆ ವಿರುದ್ಧವಾಗಿದ್ದರೂ ಜನ ಮರ ಕತ್ತರಿಸುತ್ತಾರೆ. ರಾಜ್ಯದ, ರಾಷ್ಟ್ರದ ಹೆದ್ದಾರಿಗಳಲ್ಲಿಯೇ ಹಗಲಿನಲ್ಲಿಯೇ ನಿತ್ಯ ಈ ಕೊಲೆಗಳು ನಡೆಯುತ್ತವೆ. ಕೆಲವು ಕೊಲೆಗಳು ಬಹಿರಂಗವಾಗಿಯೇ ನಡೆಯುತ್ತವೆ. ಮತ್ತೆ ಕೆಲವು ಕೊಲೆಗಳು ಮೋಸದಿಂದ, ಉಪಾಯದಿಂದ ನಡೆಯುತ್ತವೆ. ಮೊದಲು ಸ್ವಲ್ಪ ಸೊಪ್ಪು ತೆಗೆದು, ಕೊಂಬೆ ಕಡಿದು ನಿಧಾನವಾಗಿ ಮರಗಳನ್ನು ಕಡೆಯುತ್ತಾರೆ.

ಇ) ಕೆಳಗಿನ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following questions in one sentences)

೧. ಆರೋಗ್ಯವಂತ ಮರವೊಂದರ ಬೆಲೆ ಏನೆಂಬುದನ್ನು ವಿಜ್ಞಾನಿಯೊಬ್ಬರು ಲೆಕ್ಕ ಹಾಕಿದ ಬಗೆಯನ್ನು ವಿವರಿಸಿ.
ಉ: ಒಂದು ಮರದ ಬೆಲೆ ರೂಪಾಯಿ ಹದಿನಾರು ಲಕ್ಷಗಳಿಗಿಂತ ಹೆಚ್ಚು. ಅದು ಕೊಡುವ ಆಮ್ಲಜನಕದ ಬೆಲೆ ಎರಡೂವರೆ ಲಕ್ಷ. ಅದು ಹೀರಿಕೊಳ್ಳುವ ಇಂಗಾಲಜನಕದ ಬೆಲೆ ಐದು ಲಕ್ಷ. ಮಣ್ಣಿನ ಸವೆತ ತಡೆಯುವುದರ ಬೆಲೆ ಎರಡೂವರೆ ಲಕ್ಷ. ನೀರು ಭೂಮಿಯಲ್ಲಿ ಇಂಗಿ ಅಂತರ್ಜಲ ಹೆಚ್ಚಿ ಪ್ರವಾಹವನ್ನು ತಡೆಗಟ್ಟುವದರ ಬೆಲೆ ಮೂರು ಲಕ್ಷ. ಆಹಾರ ಹಾಗೂ ಗೊಬ್ಬರದ ಬೆಲೆ ಅರ್ಧಲಕ್ಷ. ಪಶು ಪಕ್ಷಿಗಳಿಗೆ ಕ್ರಿಮಿಕೀಟಗಳಿಗೆ ಆಶ್ರಯ ಹಾಗೂ ರಕ್ಷಣೆ ನೀಡುವುದರ ಬೆಲೆ ಎರಡೂವರೆ ಲಕ್ಷ. ಹೀಗೆ ಆರೋಗ್ಯವಂತ ಮರವೊಂದರ ಬೆಲೆಯನ್ನು ವಿಜ್ಞಾನಿಯೊಬ್ಬರು ಲೆಕ್ಕ ಹಾಕಿದರು.

