Parishrama illade phalavila Kannada lesson grade V is about Hardwork. Parishrama illade phalavila is a story about how a caterpillar becomes butterfly.

ಪರಿಶ್ರಮ ಇಲ್ಲದೆ ಫಲವಿಲ್ಲ

I. ಪದಗಳ ಅರ್ಥ ಬರೆಯಿರಿ. (Write the word Meaning)
೧. ಶಿಕ್ಷಕ =  ಗುರುಗಳು, ಉಪಾಧ್ಯಾಯ (Teacher)
೨. ಮೊಟ್ಟೆ =  ತತ್ತಿ (Egg)
೩. ಬಲಿಷ್ಠ = ಗಟ್ಟಿ (Strong)

II. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ (Answer the following in one sentence)
೧. ಮಕ್ಕಳಿಗೆ ಯಾರನ್ನು ಕಂಡರೆ ತುಂಬಾ ಪ್ರೀತಿ ಇತ್ತು ?
ಉ: ಮಕ್ಕಳಿಗೆ ಶಿಕ್ಷಕರನ್ನು ಕಂಡರೆ ತುಂಬಾ ಪ್ರೀತಿ ಇತ್ತು.
೨. ಹೊರ ಸಂಚಾರಕ್ಕೆ ಹೊರಟವರು ಯಾರು?
ಉ: ಹೊರ ಸಂಚಾರಕ್ಕೆ ಹೊರಟವರು ಮಕ್ಕಳು ಮತ್ತು ಶಿಕ್ಷಕರು.
೩. ಹುಳು ಚಿಟ್ಟೆಯಾಗಿ ಗೂಡಿನಿಂದ ಹೊರಗೆ ಬರಲು ಏನು ಮಾಡುತ್ತದೆ?
ಉ: ಹುಳು ಚಿಟ್ಟೆಯಾಗಿ ಗೂಡಿನಿಂದ ಹೊರಗೆ ಬರಲು ಪರಿಶ್ರಮ ಪಡುತ್ತದೆ.

III. ಕೆಳಗಿನ ಪ್ರಶ್ನೆಗಳಿಗೆ ಎರಡು, ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in two-three sentences)

೧. ಗೂಡನ್ನು ಹೊಡೆದವರು ಯಾರು ?ಅವನು ಏಕೆ ಒಡೆದನು? ಅದರಿಂದ ಏನಾಯಿತು?
ಉ: ಗೂಡನ್ನು ಹೊಡೆದವರು ಬಸವ. ಅವನಿಗೆ ಚಿಟ್ಟೆಯ ಬಗ್ಗೆ ಕನಿಕರ ಉಂಟಾಗಿ ಒಡೆದನು. ಚಿಟ್ಟೆ ಸತ್ತು ಹೋಯಿತು.

೨. ಪ್ರಯತ್ನಕ್ಕೆ ಜಯ ಲಭಿಸುವುದು ಹೇಗೆ ಎಂಬುದನ್ನು ಮಕ್ಕಳು ಯಾವ ಘಟನೆಯಿಂದ ಅರಿತರು?
ಹುಳು ಚಿಟ್ಟೆಯಾಗಿ ತನ್ನ ಗೂಡಿನಿಂದ ಹೊರಬರಲು ಪರಿಶ್ರಮ ಪಡುತ್ತದೆ. ಹೀಗೆ ಪ್ರಯತ್ನಕ್ಕೆ ಜಯ ಲಭಿಸುವುದು ಎಂಬುದನ್ನು ಮಕ್ಕಳು ಈ ಘಟನೆಯಿಂದ ಅರಿತರು.

IV. ಬಿಟ್ಟ ಸ್ಥಳ ತುಂಬಿರಿ. (Fill in the blanks)

೧. ಆ ಶಾಲೆಯಲ್ಲಿ ಇಬ್ಬರು ಶಿಕ್ಷಕರಿದ್ದರು.
೨. ಶಿಕ್ಷಕರು ಮತ್ತು ಮಕ್ಕಳು ಹೊರ ಸಂಚಾರಕ್ಕೆ ಹೊರಟರು.
೩. ಬಸವನಿಗೆ ಆ ಚಿಟ್ಟೆಯ ಬಗ್ಗೆ ಕನಿಕರ ಉಂಟಾಯಿತು.
೪. ಜೀವನದಲ್ಲಿ ತುಂಬ ಕಷ್ಟ ಪಡಬೇಕು .

V. ಕೆಳಗಿನ ವಾಕ್ಯಗಳಿಗೆ ಸರಿ ಅಥವಾ ತಪ್ಪು ಗುರುತುಗಳನ್ನು ಹಾಕಿರಿ. (Mark Right or Wrong)

೧. ಅಲ್ಲಿ ಒಂದು ಪ್ರೌಢಶಾಲೆ ಇತ್ತು.    ತಪ್ಪು
೨. ಆ ನದಿಯ ಆಸುಪಾಸು ದಟ್ಟವಾಗಿ ಮರ ಗಿಡಗಳು ಬೆಳೆದಿದ್ದವು.  ಸರಿ
೩. ರಾಮನು ಆ ಗೂಡನ್ನು ಒಡೆದನು. ತಪ್ಪು
೪. ಪರಿಶ್ರಮವಿಲ್ಲದೆ ಜಯ ಲಭಿಸುವದಿಲ್ಲ. ಸರಿ

VI. ಗುಂಪಿಗೆ ಸೇರದ ಪದಗಳನ್ನು ಗುರುತಿಸಿ ಬರೆಯಿರಿ. (Write the odd one out)

೧. ಮಕ್ಕಳು, ಶಾಲೆ, ಶಿಕ್ಷಕರು, ಅಂಗಿ ——- ಅಂಗಿ
೨. ಬೆಕ್ಕು, ಗಿಳಿ, ಗುಬ್ಬಿ, ಕೋಗಿಲೆ ———— ಬೆಕ್ಕು
೩. ಆನೆ, ಕುರಿ, ಸಿಂಹ, ಹುಲಿ —————- ಕುರಿ
೪. ಊರು, ಹಳ್ಳಿ, ನಗರ, ಗ್ರಾಮ ———— ನಗರ

Click here to download parisramavillade phalavilla grade V