Ottige baluva aananda kannada lesson grade 5th means Happiness in living together. Ottige baluva aananda grade V Kannada lesson explians how to live together.
In a quiet little village, there stood a tall neem tree, and just beneath it lay a sacred rock. The villagers revered the neem tree as “Ammana Mara” (Mother’s Tree) and the rock as “Ammana Kallu” (Mother’s Stone). Together, they were symbols of faith and unity.
But one day, a small misunderstanding arose between Ammana Mara and Ammana Kallu. Upset, the rock slowly rolled away, leaving the neem tree behind.
The next morning, a farmer came by with his children. Seeing them apart, he said, “If the tree and the rock no longer stand together, there is no meaning in worshiping them. Cut down the tree and break the stone.”
Hearing this, Ammana Kallu trembled with fear. Realizing the value of togetherness, it quickly rolled back to Ammana Mara and nestled once again beneath its shade. From that day on, they remained side by side, inseparable.
And so, Ammana Mara and Ammana Kallu taught the villagers an important lesson: true happiness lies in living together, standing united through every difference.
ಒಟ್ಟಿಗೆ ಬಾಳುವ ಆನಂದ
ಅ) ಪದಗಳ ಅರ್ಥ (Word Meaning)
ಕಂಟಕ – ಕೇಡು , ವಿಪತ್ತು
ಜಗಳ – ಕಲಹ
ಜಂಭ – ಗರ್ವ, ಒಣ ಆಡಂಬರ
ನೇಗಿಲು – ಭೂಮಿಯನ್ನು ಉಳುವ ಸಾಧನ
ರೈತ – ಕೃಷಿಕ , ಬೇಸಾಯ ಮಾಡುವವನು
ವಿಭೂತಿ – ಭಸ್ಮ ಬೂದಿ
ಹಿಕ್ಕೆ – ಹಕ್ಕಿಗಳ ಮಲ
ಆ) ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. (Answer the following)
೧. ಗುಂಡನೆಯ ಕಲ್ಲು ಎಲ್ಲಿತ್ತು?
ಉ: ಗುಂಡನೆಯ ಕಲ್ಲು ಮರದ ಕೆಳಗೆ ಇತ್ತು.
೨. ಬೇವಿನ ಮರವನ್ನು ಜನ ಏನೆಂದು ಕರೆಯುತ್ತಿದ್ದರು?
ಉ: ಬೇವಿನ ಮರವನ್ನು ಜನರು ಅಮ್ಮನ ಮರ ಎಂದು ಕರೆಯುತ್ತಿದ್ದರು.
೩. ಕಲ್ಲು ಕೋಪದಿಂದ ಏನು ಮಾಡಿತು?
ಉ: ಕಲ್ಲು ಕೋಪದಿಂದ ಉರುಳಿ ಸ್ವಲ್ಪ ದೂರ ಹೋಗಿ ನಿಂತಿತು.
೪. ಮರಕಡಿಯುವವರು ಏನೆಂದು ಹೇಳಿ ಹೊರಟು ಹೋದರು?
ಉ: ಮರ ಕಡಿಯುವವರು “ ಇದು ಅಮ್ಮನ ಮರ, ಕಡಿಯುವುದು ಬೇಡ ” ಎಂದು ಹೇಳಿ ಹೊರಟು ಹೋದರು.
೫. ಕಲ್ಲು ಹೊಡೆಯುವವರು ಏನೆಂದು ಹೇಳಿ ಹೊರಟು ಹೋದರು?
ಉ: ಕಲ್ಲು ಹೊಡೆಯುವವರು “ ಇದು ಅಮ್ಮನ ಕಲ್ಲು ಒಡೆಯುವುದು ಬೇಡ ” ಎಂದು ಹೊರಟು ಹೋದರು.
ಇ) ಕೆಳಗಿನ ಪ್ರಶ್ನೆಗಳಿಗೆ ಎರಡು -ಮೂರು ವಾಕ್ಯಗಳಲ್ಲಿ ಉತ್ತರಿಸಿ. (Answer the following in two – three sentences)
೧. ಜಂಬದಿಂದ ಬೇವಿನ ಮರ ಅಮ್ಮನ ಕಲ್ಲಿಗೆ ಏನೆಂದು ಹೇಳಿತು?