೨. ಮರಗಳ ಸಂರಕ್ಷಣೆಯಲ್ಲಿ ಭಾರತ ಹಾಗೂ ಅಮೇರಿಕಾದ ಜನರ ನಡುವೆ ಇರುವ ವ್ಯತ್ಯಾಸಗಳಾವುವು?
ಉ: ಐನೂರು ವರ್ಷದ ಮರವನ್ನು ಸಸ್ಯನಾಶಕ ಹಾಕಿ ಕೊಂದನು ಎಂದು ಪಾಲ್‌ ಕೆಲೆನ್‌ ಮಾಡಿದ ಅಪರಾಧಕ್ಕೆ ಅಮೇರಿಕೆಯ ನ್ಯಾಯಾಲಯ ಅವನಿಗೆ ಒಂಬತ್ತು ವರ್ಷ ಸಜೆ ಮತ್ತು ಹತ್ತು ಸಾವಿರ ಡಾಲರ್ ದಂಡ ವಿಧಿಸಿತು. ಮರವನ್ನು ಉಳಿಸಲು ಅಮೇರಿಕಾದ ವೃಕ್ಷ ಪ್ರೇಮಿಗಳು ಒಂದು ಲಕ್ಷಕ್ಕೂ ಹೆಚ್ಚಿನ ಡಾಲರ್‌ ಗಳ ದೇಣಿಗೆ ನೀಡಿದರು. ಮರಕ್ಕೆ ಬೇಗನೆ ಆರೋಗ್ಯವಾಗಲಿ ಎಂದು ಹಾರೈಸಿ ಮರದ ಬುಡದಲ್ಲಿ ಶುಭಾಶಯ ಪತ್ರಗಳನ್ನು ನೀಡಿದರು. ಮರಕ್ಕೆ ದೀರ್ಘಾಯುಷ್ಯ ಕೋರಿ ಪ್ರಾರ್ಥನೆ ಸಲ್ಲಿಸಿದರು.
ಅದೇ ಭಾರತದಲ್ಲಿ, ಬೆಂಗಳೂರಿನಲ್ಲಿ ಗಣ್ಯ ವ್ಯಕ್ತಿಯೊಬ್ಬರ ಮನೆಯ ಬಳಿ ಬೆಂಗಳೂರು ಮಹಾನಗರ ಪಾಲಿಕೆಯ ಒಂದು ಹಳೆಯ ಆಲದ ಮರವಿತ್ತು. ಆ ಮರದಿಂದ ತೊಂದರೆಯಾಗುತ್ತಿದೆ ಎಂದು ಈ ಗಣ್ಯ ವ್ಯಕ್ತಿಯು ದೂರನ್ನು ಕೊಟ್ಟು ಸಂಬಂಧಪಟ್ಟ ಆಡಳಿತ ವರ್ಗದವರಿಗೆ ಆ ಮರವನ್ನು ಕಡಿಯಲು ಹೇಳಿದರು.
ಇಲ್ಲಿ ಮರ ಕತ್ತರಿಸುವುದು ತೀರ ಸಾಮಾನ್ಯವಾದ ವಿಚಾರ. ಕಾನೂನಿಗೆ ವಿರುದ್ಧವಾಗಿದ್ದರೂ ಜನ ಮರ ಕತ್ತರಿಸುತ್ತಾರೆ. ರಾಜ್ಯದ, ರಾಷ್ಟ್ರದ ಹೆದ್ದಾರಿಗಳಲ್ಲಿಯೇ ಹಗಲಿನಲ್ಲಿಯೇ ನಿತ್ಯ ಈ ಕೊಲೆಗಳು ನಡೆಯುತ್ತವೆ. ಕೆಲವು ಕೊಲೆಗಳು ಬಹಿರಂಗವಾಗಿಯೇ ನಡೆಯುತ್ತವೆ. ಮತ್ತೆ ಕೆಲವು ಕೊಲೆಗಳು ಮೋಸದಿಂದ, ಉಪಾಯದಿಂದ ನಡೆಯುತ್ತವೆ. ಮೊದಲು ಸ್ವಲ್ಪ ಸೊಪ್ಪು ತೆಗೆದು, ಕೊಂಬೆ ಕಡಿದು ನಿಧಾನವಾಗಿ ಮರಗಳನ್ನು ಕಡೆಯುತ್ತಾರೆ.

ಈ) ಸಂದರ್ಭದೊಡನೆ ವಿವರಿಸಿರಿ. (Explain the context)

೧. “ಮರದ ಬುಡದಲ್ಲಿ ಶುಭಾಶಯ ಪತ್ರಗಳನ್ನು ನೀಡುತ್ತಿದ್ದಾರೆ”.
ಆಯ್ಕೆ: ಈ ಮೇಲಿನ ವಾಕ್ಯವನ್ನು ಹಾ. ಮಾ. ನಾಯಕರ ʼಸಂಪದʼ ಕೃತಿಯ ʼಒಂದು ಮರದ ಬೆಲೆʼ ಪಾಠದಿಂದ ಆರಿಸಲಾಗಿದೆ.
ಸಂದರ್ಭ: ಪಾಲ್‌ ಕೆಲೆನ್ ಐನೂರು ವರ್ಷದ ಮರಕ್ಕೆ ಸಸ್ಯನಾಶಕ ಹಾಕಿದ್ದಕ್ಕೆ ಮರದ ಅರ್ಧ ಭಾಗವು ಸತ್ತು ಹೋಗಿತ್ತು. ಮರಕ್ಕೆ ಬೇಗನೆ ಆರೋಗ್ಯವಾಗಲಿ ಎಂದು ಹಾರೈಸಿ ಮರದ ಬುಡದಲ್ಲಿ ಶುಭಾಶಯ ಪತ್ರಗಳನ್ನು ನೀಡುತ್ತಿದ್ದಾರೆ ಎಂದು ಲೇಖಕರು ಹೇಳಿದ್ದಾರೆ.
ಸ್ವಾರಸ್ಯ: ಅಮೇರಿಕೆಯ ಜನರಿಗೆ ಮರಗಳ ಮೇಲೆ ಇರುವ ಕಳಕಳಿ ಇಲ್ಲಿ ವ್ಯಕ್ತವಾಗಿದೆ.

೨. “ನಮ್ಮಲ್ಲಿ ಮರ ಕತ್ತರಿಸುವುದು ತೀರಾ ಸಾಮಾನ್ಯ ವಿಚಾರ”.
ಆಯ್ಕೆ: ಈ ಮೇಲಿನ ವಾಕ್ಯವನ್ನು ಹಾ. ಮಾ. ನಾಯಕರ ʼಸಂಪದʼ ಕೃತಿಯ ʼಒಂದು ಮರದ ಬೆಲೆʼ ಪಾಠದಿಂದ ಆರಿಸಲಾಗಿದೆ.
ಸಂದರ್ಭ: ಅಮೇರಿಕದ ಜನತೆಗೂ ಭಾರತೀಯರಿಗೂ ಮರದ ವಿಚಾರದಲ್ಲಿ ಭಿನ್ನವಾದ ದೃಷ್ಟಿಕೋನಗಳಿವೆ. ಜನರಲ್ಲಿ ತಮ್ಮ ಭವಿಷ್ಯದಲ್ಲಿ ಆಸಕ್ತಿ ಇದೆ, ಆದರೆ ಭಾರತೀಯರಲ್ಲಿ ಇಂದಷ್ಟೇ ಮುಖ್ಯವಾದದ್ದು ನಾಳೆ ಅಲ್ಲ. ಮರಕತ್ತರಿಸುವುದರ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ.
ಸ್ವಾರಸ್ಯ: ಎರಡು ದೇಶಗಳ ದೃಷ್ಟಿಕೋನಗಳು ಇಲ್ಲಿಯ ಸ್ವಾರಸ್ಯವಾಗಿದೆ.