ಉ: ನಾನು ಬೇವಿನ ಮರ. ನಾನು ಅಮ್ಮನ ಮರ. ನೀನು ನನ್ನ ಕೆಳಗಿರುವುದರಿಂದ ನಿನ್ನನ್ನು ಅಮ್ಮನಕಲ್ಲು ಎಂದು ಜನ ಕರೆಯುತ್ತಾರೆ ಎಂದು ಹೇಳಿತು.
೨. ಜಂಬದಿಂದ ಅಮ್ಮನ ಕಲ್ಲು ಬೇವಿನ ಮರಕ್ಕೆ ಏನೆಂದು ಹೇಳಿತು?
ಉ: ಅಮ್ಮನ ಕಲ್ಲು ಜಂಭದಿಂದ ಬೇವಿನ ಮರಕ್ಕೆ ನಾನು ಅಮ್ಮನ ಕಲ್ಲಾಗಿರುವುದರಿಂದ ಜನ ನಿನ್ನನ್ನು ಅಮ್ಮನ ಮರ ಎಂದು ಕರೆಯುತ್ತಾರೆ ಎಂದು ಹೇಳಿತು.
೩. ರೈತನು ಬೇರೆ ಬೇರೆಯಾಗಿದ್ದ ಹಾಗೂ ಅಮ್ಮನ ಕಲ್ಲುಗಳನ್ನು ನೋಡಿ ತನ್ನ ಮಕ್ಕಳಿಗೆ ಏನು ಮಾಡಲು ಹೇಳಿದನು?
ಉ: ರೈತನು ಹೊಲಕ್ಕೆ ಬಂದು ನೋಡಿದಾಗ ಕಲ್ಲು ದೂರವಿರುವುದನ್ನು ಕಂಡನು. ಇದು ಬರಿಯ ಬೇವಿನ ಮರ, ಇದನ್ನು ನಾಳೆ ಕತ್ತರಿಸಿ ಹಾಕಿ. ಹಾಗೆಯೇ ಕಲ್ಲು ಒಡೆಯುವವರಿಗೆ ಹೇಳಿ ಆ ಕಲ್ಲನ್ನು ಒಡೆಸಿ ಎಂದು ತನ್ನ ಮಕ್ಕಳಿಗೆ ಹೇಳಿದನು.
೪. ಬೇವಿನ ಮರ ಮತ್ತು ಅಮ್ಮನ ಕಲ್ಲು ಮತ್ತೆ ಹೇಗೆ ಸ್ನೇಹಿತರಾದವು?
ಉ: ರೈತನು ತನ್ನ ಮಕ್ಕಳಿಗೆ ಹೇಳಿದ ಮಾತನ್ನು ಕೇಳಿ ಭಯದಿಂದ ಏನು ಮಾಡುವುದೆಂದು ಯೋಚಿಸಿ ಮೆಲ್ಲನೆ ಕಲ್ಲು ಬೇವಿನ ಮರದ ಬಳಿ ಬಂತು. ಹೀಗೆ ಬೇವಿನ ಮರ ಮತ್ತು ಅಮ್ಮನ ಕಲ್ಲು ಮತ್ತೆ ಸ್ನೇಹಿತರಾದವು.
ಈ) ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ. (Fill in the blanks)
೧. ಬೇವಿನ ಮರವನ್ನು ಜನ ಅಮ್ಮನಮರ ಎಂದು ಕರೆಯುತ್ತಿದ್ದರು.
೨. ನಾವಿಬ್ಬರೂ ಒಬ್ಬರಿಂದ ಒಬ್ಬರು ದೂರವಾಗಿದ್ದರೆ ಜನರು ನಮ್ಮಿಬ್ಬರನ್ನು ನಾಶಮಾಡುತ್ತಾರೆ.
೩. ಇದು ಅಮ್ಮನ ಮರ ಕಡಿಯುವುದು ಬೇಡ ಹೊರಟುಹೋದರು.
೪. ಕಲ್ಲು ಒಡೆಯುವವರು ಬಂದು “ ಇದು ಅಮ್ಮನ ಕಲ್ಲು, ಒಡೆಯುವುದು ಬೇಡ “ ಎಂದು ಅವರೂ ಹೊರಟು ಹೋದರು.
೫. ಎಲ್ಲರೂ ಒಟ್ಟಾಗಿ ಬಾಳಿದರೆ ಎಲ್ಲರೂ ಸುಖವಾಗಿ ಇರಬಹುದು.