೩. “ಮನುಕುಲವನ್ನು ಕಾಪಾಡಲು ಮರಗಳಿಲ್ಲದೆ ಸಾಧ್ಯವಿಲ್ಲ”.
ಆಯ್ಕೆ: ಈ ಮೇಲಿನ ವಾಕ್ಯವನ್ನು ಹಾ. ಮಾ. ನಾಯಕರ ʼಸಂಪದʼ ಕೃತಿಯ ʼಒಂದು ಮರದ ಬೆಲೆʼ ಪಾಠದಿಂದ ಆರಿಸಲಾಗಿದೆ.
ಸಂದರ್ಭ: ಒಂದು ಮರದ ಬೆಲೆ ಹದಿನಾರು ಲಕ್ಷ ಎಂದು ಒಬ್ಬ ವಿಜ್ಞಾನಿ ಹೇಳಿದ್ದಾರೆ. ಆದರೆ ಇದೆಲ್ಲವನ್ನು ಮೀರಿದ ಬೆಲೆಯೊಂದಿದೆ ಎಂದು ಹೇಳುವ ಸಂದರ್ಭದಲ್ಲಿ ಈ ಮೇಲಿನ ಮಾತನ್ನು ಹೇಳಿದ್ದಾರೆ.
ಸ್ವಾರಸ್ಯ: ಮರಗಳಿಲ್ಲದೆ ಮನುಕುಲದ ಉಳಿಗಾಲವಿಲ್ಲ ಎಂಬುದು ಇಲ್ಲಿಯ ಸ್ವಾರಸ್ಯವಾಗಿದೆ.

ಭಾಷಾಭ್ಯಾಸ

ಅ) ಕೆಳಗಿನ ಪದಗಳಿಗೆ ಸಮನಾರ್ಥಕಗಳನ್ನು ಬರೆಯಿರಿ. (Write the synonyms)

ಮರ = ವೃಕ್ಷ, ತರು
ಭೂಮಿ = ಇಳೆ, ಪೃಥ್ವಿ,
ದೇಣಿಗೆ = ಚಂದಾ, ವಂತಿಕೆ, ದಾನ
ಸಜೆ = ಶಿಕ್ಷೆ, ಸೆರೆಮನೆ ವಾಸ

ಆ) ಕೆಳಗಿನ ಪದಗಳಿಗೆ ತತ್ಸಮ ತದ್ಭವ ರೂಪ ಬರೆಯಿರಿ. (Write the Tatsama – Tadhbhava)

ವರ್ಷ = ವರುಷ
ದೃಷ್ಟಿ =  ದಿಟ್ಟಿ
ಆಶ್ಚರ್ಯ = ಅಚ್ಚರಿ

ಇ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ. (Make your own sentence)

ದೃಷ್ಟಿಕೋನ = ಪ್ರತಿಯೊಬ್ಬರ ದೃಷ್ಟಿಕೋನ ಬೇರೆ ಬೇರೆಯಾಗಿದೆ.
ಸಂಸ್ಕೃತಿ =  ಭಾರತದ ಸಂಸ್ಕೃತಿಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ.
ಪ್ರಾರ್ಥನೆ =  ದೇವರು ಪ್ರಾರ್ಥನೆಯನ್ನು ಕೇಳುತ್ತಾನೆ.
ದೇಣಿಗೆ =   ವಿದ್ಯಾದಾನಕ್ಕೆ ದೇಣಿಗೆ ಕೊಡಬೇಕು.
ಸುದ್ದಿ = ಎಲ್ಲರೂ ಸುದ್ದಿಯನ್ನುನೋಡುತ್ತಾರೆ.

ಈ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ. (Write the opposite words)

ಬಹಿರಂಗ X ಅಂತರಂಗ
ಸಾಧ್ಯ X ಅಸಾಧ್ಯ
ಆರೋಗ್ಯ X ಅನಾರೋಗ್ಯ
ಉಳಿಸು  X ಅಳಿಸು  
ಆಸಕ್ತಿ X ನಿರಾಸಕ್ತಿ

ಉ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ. (Split the words)

ಪತ್ರಗಳನ್ನಿಡು = ಪತ್ರಗಳನ್ನು + ಇಡು
ಸಾವಿರಾರು = ಸಾವಿರ + ಆರು
ಶುಭಾಶಯ = ಶುಭ + ಆಶಯ
ಮರವೊಂದು = ಮರ + ಒಂದು
ವಿಜ್ಞಾನಿಯೊಬ್ಬ = ವಿಜ್ಞಾನಿ + ಒಬ್ಬ

Click here to download ondu marada bele kannada notes grade VIII